ರಾಷ್ಟ್ರೀಯ

ಮದ್ಯ ನೀತಿ ಹಗರಣ/ ಇಂದು ಹೈಕೋರ್ಟ್‍ನಲ್ಲಿ ವಿಚಾರಣೆ

ಸಮಗ್ರ ನ್ಯೂಸ್: ದೆಹಲಿ ಅಬಕಾರಿ ಹಗರಣ ತನಿಖೆ ಚುರುಕುಗೊಂಡಿದ್ದು, ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು(ಮಾ.27) ಜಸ್ಟೀಸ್ ಸ್ವರ್ಣ ಕಾಂತ ಶರ್ಮ 10.30ಕ್ಕೆ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಅಕ್ರಮಗಳ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಕೇಜಿವಾಲ್ ನಿವಾಸದ ಮೇಲೆ ದಾಳಿ ನಡೆಸಿ, 9 ಸಮನ್ಸ್‍ಗೆ ಗೈರಾಗಿದ್ದ ಕೇಜ್ರಿವಾಲ್‍ರನ್ನು ಬಂಧಿಸಿದ್ದರು. ಬಳಿಕ ರೋಸ್ ಅವೆನ್ಯೂ ಕೋರ್ಟ್ ಕೇಬ್ರಿವಾಲ್ ಅವರನ್ನು […]

ಮದ್ಯ ನೀತಿ ಹಗರಣ/ ಇಂದು ಹೈಕೋರ್ಟ್‍ನಲ್ಲಿ ವಿಚಾರಣೆ Read More »

ಕಾಂಗ್ರೆಸ್‍ಗೆ ಮತ್ತೊಂದು ಪೆಟ್ಟು/ ಬಿಜೆಪಿ ಸೇರಿದ ಬಿಟ್ಟೂ

ಸಮಗ್ರ ನ್ಯೂಸ್: ಪಂಜಾಬಿನ ಲುಧಿಯಾನ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟೂ ಬಿಜೆಪಿ ಸೇರಿದ್ದು, ಕಾಂಗ್ರೆಸ್‍ಗೆ ಮತ್ತೊಂದು ಹೊಡೆತ ಬಿದ್ದಿದೆ. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಬಿಟ್ಟೂ ಅವರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದು, ಪ್ರಧಾನಿ ಮೋದಿಯವರು ಪಂಜಾಬ್‍ನ ಮೇಲೆ ಹೆಚ್ಚಿನ ಪ್ರೀತಿಯನ್ನು ತೋರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ.ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರು ಪಂಜಾಬ್‍ನ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಅವರು ರಾಜ್ಯಕ್ಕಾಗಿ ಬಹಳಷ್ಟು ಮಾಡಲು ಬಯಸುತ್ತಾರೆ

ಕಾಂಗ್ರೆಸ್‍ಗೆ ಮತ್ತೊಂದು ಪೆಟ್ಟು/ ಬಿಜೆಪಿ ಸೇರಿದ ಬಿಟ್ಟೂ Read More »

ಫ್ಲೋರಿಡಾದಲ್ಲಿ ಹೊಸ ವರ್ಷದಿಂದ 14 ವಯಸ್ಸಿನವರೆಗೆ ಸಾಮಾಜಿಕ ಜಾಲತಾಣದ ಖಾತೆ ತೆರೆಯುವಂತಿಲ್ಲ

ಸಮಗ್ರ ನ್ಯೂಸ್: 14ಕ್ಕಿಂತ ಕಡಿಮೆ ವಯಸ್ಸಿನವರು ಮುಂದಿನ ವರ್ಷದಿಂದ ಸಾಮಾಜಿಕ ಜಾಲತಾಣ ಸೇರುವಂತಿಲ್ಲ ಎಂದು ಅಮೆರಿಕದ ಫ್ಲೋರಿಡಾದಲ್ಲಿ ಕಾನೂನಿಗೆ ಗವರ್ನರ್ ರಾನ್ ಡೆಸ್ಯಾಂಟಿಸ್ ಸಹಿ ಮಾಡಿದ್ದಾರೆ. 14 ವರ್ಷಕ್ಕಿಂತ ಕೆಳ ವಯಸ್ಸಿನವರ ಎಲ್ಲಾ ಖಾತೆಗಳನ್ನು ತೆಗೆದು ಹಾಕುವಂತೆ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹೊಸ ಕಾನೂನಿನ ಅನ್ವಯ 14 ರಿಂದ 15 ವರ್ಷದೊಳಗಿನ ಮಕ್ಕಳು ಇನ್‍ಸ್ಟಾಗ್ರಾಂ ಮತ್ತು ಸ್ನ್ಯಾಪ್‍ಚಾಟ್‍ನಂಥ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಲು ಪೋಷಕರ ಒಪ್ಪಿಗೆ

ಫ್ಲೋರಿಡಾದಲ್ಲಿ ಹೊಸ ವರ್ಷದಿಂದ 14 ವಯಸ್ಸಿನವರೆಗೆ ಸಾಮಾಜಿಕ ಜಾಲತಾಣದ ಖಾತೆ ತೆರೆಯುವಂತಿಲ್ಲ Read More »

ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾರನ್ನು ‘ಶಕ್ತಿ ಸ್ವರೂಪ’ ಎಂದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರಿಗೆ ಫೋನ್ ಕರೆ ಮಾಡಿ ಪ್ರಚಾರದ ಸಿದ್ಧತೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಪ್ರಧಾನಿಯವರು ರೇಖಾ ಪಾತ್ರಾ ರನ್ನು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿದ್ದಾರೆ. ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ 19 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಸಂದೇಶಖಾಲಿ

ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾರನ್ನು ‘ಶಕ್ತಿ ಸ್ವರೂಪ’ ಎಂದ ಮೋದಿ Read More »

ಭ್ರಷ್ಟಾಚಾರಿಗಳನ್ನು ಶುದ್ಧಹಸ್ತ ಮಾಡುವ ಮಾಂತ್ರಿಕ ಪೆಟ್ಟಿಗೆ ಮೋದಿಯಲ್ಲಿದೆ: ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್ : ಭ್ರಷ್ಟಾಚಾರಿಗಳನೆಲ್ಲಾ ಶುದ್ಧಹಸ್ತ ಮಾಡುವ ಯಾವ ಮಾಂತ್ರಿಕ ಪೆಟ್ಟಿಗೆ ಮೋದಿ ಬಳಿ ಇದೆ. ಇದಕ್ಕೆ ಉತ್ತರ ಕೊಡುತ್ತೀರಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಮೋದಿಯವರೆ, ಅಜಿತ್ ಪವಾರ್, ಮುಕುಲ್ ರಾಯ್, ನವೀನ್ ಜಿಂದಾಲ್, ತಪಸ್ ರಾಯ್, ಪೆಮಾ ಖಂಡ್ ಇವರ ಮೇಲೆಲ್ಲಾ ಭ್ರಷ್ಟಾಚಾರದ ಆರೋಪವಿದೆ. ಇವರೆಲ್ಲಾ ಈಗ ನಿಮ್ಮ ಸಂಬಂಧ ಬೆಳೆಸಿದ್ದಾರೆ. ಇಲ್ಲಿ ಕೆಲವರಿಗೆ ಉನ್ನತ ಹುದ್ದೆ ಸಿಕ್ಕಿದೆ. ನಿಮ್ಮ ಪಕ್ಷದ

ಭ್ರಷ್ಟಾಚಾರಿಗಳನ್ನು ಶುದ್ಧಹಸ್ತ ಮಾಡುವ ಮಾಂತ್ರಿಕ ಪೆಟ್ಟಿಗೆ ಮೋದಿಯಲ್ಲಿದೆ: ದಿನೇಶ್ ಗುಂಡೂರಾವ್ Read More »

ಕೇಜ್ರಿವಾಲ್‌ ಪ್ರಕರಣದಲ್ಲಿ ನ್ಯಾಯಯುತ, ಕಾನೂನಾತ್ಮಕ ಪ್ರಕ್ರಿಯೆ ನಡೆಯಲಿ;ಅಮೆರಿಕ

ಸಮಗ್ರ ನ್ಯೂಸ್: ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ರವರು ಮದ್ಯ ನೀತಿ ಪ್ರಕರಣದಲ್ಲಿ ಬಂಧಿತರಾಗಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ. ಅವರ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕಾದ ಸ್ಟೇಟ್‌ ಇಲಾಖೆ ವಕ್ತಾರ, ಕೇಜ್ರಿವಾಲ್ ಪ್ರಕರಣ ಕುರಿತಂತೆ ಅವರಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸರಿಯಾದ ಸಮಯದಲ್ಲಿ ಕಾನೂನಾತ್ಮಕ ಪ್ರಕ್ರಿಯೆ ನಡೆಯುವುದೆಂದು ಆಶಿಸುತ್ತೇವೆ ಎಂದು ಹೇಳಿದೆ.‌ ಜರ್ಮನ್‌ ವಿದೇಶ ಸಚಿವರ ಹೇಳಿಕೆಗೆ ಭಾರತ ಸರ್ಕಾರ ವ್ಯಕ್ತಪಡಿಸಿರುವ ಆಕ್ಷೇಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಕ್ತಾರರು ಭಾರತ ಸರ್ಕಾರದ ಜೊತೆ ನಡೆಸಿದ ಚರ್ಚೆಗಳ ಕುರಿತು

ಕೇಜ್ರಿವಾಲ್‌ ಪ್ರಕರಣದಲ್ಲಿ ನ್ಯಾಯಯುತ, ಕಾನೂನಾತ್ಮಕ ಪ್ರಕ್ರಿಯೆ ನಡೆಯಲಿ;ಅಮೆರಿಕ Read More »

ಮದ್ಯ ನೀತಿ ಹಗರಣ| ತೆಲಂಗಾಣ ಮಾಜಿ ಸಿಎಂ ಪುತ್ರಿ ಕವಿತಾಗೆ 14 ದಿನ ಜೈಲು

ಸಮಗ್ರ ನ್ಯೂಸ್: ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ.ಕವಿತಾ ಅವರನ್ನು ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಏಪ್ರಿಲ್ 9 ರ ವರೆಗೆ ಜೈಲಿಗೆ ಕಳುಹಿಸಿದೆ. ಮದ್ಯ ನೀತಿ ಹಗರಣದಲ್ಲಿ ಕವಿತಾ ಅವರು ಮಾ.15 ರಂದು ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕಳೆದ ವಾರ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿತ್ತು. ಈ ವೇಳೆ ಅವರ ಮೊಬೈಲ್‌ನಲ್ಲಿದ್ದ ಡೇಟಾವನ್ನು ಪರಿಶೀಲಿಸಲಾಗಿತ್ತು. ಕವಿತಾ ಅವರಿಗೆ ದೆಹಲಿ ನ್ಯಾಯಾಲಯವು ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ಲಾಕಪ್‌ನಲ್ಲಿ ಇರಿಸುವ ಬದಲು

ಮದ್ಯ ನೀತಿ ಹಗರಣ| ತೆಲಂಗಾಣ ಮಾಜಿ ಸಿಎಂ ಪುತ್ರಿ ಕವಿತಾಗೆ 14 ದಿನ ಜೈಲು Read More »

ಕ್ರೀಡಾಂಗಣದಲ್ಲಿ ಕೊಹ್ಲಿಯ ಕಾಲು ಹಿಡಿದ ಅಭಿಮಾನಿ ವಿರುದ್ಧ ಕೇಸ್

ಸಮಗ್ರ ನ್ಯೂಸ್ : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ನಡುವಣ ಐಪಿಎಲ್ ಪಂದ್ಯದ ವೇಳೆ ಆರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಕ್ರೀಸ್​ಗೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಕ್ರೀಡಾಂಗಣದ ಗ್ರಿಲ್ ಹಾರಿ ಕ್ರೀಸ್​ ಬಳಿ ಬಂದು ಕೊಹ್ಲಿಯ ಕಾಲು ಹಿಡಿದ ಘಟನೆ ನಡೆದಿದ್ದು, ತಕ್ಷಣ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಎಂಬ ಮಾಹಿತಿ ತಿಳಿದು ಬಂದಿದೆ. ಈತ 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್

ಕ್ರೀಡಾಂಗಣದಲ್ಲಿ ಕೊಹ್ಲಿಯ ಕಾಲು ಹಿಡಿದ ಅಭಿಮಾನಿ ವಿರುದ್ಧ ಕೇಸ್ Read More »

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ/ ಗಾಜಾದಲ್ಲಿ ಕದನ ವಿರಾಮಕ್ಕೆ ನಿರ್ಣಯ

ಸಮಗ್ರ ನ್ಯೂಸ್: ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ತಕ್ಷಣವೇ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ವಿಶ್ವಂಸ್ಥೆ ಭದ್ರತಾ ಮಂಡಳಿ ಕದನ ವಿಮಾನ ಘೋಷಣೆಗೆ ಆಗ್ರಹಿಸಿದೆ. ಭದ್ರತಾ ಮಂಡಳಿಯ ಎಲ್ಲಾ 14 ಸದಸ್ಯರು ಕದನ ವಿಮಾನ ಘೋಷಣೆಗೆ ಮತ ಚಲಾಯಿಸಿದರು. ಇದೇ ವೇಳೆ ಒತ್ತೆಯಾಳಾಗಿ ಇರಿಸಿಕೊಂಡಿರುವ ನಾಗರೀಕರನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ/ ಗಾಜಾದಲ್ಲಿ ಕದನ ವಿರಾಮಕ್ಕೆ ನಿರ್ಣಯ Read More »

ಗಡಿಯಲ್ಲಿ ಮತ್ತೆ ಗಡಿಬಿಡಿ/ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ ಮತ್ತೆ ಕಿರಿಕ್

ಸಮಗ್ರ ನ್ಯೂಸ್: ಅರುಣಾಚಲ ಪ್ರದೇಶ ಚೀನಾದ ಭಾಗ. ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಚೀನಾ ಮತ್ತೆ ಕಿರಿಕ್ ಮಾಡಿದೆ. ಅರುಣಾಚಲ ಪ್ರದೇಶ ಭಾರತದ ನೈಸರ್ಗಿಕ ಭಾಗ. ಆ ರಾಜ್ಯದ ಮೇಲೆ ಚೀನಾ ಹಕ್ಕು ಸಾಧಿಸುವುದು ಅಸಂಬದ್ಧ ಎಂದು ಕೇಂದ್ರ ಸಚಿವ ಎಸ್.ಜೈಶಂಕರ್ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಗಡಿಯನ್ನು ಎಂದಿಗೂ ಇತ್ಯರ್ಥಪಡಿಸಲಾಗಿಲ್ಲ, ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರು ಜಂಗ್ಲಾನ್. ಭಾರತವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆ.

ಗಡಿಯಲ್ಲಿ ಮತ್ತೆ ಗಡಿಬಿಡಿ/ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ ಮತ್ತೆ ಕಿರಿಕ್ Read More »