ರಾಷ್ಟ್ರೀಯ

‘ಲವ್ ಜಿಹಾದ್’ ಅಂದ್ರೆ ಮುಸ್ಲಿಂಗೆ ಮಾತ್ರ‌ ಸೀಮಿತ ಅಲ್ಲವೆಂದ ಅಸ್ಸಾಂ ಸಿಎಂ

ಗುವಾಹಟಿ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ‌ಮೋಸ ಮಾಡಿದ್ರೆ ಮಾತ್ರ ಲವ್ ಜಿಹಾದ್ ಅಲ್ಲ, ಹಿಂದೂ ಹುಡುಗ ಹಿಂದೂ ಹುಡುಗಿಗೆ ಮೋಸ ಮಾಡಿದ್ರೂ ಅದು ಲವ್ ಜಿಹಾದ್ ಎನಿಸಿಕೊಳ್ಳುತ್ತೆ ಎಂದು ಅಸ್ಸಾಂ ಸರ್ಕಾರ ಅಭಿಪ್ರಾಯಪಟ್ಟಿದೆ. ನಾವು ಲವ್‌ಜಿಹಾದ್ ಪದವನ್ನು ಬಳಸಲು ಬಯಸುವುದಿಲ್ಲ. ಏಕೆಂದರೆ ಹಿಂದೂವೊಬ್ಬ ಹಿಂದೂ ಯುವತಿಗೆ ಮೋಸ ಮಾಡಬಾರದು ಎಂದು ನಾವು ಭಾವಿಸುತ್ತೇವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡುವುದು ಮಾತ್ರ ಲವ್‌ ಜಿಹಾದ್ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾನೂನು […]

‘ಲವ್ ಜಿಹಾದ್’ ಅಂದ್ರೆ ಮುಸ್ಲಿಂಗೆ ಮಾತ್ರ‌ ಸೀಮಿತ ಅಲ್ಲವೆಂದ ಅಸ್ಸಾಂ ಸಿಎಂ Read More »

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ

ವಾಷಿಂಗ್ಟನ್: ಹೆಸರಾಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಜೊತೆ ಭಾರತೀಯ ಮೂಲದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಇಂದು ಬಾಹ್ಯಕಾಶಕ್ಕೆ ಹಾರಲಿದ್ದಾರೆ. Join us July 11th for our first fully crewed rocket powered test flight, and the beginning of a new space age. The countdown begins. #Unity22 https://t.co/5UalYT7Hjb. @RichardBranson pic.twitter.com/ZL9xbCeWQX — Virgin Galactic (@virgingalactic) July 1, 2021 ಈ ಮೂಲಕ ಸ್ಪೇಸ್ ಟೂರಿಸಮ್

ಉದ್ಯಮಿ ರಿಚರ್ಡ್ ಬ್ರಾನ್ಸನ್ ಜೊತೆ ಭಾರತೀಯ ಮೂಲದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ Read More »

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ….

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕ್ 43,393 ಜನರಲ್ಲಿ ಪತ್ತೆಯಾಗಿದ್ದು ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 3,07,52,950ಕ್ಕೆ ಏರಿದೆ. ಇದಿರಿಂದ ಮತ್ತೆ ಲಾಕ್ ಡೌನ್ ಆಗುವ ಮುನ್ಸೂಚನೆ ಇದೆ. ಕಳೆದ 24 ಗಂಟೆಯಲ್ಲಿ 911 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,05,939ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಲ್ಲದೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆ ಲಾಕ್ ಡೌನ್ ಮಾಡುವ ಸ್ಥಿತಿ

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ…. Read More »

ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಗೆ ಕೇಂದ್ರ ಸಚಿವೆ ಸ್ಥಾನ. ಇದು‌ ಲಕ್ ಅಲ್ಲ, ಪರಿಶ್ರಮದ ಪ್ರತಿಫಲ

ಶೋಭಾ ಕರಂದ್ಲಾಜೆ, ಕರಾವಳಿಯ ಈ ಹೆಣ್ಣು‌ಮಗಳು ಈಗ ರಾಷ್ಟ್ರೀಯ ರಾಜಕಾರಣಕ್ಕೆ ಸಕ್ರಿಯವಾಗಿ‌ ಎಂಟ್ರಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕೃಷಿ ಹಾಗೂ ರೈತಕಲ್ಯಾಣ ಸಹಾಯಕ ಸಚಿವೆಯಾಗಿ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡರು. ಇವರ ಈ ಆಯ್ಕೆ ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು. ಶೋಭಾ ಕರಂದ್ಲಾಜೆಯವರ ರಾಜಕೀಯ ಗುರು ಡಿ.ವಿ ಸದಾನಂದ ಗೌಡರನ್ನೇ ಕೈಬಿಟ್ಟು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಈ ಸಂಸದೆಯನ್ನು ಆಯ್ಕೆ ಮಾಡಿರುವುದು ಇವರ ರಾಜಕೀಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬುದು ಬಿಜೆಪಿ

ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಗೆ ಕೇಂದ್ರ ಸಚಿವೆ ಸ್ಥಾನ. ಇದು‌ ಲಕ್ ಅಲ್ಲ, ಪರಿಶ್ರಮದ ಪ್ರತಿಫಲ Read More »

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿಂಗಂ ಅಣ್ಣಾಮಲೈ

ದೆಹಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಿಸಿ ಬಿಜೆಪಿ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ.ಕಳೆದ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ ಅವರಿಗೆ ಇದೀಗ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ ಬಿಜೆಪಿ ಪಕ್ಷವು ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿಂಗಂ ಅಣ್ಣಾಮಲೈ Read More »

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ನೂತನ 15 ಸಾರಥಿಗಳು ಸೇರ್ಪಡೆಯಾಗಿದ್ದಾರೆ. ಇಂತಹ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ಡೀಟೈಲ್ ಇಲ್ಲಿದೆ. ಉನ್ನತ ವರದಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೇಲೆ ನಿಗಾ ಇಡಲಿದ್ದು, ಅಮಿತ್ ಶಾ ಅವರು ಗೃಹ ಸಚಿವಾಲಯದ ಜೊತೆಗೆ ಸಹಕಾರ ಸಚಿವಾಲಯದ ಮೇಲೆ ನಿಗಾ ಇಡಲಿದ್ದಾರೆ. ಮನ್ಸುಖ್ ಮಾಂಡವಿಯಾ ಅವರು ಕೇಂದ್ರ

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ Read More »

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್?

ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ನಿಗದಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ಇದು 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮೊದಲ ಸಂಪುಟ ಬದಲಾವಣೆ ಪ್ರಕ್ರಿಯೆಯಾಗಲಿದೆ. ಕೇಂದ್ರ ಸಂಪುಟದಲ್ಲಿ 81 ಜನರಿಗೆ ಅವಕಾಶವಿದ್ದು,

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್? Read More »

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ

ಮುಂಬೈ: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು. ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ Read More »

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ?

ಮುಂಬೈ: ಕರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ ಎಂದಿರುವ ಅನೇಕರನ್ನು ನೀವು ನೋಡಿರುತ್ತೀರಿ. ಆದರೆ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಅಂತದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ? Read More »

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್

ನವದೆಹಲಿ: ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್‌ ಗೆಹ್ಲೋಟ್‌ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಮಂಗಳವಾರ ನೇಮಕಾತಿ ಆದೇಶ ಮಾಡಿದ್ದಾರೆ. ಹಾಲಿ ರಾಜ್ಯಪಾಲ ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡಿದೆ. ಅವರ ಸ್ಥಾನಕ್ಕೆ ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ನೇಮಕಾತಿ ಆದೇಶ ಹೊರಬಂದಿದೆ. ಮೂರು ಬಾರಿ ಮಧ್ಯಪ್ರದೇಶ ಶಾಸಕರಾಗಿ, ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ

ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್ Read More »