ರಾಷ್ಟ್ರೀಯ

ಪೋನ್ ಕದ್ದಾಲಿಕೆ ಪ್ರಕರಣ/ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಪ್ರಮುಖ ಆರೋಪಿ

ಸಮಗ್ರ ನ್ಯೂಸ್: ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ ಅಬ್ಬರದ ನಡುವೆ ನಡೆದಿತ್ತು ಎನ್ನಲಾದ ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಅವರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ಸದ್ಯ ಪ್ರಭಾಕರ್ ರಾವ್ ಅಮೆರಿಕದಲ್ಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ವಿರುದ್ಧ ಹೈದರಾಬಾದ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಕೆ ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್‍ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಪೋನ್‍ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡುವ ಮೂಲಕ ದತ್ತಾಂಶಗಳನ್ನು […]

ಪೋನ್ ಕದ್ದಾಲಿಕೆ ಪ್ರಕರಣ/ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಪ್ರಮುಖ ಆರೋಪಿ Read More »

ರಾಮಜನ್ಮಭೂಮಿಯಲ್ಲಿ ರಂಗೋತ್ಸವ/ ಸಂಭ್ರಮದಿಂದ ಹೋಳಿ ಆಚರಿಸಿದ ರಾಮಭಕ್ತರು

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಂಗೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಾಲರಾಮನ ದರುಶನ ಪಡೆದರು. ರಾಮಜನ್ಮಭೂಮಿಯಲ್ಲಿ ಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮದಿಂದ ಹೋಳಿಯನ್ನು ಆಚರಿಸಿದರು. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಬಳಿಕ ಮೊದಲ ‘ರಂಗಭಾರಿ ಏಕಾದಶಿ’ಯಂದು ಹನುಮಂತನಗರಿ ದೇವಸ್ಥಾನದಲ್ಲಿ ದೇವರಿಗೆ ಬಣ್ಣ ಹಚ್ಚುವ ಮೂಲಕ ಬಣ್ಣಗಳ ಹಬ್ಬ ‘ರಂಗೋತ್ಸವ’ವನ್ನು ಆಚರಿಸಲಾಯಿತು. ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅದ್ಧೂರಿಯಾಗಿ ಹೋಳಿ ಆಚರಣೆ ಮಾಡಲಾಗಿದೆ.

ರಾಮಜನ್ಮಭೂಮಿಯಲ್ಲಿ ರಂಗೋತ್ಸವ/ ಸಂಭ್ರಮದಿಂದ ಹೋಳಿ ಆಚರಿಸಿದ ರಾಮಭಕ್ತರು Read More »

ಕೇಜ್ರಿವಾಲ್ ಬಂಧನ/ ಹೋಳಿ ಬಹಿಷ್ಕರಿಸಿದ ಆಮ್ ಆದ್ಮಿ

ಸಮಗ್ರ ನ್ಯೂಸ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅಬಕಾರಿ ನೀತಿ ಹಗರಣದಲ್ಲಿ ಅರೆಸ್ಟ್ ಆಗಿದ್ದಾರೆ. ಇತ್ತ ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿದೆ ಎಂದು ಆರೋಪಿಸಿ ಆಪ್ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ಮಾಡಿದ್ದು, ಇಂದು ಹೋಳಿ ಹಬ್ಬವನ್ನು ಬಹಿಷ್ಕರಿಸಿದೆ. ಕೇಜಿವಾಲ್ ಬಂಧನದಲ್ಲಿರುವ ಕಾರಣ ಆಪ್ ನಾಯಕರು ಯಾರು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೋಳಿ ಹಬ್ಬ ಆಚರಣೆ ಗೆಲುವಿನ ಸಂಕೇತವಾಗಿದೆ. ಸಂಭ್ರಮದ ಸಂಕೇತವಾಗಿದೆ. ಆದರೆ ಆಪ್ ದುಷ್ಟರ ವಿರುದ್ಧ, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಹೀಗಾಗಿ ಹೋಳಿ

ಕೇಜ್ರಿವಾಲ್ ಬಂಧನ/ ಹೋಳಿ ಬಹಿಷ್ಕರಿಸಿದ ಆಮ್ ಆದ್ಮಿ Read More »

ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಯ ಕಾರು ಕಳ್ಳತನ!

ಸಮಗ್ರ ನ್ಯೂಸ್‌ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಯ ಟೊಯೊಟಾ ಫಾರ್ಚೂನರ್ಕಾರನ್ನು ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳ್ಳತನವಾಗಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಾಲಕ ಜೋಗಿಂದರ್ ಅವರು ಟೊಯೊಟಾ ಫಾರ್ಚುನರ್ ಕಾರನ್ನು ಸರ್ವಿಸ್ ಮಾಡಿದ ನಂತರ ಗೋವಿಂದಪುರಿಗೆ ತಂದು ತಮ್ಮ ಮನೆಯಲ್ಲಿ ನಿಲ್ಲಿಸಿದ್ದರು. ಊಟ ಮಾಡಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕದ್ದ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ,

ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಯ ಕಾರು ಕಳ್ಳತನ! Read More »

ಜೆಎನ್‌ಯು ಚುನಾವಣೆ: ಎಡ ಸಂಘಟನೆ ಮತ್ತು ಎಬಿವಿಪಿ ನಡುವೆ ತೀವ್ರ ಪೈಪೋಟಿ

ಸಮಗ್ರ ನ್ಯೂಸ್: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎಡ ಸಂಘಟನೆಗಳ ಒಕ್ಕೂಟ ಮತ್ತು ಆರ್ಎಸ್ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಆರಂಭಿಕ ಸುತ್ತುಗಳ ಎಣಿಕೆ ಪ್ರಕಾರ, ಅಧ್ಯಕ್ಷೀಯ ಸ್ಥಾನಕ್ಕೆ ಎಡ ಸಂಘಟನೆಗಳ ಒಕ್ಕೂಟದ ಅಭ್ಯರ್ಥಿ ಧನಂಜಯ್ 1,361 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಎಬಿವಿಪಿಯ ಉಮೇಶ್ ಸಿ. ಅಜ್ಮೀರಾ ಅವರು 1,162 ಮತಗಳನ್ನು ಪಡೆದಿದ್ದು, ತೀವ್ರ ಸ್ಪರ್ಧೆ ನೀಡಿದ್ದಾರೆ. ಉಪಾಧ್ಯಕ್ಷ

ಜೆಎನ್‌ಯು ಚುನಾವಣೆ: ಎಡ ಸಂಘಟನೆ ಮತ್ತು ಎಬಿವಿಪಿ ನಡುವೆ ತೀವ್ರ ಪೈಪೋಟಿ Read More »

ಚೆನ್ನೈ:ವೀರಪ್ಪನ್ ಪುತ್ರಿ ತಮಿಳುನಾಡಿನ ಕೃಷ್ಣಗಿರಿಯಿಂದ ಸ್ಪರ್ಧೆ

ಸಮಗ್ರ ನ್ಯೂಸ್: ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ಲೋಕ‌ ಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರು ‘ನಾಮ್‌ ತಮಿಳರ್‌ ಕಚ್ಚಿ’ (ಎನ್‌ಟಿಕೆ) ಪಕ್ಷದ ಅಭ್ಯರ್ಥಿಯಾಗಿ ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ವಕೀಲೆಯಾಗಿರುವ ವಿದ್ಯಾರಾಣಿ ಕೃಷ್ಣಗಿರಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. 2020ರ ಜುಲೈನಲ್ಲಿ ಬಿಜೆಪಿ ಸೇರಿ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ಆ ಪಕ್ಷವನ್ನು ತೊರೆದು ಎನ್‌ಟಿಕೆಗೆ ಸೇರಿದ್ದಾರೆ. ತಮಿಳುನಾಡು ಹಾಗೂ ಪುದುಚೇರಿಯ ಒಟ್ಟು 40 ಕ್ಷೇತ್ರಗಳಲ್ಲಿ ಪಕ್ಷದಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಚೆನ್ನೈನಲ್ಲಿ ನಡೆದ

ಚೆನ್ನೈ:ವೀರಪ್ಪನ್ ಪುತ್ರಿ ತಮಿಳುನಾಡಿನ ಕೃಷ್ಣಗಿರಿಯಿಂದ ಸ್ಪರ್ಧೆ Read More »

ರಾಹುಲ್ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಸ್ಪರ್ಧೆ

ಸಮಗ್ರ ನ್ಯೂಸ್‌: ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಈ ಬಾರಿಯೂ ಕಾಂಗ್ರೆಸ್‌ನ ಹಾಲಿ ಸಂಸದ ರಾಹುಲ್‌ ಗಾಂಧಿ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಪ್ರತಿಸ್ಪರ್ಧಿಯಾಗಿ ಕೇರಳದ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್‌ ವಯಾನಾಡು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಗಾ ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ಅಮೇಥಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರ ವಿರುದ್ಧ 55,120 ಮತಗಳ ಅಂತರದಿಂದ ರಾಗಾ ಸೋಲು ಕಂಡರು, ವಯನಾಡಿನಲ್ಲಿ ಜಯ

ರಾಹುಲ್ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಸ್ಪರ್ಧೆ Read More »

ಟ್ರಕ್‌ನಡಿಗೆ ಸಿಲುಕಿ ಭಾರತೀಯ ವಿದ್ಯಾರ್ಥಿನಿ ಲಂಡನ್ ನಲ್ಲಿ ಸಾವು

ಸಮಗ್ರ ನ್ಯೂಸ್‌ : ಭಾರತೀಯ ಮೂಲದ 33 ವರ್ಷದ ವಿದ್ಯಾರ್ಥಿನಿ ಲಂಡನ್ ನಲ್ಲಿ ಓದುತ್ತಿದ್ದು, ತನ್ನ ಮನೆಗೆ ಸೈಕ್ಲಿಂಗ್ ಮಾಡುತ್ತಿದ್ದಾಗ ಟ್ರಕ್ ಅಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಗುರುಗ್ರಾಮ್‌ನ ಮೂಲದವರಾಗಿದ್ದು, ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್‌ಪಿ ಕೊಚ್ಚರ್ ಪುತ್ರಿಯಾಗಿರುವ ಚೀಸ್ತಾ ಕೊಚ್ಚರ್ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಸಾರ್ವಜನಿಕ ನೀತಿ ಥಿಂಕ್-ಧನ್ಯವಾದ NITI ಆಯೋಗ್‌ನೊಂದಿಗೆ ಕೆಲಸ ಮಾಡುತ್ತಿದ್ದರು. ಅಪಘಾತ ಸಂಭವಿಸಿದಾಗ ಚೀಸ್ತಾ

ಟ್ರಕ್‌ನಡಿಗೆ ಸಿಲುಕಿ ಭಾರತೀಯ ವಿದ್ಯಾರ್ಥಿನಿ ಲಂಡನ್ ನಲ್ಲಿ ಸಾವು Read More »

ಬರ ಪರಿಹಾರದ ಕುರಿತು ಕೋರ್ಟ್ ತೀರ್ಮಾನಿಸಲಿ/ ನಿರ್ಮಲಾ ಸೀತರಾಮನ್ ಹೇಳಿಕೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಬರ ಪರಿಹಾರ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ ಕ್ರಮಕ್ಕೆ, ಈ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ಎಂದು ತೀಕ್ಷ್ಣವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಂದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬೆಂಗಳೂರಿನ ಆರ್.ವಿ.ದಂತ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಚಿಂತಕರ ವೇದಿಕೆ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ

ಬರ ಪರಿಹಾರದ ಕುರಿತು ಕೋರ್ಟ್ ತೀರ್ಮಾನಿಸಲಿ/ ನಿರ್ಮಲಾ ಸೀತರಾಮನ್ ಹೇಳಿಕೆ Read More »

ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬದ ಸಂಭ್ರಮ/ ಆಯೋಧ್ಯೆಯಲ್ಲಿ ಸಕಲ ಸಿದ್ಧತೆ

ಸಮಗ್ರ ನ್ಯೂಸ್: ಆಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಟೆ ಬಳಿಕ ಇದೇ ಮೊದಲ ಬಾರಿಗೆ ಶ್ರೀ ರಾಮ ಮಂದಿರದಲ್ಲಿ ಹೋಳಿ ಹಬ್ಬದ ಸಂಭ್ರಮ. ಹೀಗಾಗಿ ಅದ್ಧೂರಿ ಹಬ್ಬದ ಆಚರಣೆಗೆ ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಭವ್ಯ ಮಂದಿರದಲ್ಲಿ ಶ್ರೀರಾಮನಿಗೆ ಮೊದಲ ಹೋಳಿ ಹಬ್ಬ ಆಚರಣೆಯಾಗಿದೆ. ಹೀಗಾಗಿ ವಿಶೇಷವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೋಳಿ ಹಬ್ಬ ಆಚರಣೆ ವೇಳೆ ರಾಮಲಲಾನಿಗೆ ಬಣ್ಣ ಹಚ್ಚಲಾಗುತ್ತದೆ. ಇದೇ ವೇಳೆ ಕಚೋರಿ, ಗುಜಿಯಾ, ಪುರಿ, ಕಡುಬು ಸೇರಿದಂತೆ ಇತರ ಭಕ್ಷ್ಯಗಳನ್ನು

ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬದ ಸಂಭ್ರಮ/ ಆಯೋಧ್ಯೆಯಲ್ಲಿ ಸಕಲ ಸಿದ್ಧತೆ Read More »