ತಂತ್ರಜ್ಞಾನ

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು ಗ್ರಾಮೀಣ ಪತ್ರಕರ್ತರಿಗೆ ವೃತ್ತಿಗೆ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಣೆಗೆ ಸರ್ಕಾರ ಆದೇಶಿಸಿದೆ. ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ 2024-25ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ 431ರಲ್ಲಿ “ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಅವಕಾಶ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ […]

ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಗೆ ರಾಜ್ಯ ಸರ್ಕಾರ ಆದೇಶ Read More »

ನ್ಯೂಯಾರ್ಕ್: ‘AI’ ಎಂದರೆ ಅಮೇರಿಕಾ-ಭಾರತ ಸ್ಪೂರ್ತಿ| ಹೊಸ ಅರ್ಥದೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಬಣ್ಣಿಸಿದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಸ್ಥಳೀಯ ಸಮಯ) ನ್ಯೂಯಾರ್ಕ್ ನಲ್ಲಿ ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಂಬಂಧವನ್ನು ಎತ್ತಿ ತೋರಿಸಿದರು ಮತ್ತು ಅದಕ್ಕೆ ಹೊಸ ಅರ್ಥವನ್ನು ನೀಡಿದರು, ಇದನ್ನು ಅಮೆರಿಕ-ಭಾರತ ಸ್ಫೂರ್ತಿ ಎಂದು ಬಣ್ಣಿಸಿದರು. ಇಲ್ಲಿನ‌ ನಸ್ಸೌ ಕೊಲಿಸಿಯಂನಲ್ಲಿ ಮೋದಿ ಮತ್ತು ಯುಎಸ್ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಅವರು, “ಜಗತ್ತಿಗೆ, ಎಐ ಎಂದರೆ ಕೃತಕ ಬುದ್ಧಿಮತ್ತೆ, ಆದರೆ ನನಗೆ ಎಐ ಎಂದರೆ ಅಮೆರಿಕನ್-ಭಾರತೀಯ ಮನೋಭಾವ. ಇದು ವಿಶ್ವದ ಹೊಸ

ನ್ಯೂಯಾರ್ಕ್: ‘AI’ ಎಂದರೆ ಅಮೇರಿಕಾ-ಭಾರತ ಸ್ಪೂರ್ತಿ| ಹೊಸ ಅರ್ಥದೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಬಣ್ಣಿಸಿದ ಮೋದಿ Read More »

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮವಾಗಿರುವ ಇನ್‌ಸ್ಟಾಗ್ರಾಮ್ ಯುವಜನರ ಮೇಲೆ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಹದಿಹರೆಯದ ಮಕ್ಕಳು ಹಾಗೂ ಅಪ್ರಾಪ್ತರ ಬದುಕಿನ ಶೈಲಿಯ ಅಡ್ಡ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇನ್‌ಸ್ಟಾಗ್ರಾಮ್‌ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಖಾತೆಯನ್ನು ನಿಗದಿ ಮಾಡಿದೆ. ಅಮೆರಿಕ, ಇಂಗ್ಲೆಂಡ್‌ , ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಗಳವಾರದಿಂದ ಇದು ಜಾರಿಗೆ ಬಂದಿದೆ. ಇನ್‌ಸ್ಟಾಗ್ರಾಮ್‌ ಸೈನ್ ಅಪ್ ಮಾಡುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇನ್ನೂ ಟೀನೇಜ್ ಅಕೌಂಟ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದೇ ರೀತಿ

ಅಪ್ರಾಪ್ತರು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಂ ಖಾತೆ ತೆರೆಯುವಂತಿಲ್ಲ| ಟೀನೇಜ್ ಜನರಿಗೆ ಶಾಕ್ ನೀಡಿದ ಮೆಟಾ Read More »

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು

ಸಮಗ್ರ ನ್ಯೂಸ್‌: ಹಿಂಸಾಚಾರ ಭುಗಿಲೆದ್ದ ಹಿನ್ನಲೆಯಲ್ಲಿ ಇಂಫಾಲ್ ಕಣಿವೆ ಜಿಲ್ಲೆಗಳಲ್ಲಿ ವಿಧಿಸಿದ್ದ ಇಂಟರ್ ನೆಟ್ ನಿಷೇಧವನ್ನು ಮಣಿಪುರ ಸರ್ಕಾರ ತೆರವುಗೊಳಿಸಿದ್ದು, ಸೆ.17 ರಿಂದ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ. ಮಣಿಪುರದ ರಾಜ್ಯಪಾಲರು ತಕ್ಷಣವೇ ಜಾರಿಗೆ ಬರುವಂತೆ ರಾಜ್ಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಲೀಸ್ ಲೈನ್‌ಗಳು, ವಿಎಸ್‌ಟಿಗಳು, ಬ್ರಾಡ್ ಬ್ಯಾಂಡ್ ಗಳು ಮತ್ತು ವಿಪಿಎನ್ ಸೇವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಯಾವುದೇ ಅಸ್ತಿತ್ವದಲ್ಲಿರುವ ಆದೇಶಗಳನ್ನು ಹಿಂಪಡೆಯಲು ಆದೇಶಿಸಲು ಸಂತೋಷಪಡುತ್ತಾರೆ ಎಂದು ಗೃಹ ಇಲಾಖೆ ಹೇಳಿದೆ.

ಸಹಜ ಸ್ಥಿತಿಯತ್ತ ಮಣಿಪುರ/ ಇಂಟರ್‌ನೆಟ್‌ ನಿಷೇಧ ತೆರವು Read More »

5,000 ಸೈಬರ್ ಕಮಾಂಡೋಗಳ ನೇಮಕಾತಿಗೆ ಸರ್ಕಾರದ ಸಿದ್ಧತೆ/ ಅಮಿತ್‌ ಶಾ ಹೇಳಿಕೆ

ಸಮಗ್ರ ನ್ಯೂಸ್‌: ಭಾರತದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಮುಂದಿನ 5 ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳನ್ನು ನೇಮಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ 5000 ಕಮಾಂಡೋಗಳಿಗೆ ಸೈಬರ್‌ ದಾಳಿಯನ್ನು ತಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು. ‘ವಿಶ್ವದ ಶೇ.46 ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ಸೈಬರ್‌ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳದೇ ದೇಶದ ಪ್ರಗತಿ ಸಾಧ್ಯವಿಲ್ಲ. ಇದೊಂದು

5,000 ಸೈಬರ್ ಕಮಾಂಡೋಗಳ ನೇಮಕಾತಿಗೆ ಸರ್ಕಾರದ ಸಿದ್ಧತೆ/ ಅಮಿತ್‌ ಶಾ ಹೇಳಿಕೆ Read More »

2025ರವರೆಗೆ ಬಾಹ್ಯಾಕಾಶದಲ್ಲೆ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌.. ನಾಸಾದಿಂದ ಸ್ಪಷ್ಟನೆ

ಸಮಗ್ರ ನ್ಯೂಸ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಬಾಹ್ಯಾಕಾಶದಲ್ಲೆ ಸಿಲುಕಿದ್ದಾರೆ ಎಂಬ ವರದಿಗಳು ಈ ಹಿಂದೆ ಬಂದಿತ್ತು. ಆದರೆ ಇದೀಗ ನಾಸಾ ಇನ್ನೊಂದು ಅಧೀಕೃತ ಮಾಹಿತಿಯೊಂದನ್ನು ನೀಡಿದೆ. ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡ ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ತಿಳಿಸಿದೆ. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ

2025ರವರೆಗೆ ಬಾಹ್ಯಾಕಾಶದಲ್ಲೆ ಇರಲಿದ್ದಾರೆ ಸುನೀತಾ ವಿಲಿಯಮ್ಸ್‌.. ನಾಸಾದಿಂದ ಸ್ಪಷ್ಟನೆ Read More »

ನೂತನ ಫೀಚರ್‌ ಪರಿಚಯಿಸಿದ ಗೂಗಲ್‌ ಮ್ಯಾಪ್‌

ಸಮಗ್ರ ನ್ಯೂಸ್‌: ಅಮೆರಿಕದ ಮೂಲದ ಗೂಗಲ್‌ ಭಾರತೀಯರಿಗೆ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಒಂದಿಷ್ಟು ಹೊಸ ಆಯ್ಕೆಗಳನ್ನು ಪರಿಚಯಿಸಿದ್ದು, ಎಲೆಕ್ಟ್ರಿಕ್‌ ಚಾರ್ಜಿಂಗ್‌ ಪಾಯಿಂಟ್‌ ಎಲ್ಲಿದೆ, ಫ್ಲೈಓವರ್‌ ಯಾವುದೋ ಕಾರಣಕ್ಕೆ ಮುಚ್ಚಿದ್ದರೆ ಅದರ ಮಾಹಿತಿ, ಮೆಟ್ರೋ ಟಿಕೆಟ್‌ ಖರೀದಿ, ನಾಲ್ಕು ಚಕ್ರಗಳ ವಾಹನಗಳಿಗೆ ಕಿರಿದಾದ ದಾರಿ ತಪ್ಪಿಸಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧರಿತ ಆಯ್ಕೆಗಳನ್ನು ಪರಿಚಯಿಸಿದೆ. ಅಲ್ಲದೆ ಡೆವಲಪರ್‌ಗಳಿಗೆ ಗೂಗಲ್‌ ಮ್ಯಾಪ್‌ ಫ್ಲ್ಯಾಟ್‌ಫಾರಂ ಬಳಕೆ ಶುಲ್ಕವನ್ನು ಶೇ.70ರಷ್ಟು ಕಡಿತ ಕೂಡಾ ಮಾಡಿದೆ. ಮೊದಲ ಹಂತದಲ್ಲಿ ಈ ಸೇವೆಗಳು ಬೆಂಗಳೂರು ಸೇರಿದಂತೆ

ನೂತನ ಫೀಚರ್‌ ಪರಿಚಯಿಸಿದ ಗೂಗಲ್‌ ಮ್ಯಾಪ್‌ Read More »

ಸಿಂಪಲ್ಲಾಗಿ ಸಾಯೋದಕ್ಕೆ ಆತ್ಮಹತ್ಯೆ ಮೆಷಿನ್ ಆವಿಷ್ಕರಿಸಿದ ಸ್ವಿಟ್ಜರ್ಲೆಂಡ್‌‌| ನೋವಿಲ್ಲದೆ ಕ್ಷಣದಲ್ಲಿ ಸಾಯಿಸುತ್ತೆ ಈ ಯಂತ್ರ

ಸಮಗ್ರ ಡಿಜಿಟಲ್ ಡೆಸ್ಕ್: ‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ’ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿದ್ದು, ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ವಿಟ್ಜರ್ಲೆಂಡ್‌ ಸರ್ಕಾರ ಆತ್ಮಹತ್ಯೆ ಯಂತ್ರ ಬಳಕೆಗೆ ಕಾನೂನು ಅನುಮೋದನೆ ನೀಡಿದೆ. ಇದೀಗ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದಾಗಿದೆ. ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನೆವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್

ಸಿಂಪಲ್ಲಾಗಿ ಸಾಯೋದಕ್ಕೆ ಆತ್ಮಹತ್ಯೆ ಮೆಷಿನ್ ಆವಿಷ್ಕರಿಸಿದ ಸ್ವಿಟ್ಜರ್ಲೆಂಡ್‌‌| ನೋವಿಲ್ಲದೆ ಕ್ಷಣದಲ್ಲಿ ಸಾಯಿಸುತ್ತೆ ಈ ಯಂತ್ರ Read More »

ನಾನ್ ಸ್ಟಿಕ್ ಕುಕ್ ವೇರ್ ಬಳಕೆಯಿಂದ ಈ ಕಾಯಿಲೆ ಬರಬಹುದು!! ಆತಂಕಕಾರಿ ವರದಿ‌ ಬಹಿರಂಗ

ಸಮಗ್ರ ನ್ಯೂಸ್: ನಾನ್ ಸ್ಟಿಕ್ ಕಿಚನ್ ವೇರ್ ಅತಿಯಾಗಿ ಬಿಸಿಯಾಗುವುದರಿಂದ ಅವುಗಳ ಮೇಲಿನ ಲೇಪನದಲ್ಲಿ ರಾಸಾಯನಿಕಗಳ ಬಿಡುಗಡೆಯಿಂದ ಉಂಟಾಗುವ ಹೊಗೆಯಿಂದ ಈ ಸಮಸ್ಯೆಗಳು ಉಂಟಾಗುತ್ತವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಕಳೆದ ವರ್ಷ ಯುನೈಟೆಡ್ ಸ್ಟೇಟ್ಸ್‌ ನಲ್ಲಿ ವರದಿಯಾದ ಪಾಲಿಮರ್ ಫ್ಯೂಮ್ ಜ್ವರದ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ, ಇದು ಅತಿಯಾಗಿ ಬಿಸಿಯಾದ ನಾನ್‌ಸ್ಟಿಕ್ ಪ್ಯಾನ್‌ಗಳಿಂದ ಹೊಗೆಯನ್ನು ಉಸಿರಾಡುವುದರಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪಾಲಿಮರ್ ಫ್ಯೂಮ್ ಜ್ವರವನ್ನು “ಟೆಫ್ಲಾನ್ ಫ್ಲೂ” ಎಂದು ಉಲ್ಲೇಖಿಸಲಾಗುತ್ತದೆ. ಟ್ರೇಡ್‌ಮಾರ್ಕ್ ನಾನ್‌ಸ್ಟಿಕ್ ಕೋಟಿಂಗ್,

ನಾನ್ ಸ್ಟಿಕ್ ಕುಕ್ ವೇರ್ ಬಳಕೆಯಿಂದ ಈ ಕಾಯಿಲೆ ಬರಬಹುದು!! ಆತಂಕಕಾರಿ ವರದಿ‌ ಬಹಿರಂಗ Read More »

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌

ಸಮಗ್ರ ನ್ಯೂಸ್: ಇತ್ತೀಚೆಗೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ಇದೀಗ ಕ್ಷಮೆಯಾಚಿಸಿದ್ದಾರೆ. ಈ ಕಾರಣಕ್ಕೆ ಕರ್ನಾಟಕದಾದ್ಯಂತ ಬಾಯ್ಕಾಟ್‌ ಫೋನ್‌ ಪೇ (Boycott PhonePe) ಎಂಬ ಅಭಿಯಾನ ಆರಂಭವಾದ ಬೆನ್ನಲ್ಲೇ, ಸಮೀರ್‌ ನಿಗಮ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ನಿಗಮ್‌ ಅವರು ಪೋಸ್ಟ್‌ ಮಾಡಿದ್ದಾರೆ. “ಕಳೆದ ವಾರ

ಕನ್ನಡಿಗರಿಗೆ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌ Read More »