ರಾಷ್ಟ್ರೀಯ

ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಜಾರಿ| ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದು ಮಾಡಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೆ ಒಳಪಡಿಸಲಾಗಿದೆ. . ಇವುಗಳ ಬದಲಾಗಿ ಮೂರು ಹೊಸ ಕಾನೂನುಗಳು (New Laws) ಜುಲೈ 1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ.ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ […]

ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಜಾರಿ| ಏನೆಲ್ಲಾ ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಲೋಕಸಭೆಯಲ್ಲಿ ಮೋದಿ – ರಾಗಾ ಟಾಕ್ ಫೈಟ್| ಹಿಂದೂ ಎಂದು ಕರೆಸಿಕೊಳ್ಳುವವರು ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತಾಡ್ತಾರೆ ಎಂದ ರಾಹುಲ್!!

ಸಮಗ್ರ ನ್ಯೂಸ್: ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣರಾದರು. ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಚಿತ್ರಿಸುವುದು ಗಂಭೀರ ವಿಷಯ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಲೋಕಸಭೆಯಲ್ಲಿ ಮೋದಿ – ರಾಗಾ ಟಾಕ್ ಫೈಟ್| ಹಿಂದೂ ಎಂದು ಕರೆಸಿಕೊಳ್ಳುವವರು ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತಾಡ್ತಾರೆ ಎಂದ ರಾಹುಲ್!! Read More »

ಮಹಾರಾಷ್ಟ್ರ: ಭಾನುವಾರದ ರಜಾ ತಂದ ಆಪತ್ತು| ಜಲಪಾತದಲ್ಲಿ ಕೊಚ್ಚಿ ಹೋದ 4 ಮಕ್ಕಳು ‌ಮತ್ತು ಮಹಿಳೆ

ಸಮಗ್ರ ನ್ಯೂಸ್: ಭಾನುವಾರದ ರಜಾ ದಿನವನ್ನು ಪ್ರವಾಸಿ ತಾಣದಲ್ಲಿ ಕಳೆಯಲು ಹೋದ ಕುಟುಂಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಲೋನವಾಲದಲ್ಲಿ ನಡೆದಿದೆ. ಭುಶಿ ಡ್ಯಾಮ್ ಪಕ್ಕದ ಪ್ರಸಿದ್ದ ಪ್ರವಾಸಿ ತಾಣದಲ್ಲಿ ಜಲಪಾತ ಸೇರಿದಂತೆ ಪ್ರಕೃತಿ ಸೌಂದರ್ಯದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಇದೇ ಪ್ರದೇಶಕ್ಕೆ ತೆರಳಿದ್ದಾರೆ. ಆದರೆ ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳ ಸೇರಿದಂತೆ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ

ಮಹಾರಾಷ್ಟ್ರ: ಭಾನುವಾರದ ರಜಾ ತಂದ ಆಪತ್ತು| ಜಲಪಾತದಲ್ಲಿ ಕೊಚ್ಚಿ ಹೋದ 4 ಮಕ್ಕಳು ‌ಮತ್ತು ಮಹಿಳೆ Read More »

ಲಡಾಖ್: ನದಿ ನೀರಲ್ಲಿ ಕೊಚ್ಚಿ ಹೋಗಿ ಐವರು ಸೈನಿಕರು ಹುತಾತ್ಮ

ಸಮಗ್ರ ನ್ಯೂಸ್: ಲಡಾಖ್ ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕ್ ನಲ್ಲಿ ನದಿಯನ್ನು ದಾಟುವಾಗ ಸೇನೆಯ ಐವರು ಸೈನಿಕರು ನೀರಿನಲ್ಲಿ ಕೊಚ್ಚಿಹೋಗಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವರು ಸೈನಿಕರನ್ನು ಹೊತ್ತ ಟಿ -72 ಟ್ಯಾಂಕ್ ನದಿಯನ್ನು ದಾಟುವಾಗ ಪ್ರವಾಹದಿಂದಾಗಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಟ್ಯಾಂಕ್ ನಕ್ಕು ಒಬ್ಬ ಜೆಸಿಒ ಮತ್ತು 4 ಜವಾನರು ಸೇರಿದಂತೆ ಐದು ಸೈನಿಕರು ಇದ್ದರು. ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು,

ಲಡಾಖ್: ನದಿ ನೀರಲ್ಲಿ ಕೊಚ್ಚಿ ಹೋಗಿ ಐವರು ಸೈನಿಕರು ಹುತಾತ್ಮ Read More »

ಗೂಗಲ್ ಟ್ರಾನ್ಸ್ ಲೆಟ್ ನಲ್ಲಿ ತುಳುಭಾಷೆ| ತುಳು ಕಲಿಕೆ ಈಗ ಮತ್ತಷ್ಟು ಸುಲಭ!

ಸಮಗ್ರ ನ್ಯೂಸ್: ತುಳು ಭಾಷೆ ಕಲಿಯಬೇಕೆಂಬ ಜನರಿಗೆ ಗೂಗಲ್ ಸಿಹಿಸುದ್ದಿ ನೀಡಿದ್ದು, ಗೂಗಲ್ ಟ್ರಾನ್ಸ್ ಲೇಟಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ. ದೊಡ್ಡ ಟೆಕ್ ದೈತ್ಯ ಗೂಗಲ್ ಹೊಸದಾಗಿ 110 ಹೊಸ ಭಾಷೆಗಳನ್ನು ಸೇರಿಸಿದೆ. ಅವಧಿ, ಬೋಡೋ, ಖಾಸಿ, ಕೋಕ್ ಬೊರೋಕ್, ಮಾರ್ವಾಡಿ, ಸಂತಾಲಿ ಮತ್ತು ತುಳು ಹೊಸ ಭಾರತೀಯ ಭಾಷೆಗಳಾಗಿವೆ. ಭಾಷಾಂತರಕ್ಕೆ ಹೊಸ ಭಾಷೆಗಳನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ. ಪ್ರಾದೇಶಿಕ ಪ್ರಭೇದಗಳು, ಉಪಭಾಷೆಗಳು ಮತ್ತು ಕಾಗುಣಿತ ಮಾನದಂಡಗಳಂತಹ ಹಲವಾರು ಅಂಶಗಳನ್ನು ಪರಿಗಣಿಸುತ್ತದೆ ಎಂದು ಟೆಕ್

ಗೂಗಲ್ ಟ್ರಾನ್ಸ್ ಲೆಟ್ ನಲ್ಲಿ ತುಳುಭಾಷೆ| ತುಳು ಕಲಿಕೆ ಈಗ ಮತ್ತಷ್ಟು ಸುಲಭ! Read More »

ಬಾಹ್ಯಾಕಾಶ ‌ನಿಲ್ದಾಣದಲ್ಲಿ‌ ತುರ್ತುಪರಿಸ್ಥಿತಿ| ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಗೆ ಸ್ಟಾರ್ ಲೆನ್ಸರ್ ನಲ್ಲಿ ಆಶ್ರಯ ಪಡೆಯಲು ಸೂಚನೆ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ನಿಲ್ದಾಣದ ಎತ್ತರದ ಬಳಿ ಉಪಗ್ರಹ ಛಿದ್ರವಾಗುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದ್ದು, ತಕ್ಷಣವೇ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಬೋಯಿಂಗ್ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮತ್ತು ಇತರ ವಾಪಸಾತಿ ವಾಹನಗಳಲ್ಲಿ ಆಶ್ರಯ ಪಡೆಯುವಂತೆ ಆದೇಶಿಸಲಾಗಿದೆ. ಬಾಹ್ಯಾಕಾಶ ಅವಶೇಷಗಳು ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಬುಧವಾರ ಬೆದರಿಕೆ ಹಾಕಿದ್ದರಿಂದ ತುರ್ತು ಆದೇಶವನ್ನು ಹೊರಡಿಸಲಾಗಿದೆ. ನಿಲ್ದಾಣದ ಸಮೀಪವಿರುವ ಎತ್ತರದಲ್ಲಿ ಉಪಗ್ರಹ ಮುರಿದುಹೋಗಿರುವ ಬಗ್ಗೆ ನಾಸಾಗೆ ತಿಳಿಸಿದಾಗ ತುರ್ತು

ಬಾಹ್ಯಾಕಾಶ ‌ನಿಲ್ದಾಣದಲ್ಲಿ‌ ತುರ್ತುಪರಿಸ್ಥಿತಿ| ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಗೆ ಸ್ಟಾರ್ ಲೆನ್ಸರ್ ನಲ್ಲಿ ಆಶ್ರಯ ಪಡೆಯಲು ಸೂಚನೆ Read More »

ಪರವಾನಗಿ ನವೀಕರಿಸದ ಆರೋಪ| ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ

ಸಮಗ್ರ ನ್ಯೂಸ್: ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪವರ್‌ ಟಿ.ವಿ. ಕನ್ನಡ ಚಾನೆಲ್‌ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸರಣವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ. ಈ ಕುರಿತಂತೆ ಜೆಡಿಎಸ್‌ನ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಂ.ರಮೇಶ್‌ ಗೌಡ, ಅವರ ಪತ್ನಿ ಡಾ.ಎ.ರಮ್ಯಾ ರಮೇಶ್‌ ಹಾಗೂ ಐಪಿಎಸ್ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿ ವಾದ ಮಂಡಿಸಿದ ಹೈಕೋರ್ಟ್‌ನ

ಪರವಾನಗಿ ನವೀಕರಿಸದ ಆರೋಪ| ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ Read More »

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

ಸಮಗ್ರ ನ್ಯೂಸ್: ಲೋಕಸಭಾ ಸ್ಪೀಕರ್ ಹುದ್ದೆಗೆ ಬುಧವಾರ ಚುನಾವಣೆ ನಡೆದಿದೆ. ಸ್ಪೀಕರ್ ಆಗಿ ಎರಡನೇ ಅವಧಿಗೆ ಬಿಜೆಪಿಯ ಅಭ್ಯರ್ಥಿ ಓಂ ಬಿರ್ಲಾ ಹಾಗೂ ಕೇರಳದ ಮಾವೆಲಿಕರ ಕ್ಷೇತ್ರವನ್ನು ಎಂಟು ಅವಧಿಗೆ ಪ್ರತಿನಿಧಿಸಿರುವ ಕಾಂಗ್ರೆಸ್ ನ ಕೋಡಿಕುನ್ನಿಲ್ ಸುರೇಶ್ ಸ್ಪೀಕರ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿದ್ದು, ಓಂ ಬಿರ್ಲಾ 18ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಪೀಠದಲ್ಲಿ ಕುಳಿತಿದ್ದ ಹಂಗಾಮಿ ಸ್ಪೀಕರ್‌ ಭರ್ತೃಹರಿ ಮೆಹತಾಬ್ ಅವರು ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿ

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ Read More »

ನವದೆಹಲಿ: ಪೇಪರ್ ನೋಡದೇ ಪ್ರಮಾಣವಚನ ಸ್ವೀಕರಿಸಿದ ಸಂಸದೆ

ಸಮಗ್ರ ನ್ಯೂಸ್: ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿರುವ ಶಾಂಭವಿ ಚೌಧರಿ ಅವರು ಪೇಪರ್ ಅನ್ನು ನೋಡದೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 18ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿರುವ ಶಾಂಭವಿ ಚೌಧರಿ ಅವರು ಸಂಸತ್ತಿನಲ್ಲಿ ಹಿಂದಿಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ(ಆರ್‌ವಿ) ಪ್ರಕ್ಷದ ಶಾಂಭವಿ ಬಿಹಾರದ ಸಮಸ್ತಿಪುರದ ಪ್ರತಿನಿಧಿಯಾಗಿದ್ದಾರೆ. ಅವರು ಸಮಸ್ತಿಪುರದ ಮೊದಲ ಮಹಿಳಾ ಸಂಸದರಾಗಿದ್ದಾರೆ.

ನವದೆಹಲಿ: ಪೇಪರ್ ನೋಡದೇ ಪ್ರಮಾಣವಚನ ಸ್ವೀಕರಿಸಿದ ಸಂಸದೆ Read More »

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ನಾಸಾ ಮತ್ತೆ ಮುಂದೂಡಿದ್ದರಿಂದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ಅವರು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯುವ ಸಾಧ್ಯತೆಯಿದೆ. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊಂದಿರುವ ಬಾಹ್ಯಾಕಾಶ ನೌಕೆಯ ವಾಪಸಾತಿ ಪ್ರಯಾಣವನ್ನು ಯಾವಾಗ ಕೈಗೊಳ್ಳಲಾಗುತ್ತದೆ ಎಂಬುದಕ್ಕೆ ನಾಸಾ ನಿರ್ದಿಷ್ಟ ದಿನಾಂಕವನ್ನು ನೀಡಿಲ್ಲ. ಬೋಯಿಂಗ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರು ಗಗನಯಾತ್ರಿಗಳು

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್ Read More »