ರಾಜಾಸ್ಥಾನ: ವಾಯುಪಡೆಯ ಮಿಗ್21 ವಿಮಾನ ಪತನ; ಪೈಲಟ್ ಗಳು ಸಾವು
ಸಮಗ್ರ ನ್ಯೂಸ್: ಭಾರತೀಯ ವಾಯುಪಡೆಯ (IAF) ಮಿಗ್ -21 ವಿಮಾನವು ಗುರುವಾರ ರಾತ್ರಿ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾರ್ಮರ್ʼನ ಭೀಮ್ಡಾ ಗ್ರಾಮದಲ್ಲಿ ಮಿಗ್ ಅಪಘಾತಕ್ಕೀಡಾಗಿದ್ದು, ಜೋರಾದ ಶಬ್ದದೊಂದಿಗೆ ಬೆಂಕಿಯ ದೊಡ್ಡ ಜ್ವಾಲೆಗಳನ್ನ ಜನರು ನೋಡಿದ್ದು ಮಿಗ್ ಅಪಘಾತದ ಸುದ್ದಿ ಕೋಲಾಹಲವನ್ನ ಸೃಷ್ಟಿಸಿದೆ. ಸಧ್ಯ ಸ್ಥಳಕ್ಕೆ ಅಧಿಕಾರಿಗಳು ತೆರಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಪಘಾತವು ಎಷ್ಟು ಗಂಭೀರವಾಗಿದೆಯೆಂದರೆ ಮಿಗ್ʼನ ಅವಶೇಷಗಳು ಅರ್ಧ ಕಿಲೋಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು […]
ರಾಜಾಸ್ಥಾನ: ವಾಯುಪಡೆಯ ಮಿಗ್21 ವಿಮಾನ ಪತನ; ಪೈಲಟ್ ಗಳು ಸಾವು Read More »