ಶಿಕ್ಷಣ

ಕನ್ನಡ ರಾಜ್ಯೋತ್ಸವದಂದು `ಕರಾಳ ದಿನ’ ಆಚರಿಸಲು ಖಾಸಗಿ ಶಾಲೆಗಳ ನಿರ್ಧಾರ.!

ಸಮಗ್ರ ನ್ಯೂಸ್: ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಖಾಸಗಿ ಶಾಲೆಗಳಲ್ಲಿ ಕರಾಳ ದಿನ ಆಚರಿಸಲು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಣಯ ಕೈಗೊಂಡಿದೆ. ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಮಾತನಾಡಿ, ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿರ್ಧಾರಿಸಿದೆ. ನವೆಂಬರ್ 1ರ ರಾಜ್ಯೋತ್ಸವದಂದು ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಲಿದ್ದಾರೆ. ಶಾಲೆಗಳಿಗೆ ಮಾನ್ಯತೆ ನವೀಕರಣ, ಆರ್‌ಟಿಇಗೆ ಚಾಲನೆ, […]

ಕನ್ನಡ ರಾಜ್ಯೋತ್ಸವದಂದು `ಕರಾಳ ದಿನ’ ಆಚರಿಸಲು ಖಾಸಗಿ ಶಾಲೆಗಳ ನಿರ್ಧಾರ.! Read More »

ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ

ಸಮಗ್ರ ನ್ಯೂಸ್: ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ದಕ್ಷಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಕ್ಲಾಸ್ ರೂಂನಲ್ಲಿ ವಿದ್ಯಾಭ್ಯಾಸದಲ್ಲಿ ಮಗ್ನ ವಾಗಿರುವ ಸಂದರ್ಭ ಏಕಾಏಕಿ ನಾಗರಹಾವಿನ ಮರಿಯೊಂದು ಕ್ಲಾಸ್ ರೂಂ ಗೆ ನುಗ್ಗಿದೆ.ಬಳಿಕ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ತೇಜಸ್ ನಾಗರಹಾವಿನ ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ Read More »

1000 ಬಸ್ಕಿ ಹೊಡಿಸಿದ ಶಿಕ್ಷಕ, ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ

ಸಮಗ್ರ ನ್ಯೂಸ್: ಶಿಕ್ಷಕ ವಿದ್ಯಾರ್ಥಿಗೆ 1000 ಬಸ್ಕಿ ಹೊಡಿಯುವಂತೆ ಶಿಕ್ಷೆ ನೀಡಿದ್ದು, ಪರಿಣಾಮ 13 ವರ್ಷದ ಬಾಲಕ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾನೆ.ಈ ಘಟನೆ ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ಮಿಡ್ಸ್ ಸ್ಕೂಲ್‌ನಲ್ಲಿ ನಡೆದಿದೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಾರಂಭದಲ್ಲಿ ಸ್ನಾಯು ನೋವು ಎಂದು ಭಾವಿಸಿ ಔಷಧಿ ನೀಡಲಾಗಿದೆ. ಆದರೆ ಬಾಲಕನಿಗೆ ನೋವು ಜಾಸ್ತಿಯಾಗಿದ್ದು, ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕ ರಾಬೋಮಿಯೊಲಿಸಿಸ್ ಎಂಬ ಗಂಭೀರ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ.1000 ಬಸ್ಕಿ

1000 ಬಸ್ಕಿ ಹೊಡಿಸಿದ ಶಿಕ್ಷಕ, ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ Read More »

10ನೇ ತರಗತಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮರು ದಾಖಲಾತಿಗೆ ಅವಕಾಶ

ಸಮಗ್ರ ನ್ಯೂಸ್: ರೆಗ್ಯುಲ‌ರ್ ಶಾಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಯಾ ವರ್ಷದಲ್ಲಿ ಪರೀಕ್ಷೆ-1 ಮತ್ತು ಪರೀಕ್ಷೆ-2 ಇವುಗಳನ್ನು ಬರೆದು ಅಂತಿಮವಾಗಿ ಅನುತ್ತೀರ್ಣರಾದಲ್ಲಿ ಪುನಃ ಮುಂದಿನ ಒಂದು ಶೈಕ್ಷಣಿಕ ವರ್ಷದಲ್ಲಿ ಶಾಲಾ ಅಭ್ಯರ್ಥಿಯಾಗಿ ಸರ್ಕಾರಿ ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮರು ದಾಖಲಾತಿಗೆ ಅವಕಾಶ ನೀಡಲಾಗುತ್ತದೆ. ಇತರೆ ವಿದ್ಯಾರ್ಥಿಗಳಂತೆ ಶಾಲೆಯಲ್ಲಿ ಪೂರ್ಣಾವಧಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮತ್ತು ಎಲ್ಲಾ ವಿಷಯದ ತರಗತಿಗೆ ಪೂರ್ಣಾವಧಿ ಹಾಜರಾಗಬೇಕು. ಈ ರೀತಿ ಪೂರ್ಣಾವಧಿ ಅಧ್ಯಯನ ಮಾಡಿ ಹಿಂದಿನ ವರ್ಷ ಅನುತ್ತೀರ್ಣರಾದ

10ನೇ ತರಗತಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮರು ದಾಖಲಾತಿಗೆ ಅವಕಾಶ Read More »

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ

ಸಮಗ್ರ ನ್ಯೂಸ್: ಹತ್ತನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅ. 25ರಂದು ಪ್ರಕಟಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ಬಗ್ಗೆ ಈ ಮೊದಲು ಚಿಂತನೆ ನಡೆಸಲಾಗಿತ್ತು.ಆದರೆ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ದಸರಾ ರಜೆಯ ಅವಧಿಯಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ರಜಾ ಅವಧಿ ಮುಕ್ತಾಯಗೊಂಡ ಬಳಿಕ ನಡೆಸುವಂತೆ ಮಂಡಳಿ ಸೂಚಿಸಿದೆ.

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ Read More »

ಅ.03 ರಿಂದ ರಾಜ್ಯದಲ್ಲಿ ಶಾಲೆಗಳಿಗೆ ದಸರಾ ರಜೆ

ಸಮಗ್ರ ನ್ಯೂಸ್: ಶಾಲಾ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯೂ ಒಟ್ಟು 17 ದಿನ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆ ಸಿಗಲಿದೆ. ಅಕ್ಟೋಬ‌ರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ. 2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು

ಅ.03 ರಿಂದ ರಾಜ್ಯದಲ್ಲಿ ಶಾಲೆಗಳಿಗೆ ದಸರಾ ರಜೆ Read More »

5,8 ಹಾಗು 9ನೇ ತರಗತಿ ಬೋರ್ಡ್ ಪರೀಕ್ಷೆ ಪ್ರಸ್ತಾವ ಕುರಿತು ‘ಸುಪ್ರೀಂ’ ಅಸಮಾಧಾನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಪ್ರಸ್ತಾವದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ಏನನ್ನೂ ಮಾಡದಂತೆ ಸೆ.30 ರಂದು ಎಚ್ಚರಿಸಿದೆ. 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರು ಸೆಪ್ಟೆಂಬರ್ 4 ಮತ್ತು 15ರಂದು ಜ್ಞಾಪನಾ ಪತ್ರಗಳನ್ನು ಹೊರಡಿಸಿದ್ದರು. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಯಾವುದನ್ನೂ ಮಾಡಬಾರದು. ಹೀಗಾದರೆ

5,8 ಹಾಗು 9ನೇ ತರಗತಿ ಬೋರ್ಡ್ ಪರೀಕ್ಷೆ ಪ್ರಸ್ತಾವ ಕುರಿತು ‘ಸುಪ್ರೀಂ’ ಅಸಮಾಧಾನ Read More »

ಅ.2 ರಂದು ಗಾಂಧಿ ಜಯಂತಿ/ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

ಸಮಗ್ರ ನ್ಯೂಸ್‌: ಅ.2 ರಂದು ಗಾಂಧಿ ಜಯಂತಿಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ನಾಡ ಹಬ್ಬಗಳನ್ನು ಮತ್ತು ಪ್ರಮುಖ ಜಯಂತಿಗಳನ್ನು ಆಯಾ ದಿನದಂದು ಕಡ್ಡಾಯವಾಗಿ ಗೌರವಪೂರ್ವಕವಾಗಿ ಆಚರಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಉಲ್ಲೇಖ-01 ರಂತೆ ಈಗಾಗಲೇ ಅಗತ್ಯ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಅ.2 ರಂದು ಗಾಂಧಿ ಜಯಂತಿ/ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ Read More »

ಅಂಗನವಾಡಿ ಶಿಕ್ಷಕಿ ಹುದ್ದೆಗೆ ಉರ್ದು ಕಡ್ಡಾಯ ಆದೇಶಕ್ಕೆ ವಿರೋಧ

ಸಮಗ್ರ ನ್ಯೂಸ್:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಂಗನವಾಡಿ ಶಿಕ್ಷಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ.ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉರ್ದು ಕಡ್ಡಾಯವಾಗಿ ತಿಳಿದಿರಬೇಕು ಎಂದು ಹೇಳಲಾಗಿತ್ತು.ಉರ್ದು ಭಾಷೆ ಕಡ್ಡಾಯಗೊಳಿಸಿರುವ ಸರ್ಕಾರ,ಕನ್ನಡ ನಾಡಿನಲ್ಲಿ ಉರ್ದು ಹೇರಿಕೆ ಮಾಡುತ್ತಿದೆ ಕಾಂಗ್ರೆಸ್‌ ಸರ್ಕಾರ. ಸಿಎಂ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್

ಅಂಗನವಾಡಿ ಶಿಕ್ಷಕಿ ಹುದ್ದೆಗೆ ಉರ್ದು ಕಡ್ಡಾಯ ಆದೇಶಕ್ಕೆ ವಿರೋಧ Read More »

ಶಾಲೆಗಳಿಗೆ ದಸರಾ ರಜೆ ಘೋಷಣೆ

ಸಮಗ್ರ ನ್ಯೂಸ್:ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದ್ದು, ಎಲ್ಲಾ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಲಾಗಿದೆ. ಈ ಹಿಂದೆ ಕರಾವಳಿ ಭಾಗದಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದ್ರೆ ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ.ಮತ್ತೊಂದೆಡೆ ದೀಪಾವಳಿ ಅಕ್ಟೋಬರ್ 31 ರಂದು ಬರುವುದರಿಂದ ಆ ದಿನ ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಇರಲಿದೆ.ಡಿಸೆಂಬರ್ 22 ರಿಂದ 29 ರವರೆಗೆ ಕ್ರಿಸ್ಮಸ್ ರಜೆಯು

ಶಾಲೆಗಳಿಗೆ ದಸರಾ ರಜೆ ಘೋಷಣೆ Read More »