ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ರಾಷ್ಟ್ರಪತಿ ಸಂದೇಶ| ‘ಯಾವುದೇ ಗುರುತು ಇದ್ದರೂ ಭಾರತೀಯ ಎನ್ನುವುದೇ ಹೆಗ್ಗುರುತು’ – ದ್ರೌಪದಿ ಮುರ್ಮು
ಸಮಗ್ರ ನ್ಯೂಸ್: ಪ್ರತಿಯೊಬ್ಬ ಭಾರತೀಯನು ಜಾತಿ, ಧರ್ಮ, ಭಾಷೆಯಂತಹ ಅನೇಕ ಗುರುತುಗಳನ್ನು ಹೊಂದಿದ್ದಾನೆ. ಆದರೆ ಭಾರತೀಯ ಪ್ರಜೆ ಎಂಬ ಗುರುತು ಅದೆಲ್ಲವುಗಳಿಗಿಂತಲೂ ಹೆಚ್ಚಿನ ಸ್ಥಾನಮಾನವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಮಂಗಳವಾರ ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಇದಕ್ಕೂ ಮುನ್ನಾ ಸೋಮವಾರ ಸಂಜೆ ಸ್ವಾತಂತ್ರ್ಯೋತ್ಸವ ಮತ್ತು ದೇಶವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು. ಭಾಷಣ ಆರಂಭಕ್ಕೂ ಮುನ್ನ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಿಳಾ […]