ರಾಷ್ಟ್ರೀಯ

ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI

ನವದೆಹಲಿ : ದೇಶದಲ್ಲಿ ಶೇ. 45ರಷ್ಟು ಮ್ಯಾನೇಜ್‌ಮೆಂಟ್ ಮತ್ತು ಶೇ.48ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಎಂದು NITI ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಗುರುವಾರ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಸಂವಾದ’ವನ್ನು ಉದ್ದೇಶಿಸಿ ಮಾತನಾಡಿದ ಡಾ.ಕುಮಾರ್, ಉನ್ನತ ಶಿಕ್ಷಣದಲ್ಲಿ ನಿರ್ದಿಷ್ಟವಾಗಿ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧಿಸಲು ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಶಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದಲ್ಲಿ ಉನ್ನತ ಶಿಕ್ಷಣ […]

ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI Read More »

ಮತ್ತೊಂದು ಯಶಸ್ವಿ ಪ್ರಯೋಗ| ಮನುಷ್ಯನಿಗೆ ಹಂದಿ ಮೂತ್ರ ಪಿಂಡಗಳ ಕಸಿ ಮಾಡಿದ ವೈದ್ಯರು

ವಾಶಿಂಗ್ಟನ್: ಅಮೇರಿಕನ್ ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಇತಿಹಾಸ ಸೃಷ್ಟಿಸಿರುವ ಅಲ್ಲಿನ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ. ಮಾಹಿತಿಯ ಪ್ರಕಾರ, 57 ವರ್ಷದ ಜಿಮ್ ಪಾರ್ಸನ್ಸ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದು, ಅವರ ಮೆದುಳು ಡೆಡ್ ಆಗಿದೆ ಎಂದು ಘೋಷಿಸಲಾಗಿತ್ತು. ಇದರ ನಂತರ, ಪಾರ್ಸನ್ಸ್ ಕುಟುಂಬದ ಒಪ್ಪಿಗೆಯೊಂದಿಗೆ ರೋಗಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ.

ಮತ್ತೊಂದು ಯಶಸ್ವಿ ಪ್ರಯೋಗ| ಮನುಷ್ಯನಿಗೆ ಹಂದಿ ಮೂತ್ರ ಪಿಂಡಗಳ ಕಸಿ ಮಾಡಿದ ವೈದ್ಯರು Read More »

ಬಿಜೆಪಿಯಿಂದ ಟಿಕೆಟ್ ನಿರಾಕರಣೆ| ಸ್ವತಂತ್ರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ| ಬಿಜೆಪಿ ಗೋವಾದಲ್ಲೂ ತಲೆನೋವು

ಪಣಜಿ: ಯುಪಿ ಜೊತೆಗೆ ಇದೀಗ ಗೋವಾದಲ್ಲೂ ಚುನಾವಣಾ ಪ್ರಚಾರ ಜೋರಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬಿಜೆಪಿ ಶಾಸಕರ ರಾಜೀನಾಮೆ ಸಮಸ್ಯೆ ಮಾತ್ರವಲ್ಲ, ಹೊಸ ಆತಂಕಕ್ಕೂ ಕಾರಣವಾಗಿದೆ. ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಮಗ ಬಂಡಾಯ ನಡೆ ತೋರಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಾಗಿದ್ದಾರೆ. ಕಳೆದ 25 ವರ್ಷಗಳಿಂದಲೂ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಉತ್ಪಲ್ ಬದಲಿಗೆ ಪಟ್ನೇಕರ್ ಅವರಿಗೆ ಟಿಕೆಟ್ ನೀಡಿ

ಬಿಜೆಪಿಯಿಂದ ಟಿಕೆಟ್ ನಿರಾಕರಣೆ| ಸ್ವತಂತ್ರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ| ಬಿಜೆಪಿ ಗೋವಾದಲ್ಲೂ ತಲೆನೋವು Read More »

ಜಗತ್ತಿನ ‌ಪ್ರಭಾವಿ‌ ನಾಯಕರ ಪಟ್ಟಿಯಲ್ಲಿ ಮೋದಿ‌ ಟಾಪರ್

ಡಿಜಿಟಲ್ ಡೆಸ್ಕ್: ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ ದೊರಕಿದೆ. ಜಾಗತಿಕ ನಾಯಕರಿಗೆ ಸಂಬಂಧಿಸಿದ ‘ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್’ ಬಿಡುಗಡೆ ಮಾಡಿರುವ ರೇಟಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೆನಡಾದ ಕೌಂಟರ್‌ಪಾರ್ಟ್ ಜಸ್ಟಿನ್ ಟ್ರೂಡೋ ಅವರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಶೇ.71ರಷ್ಟು ಅನುಮೋದಿತ ಅಂಕಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶೇ.66 ರಷ್ಟು ಅಂಕ ಗಳಿಸಿದ ಮೆಕ್ಸಿಕೋದ ಆಂಟ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಇದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿ

ಜಗತ್ತಿನ ‌ಪ್ರಭಾವಿ‌ ನಾಯಕರ ಪಟ್ಟಿಯಲ್ಲಿ ಮೋದಿ‌ ಟಾಪರ್ Read More »

ಶಿರಾಡಿ ಘಾಟ್ ರಸ್ತೆ ಚತುಷ್ಪಥಗೊಳಿಸಿ ಅಭಿವೃದ್ಧಿ| 1200 ಕೋಟಿ ಯೋಜನೆಗೆ ಕೇಂದ್ರ ಅನುಮೋದನೆ

ಬೆಂಗಳೂರು : ದ್ವಿಪಥವಿರುವ ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ 1200 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಎನ್.ಹೆಚ್.ಎ.ಐ ವತಿಯಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲಾ ಸಹಕಾರ ಹಾಗೂ ಅನುಮೋದನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಶಿರಾಡಿ ಘಾಟ್ ಹೆದ್ದಾರಿಯನ್ನು ತಕ್ಷಣ ಮೇಲ್ದರ್ಜೆಗೇರಿಸಬೇಕಾಗಿದೆ. ಮಳೆಗಾಲದ ಸಮಯದಲ್ಲಿ ಈ ರಸ್ತೆ ಬಳಕೆ

ಶಿರಾಡಿ ಘಾಟ್ ರಸ್ತೆ ಚತುಷ್ಪಥಗೊಳಿಸಿ ಅಭಿವೃದ್ಧಿ| 1200 ಕೋಟಿ ಯೋಜನೆಗೆ ಕೇಂದ್ರ ಅನುಮೋದನೆ Read More »

ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆ

ಡೆಹ್ರಾಡೂನ್: ಸೇನಾಪಡೆಗಳ ಮಾಜಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಹೋದರ ನಿವೃತ್ತ ಕರ್ನಲ್ ವಿಜಯ್ ರಾವತ್ ಬುಧವಾರ ಬಿಜೆಪಿ ಸೇರಿದ್ದಾರೆ. ಈ ವೇಳೆ ಮಾತನಾಡಿದ ವಿಜಯ್ ರಾವತ್, ನಮ್ಮ ತಂದೆ (ಜನರಲ್ ಲಕ್ಷ್ಮಣ್ ಸಿಂಗ್ ರಾವತ್) ಸೇನೆಯಿಂದ ನಿವೃತ್ತರಾದ ನಂತರ ಬಿಜೆಪಿ ಸೇರಿದ್ದರು. ಈಗ ಆ ಅವಕಾಶ ನನಗೆ ಸಿಕ್ಕಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ವಿಶಿಷ್ಟವಾದದ್ದು. ಅವರ ಪ್ರತಿ ಕಾರ್ಯವೂ ದೇಶದ ಉನ್ನತಿ ಉದ್ದೇಶದಿಂದ ಕೂಡಿದೆ. ನಾನು ಬಿಜೆಪಿ ಸೇರಲು ಮೋದಿ ಅವರ ಕಾರ್ಯವೇ

ಬಿಪಿನ್ ರಾವತ್ ಸಹೋದರ ಬಿಜೆಪಿ ಸೇರ್ಪಡೆ Read More »

ಟೆನಿಸ್ ಅಂಗಳಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ| ಎರಡು ದಶಕಗಳ ವೃತ್ತಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ

ಸ್ಪೋರ್ಟ್ಸ್ ಡೆಸ್ಕ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆ ಆಗಮಿಸಿದ ಸಾನಿಯಾ ಮಿರ್ಜಾ, ಇದು ತನ್ನ ಕೊನೆಯ ಋತು ಎಂದು ಹೇಳಿದ್ದು, ಈ ಮೂಲಕ 2022ರಲ್ಲಿ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಧವಾರವೇ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತರ ಅವರು ಈ ಹೇಳಿಕೆಯನ್ನ ನೀಡಿದರು. ಇದು ತನ್ನ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಹೇಳಿದರು. ಪಂದ್ಯದ ನಂತರ, ‘ನಾನು ಉತ್ತಮವಾಗಿ ಆಡಬಲ್ಲೆ ಎಂದು ನಾನು

ಟೆನಿಸ್ ಅಂಗಳಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ| ಎರಡು ದಶಕಗಳ ವೃತ್ತಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ Read More »

ಗಣರಾಜ್ಯೋತ್ಸವದಂದು ಮೋದಿ ಹತ್ಯೆಗೆ ಉಗ್ರರ ಸಂಚು

ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಏಷ್ಯಾ ಖಂಡದ ಐದು ರಾಷ್ಟ್ರಗಳ ಗಣ್ಯರನ್ನು ಹತ್ಯೆ ಮಾಡಲು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಉಗ್ರ ಸಂಘಟನೆಗಳು ಸಂಚು ರೂಪಿಸಿರುವ ಆತಂಕಕಾರಿ ಮಾಹಿತಿ ಹೊರಬಂದಿದೆ. ಕೇಂದ್ರ ಗುಪ್ತದಳ ರವಾನಿಸಿರುವ 9 ಪುಟಗಳ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅದರಲ್ಲಿ ವಿಧ್ವಂಸಕ ಕೃತ್ಯದ ಸಂಚಿನ ಸಮಗ್ರ ವಿವರಣೆ ಇದೆ. 75ನೇ ವರ್ಷದ ಗಣರಾಜ್ಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿ, ಖಜಕಿಸ್ತಾನ್, ಕಿಜಕಿಸ್ತಾನ್,

ಗಣರಾಜ್ಯೋತ್ಸವದಂದು ಮೋದಿ ಹತ್ಯೆಗೆ ಉಗ್ರರ ಸಂಚು Read More »

ನೆಟ್ಟಿಗರ ಮನಗೆದ್ದ ಹಾರುವ ಜಿಂಕೆ! ಈ ಚಿಗರೆಯ ಓಟಕ್ಕೆ ಜನ ಫುಲ್ ಫಿದಾ

ಡಿಜಿಟಲ್ ಡೆಸ್ಕ್ : ಜಿಂಕೆ ಹಾರಬಲ್ಲ ಫ್ಯಾಂಟಸಿ ಕಥೆಯ ಕಥಾವಸ್ತುವನ್ನು ನೀವು ಎಂದಾದರೂ ಯೋಚಿಸಿದ್ದರೆ ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನು ನೀವು ನೋಡಬಹುದು. ಜಿಂಕೆಗಳು ಹಾರಲಾರವು, ಪಕ್ಷಿಗಳು ಹಾರಬಲ್ಲವು. ಆದರೆ ಅಂತರ್ಜಾಲವು ಅತ್ಯಂತ ನಂಬಲಾಗದ ಸಂಗತಿಗಳನ್ನು ಸಾಬೀತುಪಡಿಸುತ್ತವೆ. ಪ್ರಾಣಿಗಳು ಕಾಡಿನಲ್ಲಿ ಕೆಲವು ನಂಬಲಾಗದ ಕೆಲಸಗಳನ್ನು ಮಾಡುತ್ತವೆ ಎಂದು ತಿಳಿದುಬಂದಿದೆ ಮತ್ತು ಕೆಲವು ಜನರು ಅಂತಹ ಅದ್ಭುತ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಕಷ್ಟು

ನೆಟ್ಟಿಗರ ಮನಗೆದ್ದ ಹಾರುವ ಜಿಂಕೆ! ಈ ಚಿಗರೆಯ ಓಟಕ್ಕೆ ಜನ ಫುಲ್ ಫಿದಾ Read More »

ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ಕರುವನ್ನು ಇಲ್ಲಿ ನೋಡಬಹುದು

ರಾಯ್ಪುರ: ಹಸುವೊಂದು ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಮೂರು ಕಣ್ಣಿನ್ನು ಹೊಂದಿರುವ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ. ಜನವರಿ 14 ರಂದು ಸಂಜೆ 7

ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ಕರುವನ್ನು ಇಲ್ಲಿ ನೋಡಬಹುದು Read More »