ರಾಷ್ಟ್ರೀಯ

ಐಫೋನ್​ ಬಳಕೆದಾರರಿಗೆ ಶಾಕ್​ ನೀಡಿದ ಕಂಪನಿ!

ಸಮಗ್ರ ನ್ಯೂಸ್: ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ ಕಂಪನಿ ತಂದ ಕೆಲವು ವೈಶಿಷ್ಟ್ಯಗಳನ್ನು ಶಾಶ್ವತವಾಗಿ ತೆಗೆದುಹಾಕಲು Apple ಹಿಂಜರಿಯುವುದಿಲ್ಲ. ಈಗ ಕಂಪನಿಯು ಅಂತಹ ಒಂದು ಸೌಲಭ್ಯವನ್ನು ತೆಗೆದುಹಾಕಲು ಸಿದ್ಧವಾಗಿದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಪರಿಣಿತರಿಂದ Weibo ನಲ್ಲಿ ಇತ್ತೀಚಿನ ಪೋಸ್ಟ್ ಪ್ರಕಾರ, ಭವಿಷ್ಯದ ಐಫೋನ್‌ಗಳಿಂದ ಟಚ್ ಐಡಿ ವೈಶಿಷ್ಟ್ಯವನ್ನು ಹಂತಹಂತವಾಗಿ ಹೊರಹಾಕಲು ಆಪಲ್ ಯೋಜಿಸಿದೆ. ಟಚ್ ಐಡಿಯೊಂದಿಗೆ, ಬಳಕೆದಾರರು ಫಿಂಗರ್‌ಪ್ರಿಂಟ್‌ನೊಂದಿಗೆ ಐಫೋನ್‌ಗಳನ್ನು ಅನ್‌ಲಾಕ್ ಮಾಡಬಹುದು. ಕಂಪನಿಗಳು ಬಜೆಟ್ ಶ್ರೇಣಿಯಿಂದ ಬಹುತೇಕ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೀಡುತ್ತಿವೆ. […]

ಐಫೋನ್​ ಬಳಕೆದಾರರಿಗೆ ಶಾಕ್​ ನೀಡಿದ ಕಂಪನಿ! Read More »

ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು?

ಸಮಗ್ರ ನ್ಯೂಸ್: ಮಧ್ಯಮ ವರ್ಗದ ಜನರಿಗೆಂದೇ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟ್ಯಾಟೋ ನ್ಯಾನೋ ಒಂದು ಸಮಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಟಾಟಾ ನ್ಯಾನೋ, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರಾಗಿ ಮತ್ತೊಮ್ಮೆ ಮಾರುಕಟ್ಟೆಗೆ ವಿಶಿಷ್ಟ ಫೀಚರ್ಸ್​ಗಳೊಂದಿಗೆ ಬರಲು ಸಜ್ಜಾಗಿದೆ. ಆದರೆ, ಈ ಬಾರಿ ಎಲೆಕ್ಟ್ರಿಕ್​ ಎಂಬುದು ಮತ್ತಷ್ಟು ವಿಶೇಷ. ಟಾಟಾ ನ್ಯಾನೊದ ಹೊಸ ಅವತಾರವು ಕಡಿಮೆ ಬೆಲೆಯಲ್ಲಿ ನಂಬಲಾಗದ ವೈಶಿಷ್ಟ್ಯಗಳೊಂದಿಗೆ ತಯಾರಾಗುತ್ತಿದೆ. ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯು

ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು? Read More »

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

ಸಮಗ್ರ ನ್ಯೂಸ್: ಡಾ.ಬಿ.ಆ‌ರ್ ಅಂಬೇಡ್ಕ‌ರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಸಂವಿಧಾನದ ದಿನದ ಅಂಗವಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಅನಾವರಣಗೊಳಿಸಿದರು. ಸಸಿ ನಡುವ ಮೂಲಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ .ವೈ ಚಂದ್ರಚೂಡ್ ಹಾಗೂ ರಾಷ್ಟ್ರಪತಿ ಮುರ್ಮು ಅವರು ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸೇರಿದಂತೆ ಸುಪ್ರೀಂ ಕೋರ್ಟ್‌ ಹಲವು ನ್ಯಾಯಾಧೀಶರು

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ Read More »

ಜಗತ್ತನ್ನೇ ತಲ್ಲಣಗೊಳಿಸಿದ ಮುಂಬೈ ದಾಳಿ/ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ

ಸಮಗ್ರ ನ್ಯೂಸ್: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ, ಭಾರತದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಮೇಲೆ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ ತುಂಬಿದೆ. ಲಷ್ಕರ್-ಎ-ತೋಯ್ಬಾ ಸಂಘಟನೆಯ 10 ಮಂದಿ ಭಯೋತ್ಪಾದಕರ ಈ ಸಂಘಟಿತ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು ಮತ್ತು 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು ಈ ಭಯೋತ್ಪಾದಕ ದಾಳಿ ಸಂಭವಿಸಿ 15 ವರ್ಷಗಳು ಕಳೆದರೂ ಸಹ ಘಟನೆಯ ಕರಾಳತೆ ಮತ್ತು ಮೃತಪಟ್ಟವರ ನೆನಪು ಇನ್ನು ಜೀವಂತವಾಗಿದೆ. ಭಾರತೀಯರು, ಯರೋಪಿಯನ್ನರು ಹಾಗೂ

ಜಗತ್ತನ್ನೇ ತಲ್ಲಣಗೊಳಿಸಿದ ಮುಂಬೈ ದಾಳಿ/ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ Read More »

‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್

ಉತ್ತರ ಪ್ರದೇಶ ಸರ್ಕಾರ ಸಂತ ತನ್ವರದಾಸ್‌ ಲೀಲಾರಾಮ್ ವಾಸ್ವಾನಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನವೆಂಬರ್ 25 ಶನಿವಾರವನ್ನು (ಇಂದು) ‘ನೋ ನಾನ್ ವೆಜ್ ಡೇ’ (ಮಾಂಸ ರಹಿತ ದಿನ)ಎಂದು ಅಧಿಕೃತವಾಗಿ ಘೋಷಿಸಿದೆ. ಅಂತಾರಾಷ್ಟ್ರೀಯ ಮಾಂಸರಹಿತ ದಿನವೆಂದು ಸಾಧು ವಾಸ್ವಾನಿ ಅವರ ಜನ್ಮದಿನವನ್ನು ಗುರುತಿಸಿ, ಉತ್ತರ ಪ್ರದೇಶದಲ್ಲಿ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕೆಂದು ಆದೇಶಿಸಲಾಗಿದೆ. ವಾಸ್ವಾನಿ ಭಾರತೀಯ ಶಿಕ್ಷಣತಜ್ಞರಾಗಿದ್ದು, ಪಾಕಿಸ್ತಾನದ ಸಿಂದ್‌ನಲ್ಲಿ ಸೇಂಟ್ ಮೀರಾ ಶಾಲೆಯನ್ನು ತೆರೆದರು. ಪುಣೆಯಲ್ಲಿ ಸಾಧುವಾಸ್ವಾನಿಯವರ ಬೋಧನೆಗಳಿಗೆ ಸಂಬಂಧಿಸಿದ

‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್ Read More »

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ| ಕೊನೆಗೂ ಮೌನ ಮುರಿದ ICMR

ಸಮಗ್ರ ನ್ಯೂಸ್: ಹೃದಯಾಘಾತಕ್ಕೆ ಯುವ ಜನಾಂಗ ಹೆಚ್ಚು ಸಾವನ್ನಪ್ಪುತ್ತಿರುವುದಕ್ಕೆ COVID-19 ವ್ಯಾಕ್ಸಿನೇಷನ್ ಕಾರಣವಲ್ಲ, ಬದಲಾಗಿ ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ವ್ಯಾಕ್ಸಿನೇಷನ್ ಗೂ ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ICMR ಖಚಿತಪಡಿಸಿದೆ. ಇತ್ತೀಚೆಗೆ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವುದಕ್ಕೆ ದೇಶದಾದ್ಯಂತ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣಗಳೇನು ಎಂಬುದದ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಪ್ರಕಾರ ಕೋವಿಡ್-19 ಹಿನ್ನಲೆ ಆಸ್ಪತ್ರೆಗೆ

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ| ಕೊನೆಗೂ ಮೌನ ಮುರಿದ ICMR Read More »

ಮಾರುಕಟ್ಟೆಗೆ ಬಂದಿದೆ ಮೇಡಿನ್ ಇಂಡಿಯಾ ಇ-ಬೈಕ್! ಅಗ್ಗದ ಬೆಲೆಯಲ್ಲಿ ಸೂಪರ್​ ಬೈಕ್​

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್ ಗಳು ಇವುಗಳ ತಯಾರಿಕೆಗೆ ಒತ್ತು ನೀಡುತ್ತಿವೆ. ಇತ್ತೀಚೆಗೆ ಮುಂಬೈನ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್, ಒಡಿಸ್ಸಿ ಎಲೆಕ್ಟ್ರಿಕ್ (ಒಡಿಸ್ಸೆ ಎಲೆಕ್ಟ್ರಿಕ್). ಈ ವರ್ಷದ ಆರಂಭದಲ್ಲಿ ಈ ವಾಹನವನ್ನು ಕಂಪನಿಯು ಅಧಿಕೃತವಾಗಿ ಅನಾವರಣಗೊಳಿಸಿತು. ಆದರೆ, ಪ್ರಮಾಣೀಕರಣದ ಸಮಸ್ಯೆಯಿಂದಾಗಿ ಇದು ಮಾರುಕಟ್ಟೆಗೆ ಬರಲಿಲ್ಲ. ಈಗ ವಾಡರ್ ಬೈಕ್, ಬ್ರಾಂಡ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ಪ್ರಮಾಣೀಕರಣವನ್ನು ಪಡೆದಿದೆ ಎಂದು ದೃಢಪಡಿಸಿದೆ.

ಮಾರುಕಟ್ಟೆಗೆ ಬಂದಿದೆ ಮೇಡಿನ್ ಇಂಡಿಯಾ ಇ-ಬೈಕ್! ಅಗ್ಗದ ಬೆಲೆಯಲ್ಲಿ ಸೂಪರ್​ ಬೈಕ್​ Read More »

ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ

ಸಮಗ್ರ ನ್ಯೂಸ್: ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ದೇಶಕ್ಕಿದ್ದ ‘ಹಿಂದು ರಾಷ್ಟ್ರ’ ವೆಂಬ ಸ್ಥಾನಮಾನವನ್ನು ಪುನಃ ನೀಡಬೇಕು ಎಂದು ಆಗ್ರಹಿಸಿ ಸಹಸ್ರಾರು ನಾಗರಿಕರು ನೇಪಾಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರಸ್ತುತ ಅಸ್ಥಿತ್ವದಲ್ಲಿರುವ ಪ್ರಜಾಪ್ರಭುತ್ವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಪ್ರತಿಭಟನೆ ನಡೆದಿದ್ದು, “ನಾವು ನಮ್ಮ ರಾಜ ಮತ್ತು ದೇಶವನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ. ರಾಜಪ್ರಭುತ್ವವನ್ನು ಮರಳಿ ತನ್ನಿ. ಗಣರಾಜ್ಯವನ್ನು ರದ್ದುಪಡಿಸಿ” ಎಂಬ ಘೋಷಣೆಗಳು ಮಾರ್ದನಿಸಿವೆ. ನೇಪಾಳದ ಮಾಜಿ

ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ Read More »

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ

ಸಮಗ್ರ ನ್ಯೂಸ್: ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ನಮ್ಮ ಮೆಟ್ರೋದಲ್ಲಿ ಬಿಎಂಆರ್‌ಸಿಎಲ್ ಗ್ರೀನ್ ಸಿಗ್ನಲ್ ನೀಡಿದ್ದು, ಬಣ್ಣದ ಲೋಕದ ಮಂದಿ ನಮ್ಮ ಮೆಟ್ರೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲಿನಲ್ಲಿಯೂ ಬಿಎಂಆರ್‌ಸಿಎಲ್ ಕೆಲವು ಷರತ್ತುಗಳೊಂದಿಗೆ ಶೂಟಿಂಗ್ ಗೆ ಅವಕಾಶ ನೀಡಿದೆ. ಈ ವಿಚಾರವನ್ನು ಚಿತ್ರರಂಗ ಸ್ವಾಗತಿಸುತ್ತದೆ ಮತ್ತು ಕನ್ನಡ ಚಿತ್ರರಂಗ ಬೆಳೆಯುತ್ತದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮಿಳಾ ಜೋಶಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ನಮ್ಮ ಮೆಟ್ರೋದಲ್ಲೂ ಚಿತ್ರೀಕರಣ Read More »

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರಿಗೆ ಅರ್ಪಿಸಲಾದ ಪವಿತ್ರವಾದ ಅಕ್ಷತೆ ತುಮಕೂರು ಸಿದ್ಧಗಂಗಾ ಕ್ಷೇತ್ರಕ್ಕೆ ನವೆಂಬರ್ 25ರಂದು ಆಗಮಿಸಲಿದೆ ಎಂದು ವಿಶ್ವ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ರಾದ ಜಿ.ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಶ್ರೀರಾಮನಿಗೆ ಪವಿತ್ರವಾದ ಅಕ್ಷತೆಯನ್ನು ನವೆಂಬರ್5 ರಂದು ಅರ್ಪಿಸಲಾಗಿದ್ದು, ಈ ಅಕ್ಷತೆಯು ನವೆಂಬರ್ 25ರ ಸಂಜೆ 4ಗಂಟೆಗೆ ತುಮಕೂರಿನ ಸಿದ್ಧಗಂಗ ಕ್ಷೇತ್ರಕ್ಕೆ ಬರಲಿದೆ. ತುಮಕೂರು ಜಿಲ್ಲೆಯ ಪರವಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸ್ವೀಕರಿಸಿ, ನಂತರ ಅಕ್ಷತೆಯ ಭಂಡಾರವನ್ನು ರಜತರಥದಲ್ಲಿಟ್ಟು ಪೂಜಿಸುವರು. ಅಲ್ಲಿಂದ ರೇವು ಬಿ.ಹೆಚ್.ರಸ್ತೆಯ

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ Read More »