ರಾಷ್ಟ್ರೀಯ

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ

ಸಮಗ್ರ ನ್ಯೂಸ್ : ಶಾಲೆಯಲ್ಲಿ ಹ್ಯಾಂಡ್ ಪಂಪ್ ಬಳಿ ಇರಿಸಲಾಗಿದ್ದ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಅನ್ನು ಎಂಟು ವರ್ಷದ ದಲಿತ ಬಾಲಕ ಮುಟ್ಟಿದನು ಎಂಬ ಕಾರಣಕ್ಕೆ ಬಾಲಕನಿಗೆ ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿ ನಡೆದಿದೆ. ನಾಲ್ಕನೇ ತರಗತಿ ಬಾಲಕ ಚಿರಾಗ್ ಎಂದು ಗುರುತಿಸಲಾಗಿದೆ. ರತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದನು. ಚಿರಾಗ್ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್ […]

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ Read More »

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ

ಸಮಗ್ರ ನ್ಯೂಸ್: ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್‌ ವಿಚಾರದಲ್ಲಿ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ. ಲೋಕಸಭಾ ಎಲೆಕ್ಷನ್ ಹೊತ್ತಿನಲ್ಲಿ ಬಾಕಿ ಇರುವ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸಲು IT ಇಲಾಖೆ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣೆಯ ಸಮಯದಲ್ಲಿ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಹೇಳಿದೆ. ಸುಪ್ರೀಂಕೋರ್ಟ್ ಮಹತ್ವದ

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ Read More »

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿಯುವರೆಗೂ ಕಾಂಗ್ರೆಸ್‌ ಪಕ್ಷ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.‌ ಆದಾಯ ತೆರಿಗೆ ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಸಾಲಿಸಿಟರ್‌ ಜನರಲ್‌

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ Read More »

ಬಿಜೆಪಿ 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ;ರಾಹುಲ್‌

ಸಮಗ್ರ ನ್ಯೂಸ್‌ : ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ ʻ400 ಪಾರ್‌ʼ ಘೋಷಣೆ ಮಾಡಲು ಸಾಧ್ಯವಿಲ್ಲ. 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ. ಮೋದಿ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆಗೆ ಕೆಲವು ಉದ್ಯಮಿಗಳೂ ಸೇರಿಕೊಂಡಿದ್ದಾರೆ ಎಂದು ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ED ಬಂಧನ ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ I.N.D.I.A. ಒಕ್ಕೂಟದ ʻಪ್ರಜಾಪ್ರಭುತ್ವ ಉಳಿಸಿʼ ಪ್ರತಿಭಟನಾ ರ‍್ಯಾಲಿಯನ್ನು ದ್ದೇಶಿಸಿ ಅವರು, ಬಿಜೆಪಿ ಗೆದ್ದು

ಬಿಜೆಪಿ 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ;ರಾಹುಲ್‌ Read More »

ಕೋಲ್ಕತ್ತಾ: ಲೋಕಸಭಾ ಚುನಾವಣೆ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ; ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ ಎಂದು ಎನ್‌ಡಿಎ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಸವಾಲು ಎಸೆದಿದ್ದಾರೆ. ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಇಂದು ಮಮತಾ ಬ್ಯಾನರ್ಜಿ ಸಂಸದೆ ಮಹುವಾ ಮೊಯಿತ್ರಾ ಪರ ಪ್ರಚಾರ ಮಾಡಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಎನ್‌ಡಿಎ ಒಕ್ಕೂಟಕ್ಕೆ ನಾನು ಸವಾಲು ಎಸೆಯುತ್ತೇನೆ. ಬಿಜೆಪಿಯವರು 400 ಪಾರ್ ಎಂದು ಹೇಳುತ್ತಿದ್ದಾರೆ. ನಾನು ಮೊದಲು 200 ಸೀಟುಗಳ ಮಾನದಂಡವನ್ನು ದಾಟಿ

ಕೋಲ್ಕತ್ತಾ: ಲೋಕಸಭಾ ಚುನಾವಣೆ ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ; ಮಮತಾ ಬ್ಯಾನರ್ಜಿ Read More »

ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಹೋರಾಡುತ್ತಿದ್ದಾರೆ;ಸುನಿತಾ ಕೇಜ್ರಿವಾಲ್

ಸಮಗ್ರ ನ್ಯೂಸ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಕೇಜ್ರಿವಾಲ್ ರಾಜೀನಾಮೆ ನೀಡಬೇಕಾ? ದೇಶಕ್ಕಾಗಿ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಬಹುಶ: ಕೇಜ್ರಿವಾಲ್ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಅನಿಸುತ್ತದೆ. ಹೋರಾಟದಲ್ಲಿ ಹುತಾತ್ಮರಾಗಿದ್ದ ಅವರು ಈಗಲೂ ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಕೇಜ್ರಿವಾಲ್ ಬರೆದ ಪತ್ರವನ್ನು ಓದಿದ ಅವರು,

ಅರವಿಂದ್ ಕೇಜ್ರಿವಾಲ್ ದೇಶಕ್ಕಾಗಿ ಹೋರಾಡುತ್ತಿದ್ದಾರೆ;ಸುನಿತಾ ಕೇಜ್ರಿವಾಲ್ Read More »

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI

ಸಮಗ್ರ ನ್ಯೂಸ್: ಚಾಟ್ ಜಿಪಿಟಿ ತಂತ್ರಜ್ಞಾನದ (ಎಐ) ಮೂಲಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ Open AI, ಈಗ ಧ್ವನಿ ಪಡಿಯಚ್ಚು (ವಾಯ್ಸ್ ಕ್ಲೋನ್) ಮಾಡುವ ತಂತ್ರಜ್ಞಾನವನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ. ಈ ನೂತನ ತಂತ್ರಜ್ಞಾನದ ಮೂಲಕ ಕ್ಲೋನ್ ಮಾಡಬೇಕಾದ ಧ್ವನಿಯ ಮಾಲೀಕರು ಧ್ವನಿಯನ್ನು 15 ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದರೆ ಸಾಕು, ಅವರ ಪಡಿಯಚ್ಚನಂತಾ ಧ್ವನಿ ಸಿದ್ಧವಾಗುತ್ತದೆ. ಆದರೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯ ಕಾರಣ ಈ ಧ್ವನಿ ಕ್ಲೋನ್ ತಂತ್ರಜ್ಞಾನವನ್ನು ಸದ್ಯ ಸಾರ್ವಜನಿಕವಾಗಿಸುತ್ತಿಲ್ಲ. ಮಾಲಿಕರಿಗೆ ಅರಿವಿಲ್ಲದೆ ಅವರ

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI Read More »

ಬಿಜೆಪಿ ಪ್ರಣಾಳಿಕೆ ಸಮಿತಿ/ ಮುಖ್ಯಸ್ಥರಾಗಿ ರಾಜನಾಥ್ ಸಿಂಗ್

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯ ಸಂಚಾಲಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಾಗೂ ಸಹ ಸಂಚಾಲಕರಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇಮಕ ಮಾಡಲಾಗಿದೆ. ಇವರಲ್ಲದೆ 24 ಮಂದಿಯನ್ನು ಈ ಸಮಿತಿಗೆ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಅರ್ಜುನ್ ಮುಂಡಾ, ಭೂಪೇಂದ್ರ ಯಾದವ್, ಅರ್ಜುನ್‍ರಾಮ್ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧಮೇರ್ಂದ್ರ ಪ್ರಧಾನ್, ಭೂಪೇಂದ್ರ ಪಟೇಲ್, ಹಿಮಂತ

ಬಿಜೆಪಿ ಪ್ರಣಾಳಿಕೆ ಸಮಿತಿ/ ಮುಖ್ಯಸ್ಥರಾಗಿ ರಾಜನಾಥ್ ಸಿಂಗ್ Read More »

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ

ಸಮಗ್ರ ನ್ಯೂಸ್: ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರಗಳನ್ನು ಜಿಲ್ಲಾ ಚುನಾವಣಾ ಸಮಿತಿಗಳು ನಿಗದಿಗೊಳಿಸಿದ್ದು ಬಹುತೇಕ ಕಡೆ ದರಗಳನ್ನು ಕಳೆದ ಬಾರಿಗಿಂತ ಕಡಿಮೆ ಮಾಡಿರುವುದು ಕಂಡಿಬಂದಿದೆ. ಕಾಫಿ-ಟೀ ದರಗಳನ್ನು ದೇಶದ ಬಹುತೇಕ ಕಡೆ ಇಳಿಕೆ ಮಾಡಲ್ಪಟ್ಟಿದ್ದರೆ ಅಚ್ಚರಿ ಎಂಬಂತೆ ಚೆನ್ನೈನಲ್ಲಿ ಏರಿಕೆ ಮಾಡಿ ಒಂದು ಕಪ್ ಕಾಫಿಗೆ 15 ರು. ಹಾಗೂ ಒಂದು ಸಮೋಸಾಗೆ 20 ರು. ನಿಗದಿ ಮಾಡಲಾಗಿದೆ. ಮಾಂಸಾಹಾರದ ದರಗಳೂ ಬಹುತೇಕ ಅದೇ ದರದಲ್ಲಿ ಮುಂದುವರೆದಿದ್ದು, ವ್ಯತಿರಿಕ್ತವೆಂಬಂತೆ ಚೆನ್ನೈನಲ್ಲಿ ಚಿಕನ್ ಬಿರಿಯಾನಿ

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ Read More »

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್

ಸಮಗ್ರ ನ್ಯೂಸ್: 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್ ರೆನಾಕ್ ಶಿಖರವನ್ನು, ಕೋಲ್ಕತಾದ ಬೆಲ್ಫಾರಿಯಾ ನಿವಾಸಿಯಾದ ಉದಯ್ ಕುಮಾರ್ ಒಂದೇ ಕಾಲಲ್ಲಿ ಏರಿ ಸಾಧನೆ ಮಾಡಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಉದಯ್ ಕುಮಾರ್, 2015ರ ರೈಲು ಅಪಘಾತದಲ್ಲಿ ತಮ್ಮ ಎಡಗಾಲು ಮೊಣಕಾಲಿನವರೆಗೂ ಹಾಗೂ ಬಲಗಾಲಿನ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದರು. ಇದರಿಂದ ಕುಮಾರ್ ಶೇ.91 ರಷ್ಟು ಅಂಗವಿಕಲತೆಯನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಒಂದೇ ಕಾಲಿನಲ್ಲಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಶಿಖರವಾದ

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್ Read More »