ರಾಷ್ಟ್ರೀಯ

ಸದ್ಯಕ್ಕಿಲ್ಲ ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ

ಮಂಗಳೂರು: ಸದ್ಯಕ್ಕೆ ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ ಪುನರಾರಂಭವಾಗುವುದು ಅನುಮಾನವಾಗಿದ್ದು, ಈ ಕಾರಣ ಒಂದು ವಾರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನ.1ರಿಂದ ಬಸ್‌ ಸಂಚಾರ ಪುನರಾರಂಭವಾಗುವು ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆದರೆ, ಒಂದು ವಾರಗಳ ಕಾಲ ಅಂತರಾಜ್ಯ ಬಸ್‌ ಸಂಚಾರ ಪುನರಾರಂಭವಾಗದು ಎಂದು ದ.ಕ ಜಿಲ್ಲಾಡಳಿತ ಹೇಳಿದೆ. ಈ ವಿಚಾರವಾಗಿ ಕೇರಳ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ತಿಳಿಸಿದ್ದು, “ಕರ್ನಾಟಕ ಬಸ್‌ಗಳು ರಾಜ್ಯ ಪ್ರವೇಶಿಸುವುದಕ್ಕಾಗಲಿ, ನಮ್ಮ ಬಸ್‌ಗಳನ್ನು ಕರ್ನಾಟಕಕ್ಕೆ ಬಿಡುವುದಕ್ಕಾಗಲಿ […]

ಸದ್ಯಕ್ಕಿಲ್ಲ ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ Read More »

ಇಂದು(ಅ.30) 3 ಲೋಕಸಭಾ ಹಾಗೂ 30 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ| ಕರ್ನಾಟಕದ ಹಾನಗಲ್, ಸಿಂದಗಿಯಲ್ಲಿ‌ ಮತದಾನ ಆರಂಭ

ನವದೆಹಲಿ ​: 13 ರಾಜ್ಯಗಳಲ್ಲಿ ಹರಡಿರುವ ಮೂರು ಲೋಕಸಭಾ ಸ್ಥಾನಗಳು ಮತ್ತು 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇಂದು ನಡೆಯುತ್ತಿದೆ. ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದ್ದು ಚುನಾವಣೆ ಬಿಗಿ ಭದ್ರತೆಯ ನಡುವೆ ನಡೆಯುತ್ತಿದೆ. ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಉಪ ಚುನಾವಣೆಗಳ ಸಂದರ್ಭದಲ್ಲಿ ಕಟ್ಟುನಿಟ್ಟಾದ ಕೋವಿಡ್-19 ಮಾರ್ಗಸೂಚಿಗಳನ್ನು ನಿರ್ವಹಿಸುವಂತೆ ಭಾರತೀಯ ಚುನಾವಣಾ ಆಯೋಗವು ಮತದಾನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಉಪಚುನಾವಣೆಯ ಸಮಯದಲ್ಲಿ

ಇಂದು(ಅ.30) 3 ಲೋಕಸಭಾ ಹಾಗೂ 30 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ| ಕರ್ನಾಟಕದ ಹಾನಗಲ್, ಸಿಂದಗಿಯಲ್ಲಿ‌ ಮತದಾನ ಆರಂಭ Read More »

ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ‍್ಯಾಂಡ್

ಇಂಟರ್‌ನೆಟ್ ಲೋಕವನ್ನೇ ಬದಲಿಸಲಿದೆಯಾ ಮೆಟಾವರ್ಸ್..? ವಿವರ ಇಲ್ಲಿದೆ ವಾಷಿಂಗ್ಟನ್: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಭವಿಷ್ಯದ ವರ್ಚುವಲ್ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೇ ಅವರು ಮೆಟಾವರ್ಸ್ ಎಂದು ಕರೆದಿದ್ದಾರೆ.ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ

ಫೇಸ್‌ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ‍್ಯಾಂಡ್ Read More »

ಮಹಿಳೆಯರಿಗೊಂದು ಗುಡ್ ನ್ಯೂಸ್| ಕೊನೆಗೂ ಇಳಿಕೆಯಾದ ಅಡುಗೆಎಣ್ಣೆ ದರ

ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಸ್ವಲ್ಪ ‌ನಿರಾಳರಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆ ಅದರ ಲೀಟರ್ ಗೆ 20 ರೂ. ನಷ್ಟು ಕಡಿಮೆಯಾಗಿದೆ. ಇನ್ನು 5 ರೂಪಾಯಿಯಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಕೊರೋನಾ ನಂತರದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಅಡುಗೆ ಎಣ್ಣೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ದರ ಇಳಿಕೆಯಾಗಿದೆ. ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಮಾಡಲಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಲೀಟರ್ ಅಡುಗೆ ಎಣ್ಣೆ ದರ 20

ಮಹಿಳೆಯರಿಗೊಂದು ಗುಡ್ ನ್ಯೂಸ್| ಕೊನೆಗೂ ಇಳಿಕೆಯಾದ ಅಡುಗೆಎಣ್ಣೆ ದರ Read More »

ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಸಂಜೆ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿನ ವೈದ್ಯರು ರಜನಿಕಾಂತ್ ಅವರನ್ನು ವಿವಿಧ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಇಂದು ಸಂಜೆ 4.30ರ ಸುಮಾರಿಗೆ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಎಂದಿನಂತೆ ನಿಯಮಿತ ಆರೋಗ್ಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್ Read More »

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ

ಛತ್ತೀಸ್ ಗಡ: ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ. ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ನಾಯಕ್​(60) ಉಪನ್ಯಾಸಕರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದುರ್ಗ್​ ಹೆಚ್ಚುವರಿ ಎಸ್​ಪಿ ಅನಂತ್​ ಕುಮಾರ್ ಸಾಹು ಹೇಳಿದ್ದಾರೆ. ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ನಾಯಕ್​ ಬೆಳಗ್ಗೆ 9:30ರ ಸುಮಾರಿಗೆ ಕಾಲೇಜಿಗೆ ಆಗಮಿಸಿದ್ದರು. ಸ್ವಲ್ಪ ಹೊತ್ತು ಬಿಟ್ಟು ವಾಚ್​ ಮನ್​ ಗಮನಿಸಿದ ವೇಳೆ ಪ್ರಾಂಶುಪಾಲ ನಾಯಕ್​​ ಉಪನ್ಯಾಸಕರ

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ Read More »

ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ|

ಡಿಜಿಟಲ್ ಡೆಸ್ಕ್ : 27 ವರ್ಷದ ಮಹಿಳೆ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು ಗಂಡು ಮಗು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ರೀತಿ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ 5 ಕೋಟಿ ಮಹಿಳೆಯರಲ್ಲಿ ಒಬ್ಬರು ಜನ್ಮ ನೀಡುತ್ತಾರೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ಹೆರಿಗೆ ಸಾಮಾನ್ಯವಾಗಿ ಅತ್ಯಂತ ಕಠಿಣದಾಯಕವಾಗಿ ಇರುತ್ತದೆ. ಮೀನಾ ಮಲ್ಟಿ ಸ್ಪೆಷಾಲಿಟಿ

ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ| Read More »

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..?

ನವದೆಹಲಿ: ಕೋವಿಡ್‌-_19ರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಮಾತ್ರೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ ಉತ್ಪಾದಿಸಲು ಅನುಮತಿ ಕೋರಿ ಹೈದ್ರಾಬಾದ್‌ ಮೂಲದ ಆಪ್ಟಿಮಸ್‌ ಫಾರ್ಮಾ, ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ‘ಭಾರತದಲ್ಲಿ ಗುಳಿಗೆಯ ತುರ್ತು ಬಳಕೆಗೆ ಒಂದೊಮ್ಮೆ ಅನುಮೋದನೆ ದೊರೆತರೆ ಕಂಪನಿಯು ತಿಂಗಳಲ್ಲಿ 8 ಕೋಟಿ ಗುಳಿಗೆಗಳನ್ನು ಉತ್ಪಾದಿಸಲಿದೆ. ಪ್ರತಿ ಗುಳಿಗೆಗೆ ಅಂದಾಜು 30 ರೂ.ದರ ಇರಲಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..? Read More »

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!”

ಫ್ಲೋರಿಡಾ: ಮಾಡೆಲ್ ಒಬ್ಬಳು ತನ್ನ ತಂದೆಯ ಶವದ ಮುಂದೆಯೇ ಫೋಟೋಶೂಟ್ ಮಾಡಿಸಿಕೊಂಡು ಭಾರೀ ಚರ್ಚೆಗೆ ಗ್ರಾಸವಾದ ಘಟನೆ ಫ್ಲೋರಿಡಾದಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ಮಾಡೆಲ್ ಅನ್ನು ಜಯೆ ರಿವೇರಾ(20) ಎಂದು ಗುರುತಿಸಲಾಗಿದ್ದು, ಈಕೆ ಫ್ಲೋರಿಡಾದ ಮೈಮಿ ನಗರದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದು, ಇದೀಗ ಈಕೆಯ ಫೋಟೋಶೂಟ್ ಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಇನ್‌ಸ್ಟಾ ಖಾತೆಯಲ್ಲಿ ರಿವೇರಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ. ಅಲ್ಲದೆ ಆ ಫೋಟೋಗಳನ್ನು

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!” Read More »

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಿದೆ. ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್

ದೇಶವಾಸಿಗಳಿಗೆ ಬಿಗ್ ಶಾಕ್| 150ರ ಗಡಿದಾಟಲಿದೆ ತೈಲೋತ್ಪನ್ನ ದರ| ದುಬಾರಿಯಾಗ್ತಾ ಇದೆ ಕಚ್ಚಾತೈಲ Read More »