ರಾಷ್ಟ್ರೀಯ

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್|

ಕೋಲಾರ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್​ಗೆ ಕರೆ ಕೊಟ್ಟಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಲಾರ ಬಂದ್​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇದ್ದು, ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಪ್ರಮೋದ್​ ಮುತಾಲಿಕ್​ ಅವರು ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ. ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್ 18ರಂದು ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ […]

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್| Read More »

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು. ಕೇರಳ ದೇವಸ್ವಂ ಬೋರ್ಡ್ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಲಾಗಿದೆ. ಈ ಪ್ರಸಾದಕ್ಕೆ ‘ಅಲ್-ಝಹಾ’ ಎಂಬ ಅರೇಬಿಕ್ ಹೆಸರನ್ನು ನೀಡಲಾಗಿದೆ ಮತ್ತು ಇದನ್ನು ‘ಹಲಾಲ್’

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ Read More »

‘ಪೂರ್ವಾಂಚಲ ಎಕ್ಸ್ ಪ್ರೆಸ್ ವೇ’ ಪ್ರಧಾನಿ ಮೋದಿ ಚಾಲನೆ| ಇನ್ಮುಂದೆ ರಸ್ತೆಯಲ್ಲೇ ವಿಮಾನಗಳು ಲ್ಯಾಂಡ್ ಆಗಲಿವೆ|

ಲಕ್ನೋ: ನವ ಭಾರತಕ್ಕೆ ಮೆರುಗು ನೀಡುವಂತೆ ನಿರ್ಮಾಣವಾಗಿರುವ ಪೂರ್ವಾಂಚಲ ಎಕ್ಸ್​ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು. ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನಗಳು ಲ್ಯಾಂಡ್​ ಆಗಲು ಅನುಕೂಲವಾಗುವಂತೆ ಎಕ್​​​ಪ್ರೆಸ್​ವೇ ನಿರ್ಮಾಣ ಮಾಡಲಾಗಿದ್ದು, ಈ ಹೆದ್ದಾರಿ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಭಾರತ ವಾಯು ಸೇನೆಗೆ ಸೇರಿದ ಸಿ-130ಜೆ ಸೂಪರ್​ ಹರ್ಕುಲಸ್ ವಿಮಾನದಲ್ಲಿ ಬಂದು ಹೆದ್ದಾರಿ ಮೇಲೆ ಪ್ರಧಾನಿ ಮೋದಿ ಲ್ಯಾಂಡ್​ ಆದರು. ಆ ಬಳಿಕ ಹೆದ್ದಾರಿಯನ್ನು ಉದ್ಘಾಟನೆ ಮಾಡಿ

‘ಪೂರ್ವಾಂಚಲ ಎಕ್ಸ್ ಪ್ರೆಸ್ ವೇ’ ಪ್ರಧಾನಿ ಮೋದಿ ಚಾಲನೆ| ಇನ್ಮುಂದೆ ರಸ್ತೆಯಲ್ಲೇ ವಿಮಾನಗಳು ಲ್ಯಾಂಡ್ ಆಗಲಿವೆ| Read More »

“ಹುದ್ದೆ‌ಬಿಟ್ಟು‌ ಕೆಳಗಿಳಿಯಿರಿ” – ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸೇನೆ ತಾಕೀತು

ಇಸ್ಲಾಮಾಬಾದ್‌: ಮೂರು ವರ್ಷಗಳಿಂದ ಪಾಕಿಸ್ತಾನದ ಪ್ರಧಾನಿಯಾಗಿರುವ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಹುದ್ದೆಗೆ ಸಂಚಕಾರ ಬಂದಿದೆ. ದೇಶದ ಗುಪ್ತಚರ ದಳವಾದ ಐಎಸ್‌ಐಗೆ ನೂತನ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಸೇನೆ ಜೊತೆ ಇಮ್ರಾನ್‌ ಘರ್ಷಣೆ ತೀವ್ರಗೊಂಡಿದ್ದು, ನ.20ರೊಳಗೆ ನೀವೇ ರಾಜೀನಾಮೆ ನೀಡಿ, ಇಲ್ಲದಿದ್ದರೆ ನಾವು ಇಳಿಸುತ್ತೇವೆ ಎಂದು ಸೇನಾಪಡೆ ಮುಖ್ಯಸ್ಥ ಜ| ಕಮರ್‌ ಜಾವೇದ್‌ ಬಜ್ವಾ ಗಡುವು ನೀಡಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ಇಮ್ರಾನ್‌ ಖಾನ್‌ಗೆ ಎರಡು ಆಯ್ಕೆಗಳನ್ನು ಸೇನೆ ನೀಡಿದೆ. 1.ನ.20ರೊಳಗೆ ಅವರೇ

“ಹುದ್ದೆ‌ಬಿಟ್ಟು‌ ಕೆಳಗಿಳಿಯಿರಿ” – ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸೇನೆ ತಾಕೀತು Read More »

ಸ್ಪೋಟಗೊಂಡ ಇಲೆಕ್ಟ್ರಿಕ್ ಸ್ಕೂಟರ್| ನೈಜ ಸಂಗತಿ ಏನು?

ಡಿಜಿಟಲ್ ಡೆಸ್ಕ್: ತಮಿಳುನಾಡು ಹಾಗೂ ಪುದುಚೇರಿ ಗಡಿಯಲ್ಲಿ ಇತ್ತೀಚೆಗೆ ಸ್ಕೂಟರ್‌ವೊಂದು ಬೆಂಕಿಗಾಹುತಿಯಾಗಿ, ಅದರಲ್ಲಿದ್ದ ತಂದೆ ಮಗ ಮೃತಪಟ್ಟಿದ್ದರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್‌, ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವ ದೃಶ್ಯ ಇದರಲ್ಲಿದೆ. ‘ಇಲೆಕ್ಟ್ರಿಕ್ ಸ್ಕೂಟರ್ ಆಗಿರುವ ಕಾರಣ ಸ್ಫೋಟ ನಡೆದಿದೆ’ ಎಂದು ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿತ್ತು. ನೈಜ ವರದಿಗಳ ಪ್ರಕಾರ ಬ್ಯಾಟರಿಚಾಲಿತ ಬೈಕ್‌ ಆಗಿದ್ದಕ್ಕೆ ಸ್ಫೋಟ ನಡೆದಿದೆ ಎಂಬುದು ಸುಳ್ಳು. ‘ಸ್ಕೂಟರ್‌ನಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿಸಿದ್ದ ಪಟಾಕಿಯನ್ನು ಸಾಗಿಸಲಾಗುತ್ತಿತ್ತು. ಪಟಾಕಿಯನ್ನು

ಸ್ಪೋಟಗೊಂಡ ಇಲೆಕ್ಟ್ರಿಕ್ ಸ್ಕೂಟರ್| ನೈಜ ಸಂಗತಿ ಏನು? Read More »

ಗೋವುಗಳಿಗೂ ಅಂಬ್ಯುಲೆನ್ಸ್ ಸೇವೆ| ದೇಶದಲ್ಲೇ ಮೊದಲ ಬಾರಿಗೆ ಉ.ಪ್ರದೇಶ ಸರ್ಕಾರದ ಹೊಸ ಹೆಜ್ಜೆ|

ಲಕ್ನೋ : ದೇಶದಲ್ಲಿಯೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಸುಗಳಿಗೆ ಅಂಬುಲೆನ್ಸ್ ಸೇವೆ ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಈ ಯೋಜನೆ ಕುರಿತಾಗಿ ಮಾತನಾಡಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಅಂಬುಲೆನ್ಸ್ ಸೇವೆ ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯಡಿ 515 ಅಂಬುಲೆನ್ಸ್ ಕಾರ್ಯನಿರ್ವಹಣೆ ಮಾಡಲಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ

ಗೋವುಗಳಿಗೂ ಅಂಬ್ಯುಲೆನ್ಸ್ ಸೇವೆ| ದೇಶದಲ್ಲೇ ಮೊದಲ ಬಾರಿಗೆ ಉ.ಪ್ರದೇಶ ಸರ್ಕಾರದ ಹೊಸ ಹೆಜ್ಜೆ| Read More »

ನಾಳೆಯಿಂದ ಶಬರಿಮಲೆ ಭಕ್ತರ ದರ್ಶನಕ್ಕೆ ಮುಕ್ತ| ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ|

ತಿರುವನಂತಪುರಂ: ಎರಡು ತಿಂಗಳ ಕಾಲ ನಡೆಯುವ ಮಂಡಲ ಪೂಜೆ ಹಾಗೂ ಮಕರವಿಳಕ್ಕು ದರ್ಶನಕ್ಕಾಗಿ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಸಂಜೆ ತೆರೆಯಲಾಗುವುದು ಮತ್ತು ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನವು ಮಂಡಲಪೂಜೆಗಾಗಿ ಡಿಸೆಂಬರ್ 26 ರವರೆಗೆ ತೆರೆದಿರುತ್ತದೆ ಮತ್ತು ಮಕರವಿಳಕ್ಕು ಉತ್ಸವಕ್ಕಾಗಿ ಜನವರಿ 20 ರವರೆಗೆ ದರ್ಶನಕ್ಕೆ ಅವಕಾಶ ನೀಡಲು ಡಿಸೆಂಬರ್ 30 ರಂದು ಮತ್ತೆ ತೆರೆಯಲಾಗುತ್ತದೆ. ನವೆಂಬರ್ 16 ರಂದು ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ (ತಂತ್ರಿ) ಕಂದರಾರು

ನಾಳೆಯಿಂದ ಶಬರಿಮಲೆ ಭಕ್ತರ ದರ್ಶನಕ್ಕೆ ಮುಕ್ತ| ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ| Read More »

ನಾವೆಲ್ಲ ಜೀವಕ್ಕೆ ವಿಮೆ ಮಾಡ್ಸಿದ್ರೆ ಇಲ್ಲೊಬ್ಬಳು ಯಾವ್ದಕ್ಕೆ ವಿಮೆ ಮಾಡ್ಸಿದಾಳೆ ಗೊತ್ತಾ?

ನ್ಯೂಸ್ ಡೆಸ್ಕ್: ನಾವು ನಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸುತ್ತೇವೆ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಜೀವಕ್ಕಾದರೆ ನಮ್ಮನ್ನು ಅವಲಂಭಿಸಿದ ಇನ್ನೊಬ್ಬರಿಗೆ ಉಪಯೋಗ ಆಗ್ಲಿ ಅಂತ. ಆದರೆ ಯಾವತ್ತಾದ್ರೂ ಯಾರಾದರೂ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದನ್ನು ಕೇಳಿದ್ದೀರಾ?! ಹಾಗಿದ್ರೆ ಈ ಕಥೆ ಓದಿನೋಡಿ… ಬ್ರೆಜಿಲ್‌ನ 35 ವರ್ಷದ ಮಾಡೆಲ್‌ ನ್ಯಾಥಿ ಕಿಹಾರಾ ಅವರು ತಮ್ಮ ಹಿಂಬದಿಗೆ ಬರೋಬ್ಬರಿ 13 ಕೋಟಿ ರೂ.ಮೊತ್ತದ ವಿಮೆ ಮಾಡಿಸಿದ್ದಾರೆ. ಅವರ ಪೃಷ್ಠವು 126

ನಾವೆಲ್ಲ ಜೀವಕ್ಕೆ ವಿಮೆ ಮಾಡ್ಸಿದ್ರೆ ಇಲ್ಲೊಬ್ಬಳು ಯಾವ್ದಕ್ಕೆ ವಿಮೆ ಮಾಡ್ಸಿದಾಳೆ ಗೊತ್ತಾ? Read More »

ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…!

ತಿರುವನಂತಪುರ : ಕೇರಳದ ಪ್ರಸಿದ್ದ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನವು ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಕೊರೊನಾ ಹಾವಳಿಯಿಂದ ಕಳೆದ ವರ್ಷ ಶಬರಿಮಲೆಗೆ ಯಾತ್ರೆ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದ್ದು ಈ ಬಾರಿ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಬಾರಿ ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧಾರಣೆ ಆರಂಭಗೊಂಡಿದೆ. ಈ ನಡುವೆ ಅಯ್ಯಪ್ಪ ಸ್ವಾಮಿಯ ಪ್ರಸಿದ್ಧ ‘ಆರಾವಣಾ ಪಾಯಸಮ್’ನಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಿಂದೂ ಧರ್ಮಕ್ಷೇತ್ರದ ಪ್ರಸಾದದಲ್ಲಿ

ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…! Read More »

ಬಿಟ್ ಕಾಯಿನ್ ನಲ್ಲಿ ಕೋಟಿ ಕೋಟಿ ಅವ್ಯವಹಾರ| ಚೌಕೀದಾರನಿಂದ ಕಳ್ಳರ ರಕ್ಷಣೆ| ಕಾಂಗ್ರೆಸ್ ಸಿಡಿಸಿದ ‘ಕಾಯಿನ್ ಬಾಂಬ್’

ನವದೆಹಲಿ: ಇದು ಭಾರತದ ಅತಿದೊಡ್ಡ ಬಿಟ್‌ಕಾಯಿನ್ ಹಗರಣ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕರ್ನಾಟಕದ ಬಿಜೆಪಿ ಸರ್ಕಾರವು ನ್ಯಾಯಯುತ ತನಿಖೆ ನಡೆಸುವ ಬದಲು ‘ಆಪರೇಷನ್ ಬಿಟ್‌ಕಾಯಿನ್ ಹಗರಣವನ್ನು ಮುಚ್ಚಿಹಾಕಲು’ ಯತ್ನಿಸುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ. ಬಿಟ್‌ಕಾಯಿನ್ ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು

ಬಿಟ್ ಕಾಯಿನ್ ನಲ್ಲಿ ಕೋಟಿ ಕೋಟಿ ಅವ್ಯವಹಾರ| ಚೌಕೀದಾರನಿಂದ ಕಳ್ಳರ ರಕ್ಷಣೆ| ಕಾಂಗ್ರೆಸ್ ಸಿಡಿಸಿದ ‘ಕಾಯಿನ್ ಬಾಂಬ್’ Read More »