ರಾಷ್ಟ್ರೀಯ

ಟೈಲರ್ ಹತ್ಯೆ ಬಳಿಕ ಮೆಡಿಕಲ್ ಅಂಗಡಿ ಮಾಲೀಕನ ಕೊಲೆ| ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆಗೈದ ಕಿರಾತಕರು

ಸಮಗ್ರ ನ್ಯೂಸ್: ನೂಪರ್ ಶರ್ಮಾ ಬೆಂಬಲಿಸಿದ್ದ ರಾಜಸ್ಥಾನದ ಹಿಂದೂ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನೂಪರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಹತ್ಯೆಯಾಗಿರುವ ವಿಚಾರ ವರದಿಯಾಗಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಪ್ರಹ್ಲಾದ್ ರಾವ್ ನೂಪರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದ್ದು, ಹೀಗಾಗಿ ಉಮೇಶ್ ಪ್ರಹ್ಲಾದ್ ರಾವ್ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ. ಜೂನ್ 21 ರಂದು […]

ಟೈಲರ್ ಹತ್ಯೆ ಬಳಿಕ ಮೆಡಿಕಲ್ ಅಂಗಡಿ ಮಾಲೀಕನ ಕೊಲೆ| ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆಗೈದ ಕಿರಾತಕರು Read More »

ಉದಯಪುರ ಟೈಲರ್ ಕೊಲೆ ಆರೋಪಿಗಳಿಗಿತ್ತಾ ಬಿಜೆಪಿ ನಂಟು? ಇಂಡಿಯಾ ಟುಡೇ ವರದಿಯಲ್ಲಿ ಹೊರಬಿತ್ತು‌ ಶಾಕಿಂಗ್ ನ್ಯೂಸ್!! ಕೊಲೆ ನಡೆಸಲು ಬಿಜೆಪಿ ಸೇರಬಯಸಿದನೇ ಕೊಲೆಗಾರ?

ಸಮಗ್ರ ನ್ಯೂಸ್: ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಟೈಲರ್ ಹತ್ಯೆಯ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ Indiatoday.com ಮಾಡಿರುವ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಸದಸ್ಯ ಇರ್ಷಾದ್‌ ಚೈನ್‌ವಾಲ ಆರೋಪಿಗಳಲ್ಲಿ ಓರ್ವನಾದ ರಿಯಾಝ್‌ ಜೊತೆ ಕಾಣಿಸಿಕೊಂಡಿರುವ ಹಲವು ಚಿತ್ರಗಳನ್ನು ಇಂಡಿಯಾ ಟುಡೆ ವರದಿ ಮಾಡಿದೆ. ಈ ಕುರಿತು ಇರ್ಷಾದ್‌ ಬಳಿ ಕೇಳಿದಾಗ, ಬಿಜೆಪಿ ನಾಯಕ ಗುಲಾಬ್‌ ಚಂದ್‌ ಕಟಾರಿಯಾ

ಉದಯಪುರ ಟೈಲರ್ ಕೊಲೆ ಆರೋಪಿಗಳಿಗಿತ್ತಾ ಬಿಜೆಪಿ ನಂಟು? ಇಂಡಿಯಾ ಟುಡೇ ವರದಿಯಲ್ಲಿ ಹೊರಬಿತ್ತು‌ ಶಾಕಿಂಗ್ ನ್ಯೂಸ್!! ಕೊಲೆ ನಡೆಸಲು ಬಿಜೆಪಿ ಸೇರಬಯಸಿದನೇ ಕೊಲೆಗಾರ? Read More »

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾಯಿಸಿದ ಮಹಾ ಸರ್ಕಾರ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಔರಂಗಾಬಾದ್, ಉಸ್ಮಾನಾಬಾದ್ ಮತ್ತು ಮುಂಬರುವ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವ ವಿವಾದಾತ್ಮಕ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾಯಿಸಿದ ಮಹಾ ಸರ್ಕಾರ Read More »

ಉದಯಪುರ ಕೊಲೆಗಾರರಿಗಿತ್ತು ಪಾಕ್ ಉಗ್ರರೊಂದಿಗೆ ಸಂಬಂಧ| ಕೊಲೆಮಾಡಿ ವಿಡಿಯೋ ಸಂದೇಶ ಕಳಿಸ್ತೇವೆ ಎಂದಿದ್ರಂತೆ ಪಾತಕಿಗಳು

ಸಮಗ್ರ ನ್ಯೂಸ್: ರಾಜಸ್ಥಾನದ ಉದಯಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಟೈಲರ್ ಕನ್ನಯ್ಯ ಲಾಲ್ ಪ್ರಕರಣವನ್ನು ಕೇಂದ್ರ ಸರ್ಕಾರ, ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಇದರ ಮಧ್ಯೆ ಹಂತಕರ ಕುರಿತು ಒಂದೊಂದೇ ಶಾಕಿಂಗ್ ಸಂಗತಿಗಳು ಬಹಿರಂಗವಾಗುತ್ತಿವೆ. ಮಹಮ್ಮದ್ ರಿಯಾಜ್ ಆಕ್ತಾರಿ ಮತ್ತು ಗೌಸ್ ಮಹಮ್ಮದ್ ಎಂಬ ಈ ಹಂತಕರು ಕನ್ನಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಬಳಿಕ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುವ ಪ್ಲಾನ್ ಮಾಡಿದ್ದರಾದರೂ ರಾಜ್ ಸಮಂದ್ ಬಳಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಅವರುಗಳ ವಿಚಾರಣೆ ವೇಳೆ ಈ

ಉದಯಪುರ ಕೊಲೆಗಾರರಿಗಿತ್ತು ಪಾಕ್ ಉಗ್ರರೊಂದಿಗೆ ಸಂಬಂಧ| ಕೊಲೆಮಾಡಿ ವಿಡಿಯೋ ಸಂದೇಶ ಕಳಿಸ್ತೇವೆ ಎಂದಿದ್ರಂತೆ ಪಾತಕಿಗಳು Read More »

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಮೈತ್ರಿ ಸರ್ಕಾರ ನಾಳೆ ವಿಶ್ವಾಸ ಮತಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​​ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ವಿಶ್ವಾಸ ಮತಯಾಚನೆ ನಡೆಸಲು ರಾಜ್ಯಪಾಲರು ನೀಡಿರುವ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಠಾಕ್ರೆ ಗೆ ಭಾರೀ ಹಿನ್ನೆಡೆಯಾಗಿದ್ದು, ಇದಾದ ಬಳಿಕ ಸುದ್ದಿಗೋಷ್ಠಿ ಕರೆದು ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ‘ಮಹಾ ವಿಕಾಸ್ ಅಘಾಡಿ’ ಸರಕಾರದ ಆಡಳಿತ ಅಂತ್ಯವಾಗಿದೆ.

ಸುಪ್ರೀಂ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಠಾಕ್ರೆ ರಾಜೀನಾಮೆ Read More »

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು

ಸಮಗ್ರ ನ್ಯೂಸ್: ಕುತೂಹಲ ಹೆಚ್ಚಿರುವ ಶಿವಸೇನಾ ಬಂಡಾಯ ಶಾಸಕರ ಮತ್ತು ಮುಖ್ಯಮಂತ್ರಿ ತಂಡದ‌ ನಡುವಿನ ಒಡಕು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ರಾಜ್ಯಪಾಲರ ಆದೇಶವನ್ನು ನ್ಯಾಯಾಲಯ‌ ಎತ್ತಿ ಹಿಡಿದಿದೆ. ವಿಶ್ವಾಸ ಮತ ಯಾಚನೆ ಕುರಿತಂತೆ ಠಾಕ್ರೆ ಅರ್ಜಿ ವಿಚಾರಿಸಿದ ಸುಪ್ರೀಂ ಕೋರ್ಟ್ ಮತಯಾಚನೆ ಮಾಡಲೇಬೇಕೆಂದು ಆದೇಶಿಸಿದೆ. ಬಂಡಾಯ 16 ಶಾಸಕರೂ ಮತ ಚಲಾವಣೆ ಮಾಡಲು ನ್ಯಾಯಾಲಯ ಅನುಮತಿಸಿದ್ದು ಇದಕ್ಕಾಗಿ 11:00ಗಂಟೆಗೆ ಸಮಯ ನಿಗದಿಪಡಿಸಿದ್ದು ಮಹಾರಾಷ್ಟ್ರ ಸರಕಾರ ಪತನ ಖಚಿತವಾಗಿದೆ.

“ವಿಶ್ವಾಸ ಮತ ಯಾಚನೆ ಮಾಡ್ಲೇಬೇಕು” ಸರ್ವೋಚ್ಚ ನ್ಯಾಯಾಲಯದ ಆದೇಶ| ಮಹಾಪತನಕ್ಕೆ ಕೌಂಟ್ ಡೌನ್ ಶುರು Read More »

ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದವರ ರುಂಡ ಚೆಂಡಾಡಿದ ದುಷ್ಕರ್ಮಿಗಳು| ಮೋದಿಯನ್ನೂ ಕೊಲ್ಲುವುದಾಗಿ ಬೆದರಿಕೆ

ಸಮಗ್ರ ನ್ಯೂಸ್: ನುಪೂರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕನ ಶಿರಚ್ಛೇದ ಮಾಡಲಾಗಿದೆ. ವ್ಯಕ್ತಿಯನ್ನು ದುಷ್ಕರ್ಮಿಗಳು ಶಿರಶ್ಚೇಧ ಮಾಡಿದ್ದಾರೆ. ಉದಯಪುರ ನಗರದ ಮಾಲ್ಡಾಸ್ ಸ್ಟ್ರೀಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಶಿರಚ್ಛೇದನದ ಬಳಿಕ ದುಷ್ಕರ್ಮಿಗಳು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಿರಚ್ಛೇದನ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ದುಷ್ಕರ್ಮಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಉದಯಪುರದ ಧನ್ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಕನ್ಹಯ್ಯಾ ಲಾಲ್ ಟೈಲರಿಂಗ್

ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದವರ ರುಂಡ ಚೆಂಡಾಡಿದ ದುಷ್ಕರ್ಮಿಗಳು| ಮೋದಿಯನ್ನೂ ಕೊಲ್ಲುವುದಾಗಿ ಬೆದರಿಕೆ Read More »

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಭವಿಷ್ಯದ ರಾಜಕೀಯ ಹೋರಾಟ ಭಾನುವಾರ ಕಾನೂನು ವಲಯಕ್ಕೆ ಹೋಗಿದ್ದು, ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರು ತಮ್ಮ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಿದ ಶಿವಸೇನೆಯ ಕ್ರಮವನ್ನು ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಾಳೆ ನಡೆಯಲಿದೆ. ಉಪಸಭಾಪತಿ ನರಹರಿ ಝಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ಬಣವು ಪ್ರಶ್ನಿಸಿದೆ

ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಮಹಾರಾಷ್ಟ್ರ ಬಿಕ್ಕಟ್ಟು| ತುರ್ತು ವಿಚಾರಣೆಗೆ ಸಮ್ಮತಿಸಿದ ನ್ಯಾಯಾಲಯ Read More »

ವಯನಾಡ್: ರಾಹುಲ್ ಗಾಂಧಿ ಕಚೇರಿ ಧ್ವಂಸ

ಸಮಗ್ರ ನ್ಯೂಸ್: ಕೇರಳದ ವಯನಾಡಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು ಕಚೇರಿಯನ್ನು ಧ್ವಂಸಗೊಳಿಸಿರುವುದು ಕಂಡುಬಂದಿದೆ. ಈ ದಾಳಿ ಹಿಂದೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ರಾಹುಲ್ ಗಾಂಧಿ ಅವರ ವಯನಾಡಿನಲ್ಲಿರುವ ಕಚೇರಿ ಮೇಲೆ ನಡೆದ ದಾಳಿಯ ದೃಶ್ಯಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಸಿಪಿಐ(M) ಪ್ರಧಾನ ಕಾರ್ಯದರ್ಶಿ

ವಯನಾಡ್: ರಾಹುಲ್ ಗಾಂಧಿ ಕಚೇರಿ ಧ್ವಂಸ Read More »

ಭಾರತ ದೇಣಿಗೆ ನೀಡಿದ್ದಲ್ಲ, ಸಾಲ ಕೊಟ್ಟಿದ್ದು- ಶ್ರೀಲಂಕಾ ಹೇಳಿಕೆ

ಸಮಗ್ರ ನ್ಯೂಸ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಮಗೆ ಭಾರತ ನೀಡಿದ ಹಣಕಾಸಿನ ನೆರವು ದತ್ತಿ ದೇಣಿಗೆಗಳಲ್ಲ’ ಎಂದು ಶ್ರೀಲಂಕಾದ ಸಂಸತ್ತಿಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ತಿಳಿಸಿದ್ದಾರೆ. ಅಲ್ಲದೆ, ಈ ಹಣಕಾಸಿನ ನೆರವಿನ ಸಾಲವನ್ನು ಮರುಪಾವತಿಸಲೇಬೇಕು ಎಂದು ಹೇಳಿದ್ದಾರೆ. ಭಾರತದಿಂದ ನಾವು ಸಾಲದ ರೂಪದಲ್ಲಿ ₹31 ಸಾವಿರ ಕೋಟಿ ನೆರವು ಪಡೆದಿದ್ದೇವೆ. ಅಲ್ಲದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಭಾರತಕ್ಕೆ ಕೋರಿದ್ದೆವು. ಆದರೆ, ಇಂಥ ಸಂದರ್ಭದಲ್ಲಿ ಭಾರತವೊಂದೇ ನಿರಂತರವಾಗಿ ನಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ. ನಮಗೆ

ಭಾರತ ದೇಣಿಗೆ ನೀಡಿದ್ದಲ್ಲ, ಸಾಲ ಕೊಟ್ಟಿದ್ದು- ಶ್ರೀಲಂಕಾ ಹೇಳಿಕೆ Read More »