ರಾಷ್ಟ್ರೀಯ

ಇಸ್ರೋ ಚಂದ್ರಯಾನ-3| ಮೂರನೇ ಕಕ್ಷೆಗೆ ಎಂಟ್ರಿ ಕೊಟ್ಟ ನೌಕೆ

ಸಮಗ್ರ ನ್ಯೂಸ್: ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ಮತ್ತೊಂದು ಹಂತಕ್ಕೆ ‘ಚಂದ್ರಯಾನ-3’ ನೌಕೆ ಏರಿದೆ. 3ನೇ ಕಕ್ಷೆಗೆ ನೌಕೆಯನ್ನು ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೋ ಮಂಗಳವಾರ ಚಂದ್ರಯಾನ -3 ಗಗನನೌಕೆಯ ಮೂರನೇ ಕಕ್ಷೆಯನ್ನು ಹೆಚ್ಚಿಸುವ ತಂತ್ರವನ್ನು ಯಶಸ್ವಿಯಾಗಿ ನಡೆಸಿತು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಯೋಜನೆ ಪ್ರಕಾರ ‘ಚಂದ್ರಯಾನ-3’ ಬಾಹ್ಯಾಕಾಶ ನೌಕೆಯು 51400 ಕಿಮೀ x 228 ಕಿಮೀ ಕಕ್ಷೆ ತಲುಪಿದೆ. ಈಗ ನೌಕೆಯನ್ನು ಮತ್ತೊಂದು ಹಂತಕ್ಕೆ ಏರಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. […]

ಇಸ್ರೋ ಚಂದ್ರಯಾನ-3| ಮೂರನೇ ಕಕ್ಷೆಗೆ ಎಂಟ್ರಿ ಕೊಟ್ಟ ನೌಕೆ Read More »

ಚಿರತೆಗಳ ಸಾವಿಗೆ ಕತ್ತಿನ ರೆಡಿಯೋ ಕಾಲರ್‍ ಕಾರಣ ಎಂದ ತಜ್ಞರು

ಸಮಗ್ರ ನ್ಯೂಸ್: ಇತ್ತಿಚೇಗೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 2 ಚಿರತೆಗಳು ಸಾವನ್ನಪ್ಪಿದ್ದವು. ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನಿಂದ ಸೋಂಕು ತಗುಳಿ 2 ಚಿರತೆಗಳು ಸಾವನಪ್ಪಿದೆ ಎಂದು ತಿಳಿದು ಬಂದಿದೆ. ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ್ದವು. ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು, ಮತ್ತು ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ

ಚಿರತೆಗಳ ಸಾವಿಗೆ ಕತ್ತಿನ ರೆಡಿಯೋ ಕಾಲರ್‍ ಕಾರಣ ಎಂದ ತಜ್ಞರು Read More »

ಬೆಕ್ಕಿನ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಕ್ಕಳು…..!!

ಸಮಗ್ರ ನ್ಯೂಸ್: ಮಕ್ಕಳು ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಗದ್ದೆಯಲ್ಲಿದ್ದ ಎರಡು ಚಿರತೆ ಮರಿಗಳನ್ನು ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಬಂದ ಘಟನೆ ದೆಹಲಿಯ ಗುರಗ್ರಾಮದಲ್ಲಿ ನಡೆದಿದೆ. ಗುರುಗ್ರಾಮ್‌ನಿಂದ 56 ಕಿ.ಲೋ ದೂರದಲ್ಲಿರುವ ನುಹ್‌ನ ಕೋಟ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಮಕ್ಕಳು ತಮ್ಮ ಪಾಲಕರೊಂದಿಗೆ ದನ ಮೇಯಿಸಲು ಹೋಗಿದ್ದು, ಸಣ್ಣ ಮರಿಗಳನ್ನು ಆಟವಾಡುತ್ತಿರುವುದನ್ನು ಕಂಡು ಬೆಕ್ಕಿನ ಮರಿಗಳು ಎಂದು ಮನೆಗೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುರುವಾರ ರಾತ್ರಿ ಮಕ್ಕಳು ಚಿರತೆ ಮರಿಗಳೊಂದಿಗೆ ಮನೆಯಲ್ಲಿ ಆಟವಾಡುತ್ತಿರುವುದು

ಬೆಕ್ಕಿನ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಕ್ಕಳು…..!! Read More »

ಮತ್ತೊಂದು ಚೀತಾ ಸಾವು| ಕುನೋ ಉದ್ಯಾನದಲ್ಲಿ ಸಾವನ್ನಪ್ಪಿದ ಸೂರಜ್| ನಾಲ್ಕೇ ತಿಂಗಳಲ್ಲಿ ಅಸುನೀಗಿದ 8ನೇ ಚೀತಾ

ಸಮಗ್ರ ನ್ಯೂಸ್: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಗಂಡು ಚೀತಾ ಸೂರಜ್ ಸಾವನ್ನಪ್ಪಿದೆ. ಈ ಉದ್ಯಾನದಲ್ಲಿ ಸುಮಾರು 4 ತಿಂಗಳುಗಳಲ್ಲಿ ಸಾವನ್ನಪ್ಪಿರುವ 8ನೇ ಚೀತಾ ಇದಾಗಿದೆ. ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಆಫ್ರಿಕಾದಿಂದ ತರಲಾಗಿದ್ದ ಚೀತಾ ಸೂರಜ್ ಶವವಾಗಿ ಪತ್ತೆಯಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರವಷ್ಟೇ ಮತ್ತೊಂದು ಗಂಡು ಚೀತಾ ತೇಜಸ್ ಶವವಾಗಿ ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಹೆಣ್ಣು ಚೀತಾದೊಂದಿಗೆ ಕಾದಾಟ ನಡೆಸಿದ್ದು, ಬಳಿಕ ಅದು

ಮತ್ತೊಂದು ಚೀತಾ ಸಾವು| ಕುನೋ ಉದ್ಯಾನದಲ್ಲಿ ಸಾವನ್ನಪ್ಪಿದ ಸೂರಜ್| ನಾಲ್ಕೇ ತಿಂಗಳಲ್ಲಿ ಅಸುನೀಗಿದ 8ನೇ ಚೀತಾ Read More »

ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

ಸಮಗ್ರ ನ್ಯೂಸ್: ರಾಕೆಟ್‌ ಎಲ್‌ವಿಎಂ3- ಎಂ4(Rocket LVM3-M4) ಮೂಲಕ ಚಂದ್ರಯಾನ-3 (Chandrayana -3)ರ ಉಡಾವಣೆ ಯಶಸ್ವಿಯಾಯಿತು. ಆ ಮೂಲಕ ಇಸ್ರೋಗೆ ಮತ್ತೊಂದು ಗರಿ ಸಿಕ್ಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್‌), ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿತು. ಚಂದ್ರಯಾನ-3 ಯಶಸ್ವಿ ಉಡಾವಣೆ ಆಗಿದ್ದು, ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಹೋದ್ಯೋಗಿಗಳ ಜೊತೆ ಇಸ್ರೋ ಅಧ್ಯಕ್ಷ

ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ Read More »

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3

ಸಮಗ್ರ ನ್ಯೂಸ್: ಚಂದ್ರನ ಕುರಿತ ಹಲವು ಮೊದಲುಗಳನ್ನು ಮೊದಲ ಚಂದ್ರಯಾನದಲ್ಲಿ ಜಗತ್ತಿಗೆ ಬಿತ್ತರಿಸಿದ್ದ ಭಾರತ, ಇದೀಗ ಮತ್ತಷ್ಟು ಪ್ರಥಮಗಳನ್ನು ಸಾಧಿಸಲು ಮೂರನೇ ಬಾರಿಗೆ ಚಂದ್ರನ ಸವಾರಿ ಹೊರಟಿದೆ. ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಗುರುವಾರ ಮಧ್ಯಾಹ್ನದಿಂದ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮಧ್ಯಾಹ್ನ ಉಡಾವಣೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.

ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3 Read More »

ವಿಪಕ್ಷ ನಾಯಕನಿಲ್ಲದೆ ಎರಡು ತಿಂಗಳು| ಈ ಬಿಜೆಪಿಗೆ ಏನಾಗಿದೆ!?

ಸಮಗ್ರ ನ್ಯೂಸ್: ಮೇ. 13ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸೋತು ಸುಣ್ಣ ಆಗಿದ್ರೆ, ಕಾಂಗ್ರೆಸ್​​ ಗೆದ್ದು ಬೀಗಿತ್ತು. ಹೀಗಾಗಿ ವಿರೋಧ ಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ, ಆಡಳಿತ ಪಕ್ಷಕ್ಕೆ ಬಂದಿದ್ದರು. ಕಾಂಗ್ರೆಸ್​​ ಅಧಿಕಾರ ಹಂಚಿಕೆ ವಿಚಾರದಲ್ಲಿ ನಾಲ್ಕೈದು ದಿನಗಳು ತಡವಾಯ್ತು. ಮೇ 20ರಂದು ಸಿಎಂ, ಡಿಸಿಎಂ, ಸಚಿವರು ಪ್ರಮಾಣ ಸ್ವೀಕಾರ ಮಾಡಿದ್ದರು. ಆದರೆ ಮೇ 13ರಿಂದಲೇ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಇರಲಿಲ್ಲ. ರಾಜ್ಯ ಸರ್ಕಾರ ಅಧಿಕೃತ ವಿರೋಧ ಪಕ್ಷದ

ವಿಪಕ್ಷ ನಾಯಕನಿಲ್ಲದೆ ಎರಡು ತಿಂಗಳು| ಈ ಬಿಜೆಪಿಗೆ ಏನಾಗಿದೆ!? Read More »

ಮದ್ಯದ ಅಮಲಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ ಕಟುಕರು…!!

ಸಮಗ್ರ ನ್ಯೂಸ್: ಕಂಠಪೂರ್ತಿ ಕುಡಿದ ವ್ಯಕ್ತಿಗೆ ಕೆಲವೊಮ್ಮೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿರುವುದಿಲ್ಲ. ಆತ ತಾನು ಏನು ಮಾಡುತ್ತಿರುವೆನೆಂಬ ಅರಿವಿಲ್ಲದೆ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅರ್ಧ ಸುಟ್ಟ ಯುವತಿಯ ಮೃತದೇಹವನ್ನು ತಿಂದ ಪ್ರಸಂಗವೊಂದು ಭುವನೇಶ್ವರದಲ್ಲಿ ನಡೆದಿದೆ. ಇಲ್ಲಿನ ಮಯರ‍್ಬಂಜ್ ಜಿಲ್ಲೆಯ ಬದಶಾಹಿನ ಬ್ಲಾಕ್ ನ ಗ್ರಾಮವೊಂದರಲ್ಲಿ ಕೃತ್ಯ‌ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ 25 ವರ್ಷದ ಯುವತಿಯೊಬ್ಬಳ ಮೃತದೇಹವನ್ನು ಸ್ಥಳೀಯ ಶವಾಗಾರಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಆದರೆ ಆಕೆಯ ದೇಹ ಪೂರ್ತಿಯಾಗಿ ಸುಟ್ಟಿರಲಿಲ್ಲ.

ಮದ್ಯದ ಅಮಲಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ ಕಟುಕರು…!! Read More »

ಭಾರೀ ಮಳೆಗೆ ತತ್ತರಿಸುತ್ತಿರುವ ಉತ್ತರ ಭಾರತ| ಕೇರಳ ಸೇರಿ 5 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಭಾರತಕ್ಕೆ ಮಳೆಗಾಲ ಆರಂಭ ಕೊಂಚ ತಡವಾದರೂ ಯಾರೂ ಊಹಿಸದ ರೀತಿಯಲ್ಲಿ ಅಬ್ಬರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತಕ್ಕೆ ಅನಾಹುತವೇ ಸೃಷ್ಟಿಯಾಗಿದೆ. ಮುಖ್ಯವಾಗಿ ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಬಹುತೇಕ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದಿಂದ ಪಟ್ಟಣ, ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಮಳೆಗೆ ಇದೀಗ ಐದು ರಾಜ್ಯಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ

ಭಾರೀ ಮಳೆಗೆ ತತ್ತರಿಸುತ್ತಿರುವ ಉತ್ತರ ಭಾರತ| ಕೇರಳ ಸೇರಿ 5 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ Read More »

ಡಾಕ್ಟರ್‌ಗೆ 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ| ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌

ಸಮಗ್ರ ನ್ಯೂಸ್: ರೋಗಿಯೊಬ್ಬ ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ. ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ

ಡಾಕ್ಟರ್‌ಗೆ 500 ರೂ. ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ| ಫನ್ನಿ ಮೂಮೆಂಟ್‌ ಎಂದ ಡಾಕ್ಟರ್‌ Read More »