ರಾಷ್ಟ್ರೀಯ

ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಸಮಗ್ರ ನ್ಯೂಸ್: ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9.55 ಕ್ಕೆ ಹಾರಿದ್ದು, ಸ್ವಲ್ಪ ಸಮಯದ ನಂತರ ರಾಡಾರ್‌ ನಿಂದ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗೆ ಫೀಸ್ಟೆಲ್ ಹೆಲಿಕಾಪ್ಟರ್ ಕಳುಹಿಸಲಾಗಿದೆ. ವಿಮಾನದ ಪೈಲಟ್ ಅವರನ್ನು ಪ್ರಭಾಕರ ಪ್ರಸಾದ್ […]

ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ Read More »

ಸೇನಾ ವಾಹನ ಅಪಘಾತ| ಏಳು ಮಂದಿ ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಶುಕ್ರವಾರ (ಮೇ 27) ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ. 26 ಯೋಧರಿದ್ದ ಸೇನಾ ವಾಹನವು ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಹುತಾತ್ಮರಾಗಿದ್ದಾರೆ. ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ

ಸೇನಾ ವಾಹನ ಅಪಘಾತ| ಏಳು ಮಂದಿ ಯೋಧರು ಹುತಾತ್ಮ Read More »

ವೇಶ್ಯಾವಾಟಿಕೆ‌ ಅಪರಾದವಲ್ಲ – ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಲೈಂಗಿಕ ಚಟುವಟಿಕೆ ಕಾನೂನುಬದ್ಧ ಎಂದು ಘೋಷಿಸಿರುವ ಸುಪ್ರೀಂಕೋರ್ಟ್‌, ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಲಿ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಿದೆ. ವೇಶ್ಯಾವಾಟಿಕೆ ಎನ್ನುವುದು ವೃತ್ತಿಪರ ಕೆಲಸ. ಲೈಂಗಿಕ ಕಾರ್ಯಕರ್ತೆಯರಿಗೂ ದೇಶದ ಕಾನೂನಿನ ಅಡಿಯಲ್ಲಿ ಸಮಾಜ ಗೌರವ ಹಾಗೂ ಎಲ್ಲರಂತೆ ಸಮಾನ ರೀತಿಯಲ್ಲಿ ಬದುಕುವ ಹಕ್ಕು ಇದೆ ಎಂದು ಹೇಳಿದೆ. ನ್ಯಾಯಮೂರ್ತಿ ನಾಗೇಶ್ವರ ರಾವ್‌ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧ

ವೇಶ್ಯಾವಾಟಿಕೆ‌ ಅಪರಾದವಲ್ಲ – ಸುಪ್ರೀಂಕೋರ್ಟ್ Read More »

ಪ್ರಧಾನಿಯಾಗಿ‌ 8 ವರ್ಷ ಪೂರೈಸಿದ ನರೇಂದ್ರ ಮೋದಿ| ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

ಸಮಗ್ರ ನ್ಯೂಸ್: ನರೇಂದ್ರ ಮೋದಿ ಅವರು, ದೇಶದ ಪ್ರಧಾನಿಯಾಗಿ ಇಂದು (ಮೇ.26) 8 ವರ್ಷ ಪೂರ್ಣಗೊಳ್ಳಲಿದೆ. ಈ ದಿನದಂದು ಅವರು ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2019ರಲ್ಲಿ ಪುನಃ ಅಧಿಕಾರಕ್ಕೆ ಬಂದಿದ್ದರು. 2ನೇ ಅವಧಿಯಲ್ಲಿ ಅವರು ಮೇ 30ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಮೋದಿ ಅಧಿಕಾರಕ್ಕೆ ಬಂದು 8

ಪ್ರಧಾನಿಯಾಗಿ‌ 8 ವರ್ಷ ಪೂರೈಸಿದ ನರೇಂದ್ರ ಮೋದಿ| ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ Read More »

ಉಗ್ರ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ಪ್ರಕಟ

ಸಮಗ್ರ ನ್ಯೂಸ್: ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಮಲಿಕ್​ಗೆ ದೆಹಲಿಯ ಎನ್​​ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ವಿಶೇಷ ಜಡ್ಜ್​​ ಪ್ರವೀಣ್​ ಸಿಂಗ್​​ ಜೀವಾವಧಿ ಶಿಕ್ಷೆ ಜತೆಗೆ 10 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. 2017ರಲ್ಲಿ ಕಾಶ್ಮೀರಿ ಕಣಿವೆಯಲ್ಲಿ ನಡೆದ ಉಗ್ರ ಚಟುವಟಿಕೆಗಳು, ದಾಳಿಗಳಿಗೆ ಆರ್ಥಿಕ ನೆರವು ನೀಡಿರುವ ಪ್ರಕರಣದಲ್ಲಿ ಯಾಸಿನ್ ಮಲಿಕ್ ಕೋರ್ಟ್​ ಎದುರು ತಪ್ಪೊಪ್ಪಿಗೆ ನೀಡಿದ್ದಾನೆ. ಯಾಸಿನ್​ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)

ಉಗ್ರ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ಪ್ರಕಟ Read More »

ಲುಲು ಗ್ರೂಪ್ಸ್ ನಿಂದ ಕರ್ನಾಟಕದಲ್ಲಿ 2 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ| 10 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ

ಸಮಗ್ರ ನ್ಯೂಸ್: ಅಬುದಾಬಿಯ ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ₹ 2 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದು, ಈ ಕುರಿತಂತೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಎ.ವಿ. ಅನಂತರಾಮನ್‌ ಮತ್ತು ರಾಜ್ಯ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಸಹಿ ಹಾಕಿದರು. ಲುಲು

ಲುಲು ಗ್ರೂಪ್ಸ್ ನಿಂದ ಕರ್ನಾಟಕದಲ್ಲಿ 2 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ| 10 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ Read More »

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 8 ರೂ. ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ 6 ರೂ. ಇಳಿಕೆ ಮಾಡಲಾಗಿದೆ.ಅಬಕಾರಿ ಸುಂಕ ಕಡಿತವಾದ ಹಿನ್ನೆಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 9.5 ರೂಪಾಯಿ ಇಳಿಕೆಯಾಗಿದೆ. ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ ನ ಮೇಲೆ 6 ರೂ.ನಷ್ಟು ಕಡಿಮೆ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ Read More »

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು ರಪ್ತಿಗೆ ಸುಪ್ರಿಂ ಗ್ರೀನ್ ಸಿಗ್ನಲ್

ಸಮಗ್ರನ್ಯೂಸ್: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ ಉತ್ಖನನ ಮಾಡಿದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿಗಾರಿಕೆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿ ಕಬ್ಬಿಣದ ಅದಿರಿನ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಿತು ಮತ್ತು ಅಧಿಕಾರಿಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವಂತೆ ಸಂಸ್ಥೆಗಳಿಗೆ ಸೂಚಿಸಿತು. ಈಗಾಗಲೇ ಅಗೆದ ಕಬ್ಬಿಣದ ಅದಿರು ದಾಸ್ತಾನನ್ನು

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರು ರಪ್ತಿಗೆ ಸುಪ್ರಿಂ ಗ್ರೀನ್ ಸಿಗ್ನಲ್ Read More »

ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ‌ ಶಿವಲಿಂಗ ಪತ್ತೆ| ಮಸೀದಿ ಸುತ್ತ ಪೊಲೀಸ್ ಸರ್ಪಗಾವಲು

ಸಮಗ್ರ ನ್ಯೂಸ್: ವಿವಾದಿತ ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ ಶಿವಲಿಂಗ ಪತ್ತೆಯಾಗಿದ್ದು, ಶಿವಲಿಂಗ ಪತ್ತೆಯಾದ ಸ್ಥಳಕ್ಕೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆಯಲ್ಲದೆ, ಅದರ 100 ಅಡಿ ವ್ಯಾಪ್ತಿ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಸಿಆರ್ ಪಿಎಫ್ ಕಮಾಂಡೆಟ್ ಗೆ ಶಿವಲಿಂಗ ಸ್ಥಳದ ರಕ್ಷಣೆ ಜವಾಬ್ದಾರಿ ನೀಡಲಾಗಿದೆ. ಯಾವುದೇ ವ್ಯಕ್ತಿ ಅಲ್ಲಿ ಪ್ರವೇಶಿಸುವಂತಿಲ್ಲ ಎಂದು ಆದೇಶಿಸಲಾಗಿದೆ. ಕೋರ್ಟ್ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಸಮೀಕ್ಷೆ ಹಾಗೂ ವಿಡಿಯೋ ಚಿತ್ರಿಕರಣ ನಡೆಸಲಾಗಿದ್ದು , ಇಂದು ಸಮೀಕ್ಷೆ ಬಹುತೇಕ

ಕಾಶಿ ಜ್ಞಾನವ್ಯಾಪಿ ಮಸೀದಿಯಲ್ಲಿ 12 ಅಡಿ‌ ಶಿವಲಿಂಗ ಪತ್ತೆ| ಮಸೀದಿ ಸುತ್ತ ಪೊಲೀಸ್ ಸರ್ಪಗಾವಲು Read More »

ಭಾರೀ ಮಳೆ ಸಾಧ್ಯತೆ; ಮುಂದಿನ 4 ದಿನ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು,ರಾಜ್ಯದಲ್ಲಿ‌ ಮೇ 18 ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಲ್ಲದೆ, ಮೇ,18,19ರಂದು ಈ ಜಿಲ್ಲೆಗಳಲ್ಲಿ ಇನ್ನಷ್ಟು ಹೆಚ್ಚು ಮಳೆ ಬೀಳಲಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂ.ಗ್ರಾಮಾಂತರ,

ಭಾರೀ ಮಳೆ ಸಾಧ್ಯತೆ; ಮುಂದಿನ 4 ದಿನ ಅಲರ್ಟ್ Read More »