ರಾಷ್ಟ್ರೀಯ

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯನಾಡಿನಿಂದಲು ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋತು, ಕೇರಳದ ವಯನಾಡಿನಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಅಮೇಥಿಯತ್ತ ಕಣ್ಣು ನೆಟ್ಟಿದ್ದಾರೆ. ಗಾಂಧಿ ಕುಟುಂಬವು ಅಮೇಥಿಯ ಜನರಿಗಾಗಿ ತಲೆತಲಾಂತರದಿಂದ ಶ್ರಮಿಸುತ್ತಿದ್ದು, ರಾಹುಲ್ ಮುಂದಿನ ಚುನಾವಣೆಯಲ್ಲಿ […]

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್ Read More »

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ

ಸಮಗ್ರ ನ್ಯೂಸ್: ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮ ಪ್ರವೇಶದ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಮೀನುಗಾರರನ್ನು ಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಇಂದು ಚೆನ್ನೈಗೆ ಆಗಮಿಸಿದರು. ಅಕ್ಟೋಬರ್ 28 ಹಾಗೂ ನವೆಂಬರ್ 14ರಂದು ಮೀನುಗಾರಿಕೆಗೆ ತೆರಳಿದ್ದ ಒಟ್ಟು 37 ಮಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದ್ದರು. ಇವರ ಬಿಡುಗಡೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಮೀನುಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸಿ, ಬಿಡುಗಡೆಗೆ ಶ್ರಮವಹಿಸಿತ್ತು. ಇಂದು ಚೆನ್ನೈಗೆ ಬಂದಿಳಿದ ಮೀನುಗಾರರನ್ನು ತಮಿಳುನಾಡು ಬಿಜೆಪಿಯ ನಾಯಕರು ಬರಮಾಡಿಕೊಂಡರು. ನಂತರ ಅವರು ರಾಮೇಶ್ವರಂಗೆ ತೆರಳಿದರು.

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ Read More »

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ. ರಾಜಸ್ಥಾನದ ಅನುಪ್ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯಂತಹ ನಾಯಕರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ವೇದಿಕೆಯಲ್ಲಿದ್ದ ಜನರು ಖರ್ಗೆ ಅವರ ತಪ್ಪಿನ ಬಗ್ಗೆ ಎಚ್ಚರಿಸಿದಾಗ, ಅವರು ತಮ್ಮನ್ನು ಸರಿಪಡಿಸಿಕೊಂಡರು ಮತ್ತು ಅವರು

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್ Read More »

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾಯಿತೆಂದು ಬಡಿದಾಡಿಕೊಂಡ ಘಟನೆ ನಡೆದಿದೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಂಸಾಬಾದ್‍ನ ಬ್ರಿಜ್ಛಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಮದುವೆಗೆ ರಸಗುಲ್ಲಾ ಮಾಡಿಸಲಾಗಿತ್ತು. ಆದರೆ ರಸಗುಲ್ಲಾ ಶಾರ್ಟೆಜ್ ಆಗಿತ್ತು. ಈ ಕುರಿತು ಸಂಬಂಧಿಕರೊಬ್ಬರು ರಸಗುಲ್ಲಾ ಕಡಿಮೆಯಾಗಿದೆ ಎಂದು ಜೋರಾಗಿ ಕೂಗಿ ಹೇಳಿದ್ದು ಜಗಕ್ಕೆ ಕಾರಣವಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಶಂಸಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ Read More »

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಅರ್ಚಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲ್ಲಿಯವರೆಗೆ ಮೂರು ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅರ್ಚಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸಲ್ಲಿಕೆಯಾದ ಮೂರು ಸಾವಿರ ಅರ್ಜಿಗಳ ಪೈಕಿ, ಆರ್ಹತೆಯ ಆಧಾರದ ಮೇಲೆ 200 ಮಂದಿಯನ್ನು ಸಂದರ್ಶನಕ್ಕೆ ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ 20 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000 Read More »

ಭಾರತ-ಪಾಕ್ ಗಡಿಯಲ್ಲಿ ಡ್ರೋಣ್ ಸಂಚಾರ/ವಶಕ್ಕೆ ಪಡೆದ ಗಡಿ ಭದ್ರತಾ ಪಡೆ

ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಡ್ರೋಣ್ ಒಂದನ್ನು ಗಡಿ ಭದ್ರತಾ ಪಡೆಯ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಪಂಜಾಬ್‌ನ ವಿವಿಧೆಡೆಗಳಲ್ಲಿ ಒಂದು ವಾರದ ಒಳಗಡೆ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ವಶಪಡಿಸಿಕೊಂಡ ಎಂಟನೇ ಡ್ರೋಣ್ ಇದಾಗಿದೆ. ಪಾಕಿಸ್ತಾನವು ಡ್ರೋನ್ ಗಳನ್ನುಗಡಿಪ್ರದೇಶದಲ್ಲಿ ಹೆರಾಯಿನ್‌ ಕಳ್ಳಸಾಗಣೆ ಮಾಡಲು ಬಳಸುತ್ತಿದೆ. ಈ ಮಾಹಿತಿ ಆಧರಿಸಿ ಬಿಎಸ್‌ಎಫ್ ಮತ್ತು ಪೊಲೀಸರು ತರಣ್ ತಾರಣ್‌ ಜಿಲ್ಲೆಯಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ

ಭಾರತ-ಪಾಕ್ ಗಡಿಯಲ್ಲಿ ಡ್ರೋಣ್ ಸಂಚಾರ/ವಶಕ್ಕೆ ಪಡೆದ ಗಡಿ ಭದ್ರತಾ ಪಡೆ Read More »

ಪಂಚರಾಜ್ಯ ಚುನಾವಣೆ/ ಬೃಹತ್ ಮೊತ್ತದ ಡ್ರಗ್ಸ್ ವಶ

ಸಮಗ್ರ ನ್ಯೂಸ್: ಮಧ್ಯಪ್ರದೇಶ, ಛತ್ತೀಸಗಢ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ₹1,760 ಕೋಟಿ ಮೌಲ್ಯದ ಡ್ರಗ್ಸ್‌ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಐದು ರಾಜ್ಯಗಳಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಪ್ರಮಾಣಕ್ಕಿಂತ 7 ಪಟ್ಟು (₹239.15 ಕೋಟಿ) ಹೆಚ್ಚಾಗಿದೆ ಎಂದು ಹೇಳಲಾಗಿದೆ. ಮತದಾರರಿಗೆ ಹಂಚುವ ಉದ್ದೇಶದಿಂದ ಕೂಡಿಟ್ಟ ನಗದು, ಮದ್ಯ ಮತ್ತು ಬೆಲೆಬಾಳುವ ವಸ್ತುಗಳನ್ನು

ಪಂಚರಾಜ್ಯ ಚುನಾವಣೆ/ ಬೃಹತ್ ಮೊತ್ತದ ಡ್ರಗ್ಸ್ ವಶ Read More »

ಹಲಾಲ್ ಉತ್ಪನ್ನ ನಿಷೇಧ/ ಉತ್ತರ ಪ್ರದೇಶ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ಉತ್ತರ ಪ್ರದೇಶ ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ‘ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಲಾಗಿದೆ.

ಹಲಾಲ್ ಉತ್ಪನ್ನ ನಿಷೇಧ/ ಉತ್ತರ ಪ್ರದೇಶ ಸರ್ಕಾರದಿಂದ ಆದೇಶ Read More »

ವಾಹನಗಳ HSRP ನಂಬರ್ ಪ್ಲೇಟ್ ಬದಲಾವಣೆ ಅವಧಿ ವಿಸ್ತರಣೆ| ಯಾವಾಗ ಲಾಸ್ಟ್ ಡೇಟ್ ಗೊತ್ತಾ?

ಸಮಗ್ರ ನ್ಯೂಸ್: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನವೆಂಬರ್ 17ರೊಳಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಗಡುವು ವಿಸ್ತರಣೆ ಮಾಡಲಾಗಿದೆ. ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ವಾಹನ ಸವಾರರು ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದರಿಂದ ಡೆಡ್ ಲೈನ್ ನನ್ನು ಫೆಬ್ರವರಿ 17ರವರೆಗೆ ವಿಸ್ತರಿಸಲಾಗಿದೆ. 2019ಕ್ಕಿಂತ ಮೊದಲು ನೋಂದಣಿಯಾದ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ,

ವಾಹನಗಳ HSRP ನಂಬರ್ ಪ್ಲೇಟ್ ಬದಲಾವಣೆ ಅವಧಿ ವಿಸ್ತರಣೆ| ಯಾವಾಗ ಲಾಸ್ಟ್ ಡೇಟ್ ಗೊತ್ತಾ? Read More »

ತಮಿಳುನಾಡು: ಭೀಕರ ರಸ್ತೆ ಅಪಘಾತ|ಐವರ ದುರ್ಮರಣ

ಸಮಗ್ರ ನ್ಯೂಸ್: ಕಾರು ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನಪ್ಪಿದ ಘಟನೆ ತಿರುಪುರ್ ಜಿಲ್ಲೆಯ ಧಾರಾಪುರಂ ಬಳಿಯ ಮನಕಡೌ ಬಳಿ ನ. 16ರಂದು ನಡೆದಿದೆ. ಮೃತರನ್ನು ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78), ಮತ್ತು ಕಲಾರಾಣಿ (50) ಎಂದು ಗುರುತಿಸಲಾಗಿದೆ. ಧಾರಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಲಾರಾಣಿ ಮೃತಪಟ್ಟಿದ್ದಾರೆ. ಟ್ಯಾಂಕರ್ ಟ್ರಕ್ ಕೊಯಮತ್ತೂರು ಜಿಲ್ಲೆಯ ಇರುಗೂರ್‌ನಿಂದ ದ್ರಾಪುರಂ-ಪಳನಿ ರಸ್ತೆಯ ಮನಕಾಡೌ ಬಳಿ ಪೆಟ್ರೋಲ್ ಸಾಗಿಸುತ್ತಿದ್ದ

ತಮಿಳುನಾಡು: ಭೀಕರ ರಸ್ತೆ ಅಪಘಾತ|ಐವರ ದುರ್ಮರಣ Read More »