ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಭಯಾನಕ ವಿಚಾರ| ಸಿಧು ಮೂಸೆವಾಲಾ ಹತ್ಯೆಯಲ್ಲಿ ಬುಲೆಟ್ ಗಳದ್ದೇ ಕಾರುಬಾರು!!
ಸಮಗ್ರ ನ್ಯೂಸ್: ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೇವಾಲಾ ಅಂತಿಮ ಯಾತ್ರೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮೂಸೇವಾಲಾ ಅವರ ಅಂತಿಮ ಸಂಸ್ಕಾರ ನೆರವೇರಲಿದೆ. ಏತನ್ಮಧ್ಯೆ, ವರದಿಯ ಬಗ್ಗೆ ವೈದ್ಯರು ಬಹಿರಂಗಪಡಿಸಿದ ಸಂಗತಿಗಳು ಬಹಳ ಭಯಾನಕವಾಗಿವೆ. ಸೋಮವಾರ ರಾತ್ರಿ ಐವರು ವೈದ್ಯರ ಸಮಿತಿಯು ಸಿಧು ಮೂಸೇವಾಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಆದರೆ, ಇದುವರೆಗೆ ಪ್ರಧಾನಿ ವರದಿಯನ್ನು ವೈದ್ಯರು ಯಾರಿಗೂ ಹೇಳಿಲ್ಲ. […]