ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳ್ತಾರಾ ಸುಧಾಮೂರ್ತಿ| ಸಮಾಜ ಸೇವೆಯಲ್ಲೇ ಮುಂದುವರೆಯುವ ಬಯಕೆ|
ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಯಶಸ್ಸಿನಲ್ಲಿನ ಪ್ರಮುಖ ಪಾತ್ರಧಾರಿ, ಸುಧಾ ಮೂರ್ತಿ ಅವರು ಶುಕ್ರವಾರ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನು ಅಂತಿಮವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಹಲವು ದಶಕಗಳಿಂದ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದು, ಸುಧಾ ಮೂರ್ತಿಯವರು ತಮ್ಮ ವೃತ್ತಿಪರ ಜೀವನವನ್ನು […]