ಟರ್ಕಿ, ಸಿರಿಯಾದಲ್ಲಿ 7.8 ತೀವ್ರತೆಯ ಭೀಕರ ಭೂಕಂಪ| 100ಕ್ಕೂ ಹೆಚ್ಚು ಮಂದಿ ಸಾವು| ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ; ಅಪಾರ ಹಾನಿ
ಸಮಗ್ರ ನ್ಯೂಸ್: ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಅನೇಕರು ಮಲಗಿದ್ದಾಗಲೇ ಕಟ್ಟಡಗಳು ನೆಲಚ್ಚಿದ್ದು ಭೂಮಿ ಸೈಪ್ರಸ್ ಮತ್ತು ಈಜಿಪ್ಟ್ವರೆಗೆ ಕಂಪಿಸಿದೆ. ಟರ್ಕಿಯಲ್ಲಿನ ತುರ್ತು ಸೇವಾ ಅಧಿಕಾರಿಗಳು ಆರಂಭಿಕ ಸಾವಿನ ಸಂಖ್ಯೆಯನ್ನು 76 ಎಂದು ಹೇಳಿದ್ದು, ಇದು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿಯ ದುರಂತ, ಪ್ರಮುಖ ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮ ಆಗಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಿರಿಯಾದ ಸರ್ಕಾರದ ನಿಯಂತ್ರಣ ಇರುವ ಭಾಗಗಳಲ್ಲಿ ಮತ್ತು […]