ಶಿಕ್ಷಣ

ಜನವರಿ 10 ರಿಂದ ಹತ್ತು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ: ಕಾರಣವೇನು?

ಸಮಗ್ರ ನ್ಯೂಸ್ : ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್ ನಾಳೆ ಇಂದb 10 ದಿನ ಶಾಲೆಗಳಿಗೆ ರಜೆ ಸರ್ಕಾರ ಘೋಷಿಸಿದೆ. ಜನವರಿ 10 ರಿಂದ ಸಂಕ್ರಾಂತಿ ರಜೆ ಶುರುವಾಗಲಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಜನವರಿ 10 ರಿಂದ ಶಾಲೆಗಳಿಗೆ ರಜೆಯನ್ನ ಆಂಧ್ರ ಪ್ರದೇಶದ ಸರ್ಕಾರ ಘೋಷಿಸಿದೆ.ಆಂಧ್ರಪ್ರದೇಶದಲ್ಲಿ ವಿಶೇಷವಾಗಿ ಈ ಸಂಕ್ರಾಂತಿ ರಜಾದಿನಗಳನ್ನು ಸುಮಾರು ಹತ್ತು ದಿನಗಳವರೆಗೆ ಘೋಷಿಸಲಾಗುತ್ತದೆ. ಸಂಕ್ರಾಂತಿ ಹಬ್ಬವು ಭೋಗಿ ಹಬ್ಬದಿಂದ ಪ್ರಾರಂಭವಾಗಿ ಕನುಮ ಹಬ್ಬದೊಂದಿಗೆ ಕೊನೆಗೊಳ್ಳುತ್ತದೆ.ಆಂಧ್ರಪ್ರದೇಶದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಈ ತಿಂಗಳ ಜನವರಿ […]

ಜನವರಿ 10 ರಿಂದ ಹತ್ತು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ: ಕಾರಣವೇನು? Read More »

ಬಣಕಲ್ ನಜರೆತ್ ಶಾಲೆಯ ವಾರ್ಷಿಕೋತ್ಸವ| ಪೋಷಕರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಫಾ.ಮಾರ್ಸೆಲ್ ಪಿಂಟೊ

ಸಮಗ್ರ ನ್ಯೂಸ್: ‘ಪೋಷಕರು ಮಕ್ಕಳಿಗೆ ಆಸ್ತಿ ಮಾಡಿ ಇಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಚಿಕ್ಕಮಗಳೂರು ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಾ.ಮಾರ್ಸೆಲ್ ಪಿಂಟೊ ಹೇಳಿದರು. ಅವರು ಸೋಮವಾರ ರಾತ್ರಿ ಬಣಕಲ್ ನಜರೆತ್ ಶಾಲೆಯ (ನಜ್ ಉತ್ಸವ) 27ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ ಮಕ್ಕಳ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ,ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಮುಂದೆ ಅವರು ಬುದ್ದಿ ಶಕ್ತಿ,

ಬಣಕಲ್ ನಜರೆತ್ ಶಾಲೆಯ ವಾರ್ಷಿಕೋತ್ಸವ| ಪೋಷಕರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಫಾ.ಮಾರ್ಸೆಲ್ ಪಿಂಟೊ Read More »

ಡಿ.7 ಮತ್ತು 8ರಂದು‌ ಪಿಡಿಒ ನೇಮಕಾತಿ ‌ಪರೀಕ್ಷೆ| ಇಲ್ಲಿದೆ ಪರೀಕ್ಷಾರ್ಥಿಗಳಿಗೆ ಮುಖ್ಯ ಮಾಹಿತಿ

ಸಮಗ್ರ ನ್ಯೂಸ್: ಕರ್ನಾಟಕ ಲೋಕಸೇವಾ ಆಯೋಗದಿಂದ ಡಿಸೆಂಬರ್ 7 ಮತ್ತು 8 ರಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೂಪ್ ಸಿ ಹುದ್ದೆಗಳಾದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ 150 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ವೇಳೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ನೀಡದೆ ಕಟ್ಟುನಿಟ್ಟಿನ ಪರೀಕ್ಷೆ ಸೂಚನೆ ನೀಡಲಾಗಿದೆ. ಪರೀಕ್ಷೆಯಲ್ಲಿ ಭಾಗವಹಿಸಲಿರುವ ಎಲ್ಲಾ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಕ್ಯುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್

ಡಿ.7 ಮತ್ತು 8ರಂದು‌ ಪಿಡಿಒ ನೇಮಕಾತಿ ‌ಪರೀಕ್ಷೆ| ಇಲ್ಲಿದೆ ಪರೀಕ್ಷಾರ್ಥಿಗಳಿಗೆ ಮುಖ್ಯ ಮಾಹಿತಿ Read More »

ಸಣ್ಣ ತಪ್ಪು ಇಲ್ಲದೆ ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟ ಪುಟ್ಟ ಬಾಲಕ

ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆಯ ವೇಳೆ ಒಂದನೇ ತರಗತಿಯ ಪುಟ್ಟ ಬಾಲಕನೊಬ್ಬ ‘ಭಾರತದ ಸಂವಿಧಾನ ಪೀಠಿಕೆ’ಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಣ್ಣ ತಪ್ಪು ಇಲ್ಲದಂತೆ ನಿರರ್ಗಳವಾಗಿ ಹೇಳಿಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬರೆದುಕೊಂಡು ಓದದೇ, ಪುಸ್ತಕವನ್ನು ನೋಡದೇ, ಸ್ವಲ್ಪವೂ ತೊದಲದೇ ನಿರರ್ಗಳವಾಗಿ, ಏಕಾಗ್ರತೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಹೇಳಿಕೊಟ್ಟ ರೀತಿ ನಿಜಕ್ಕೂ ನಿಬ್ಬೆರಗಾಗಿಸುತ್ತದೆ. ಬಾಲಕನ ಆತ್ಮವಿಶ್ವಾಸ, ಸ್ಪಷ್ಟ ನುಡಿಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವಂತಿದೆ.ಭಾರತದ ಸಂವಿಧಾನ ಅಂಗೀಕಾರವಾಗಿ 50 ವರ್ಷಗಳು ಕಳೆದಿವೆ. ನವೆಂಬ‌ರ್ 26ರಂದು ಸಂವಿಧಾನ

ಸಣ್ಣ ತಪ್ಪು ಇಲ್ಲದೆ ನಿರರ್ಗಳವಾಗಿ ಸಂವಿಧಾನ ಪೀಠಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟ ಪುಟ್ಟ ಬಾಲಕ Read More »

ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್:2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು (02-12-2024) ಪ್ರಕಟಿಸಲಾಗಿದೆ.ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ/ಕಾಲೇಜುಗಳ “ಪ್ರಕಟಣಾ ಫಲಕ”ದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ದಿನಾಂಕ:02-12-2024 ರಿಂದ 16-12-2024 ರವರೆಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ.ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ

ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ Read More »

ಇಂದು ಸಂವಿಧಾನ ದಿನಾಚರಣೆ| ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ನವೆಂಬರ್- 26 ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕ‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವಂತೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ

ಇಂದು ಸಂವಿಧಾನ ದಿನಾಚರಣೆ| ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ Read More »

ನೆಟ್ಟಗೆ ಕನ್ನಡ ಬರಲ್ಲ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯಿಂದ ಮುಜುಗರ

ಸಮಗ್ರ ನ್ಯೂಸ್:ವಿಧಾನಸೌಧದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು.ವಿಡಿಯೋ ಕಾನ್ಸರೆನ್ಸ್ ವೇಳೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಗೆ ವಿದ್ಯಾರ್ಥಿಯೊಬ್ಬ ತೀವ್ರ ಮುಜುಗರ ತಂದೊಡ್ಡಿದ್ದಾನೆ.ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಅನ್ನುವುದರ ಮೂಲಕ ಮಧು ಬಂಗಾರಪ್ಪ ಅವರಿಗೆ ಅವಮಾನ ಮಾಡಿದ್ದ ಘಟನೆ ನ.20ರಂದು ನಡೆದಿದೆ. ವಿಡಿಯೋ ಕಾನ್ಸರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿ ಭರತ್‌ ಎಂಬಾತ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ

ನೆಟ್ಟಗೆ ಕನ್ನಡ ಬರಲ್ಲ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯಿಂದ ಮುಜುಗರ Read More »

ಮಕ್ಕಳ ದಿನಾಚರಣೆಯಂದೇ ಹೀನಾಯ ಕೃತ್ಯ; ಮಗನ ಸೇವೆ ಮಾಡದ್ದಕ್ಕೆ ವಿದ್ಯಾರ್ಥಿನಿಗೆ ಥಳಿಸಿದ ಪ್ರಿನ್ಸಿಪಾಲ್!

ಸಮಗ್ರ ನ್ಯೂಸ್:(ನ.14) ಶಾಲೆಯ ಪ್ರಿನ್ಸಿಪಾಲ್ ಮಗನ ಸೇವೆ ಮಾಡಲಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಲಂ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಪಟ್ಟಣದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಪುತ್ರಿಯಾಗಿರುವ ಭವ್ಯ ವಿದ್ಯಾರ್ಥಿನಿ,ಶಾಲೆಯ ಪ್ರಿನ್ಸಿಪಲ್ ಉಷಾಕಿರಣ್ ಗೆ ವಿಕಲಚೇತನ ಮಗನಿದ್ದಾನೆ. ಅದೇ ಶಾಲೆಯಲ್ಲಿ ಮಗನನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಮಹಿಳೆಯನ್ನ ನೇಮಿಸಿಕೊಂಡಿದ್ದ ಪ್ರಿನ್ಸಿಪಾಲ್. ಆದರೆ ಆ ಮಹಿಳೆಗೆ ವಿದ್ಯಾರ್ಥಿನಿ ಭವ್ಯ ಸಹಕಾರ

ಮಕ್ಕಳ ದಿನಾಚರಣೆಯಂದೇ ಹೀನಾಯ ಕೃತ್ಯ; ಮಗನ ಸೇವೆ ಮಾಡದ್ದಕ್ಕೆ ವಿದ್ಯಾರ್ಥಿನಿಗೆ ಥಳಿಸಿದ ಪ್ರಿನ್ಸಿಪಾಲ್! Read More »

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಸೂಚನೆ: ಮುಸ್ಲಿಂ ವಿದ್ಯಾರ್ಥಿಗಳ ಆಕ್ರೋಶ

ಸಮಗ್ರ ನ್ಯೂಸ್: ಹೊಳೇನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ತಮಗೆ ಗಡ್ಡ ತೆಗೆಯುವಂತೆ ಸೂಚನೆ ನೀಡಿದೆ ಅಂತ 13ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಟ್ವೀಟ್ ಮೂಲಕ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವಿಚಾರವಾಗಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಪಿಎಂಎಸ್‌ಎಸ್ ಯೋಜನೆಯಡಿ ನರ್ಸಿಂಗ್ ಓದಲು ಜಮ್ಮು-ಕಾಶ್ಮೀರದಿಂದ 13ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜೀನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಸೂಚನೆ: ಮುಸ್ಲಿಂ ವಿದ್ಯಾರ್ಥಿಗಳ ಆಕ್ರೋಶ Read More »

ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಣೆ ಕಡ್ಡಾಯ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷ ಸಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ನವೆಂಬ‌ರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳು, ಐಟಿ, ಬಿಟಿ ಸಂಸ್ಥೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಟಿಪ್ಪಣಿ ಹೊರಡಿಸಿ ಸೂಚನೆ ನೀಡಿದ್ದಾರೆ.

ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಣೆ ಕಡ್ಡಾಯ Read More »