ರಾಷ್ಟ್ರೀಯ

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಕ್ಕಿದ ದುಷ್ಕರ್ಮಿಗಳು| ಸಚಿವ ನಬಾದಾಸ್ ಸ್ಥಿತಿ‌ ಚಿಂತಾಜನಕ

ಸಮಗ್ರ ನ್ಯೂಸ್: ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಎದೆಗೆ ಬಿದ್ದಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಅನಾಮಿಕರು ವ್ಯಕ್ತಿಗಳು ಹಾರಿಸಿದ ಗುಂಡು ಸಚಿವರ ಎದೆ ಹೊಕ್ಕಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಸಚಿವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ನಬಾ ದಾಸ್ ಅವರು ವಾಹನದಿಂದ ಇಳಿಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ […]

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಕ್ಕಿದ ದುಷ್ಕರ್ಮಿಗಳು| ಸಚಿವ ನಬಾದಾಸ್ ಸ್ಥಿತಿ‌ ಚಿಂತಾಜನಕ Read More »

ಕೇಂದ್ರಸರ್ಕಾರದಿಂದ ಪದ್ಮ ಪ್ರಶಸ್ತಿ ಘೋಷಣೆ| ಮಾಜಿ ಸಿಎಂ ಎಸ್.ಎಂ ಕೃಷ್ಣ, ಸುಧಾಮೂರ್ತಿ, ಎಸ್.‌ಎಲ್ ಬೈರಪ್ಪ ಸೇರಿ‌ 106 ಸಾಧಕರಿಗೆ ಪುರಸ್ಕಾರ

ಸಮಗ್ರ ನ್ಯೂಸ್: 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನು ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಲ್, ಉಮ್ಮಥಾಟ್ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಸೇರಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. 2023ನೇ ಸಾಲಿಗೆ 106 ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಕೇಂದ್ರಸರ್ಕಾರದಿಂದ ಪದ್ಮ ಪ್ರಶಸ್ತಿ ಘೋಷಣೆ| ಮಾಜಿ ಸಿಎಂ ಎಸ್.ಎಂ ಕೃಷ್ಣ, ಸುಧಾಮೂರ್ತಿ, ಎಸ್.‌ಎಲ್ ಬೈರಪ್ಪ ಸೇರಿ‌ 106 ಸಾಧಕರಿಗೆ ಪುರಸ್ಕಾರ Read More »

ದೆಹಲಿಯಲ್ಲಿ ಪ್ರಬಲ ಭೂಕಂಪ; ಮನೆ ಬಿಟ್ಟು ಹೊರಗೋಡಿದ ಜನ

ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದೆಹಲಿ ಹಾಗೂ ಉತ್ತರಾಖಂಡ್​ನ ಹಲವೆಡೆ 35 ಸೆಕೆಂಡ್​ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಇದರಿಂದ ದೆಹಲಿಯಲ್ಲಿ ಜನರು ಭಯ ಭಯಗೊಂಡು ಮನೆ, ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ ಎಂದು ತಿಳಿದುಬಂದಿದೆ. ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ಹೊರಬರಬೇಕಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.

ದೆಹಲಿಯಲ್ಲಿ ಪ್ರಬಲ ಭೂಕಂಪ; ಮನೆ ಬಿಟ್ಟು ಹೊರಗೋಡಿದ ಜನ Read More »

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಅಧಿಕಾರಿ ಎಂದು ಹೇಳಿಕೊಂಡು 23 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಂಚತಾರಾ ಹೋಟೆಲ್​ಗೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಷರೀಫ್ (41) ಬಂಧಿತ ವ್ಯಕ್ತಿ. ಬಂಧಿತ ಮಹಮ್ಮದ್ ಷರೀಫ್ ಕರ್ನಾಟಕದ ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಕಲಿ ವ್ಯಾಪಾರ ಕಾರ್ಡ್​​​ನ್ನು ಬಳಸಿಕೊಂಡು ಸುಮಾರು ಮೂರು ತಿಂಗಳ ಕಾಲ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಹಮ್ಮದ್ ಷರೀಫ್ ಮೂರು

ಯುಎಇ ಅಧಿಕಾರಿ‌ ಸೋಗಿನಲ್ಲಿ ದೆಹಲಿಯ ಪೈವ್ ಸ್ಟಾರ್ ಹೊಟೇಲ್ ಗೆ ಪಂಗನಾಮ| ಬಿಲ್ ಪಾವತಿಸದೆ ಪರಾರಿಯಾದಾತ ಮಂಗಳೂರಿನಲ್ಲಿ ಅರೆಸ್ಟ್ Read More »

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ

ನವದೆಹಲಿ: 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಇದೇ ಮೊದಲ ಬಾರಿಗೆ ಆಹ್ವಾನಿಸಲಾಗಿದೆ. ಅಧ್ಯಕ್ಷ ಅಲ್-ಸಿಸಿ ಜ. 24 ರಿಂದ 26 ರವರೆಗೆ ಭಾರತದಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್ ನ ಅಧ್ಯಕ್ಷರೊಂದಿಗೆ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇರಲಿದೆ.

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ Read More »

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ

ಸಮಗ್ರ ನ್ಯೂಸ್: ಸ್ವದೇಶಿ ಲಸಿಕೆ ತಯಾರಕ ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ ಕೊವಾಕ್ ಅನ್ನು ಜ.26ರಂದು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಿಳಿಸಿದ್ದಾರೆ. ಭೋಪಾಲ್‌ನಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಲಾ, ಜಾನುವಾರುಗಳಲ್ಲಿನ ಗಡ್ಡೆಯ ಚರ್ಮದ ಕಾಯಿಲೆಗೆ ಸ್ವದೇಶಿ ಲಸಿಕೆ, ಲುಂಪಿ-ಪ್ರೊವಾಕ್‌ಇಂಡ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜ.26

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ Read More »

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ

ಸಮಗ್ರ ನ್ಯೂಸ್: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ನಾಗ್ಪುರ ಪೊಲೀಸರು ತನಿಖೆ ಸಚಿವರಿಗೆ ಜೀವ ಬೆದರಿಕೆಯನ್ನು ಹಾಕಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ದಕ್ಷಿಣ ಕನ್ನಡ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ Read More »

ಯುವಭಾರತದ ರಾಯಬಾರಿ ಈ ಸನ್ಯಾಸಿ

“ಶಕ್ತಿಯೇ ಜೀವನ ದುರ್ಭಲತೆಯೇ ಮರಣ ಜಗತ್ತು ಶಕ್ತಿಯನ್ನು ಪುಜಿಸುತ್ತದೇ ಹೊರತು ದುರ್ಭಲತೆಯನ್ನಲ್ಲ” ಎಂದು ಜಗತ್ತಿಗೆ ಸಾರಿ ಹೇಳಿ ಯುವಕರ ಮನದಲ್ಲಿ ಮಲಗಿರುವ ಚೈತನ್ಯವನ್ನು ಬಡಿದೆಬ್ಬಿಸಿ ದೇಶಕಟ್ಟಲು ಪ್ರೇರಣೆ ನೀಡಿದರು ಸಿಡಿಲ ಸನ್ಯಾಸಿ. ದೈಹಿಕ, ಹಾಗೂ ಮಾನಸಿಕ ಶಕ್ತಿ ಗಳಿಸುವ ಮೂಲಕ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದು ಸಾರಿ ಸಾರಿ ಹೇಳಿದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ತಮ್ಮ ಚಿಂತನೆಗಳು ಶಾಶ್ವತವಾಗಿ ಈ ದೇಶದಲ್ಲಿ ಉಳಿದು ದೇಶಕಟ್ಟುವ ಕೆಲಸ ಸದಾ ನಡೆಯಬೇಕು ಎಂದು ತಮ್ಮ ಗುರುಗಳ ಆದರ್ಶ

ಯುವಭಾರತದ ರಾಯಬಾರಿ ಈ ಸನ್ಯಾಸಿ Read More »

ಮಂಗಳೂರು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ

ಸಮಗ್ರ ನ್ಯೂಸ್: ಮಂಗಳೂರು ಮತ್ತು ಇತರ ಏಳು ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದೆ. ರಿಲಯನ್ಸ್ ಜಿಯೋ ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಜಿಯೊ ಗ್ರಾಹಕರು 5 ಜಿ ವೆಲ್‍ಕಮ್ ಆಫರ್ ನಡಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಇಂದಿನಿಂದ ಪಡೆಯಬಹುದಾಗಿದೆ ಎಂದು ಜಿಯೋ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಇನ್ನು ಮಂಗಳೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ

ಮಂಗಳೂರು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ Read More »

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್

ನವದೆಹಲಿ: ಸರ್ಕಾರದ ಭಾರತೀಯ ಮಾನದಂಡಗಳ ಬ್ಯೂರೊ ಮೂರು ಬಗೆಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಗುಣಮಟ್ಟದ ಮಾನದಂಡಗಳ ಹೆಸರಿನಲ್ಲಿ ಹೊಸ ನಿಯಮಾವಳಿಗಳನ್ನ ತಂದಿದೆ. ಈ ನಿಯಮಗಳು ಡಿಜಿಟಲ್ ಟೆಲಿವಿಷನ್ ರಿಸೀವರ್ಗಳು, ಯುಎಸ್ಬಿ ಟೈಪ್-ಸಿ ಚಾರ್ಜರ್ಗಳು ಮತ್ತು ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಗೆ ಅನ್ವಯಿಸುತ್ತವೆ. ದೂರದರ್ಶನದಂತಹ ಚಾನಲ್‌ಗಳನ್ನು ಸೆಟ್-ಟಾಪ್ ಬಾಕ್ಸ್ ಇಲ್ಲದೆ ಟಿವಿಗಳಲ್ಲಿ ಪ್ರಸಾರ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಒಳಗೊಂಡಿರುತ್ತದೆ. ಲ್ಯಾಪ್ಟಾಪ್‌‌ಗಳು, ನೋಟ್ಬುಕ್‌ಗಳು, ಮೊಬೈಲ್‌ಗಳಂತಹ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅನುಕೂಲಕರವಾಗಿ ಸಂಪರ್ಕಿಸಲು ಸಾರ್ವತ್ರಿಕ ಚಾರ್ಜರ್, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿಎಸೆಸ್ ಅನ್ನು

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ Read More »