ರಾಷ್ಟ್ರೀಯ

ಮಕ್ಕಳಿಲ್ಲದ ಬಂಜೆ ಎಂಬ‌ ಚುಚ್ಚುಮಾತಿಗೆ ಹತಾಶೆ| 70ರ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಮಹಾತಾಯಿ..!

ಗುಜರಾತ್: ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯನ್ನು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಗುಜರಾತ್ ನ ಮೋರಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೀವನ್ ಬೆನ್ ರಬಾರಿ ಎಂಬ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರ ಪತಿ ಮಾಲ್ಧಾರಿ (75) ಅವರ ಆಸೆಯನ್ನು ಈಡೇರಿಸಿದ್ದಾರೆ. ಅವರು ಐವಿಎಫ್ ಮೂಲಕ ಗರ್ಭಧರಿಸಿದ್ದಾರೆ. ಇನ್ನೊಬ್ಬ ಭಾರತೀಯ ಮಹಿಳೆ ಎರ್ರಮಟ್ಟಿ ಮಂಗಯಮ್ಮ, ಸೆಪ್ಟೆಂಬರ್ 2019 ರಲ್ಲಿ […]

ಮಕ್ಕಳಿಲ್ಲದ ಬಂಜೆ ಎಂಬ‌ ಚುಚ್ಚುಮಾತಿಗೆ ಹತಾಶೆ| 70ರ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಮಹಾತಾಯಿ..! Read More »

ಶತಕೋಟಿ ದಾಟಿದ ವ್ಯಾಕ್ಸಿನೇಷನ್‌| ಇಂದು ಬೆಳಿಗ್ಗೆ ಮೋದಿ‌ ಮಾತಾಡ್ತಾರೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್-19 ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿ ಈಗ ಪರಿಸ್ಥಿತಿ ಸಹಜತೆಗೆ ಬರುತ್ತಿದೆ. ಜನಜೀವನ, ವ್ಯಾಪಾರ-ವಹಿವಾಟುಗಳು ನಿಧಾನವಾಗಿ ಹಿಂದಿನ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಯಾವ ವಿಷಯವನ್ನಿಟ್ಟುಕೊಂಡು ಇಂದು ಮಾತನಾಡಲಿದ್ದಾರೆ ಎಂದು ಕುತೂಹಲ ಕೆರಳಿದೆ. ಚೀನಾದ ನಂತರ 100 ಕೋಟಿ ಕೋವಿಡ್ -19 ಲಸಿಕೆ ಮೈಲಿಗಲ್ಲನ್ನು ತಲುಪಿದ ಎರಡನೇ ರಾಷ್ಟ್ರವಾಗಿ ಭಾರತ ಇತಿಹಾಸ ಬರೆದ ಒಂದು ದಿನ ನಂತರ ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ

ಶತಕೋಟಿ ದಾಟಿದ ವ್ಯಾಕ್ಸಿನೇಷನ್‌| ಇಂದು ಬೆಳಿಗ್ಗೆ ಮೋದಿ‌ ಮಾತಾಡ್ತಾರೆ Read More »

ಲಸಿಕೆ ಅಭಿಯಾನದಲ್ಲಿ ದಾಖಲೆ ನಿರ್ಮಿಸಿದ ಭಾರತ| 9 ತಿಂಗಳಲ್ಲಿ ನೂರು ಕೋಟಿ ಡೋಸೇಜ್ ಪೂರ್ಣ|

ನವದೆಹಲಿ : ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಂದು ಭಾರತ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ದೇಶದಲ್ಲಿ 100 ಕೋಟಿ ಡೋಸ್ ಪೂರ್ಣಗೊಂಡಿದೆ. ಭಾರತದಲ್ಲಿ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶ ಭಾರತವಾಗಿದೆ.ಭಾರತದಲ್ಲಿ ನೀಡಲಾದ ಕೋವಿಡ್-19 ಲಸಿಕೆ ಡೋಸ್ ಗಳ ಸಂಖ್ಯೆ 100 ಕೋಟಿ ಗಡಿ ದಾಟುತ್ತಿದ್ದಂತೆ ಪ್ರಧಾನಿ ಮೋದಿ ಅವರು ಆರ್ ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು. ಆರೋಗ್ಯ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಜೊತೆಗೆ 100

ಲಸಿಕೆ ಅಭಿಯಾನದಲ್ಲಿ ದಾಖಲೆ ನಿರ್ಮಿಸಿದ ಭಾರತ| 9 ತಿಂಗಳಲ್ಲಿ ನೂರು ಕೋಟಿ ಡೋಸೇಜ್ ಪೂರ್ಣ| Read More »

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ|

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪ್ರಧಾನಿ ಅವಲೋಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿಯಿಂದ ನೈನಿತಾಲ್ ಮತ್ತು ಕೌಶಾನಿಯಿಂದ ಮುನ್ಸಿವರೆಗೆ ಹೋಗುವ ದಾರಿಯಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಕೌಶನಿಯ ವಿವಿಧ ಸ್ಥಳಗಳಲ್ಲಿ ಸುಮಾರು 500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಲ್ಮೋರಾ ಜಿಲ್ಲೆಯಲ್ಲಿ ಭಾರೀ

ಉತ್ತರಾಖಂಡ್ ನಲ್ಲಿ ಭಾರೀ ವರ್ಷಧಾರೆ| ಹಲವೆಡೆ ಪ್ರವಾಹ, ಅಪಾರ ನಷ್ಟ| Read More »

ಕಾಸರಗೋಡು: ನಾಪತ್ತೆಯಾಗಿದ್ದ ತಾಯಿ – ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಮಗು ಮತ್ತು ತಾಯಿಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನೀಲೇಶ್ವರ ದಲ್ಲಿ ನಡೆದಿದೆ. ನೀಲೇಶ್ವರ ಕಡಿಂಙಮೂಲೆಯ ರಮ್ಯಾ (34) ಹಾಗೂ ಎರಡೂವರೆ ವರ್ಷದ ಹೆಣ್ಣು ಮಗು ಮೃತಪಟ್ಟವರು. ಇಬ್ಬರೂ ಭಾನುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಮನೆ ಸಮೀಪದ ಬಾವಿಯಲ್ಲಿ ಇಂದು ಬೆಳಿಗ್ಗೆ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಕಾಙಂಗಾಡ್ ನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಇಬ್ಬರ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ

ಕಾಸರಗೋಡು: ನಾಪತ್ತೆಯಾಗಿದ್ದ ತಾಯಿ – ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ Read More »

ಮಾಜಿ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬಂಧನ

ನವದೆಹಲಿ: ಜಾತಿ ನಿಂದನೆ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹಿಸ್ಸಾರ್ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆಗಿನ ಸಂವಾದದಲ್ಲಿ ಪರಿಶಿಷ್ಟ ಜಾತಿ ಬಗ್ಗೆ ಯುವಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿರುವ ಹಂಸಿ ಠಾಣಾ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಆ ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್

ಮಾಜಿ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬಂಧನ Read More »

ಕೇರಳದಲ್ಲಿ ‘ಮಿನಿ ಮೇಘಸ್ಪೋಟ’| ಹಲವೆಡೆ ಭೂಕುಸಿತ, 18 ಮಂದಿ ಬಲಿ, ಹಲವರು ಕಣ್ಮರೆ| ಸಹಾಯಕ್ಕಾಗಿ ಸೇನೆಯ ಮೊರೆಯಾಚಿಸಿದ ಸಿಎಂ ಪಿಣರಾಯಿ

ತಿರುವನಂತಪುರ: ಕೇರಳದಲ್ಲಿ ವಾಡಿಕೆಗಿಂತ ಶೇಕಡ 74ರಷ್ಟು ಅಧಿಕ ಮಳೆ ಬಿದ್ದ ಪರಿಣಾಮವಾಗಿ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, ಮಳೆ ಸಂಬಂಧಿ ದುರಂತಗಳಿಗೆ 18 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ ಹಲವೆಡೆ ಭೀಕರ ಪ್ರವಾಹ ಹಾಗೂ ಭೂಕುಸಿತದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಸೇನೆ ಹಾಗೂ ನೌಕಾಪಡೆಯ ನೆರವು ಕೋರಲಾಗಿದೆ. ಹವಾಮಾನ ತಜ್ಞರು ತೀವ್ರ ಮಳೆಯನ್ನು “ಮಿನಿ ಮೇಘ ಸ್ಫೋಟ” ಎಂದು ಬಣ್ಣಿಸಿದ್ದಾರೆ. ಹಲವು ಕಡೆಗಳಲ್ಲಿ ಕೇವಲ

ಕೇರಳದಲ್ಲಿ ‘ಮಿನಿ ಮೇಘಸ್ಪೋಟ’| ಹಲವೆಡೆ ಭೂಕುಸಿತ, 18 ಮಂದಿ ಬಲಿ, ಹಲವರು ಕಣ್ಮರೆ| ಸಹಾಯಕ್ಕಾಗಿ ಸೇನೆಯ ಮೊರೆಯಾಚಿಸಿದ ಸಿಎಂ ಪಿಣರಾಯಿ Read More »

ದೇವರನಾಡಲ್ಲಿ ಅಬ್ಬರಿಸಿದ ವರುಣ ದೇವ| ಭಾರೀ ಮಳೆಗೆ 3 ಸಾವು| ಹಲವರು ಕಣ್ಮರೆ, ಅಲ್ಲಲ್ಲಿ ಭೂಕುಸಿತ|

ತಿರುವನಂತಪುರಂ: ಕೇರಳದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆ ಸಂಬಂಧಿತ ಭೂ ಕುಸಿತದಲ್ಲಿ ಮೂರು ಮಂದಿ ಸಾವನ್ನಪ್ಪಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೇರಳದ ದಕ್ಷಿಣ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಈ ಸಂಬಂಧ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ದಕ್ಷಿಣ ಮತ್ತು ಮಧ್ಯ ಭಾಗದ ಜಿಲ್ಲೆಗಳಲ್ಲಿ

ದೇವರನಾಡಲ್ಲಿ ಅಬ್ಬರಿಸಿದ ವರುಣ ದೇವ| ಭಾರೀ ಮಳೆಗೆ 3 ಸಾವು| ಹಲವರು ಕಣ್ಮರೆ, ಅಲ್ಲಲ್ಲಿ ಭೂಕುಸಿತ| Read More »

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ|

ನವದೆಹಲಿ: ಬುಧವಾರ ಸಂಜೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. AIMS ಆಸ್ಪತ್ರೆಯಲ್ಲಿ ಮನಮೋಹನ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದು, ಹೃದ್ರೋಗ ತಜ್ಞರ ತಂಡ, ನಿತೀಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಅವರ ವೈಯಕ್ತಿಕ ವೈದ್ಯಾಧಿಕಾರಿ, ಹಲವು ವರ್ಷಗಳಿಂದ ಮಾಜಿ ಪ್ರಧಾನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಐಎಎನ್‌ಎಸ್ ಜೊತೆ ಮಾತನಾಡಿದ ಏಮ್ಸ್ ಅಧಿಕಾರಿ, ಕಾಂಗ್ರೆಸ್ ನಾಯಕನ

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಮಾಜಿ ಪಿಎಂ ಮನಮೋಹನ್ ಸಿಂಗ್| ಏಮ್ಸ್ ವೈದ್ಯರಿಂದ ಮಾಹಿತಿ| Read More »

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು| ನಾಲ್ವರ ಸಾವು, ಹಲವರು ಗಂಭೀರ

ಹೊಸದಿಲ್ಲಿ: ಛತ್ತೀಸ್‌ಗಡದ ಜಶ್‌ಪುರ ಜಿಲ್ಲೆಯಲ್ಲಿ ದುರ್ಗಾದೇವಿಯ ವಿಗ್ರಹವನ್ನು ವಿಸರ್ಜಿಸಲು ಭಕ್ತರು ತೆರಳುತ್ತಿದ್ದಾಗ ಕಾರೊಂದು ಜನರ ಮೇಲೆ ಹರಿದ ಪರಿಣಾಮವಾಗಿ ನಾಲ್ಕು ಮಂದಿ‌ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪಾಥಲ್ ಗಾಂವ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರೂನ್ ಮಹೀಂದ್ರ ಕ್ಸೈಲೊ ಕಾರು ಮಧ್ಯಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದು, ಭೀಕರ ಅಪಘಾತದ ನಂತರ ವೇಗವಾಗಿ ಸುಖ್ರಪಾರ ಕಡೆಗೆ ಚಲಿಸಿದೆ ಎಂದು ತಿಳಿದುಬಂದಿದೆ. ಕೋಪಗೊಂಡ ಸ್ಥಳೀಯರು ವಾಹನವನ್ನು ಹಿಂಬಾಲಿಸಿದರು ಹಾಗೂ ವಾಹನವು

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು| ನಾಲ್ವರ ಸಾವು, ಹಲವರು ಗಂಭೀರ Read More »