ರಾಷ್ಟ್ರೀಯ

ಇಸ್ರೋ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್. ಸೋಮನಾಥ್ ನೇಮಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 2018ರಿಂದಲೂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ್, ಈಗಾಗಲೇ Liquid Propulsion Systems ಸೆಂಟರ್ ನ ನಿರ್ದೇಶಕರಾಗಿ […]

ಇಸ್ರೋ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್. ಸೋಮನಾಥ್ ನೇಮಕ Read More »

ಶಾಲೆಗಳಿಗೆ ರಜೆ ಕೊಡಲು ಡಿಸಿಗಳಿಗೆ ಅಧಿಕಾರ – ಸಚಿವ ನಾಗೇಶ್

ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ ಹಿನ್ನಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಬೇಕಾ, ಮುಂದುವರೆಸಬೇಕೇ? ಬೇಡವೇ? ಎಂಬ ವಿಚಾರವಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಹತ್ವದ ಸಭೆ ನಡೆಸಿದ್ದಾರೆ. ‘ಗ್ರೌಂಡ್ ರಿಯಾಲಿಟಿ ಆಧರಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಶಾಲೆಗಳನ್ನು ಮುಂದುವರೆಸುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಟಾಸ್ಕ್‌ಫೋರ್ಸ್ ಜೊತೆಯೂ ಸಭೆ ನಡೆಸಿದ್ದೇವೆ. ತಾಲ್ಲೂಕು ಹಂತಗಳಲ್ಲಿ ಡಿಸಿಗೆ ಅಧಿಕಾರ ಕೊಟ್ಟಿದ್ದೇವೆ. ಸೋಂಕು ಹೆಚ್ಚಾದರೆ ಮತ್ತೊಮ್ಮೆ ಚರ್ಚೆಗೆ ಕೂರುತ್ತೇವೆ’ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಶಾಲೆಗಳಿಗೆ ರಜೆ ಕೊಡಲು ಡಿಸಿಗಳಿಗೆ ಅಧಿಕಾರ – ಸಚಿವ ನಾಗೇಶ್ Read More »

ಪಬ್ಜಿಯಲ್ಲಿ ಉಂಟಾಯ್ತು ಪ್ರೇಮ| ಆನ್ ಲೈನ್ ಗೇಮಿಂಗ್ ಪ್ರೇಮಿಗಳು ಮದುವೆಗೆ ರೆಡಿ|

ನ್ಯೂಸ್ ಡೆಸ್ಕ್: ನಿಷೇಧಿತ ಆನ್‌ಲೈನ್ ಗೇಮ್ ಪಬ್ಜಿ(PubG )ಯನ್ನು ಬಹಳಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಡುತ್ತಿದ್ದರು. PubG ಗೇಮ್‌ ಅತ್ಯಂತ ವ್ಯಸನಕಾರಿಯಾಗಿದ್ದು, ಇದರಿಂದ ಅಪಾಯಕಾರಿ ಘಟನೆಗಳು ಸಂಭವಿಸಿವೆ. ಆದರೆ ಅಪಾಯಕಾರಿ ಪಬ್ಜಿ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದು ಮಾಡಿದೆ. ಹೇಗೆ ಅಂತೀರಾ? ಮುಂದೆ ಓದಿ… ಪಶ್ಚಿಮ ಬಂಗಾಳದ ಧುಪ್ಗುರಿ ನಿವಾಸಿ ಸೈನೂರ್ ಆಲಂ ನಿಯಮಿತವಾಗಿ ಪಬ್ಜಿ ಆಡುತ್ತಿದ್ದರು. ಆಟ ಆಡುವಾಗ ಕರ್ನಾಟಕದ ಫ್ರಿಜಾ ಎಂಬ ಮಹಿಳೆಯ ಪರಿಚಯವಾಗಿದೆ. ಆಟ ಆಡುವಾಗ ಇಬ್ಬರೂ ಮೊದಲು

ಪಬ್ಜಿಯಲ್ಲಿ ಉಂಟಾಯ್ತು ಪ್ರೇಮ| ಆನ್ ಲೈನ್ ಗೇಮಿಂಗ್ ಪ್ರೇಮಿಗಳು ಮದುವೆಗೆ ರೆಡಿ| Read More »

ಲಾರಿ ಹತ್ತಿಸಿ ಪ್ರಧಾನಿ ಮೋದಿ ಕೊಲ್ಲಲು ಕಾಂಗ್ರೆಸ್ ಸಂಚು ರೂಪಿಸಿತ್ತು…! ಈ ಸುಳ್ಳು ಸುದ್ದಿಯ ಸತ್ಯಾಂಶವೇನು? ವಾಸ್ತವ ಸತ್ಯ ನೀವೇ ಓದಿ…

ಪಂಜಾಬ್: ಇಲ್ಲಿನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲು ಉದ್ದೇಶಿಸಿದ್ದ ಸಾರ್ವಜನಿಕ ರ್ಯಾಲಿಗೆ ರೈತರು ಅಡ್ಡಿಪಡಿಸಿದ ಕಾರಣ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಕ್ಕಿಹಾಕಿಕೊಂಡಿದ್ದರು ಎಂಬ ಘಟನೆ ಇಡೀ ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿ ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯನ್ನು ಮೋದಿಯವರು ಮೊಟಕುಗೊಳಿಸಿದರು. ಜ.5 ರಂದು ನಡೆದ ಈ ಘಟನೆಯನ್ನು ಪಂಜಾಬ್ ಸರ್ಕಾರದ ಭದ್ರತಾ ವೈಫಲ್ಯ ಎಂದು ಬಿಜೆಪಿ ಆರೋಪಿಸಿದೆ. ಇನ್ನೊಂದೆಡೆ ಯಾವುದೇ ಭದ್ರತಾ ಲೋಪ

ಲಾರಿ ಹತ್ತಿಸಿ ಪ್ರಧಾನಿ ಮೋದಿ ಕೊಲ್ಲಲು ಕಾಂಗ್ರೆಸ್ ಸಂಚು ರೂಪಿಸಿತ್ತು…! ಈ ಸುಳ್ಳು ಸುದ್ದಿಯ ಸತ್ಯಾಂಶವೇನು? ವಾಸ್ತವ ಸತ್ಯ ನೀವೇ ಓದಿ… Read More »

ಉತ್ತರಕನ್ನಡ: ನಿಧನರಾಗಿ 8 ತಿಂಗಳಾದರೂ ಯಕ್ಷಗಾನ‌ ಅಕಾಡಮಿ ಅಧ್ಯಕ್ಷರು ಇವರೇ !ಕನ್ನ‌ಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ|

ಶಿರಸಿ: ಮೃತರಾಗಿ ಎಂಟು ತಿಂಗಳಾದರೂ‌ ಆಧುನಿಕ‌ ನಡೆಯಲ್ಲಿ ವಿಫುಲ ಹೆಜ್ಜೆ ಇಡುತ್ತಿರುವ ಕನ್ನಡ‌ ಮತ್ತು ಸಂಸ್ಕ್ರತಿ ‌ಇಲಾಖೆಯ ವೆಬ್ ಸೈಟ್ ನಲ್ಲಿ ಮೃತರೇ ಅಧ್ಯಕ್ಷರಾಗಿ ‌ಮುಂದುವರಿದಿದ್ದಾರೆ. ಕಳೆದ ಏಪ್ರಿಲ್ 18ರಂದು ಅಕಾಲಿಕವಾಗಿ ಅಗಲಿದ ಯಕ್ಷಗಾನ‌ ಅಕಾಡಮಿ ಅಧ್ಯಕ್ಷ ಪ್ರೋ ಎಂ.ಎ.ಹೆಗಡೆ ಅವರ‌ ಜಾಗಕ್ಕೆ ಸರಕಾರ ಆಡಳಿತಾಧಿಕಾರಿ ನೇಮಕ‌ ಮಾಡಿದ್ದರ ಬಗ್ಗೆ ಆಕ್ಷೇಪ, ಅಸಮಧಾನಗಳು ಬಂದ ಬೆನ್ನಲ್ಲೇ, ವೆಬ್ ಸೈಟಿನಲ್ಲಿ ಎಂ.ಎ.ಹೆಗಡೆ ಅವರ ಹೆಸರನ್ನು ಬದಲಾಯಿಸದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡ ನಾಡು‌ ನುಡಿ, ಕಲೆಯ ಸೇವೆಗಾಗಿ ಇರುವ‌

ಉತ್ತರಕನ್ನಡ: ನಿಧನರಾಗಿ 8 ತಿಂಗಳಾದರೂ ಯಕ್ಷಗಾನ‌ ಅಕಾಡಮಿ ಅಧ್ಯಕ್ಷರು ಇವರೇ !ಕನ್ನ‌ಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ| Read More »

ಲಾಠಿ ಹಿಡಿದು ಪೊಲೀಸ್ ಲುಕ್ ನಲ್ಲಿ ದರ್ಶನ ನೀಡುತ್ತಿರುವ ಕಾಲಭೈರವೇಶ್ವರ| ಜಾಲತಾಣಗಳಲ್ಲಿ ಫೋಟೋ ವೈರಲ್|

ಲಕ್ನೋ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿರುವ ದೃಶ್ಯ ವಾರಣಾಸಿಯಲ್ಲಿ ನಡೆದಿದೆ. ವಾರಣಾಸಿಯ ಕಾಶಿಯ ಕೊತ್ವಾಲಾ ಎಂದೂ ಕರೆಯಲಾಗುವ ಭೈರವನ ಈ ಸಮವಸ್ತ್ರದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಕಾಶಿಯ ಪ್ರಸಿದ್ಧ ದೇವರು ಬಾಬಾ ಕಾಲ ಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ದೇವರ ಮೂರ್ತಿಯ ತಲೆಯ ಮೇಲೆ ಪೊಲೀಸ್ ಕ್ಯಾಪ್ ಹಾಗೂ ಎದೆ ಮೇಲೆ ಬ್ಯಾಡ್ಜ್ ನ್ನು ಹಾಕಲಾಗಿದ್ದು,

ಲಾಠಿ ಹಿಡಿದು ಪೊಲೀಸ್ ಲುಕ್ ನಲ್ಲಿ ದರ್ಶನ ನೀಡುತ್ತಿರುವ ಕಾಲಭೈರವೇಶ್ವರ| ಜಾಲತಾಣಗಳಲ್ಲಿ ಫೋಟೋ ವೈರಲ್| Read More »

ಸೆಕ್ಸ್ ಗಾಗಿ ಪತ್ನಿಯರ ಎಕ್ಸ್ ಚೇಂಜ್| ದೇವರ ನಾಡಲ್ಲೊಂದು ಅನಾಗರಿಕ ದಂಧೆ| ಟೆಲಿಗ್ರಾಂ, ಮೆಸೇಂಜರ್ ನಲ್ಲಿ ನಡೆಯುತ್ತೆ ವ್ಯವಹಾರ|

ತಿರುವನಂತಪುರಂ: ಸೆಕ್ಸ್​ಗಾಗಿ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳುವ ದಂಧೆ ನಡೆಸುತ್ತಾ ದಾಂಪತ್ಯ ಬದುಕಿಗೆ ಕೊಳ್ಳಿ ಇಡುತ್ತಿರುವ ವಿಚಿತ್ರ ದಂಧೆಯೊಂದು ಕೇರಳದಲ್ಲಿ ನಡೆಯುತ್ತಿದೆ. ಇಂತದ್ದೊಂದು ಅನಾಗರಿಕ ವ್ಯವಹಾರಕ್ಕಾಗಿ ಈ ನೀಚ ಕಾಮುಕರು ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಗ್ರೂಪ್​ ರಚಿಸಿಕೊಂಡು ‘ಪತ್ನಿಯರ ವಿನಿಮಯ’ ದಂಧೆ ನಡೆಸುತ್ತಾ ಕೇರಳದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಸೆಕ್ಸ್​ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳಲೆಂದೇ ದುಷ್ಕರ್ಮಿಗಳು ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದರು. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ

ಸೆಕ್ಸ್ ಗಾಗಿ ಪತ್ನಿಯರ ಎಕ್ಸ್ ಚೇಂಜ್| ದೇವರ ನಾಡಲ್ಲೊಂದು ಅನಾಗರಿಕ ದಂಧೆ| ಟೆಲಿಗ್ರಾಂ, ಮೆಸೇಂಜರ್ ನಲ್ಲಿ ನಡೆಯುತ್ತೆ ವ್ಯವಹಾರ| Read More »

ಸರ್ವರ್ ಡೌನ್| ಗೂಗಲ್ ಪೇ, ಪೇಟಿಎಂ ಅಪ್ಲಿಕೇಶನ್ ಸ್ಥಗಿತ

ನವದೆಹಲಿ : ನ್ಯಾಷನಲ್ ಪೇಮೆಂಟ್‌ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಯುಪಿಐ ಒಂದು ಗಂಟೆಗೂ ಹೆಚ್ಚು ಕಾಲ ಡೌನ್ ಆಗಿದೆ ಎಂದು ವರದಿಯಾಗಿದೆ. ಹೀಗಾಗಿ ಗೂಗಲ್ ಪೇ ಅಥವಾ ಪೇಟಿಎಂನಂತಹ ಅಪ್ಲಿಕೇಶನ್ʼಗಳ ಬಳಕೆದಾರರು ಯಾವುದೇ ವಹಿವಾಟುಗಳನ್ನ ಮಾಡದಂತೆ ತಡೆಯಲಾಗಿದೆ. ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿದ NPCI, ‘ಮಧ್ಯಂತರ ತಾಂತ್ರಿಕ ದೋಷ’ದಿಂದಾಗಿ ಈ ತೊಂದರೆ ಸಂಭವಿಸಿದ್ದು, ಯುಪಿಐ ಸೇವೆಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಪಾವತಿ ನಿಗಮವು ‘ವ್ಯವಸ್ಥೆಯನ್ನು ನಿಕಟವಾಗಿ

ಸರ್ವರ್ ಡೌನ್| ಗೂಗಲ್ ಪೇ, ಪೇಟಿಎಂ ಅಪ್ಲಿಕೇಶನ್ ಸ್ಥಗಿತ Read More »

ಇಂದು ಸಂಜೆ ಪ್ರಧಾನಿ ನೇತೃತ್ವದಲ್ಲಿ ಸಭೆ| ಒಮಿಕ್ರಾನ್, ಕೊರೊನಾ ಸಂಬಂಧಿಸಿದ ಚರ್ಚೆ ಸಾಧ್ಯತೆ|

ನವದೆಹಲಿ: ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಿಗದಿಪಡಿಸಲಾಗಿದೆ. ದೇಶದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಆರ್ಭಟ ಹೆಚ್ಚಾಗುತ್ತಿದ್ದು 3ನೇ ಅಲೆ ಆರಂಭವಾಗಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಕೊರೋನಾ, ಓಮಿಕ್ರಾನ್ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಇಂದು ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೇಂದ್ರ ಸಚಿವರು ಸೇರಿದಂತೆ ವಿವಿಧ ತಜ್ಞರು ಭಾಗವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮಹತ್ವದ ವಿಚಾರಗಳ ಕುರಿತಂತೆ ಚರ್ಚೆ ಕೂಡ ನಡೆಯಲಿದೆ

ಇಂದು ಸಂಜೆ ಪ್ರಧಾನಿ ನೇತೃತ್ವದಲ್ಲಿ ಸಭೆ| ಒಮಿಕ್ರಾನ್, ಕೊರೊನಾ ಸಂಬಂಧಿಸಿದ ಚರ್ಚೆ ಸಾಧ್ಯತೆ| Read More »

ಒಮಿಕ್ರಾನ್ ಗಂಭೀರವಲ್ಲ, ಶಾಲೆಗಳ ಬಂದ್, ಲಾಕ್ ಡೌನ್ ಮಾಡಿ ಗಾಬರಿ ಹುಟ್ಟಿಸಬೇಡಿ| ಕೇಂದ್ರಕ್ಕೆ ತಜ್ಞರಿಂದ ಸಲಹೆ|

ನವದೆಹಲಿ: ದೇಶದಲ್ಲಿ ಕೊರೊನಾ ಕೇಸ್ ಗಳನ್ನು ನೋಡಿ ಶಾಲೆಗಳನ್ನು ಬಂದ್ ಮಾಡಬೇಡಿ. ನಿರ್ಬಂಧ ಹೇರಬೇಡಿ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೋವಿಡ್ ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ, ಹೈದರಾಬಾದ್ ಐಐಟಿ ಪ್ರಾಧ್ಯಾಪಕ ಡಾ. ವಿದ್ಯಾಸಾಗರ್ ಸಲಹೆ ನೀಡಿದ್ದಾರೆ. ಶಾಲೆ, ಕಾಲೇಜು, ಕಚೇರಿಗಳನ್ನು ಬಂದ್ ಮಾಡುವುದು, ಲಾಕ್ಡೌನ್ ಮಾಡುವುದು ಗಾಬರಿಯ ಕ್ರಮಗಳಾಗಿವೆ. ಕೊರೋನಾ ಏರುಗತಿಯಲ್ಲಿ ಇದ್ದರೂ, ಆಸ್ಪತ್ರೆ ಸೇರುವವರ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲಾ ಸೋಂಕಿತರನ್ನು ಕಾಯಿಲೆ ಪೀಡಿತರು ಎಂದು ಹೇಳಲಾಗುವುದಿಲ್ಲ. ಸಂಖ್ಯೆಯನ್ನು ನೋಡಿ ಗಾಬರಿ ಆಗಬಾರದು,

ಒಮಿಕ್ರಾನ್ ಗಂಭೀರವಲ್ಲ, ಶಾಲೆಗಳ ಬಂದ್, ಲಾಕ್ ಡೌನ್ ಮಾಡಿ ಗಾಬರಿ ಹುಟ್ಟಿಸಬೇಡಿ| ಕೇಂದ್ರಕ್ಕೆ ತಜ್ಞರಿಂದ ಸಲಹೆ| Read More »