ರಾಷ್ಟ್ರೀಯ

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್

ಸಮಗ್ರ ನ್ಯೂಸ್: ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರೆಸ್ಸೆಸ್‌ ಪಾಲ್ಗೊಂಡಿತ್ತು ನಿಜ. ಇನ್ನು ಮುಂದೆ ಇಂತಹ ಹೋರಾಟದಲ್ಲಿ ಭಾಗಿಯಲ್ಲ […]

ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ – ಮೋಹನ್ ಭಾಗವತ್ Read More »

ಚಿನ್ನಾಭರಣ ಮಾರಾಟಕ್ಕೆ ಹೊಸ ನಿಯಮ‌ ಜಾರಿ| ಹೀಗಿರಲಿದೆ ಹೊಸ ಹಾಲ್ ಮಾರ್ಕ್ ರೂಲ್ಸ್

ಸಮಗ್ರ ನ್ಯೂಸ್: ದೇಶದಲ್ಲಿ ಆಭರಣ ಮಾರಾಟಕ್ಕೆ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಜೂನ್ 1 ರಿಂದ ದೇಶದ ಎಲ್ಲಾ ಆಭರಣ ವ್ಯಾಪಾರಿಗಳು ಅದರ ಶುದ್ಧತೆಯನ್ನು ಲೆಕ್ಕಿಸದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ವ್ಯಾಪಾರಿಗಳು ಶುದ್ಧತೆಯನ್ನು ಲೆಕ್ಕಿಸದೆ ಜೂನ್ 1 ರಿಂದ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳನ್ನು (2 ಗ್ರಾಂಗಿಂತ ಹೆಚ್ಚು) ಮಾತ್ರ ಮಾರಾಟ ಮಾಡಬೇಕು ಎಂದು ಏಪ್ರಿಲ್ 4, 2022 ರಂದು ಬ್ಯೂರೋ ಆಫ್ ಇಂಡಿಯನ್

ಚಿನ್ನಾಭರಣ ಮಾರಾಟಕ್ಕೆ ಹೊಸ ನಿಯಮ‌ ಜಾರಿ| ಹೀಗಿರಲಿದೆ ಹೊಸ ಹಾಲ್ ಮಾರ್ಕ್ ರೂಲ್ಸ್ Read More »

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಗೆ ಸಮನ್ಸ್

ಸಮಗ್ರ ನ್ಯೂಸ್: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅವರಿಬ್ಬರೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕರಾಗಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ನ ಪ್ರವರ್ತಕರು ಮತ್ತು ಷೇರುದಾರರಲ್ಲಿ ಸೇರಿದ್ದಾರೆ . ಮೂಲಗಳ ಪ್ರಕಾರ , ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಕ್ರಮವಾಗಿ ಜೂನ್ 2 ಮತ್ತು 8 ರಂದು ಕೇಂದ್ರ ಏಜೆನ್ಸಿಯ ಮುಂದೆ ಹಾಜರಾಗುವಂತೆ ಕೇಳಲಾಗಿದೆ .

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಗೆ ಸಮನ್ಸ್ Read More »

‘ಗೆಳೆಯನಿಗಾಗಿ ಗಡಿದಾಟಿದ ಪ್ರೀತಿ’| ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ…!

ಸಮಗ್ರ ನ್ಯೂಸ್: ಪ್ರೀತಿಸಿದವರನ್ನು ಪಡೆಯಲು ಜನರು ಏನೆಲ್ಲ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಯುವತಿಯೋರ್ವಳು ಪ್ರೀತಿಸಿದ ಯುವಕನನ್ನು ಮದುವೆಯಾಗಲೂ ಬಾಂಗ್ಲಾದಿಂದ ಭಾರತದವರೆಗೆ ನದಿಯಲ್ಲಿ ಈಜಿಕೊಂಡು ಬಂದಿದ್ದಾರೆ. ಬಾಂಗ್ಲಾದೇಶ ಅಭಿಕ್ ಮಂಡಲ್ (22) ಎಂಬ ಯುವತಿಯೋರ್ವಳು ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ಗಡಿಯಾಚೆ ಈಜಿದ್ದಾಳೆ. ಆಶ್ಚರ್ಯ ಆದ್ರೂ ಇದು ಸತ್ಯ. ಈ ಯುವತಿ ಬಾಂಗ್ಲಾದೇಶದಿಂದ ಭಾರತದವರೆಗೆ ಬರಲು ಒಂದು ಗಂಟೆಗಳ ಕಾಲ ಈಜಿ ದಡ ಸೇರಿದ್ದಾಳೆ. ಕೃಷ್ಣ ಮಂಡಲ್ ಅವರು ಅಭಿಕ್ ಮಂಡಲ್ ಎಂಬುವವರನ್ನು ಫೇಸ್‌ಬುಕ್‌ನಲ್ಲಿ

‘ಗೆಳೆಯನಿಗಾಗಿ ಗಡಿದಾಟಿದ ಪ್ರೀತಿ’| ಬಾಂಗ್ಲಾದಿಂದ ಭಾರತಕ್ಕೆ ಈಜಿದ ಯುವತಿ…! Read More »

ರಾಜಧಾನಿ ಸೇರಿದಂತೆ 50 ಕಡೆ ಐಟಿ‌ ದಾಳಿ| ಹಲವು ತಿಮಿಂಗಿಲಗಳಿಗೆ ಬಲೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದು, ಬೆಳ್ಳಂ ಬೆಳಗ್ಗೆ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. 600ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಸರ್ಚ್ ವಾರೆಂಟ್ ತಂದು ಮನೆ ಹಾಗೂ ಕಚೇರಿಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದಾಯ ಮರೆಮಾಚಿ ಐಟಿ ರಿಟರ್ನ್ಸ್ ಸಲ್ಲಿಕೆ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ

ರಾಜಧಾನಿ ಸೇರಿದಂತೆ 50 ಕಡೆ ಐಟಿ‌ ದಾಳಿ| ಹಲವು ತಿಮಿಂಗಿಲಗಳಿಗೆ ಬಲೆ Read More »

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗುಡಿ ನಿರ್ಮಾಣಕ್ಕೆ ಯೋಗಿ ಅಡಿಗಲ್ಲು

ಸಮಗ್ರ ನ್ಯೂಸ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬುಧವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಲ್ಲವರು ಶ್ರೀರಾಮನ ದೇವಸ್ಥಾನದ ಗರ್ಭಗೃಹ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಕೆತ್ತಿರುವ ಮೊದಲ ಇಟ್ಟಿಗೆಯನ್ನು ಗರ್ಭಗೃಹದಲ್ಲಿಟ್ಟು ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಾಬ್ರಿ ಮಸೀದಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್‌ ದೇವಸ್ಥಾನ 2024ರ ಲೋಕಸಭಾ ಚುನಾವಣೆಗೂ ಕೆಲಸಮಯ ಮುನ್ನ ಲೋಕಾರ್ಪಣೆಗೊಳ್ಳಲಿದೆ. ಗರ್ಭಗೃಹ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರನಾ ಪರ್ವತದ ಅಮೃತಶಿಲೆಯನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟು 13,300 ಕ್ಯೂಬಿಕ್‌ ಅಡಿಗಳಷ್ಟು ಶಿಲೆಗಳು ಇಲ್ಲಿ ಬಳಕೆಯಾಗಲಿವೆ. ಇವನ್ನೆಲ್ಲ ಸುಂದರ

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗುಡಿ ನಿರ್ಮಾಣಕ್ಕೆ ಯೋಗಿ ಅಡಿಗಲ್ಲು Read More »

ಹಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ಖ್ಯಾತ ಗಾಯಕ ಕೆ.ಕೆ

ಸಮಗ್ರ ನ್ಯೂಸ್: ಕಾರ್ಯಕ್ರಮ ಪ್ರದರ್ಶನ ನೀಡುತ್ತಿದ್ದಾಗಲೇ ಅಸ್ವಸ್ಥಗೊಂಡು ಕುಸಿದು‌ ಬಿದ್ದು ಖ್ಯಾತ ಗಾಯಕ ಕೆ.ಕೆ.ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದ್ದು ಅದಾಗಲೇ ನಗರದ ಸಿಎಂಆರ್ ಐ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಭಿಮಾನಿಗಳಲ್ಲಿ ಕೆಕೆ ಎಂದು ಹೆಚ್ಚು ಪರಿಚಿತರಾಗಿದ್ದ ಕೃಷ್ಣಕುಮಾರ್ ಕುನ್ನಾಥ್ ಅವರು ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾದರು. ಮೂರು ದಶಕಗಳ ಕಾಲ ತಮ್ಮ ಸಂಗೀತ ವೃತ್ತಿಜೀವನದಲ್ಲಿ, ಕೆಕೆ ಭಾರತೀಯ ಸಂಗೀತ

ಹಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ಖ್ಯಾತ ಗಾಯಕ ಕೆ.ಕೆ Read More »

ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಭಯಾನಕ ವಿಚಾರ| ಸಿಧು ಮೂಸೆವಾಲಾ ಹತ್ಯೆಯಲ್ಲಿ ಬುಲೆಟ್ ಗಳದ್ದೇ ಕಾರುಬಾರು!!

ಸಮಗ್ರ ನ್ಯೂಸ್: ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೇವಾಲಾ ಅಂತಿಮ ಯಾತ್ರೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮೂಸೇವಾಲಾ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಏತನ್ಮಧ್ಯೆ, ವರದಿಯ ಬಗ್ಗೆ ವೈದ್ಯರು ಬಹಿರಂಗಪಡಿಸಿದ ಸಂಗತಿಗಳು ಬಹಳ ಭಯಾನಕವಾಗಿವೆ. ಸೋಮವಾರ ರಾತ್ರಿ ಐವರು ವೈದ್ಯರ ಸಮಿತಿಯು ಸಿಧು ಮೂಸೇವಾಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಆದರೆ, ಇದುವರೆಗೆ ಪ್ರಧಾನಿ ವರದಿಯನ್ನು ವೈದ್ಯರು ಯಾರಿಗೂ ಹೇಳಿಲ್ಲ.

ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಭಯಾನಕ ವಿಚಾರ| ಸಿಧು ಮೂಸೆವಾಲಾ ಹತ್ಯೆಯಲ್ಲಿ ಬುಲೆಟ್ ಗಳದ್ದೇ ಕಾರುಬಾರು!! Read More »

ಇ-ಕೆವೈಸಿ ನೋಂದಣಿ ದಿನಾಂಕ‌ ಅವಧಿ ವಿಸ್ತರಣೆ| ನಿಮ್ಮ ಆಧಾರ್ ಅಪ್ಡೇಟ್ ಮಾಡೋದು ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕಾಗಿದ್ದು, ಇದರ ನೋಂದಣಿಯನ್ನು ಜು.31ರವರೆಗೆ ವಿಸ್ತರಿಸಲಾಗಿದೆ. ನೋಂದಣಿ‌ ಹೀಗೆ ಮಾಡಿ.ಕೃಷಿ ಇಲಾಖೆ ಸೂಚಿಸಿದ ಫಲಾನುಭವಿಗಳು httpis//pmkisan.gov.in ಗೆ ಭೇಟಿ ನೀಡಿ ಇ-ಕೆವೈಸಿ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿ, ಬಳಿಕ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಪ್ರಕ್ರಿಯೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ

ಇ-ಕೆವೈಸಿ ನೋಂದಣಿ ದಿನಾಂಕ‌ ಅವಧಿ ವಿಸ್ತರಣೆ| ನಿಮ್ಮ ಆಧಾರ್ ಅಪ್ಡೇಟ್ ಮಾಡೋದು ಹೇಗೆ ಗೊತ್ತಾ? Read More »

ಜಮ್ಮು: ಹಾಡುಹಗಲೇ ಶಾಲೆಯೊಳಗೆ ನುಗ್ಗಿ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ

ಸಮಗ್ರ ನ್ಯೂಸ್: ಹಾಡಹಗಲೇ ಹೈಸ್ಕೂಲ್‌ ಗೆ ನುಗ್ಗಿ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಂವ್‌ ನ ಗೋಪಾಲಪೊರಾದಲ್ಲಿ ನಡೆದಿದೆ. ಜಮ್ಮು ಪ್ರಾಂತ್ಯದ ಸಾಂಬಾ ಜಿಲ್ಲೆಯ ಹಿಂದೂ ಶಿಕ್ಷಕಿ ಹತ್ಯೆ ಗೊಳಗಾದವರಾಗಿದ್ದು, ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಜಮ್ಮು: ಹಾಡುಹಗಲೇ ಶಾಲೆಯೊಳಗೆ ನುಗ್ಗಿ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ Read More »