ರಾಷ್ಟ್ರೀಯ

ಪುಟ್ಟ ಮಗುವಿನೊಂದಿಗೆ ಬೈಕ್ ನಲ್ಲಿ ಉಮ್ಲಿಂಗ್ ಲಾ ಪ್ರವಾಸ| ದಾಖಲೆ ನಿರ್ಮಿಸಿದ ಸುಳ್ಯದ ದಂಪತಿ|

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉದ್ಯಮಿಯೊಬ್ಬರು ಪತ್ನಿ ಮತ್ತು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸುಮಾರು 19,024 ಅಡಿ ಎತ್ತರದ ಉಮ್ಲಿಂಗ್ ಲಾ ಪ್ರದೇಶವನ್ನು ಬೈಕ್‌ನಲ್ಲಿ ತಲುಪಿದ್ದು, ಇದೀಗ ಸುಳ್ಯಕ್ಕೆ ವಾಪಸಾಗುತ್ತಿದ್ದಾರೆ. ಸುಳ್ಯ ತಾಲೂಕಿನ ನಿವಾಸಿಯಾದ ಮತ್ತು ಇಲ್ಲಿನ ಹಳೆಗೇಟ್‌ ಎಂಬಲ್ಲಿರುವ ಹೋಮ್ ಗ್ಯಾಲರಿ ಮಾಲೀಕರಾದ ತೌಹೀದ್ ರೆಹ್ಮಾನ್ ಹಾಗೂ ಅವರ ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ತಮ್ಮ ಬುಲೆಟ್‌ ಬೈಕ್‌ನಲ್ಲಿ ಉಮ್ಮಿಂಗ್ ಲಾ ತಲುಪಿದ ದಂಪತಿ. ಮೌಂಟ್ ಎವರೆಸ್ಟ್ […]

ಪುಟ್ಟ ಮಗುವಿನೊಂದಿಗೆ ಬೈಕ್ ನಲ್ಲಿ ಉಮ್ಲಿಂಗ್ ಲಾ ಪ್ರವಾಸ| ದಾಖಲೆ ನಿರ್ಮಿಸಿದ ಸುಳ್ಯದ ದಂಪತಿ| Read More »

ಚಂದ್ರಯಾನ-3ರ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಿಜ್ಞಾನಿ ಹೃದಯಾಘಾತದಿಂದ ನಿಧನ

ನವದೆಹಲಿ: ಶ್ರೀಹರಿಕೋಟಾದಲ್ಲಿ (Sriharikota) ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿ ವಲರ್ಮತಿಯರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ದೇಶದ ಮೂರನೇ ಚಂದ್ರಯಾನವಾದ ಚಂದ್ರಯಾನ-3 ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಇವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು. ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3

ಚಂದ್ರಯಾನ-3ರ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಿಜ್ಞಾನಿ ಹೃದಯಾಘಾತದಿಂದ ನಿಧನ Read More »

ಉಚಿತ ಯೋಜನೆ ತಾತ್ಕಾಲಿಕವಾಗಿ ರಾಜಕೀಯ ಲಾಭ ತರಬಹುದು|ಆದರೆ ದೇಶಕ್ಕೆ ಹಾನಿ-ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅತ್ಯವಶ್ಯಕ. ಆರ್ಥಿಕ ಶಿಸ್ತಿನ ತಿಳುವಳಿಕೆ ಹೊಂದಿರಬೇಕು. ಉಚಿತ ಯೋಜನೆ ತಾತ್ಕಾಲಿಕವಾಗಿ ರಾಜಕೀಯಕ್ಕೆ ಲಾಭ ತರಬಹುದು ಆದರೆ ಇದರಿಂದ ದೇಶಕ್ಕೆ ದೊಡ್ಡ ಹಾನಿ ಎಂದು ಪ್ರಧಾನಿ ಮೋದಿ ಯವರು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ನೇರವಾಗಿ ಹಾಗೂ ಎಚ್ಚರಿಕೆ ನೀಡಿದ್ದಾರೆ. ಜಿ20 ಶೃಂಗಸಭೆ ಹಿನ್ನಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವಂತ ಅವರು, ಬೇಜವಾಬ್ದಾರಿತದನ ಹಣಕಾಸು ನೀತಿಗಳು ಹಾಗೂ ಜನಪ್ರಿಯ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ರಾಜಕೀಯ ಲಾಭವನ್ನು ತಂದುಕೊಡಬಲ್ಲದು. ಆದರೇ ಇಂತಹ ಕೊಡುಗೆಗಳಿಂದ

ಉಚಿತ ಯೋಜನೆ ತಾತ್ಕಾಲಿಕವಾಗಿ ರಾಜಕೀಯ ಲಾಭ ತರಬಹುದು|ಆದರೆ ದೇಶಕ್ಕೆ ಹಾನಿ-ಪ್ರಧಾನಿ ಮೋದಿ Read More »

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್​ ಸಾಫ್ಟ್​ ಲ್ಯಾಂಡಿಂಗ್ ಮೂಲಕ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಅದಕ್ಕೆ ಸಂಬಂಧಿಸಿದಂತೆ ಇಸ್ರೋದಿಂದ ಮಹತ್ವದ ಅಪ್​ಡೇಟ್​ವೊಂದು ಹೊರಬಿದ್ದಿದೆ. ಚಂದ್ರಯಾನ-3 ಮಿಷನ್​ನ ರೋವರ್​​ನ ಅಸೈನ್​ಮೆಂಟ್​ಗಳು ಮುಗಿದಿದ್ದು, ಅದೀಗ ಸುರಕ್ಷಿತವಾಗಿ ನಿಲುಗಡೆ ಹೊಂದಿದ್ದು, ಸ್ಲೀಪ್​ ಮೋಡ್​ನಲ್ಲಿ ಇದೆ. ಎಪಿಎಕ್ಸ್​ಎಸ್​ ಮತ್ತು ಎಲ್​ಐಬಿಎಸ್​ ಪೇಲೋಡ್​ಗಳು ಕೂಡ ಟರ್ನ್​ ಆಫ್​ ಆಗಿದ್ದು, ಅಲ್ಲಿನ ಡೇಟಾ ಲ್ಯಾಂಡರ್​ ಮೂಲಕ ಭೂಮಿಗೆ ರವಾನೆ ಆಗಲಿದೆ ಎಂದು ಇಸ್ರೋ ತಿಳಿಸಿದೆ. ಸದ್ಯ ಬ್ಯಾಟರಿ

ನಿದ್ರೆಗೆ ಜಾರಿದ ಪ್ರಗ್ಯಾನ್| ಇಸ್ರೋದಿಂದ ಮಹತ್ವದ ಮಾಹಿತಿ ಬಿಡುಗಡೆ Read More »

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ?

ಸಮಗ್ರ ನ್ಯೂಸ್: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ (ISRO) ತಿಳಿಸಿದೆ. ಆ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಕ್ಷಣಕ್ಕೆ ಶ್ರೀಹರಿಕೋಟಾದಲ್ಲಿ ಸೇರಿದ್ದ ಸಾವಿರಾರು

ಇಸ್ರೋ ಸೂರ್ಯಶಿಕಾರಿ ಸಕ್ಸಸ್| ಆದಿತ್ಯ‌ L-1 ಯಾಕೆ ಇಂಪಾರ್ಟೆಂಟ್ ಗೊತ್ತಾ? Read More »

ಲೋಕಸಭಾ ಚುನಾವಣೆ ಹಿನ್ನಲೆ| ಬಿಜೆಪಿಯಿಂದ ದೇಶಾದ್ಯಂತ ಕಾಲ್ ಸೆಂಟರ್‌ ಸ್ಥಾಪನೆಗೆ ಸಿದ್ಧತೆ

ಸಮಗ್ರ ನ್ಯೂಸ್: ಮುಂಬರುವ ಪಂಚರಾಜ್ಯ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಹೆಚ್ಚು ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ದೇಶಾದ್ಯಂತ 200ಕ್ಕೂ ಹೆಚ್ಚು ಕಾಲ್ ​​ಸೆಂಟರ್​ಗಳನ್ನು ತೆರೆಯಲು ಸಿದ್ದತೆ ನಡೆಸಿದೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮುಂದಾಗಿದೆ. ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​ ಹಾಗೂ ಸುನೀಲ್​ ಬನ್ಸಾಲ್​ ಇದರ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಕಾಲ್ ​ಸೆಂಟರ್​ಗಳನ್ನು

ಲೋಕಸಭಾ ಚುನಾವಣೆ ಹಿನ್ನಲೆ| ಬಿಜೆಪಿಯಿಂದ ದೇಶಾದ್ಯಂತ ಕಾಲ್ ಸೆಂಟರ್‌ ಸ್ಥಾಪನೆಗೆ ಸಿದ್ಧತೆ Read More »

ಭಾರತೀಯ ರೈಲ್ವೆ ಇಲಾಖೆ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಾರೀಶಕ್ತಿಗೆ ಒಲಿದ ಪ್ರಮುಖ ಹುದ್ದೆ| ರೈಲ್ವೇ ಮಂಡಳಿ ಅಧ್ಯಕ್ಷರಾಗಿ ಜಯಾ ವರ್ಮಾ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ರೈಲ್ವೆ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರನ್ನಾಗಿ ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಈ ಮೂಲಕ 166 ವರ್ಷಗಳ ರೈಲ್ವೆ ಇತಿಹಾಸದಲ್ಲೇ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಜಯ ವರ್ಮಾ ಸಿನ್ಹಾ ಪಾತ್ರರಾಗಿದ್ದಾರೆ. ಸಿಇಒ ಮತ್ತು ಅಧ್ಯಕ್ಷರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ದೇಶದ ರೈಲ್ವೆಯ ಅತ್ಯುನ್ನತ ಹುದ್ದೆಯಾಗಿದೆ. ಅನಿಲ್‌ ಕುಮಾರ್‌ ಲಹೋಟಿ ಅವರಿಂದ ತೆರವಾದ ಸ್ಥಾನಕ್ಕೆ ಜಯ ವರ್ಮಾ ಸಿನ್ಹಾ ನೇಮಕಗೊಂಡಿದ್ದು, ಶುಕ್ರವಾರ

ಭಾರತೀಯ ರೈಲ್ವೆ ಇಲಾಖೆ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಾರೀಶಕ್ತಿಗೆ ಒಲಿದ ಪ್ರಮುಖ ಹುದ್ದೆ| ರೈಲ್ವೇ ಮಂಡಳಿ ಅಧ್ಯಕ್ಷರಾಗಿ ಜಯಾ ವರ್ಮಾ ಅಧಿಕಾರ ಸ್ವೀಕಾರ Read More »

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1

ಸಮಗ್ರ ನ್ಯೂಸ್: ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದ್ದು, ಇಂದು ಬೆಳಗ್ಗೆ 11.50ಕ್ಕೆ ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆಗೆ ಸಜ್ಹಾಗಿದೆ. ವಿಶ್ವದ ಕಣ್ಣು ಈಗ ಇಸ್ರೋದ ಸೂರ್ಯ ಮಿಷನ್ ಆದಿತ್ಯ ಎಲ್ -1 ಮೇಲೆ ನೆಟ್ಟಿದೆ. ಪಿಎಸ್‌ಎಲ್ವಿ-ಎಕ್ಸ್‌ಎಲ್ ರಾಕೆಟ್ ಸಹಾಯದಿಂದ ಇಸ್ರೋ ಇಂದು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇದರ ನಂತರ, ಅದನ್ನು ಎಲ್ 1 ಪಾಯಿಂಟ್ ಗೆ ಸಾಗಿಸಲಾಗುತ್ತದೆ. ಈ ಹಂತವನ್ನು ತಲುಪಿದ ನಂತರ, ಆದಿತ್ಯ ಎಲ್

ಇಂದು ಇಸ್ರೋದಿಂದ ಸೂರ್ಯಶಿಕಾರಿ| ಮತ್ತೊಂದು ಐತಿಹಾಸಿಕ ಹೆಜ್ಜೆ ಆದಿತ್ಯ L-1 Read More »

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ

ಸಮಗ್ರ ನ್ಯೂಸ್: ಚಂದ್ರಯಾನ-3ರ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ತನ್ನ ವೈಜ್ಞಾನಿಕ ಸಂಶೋದನೆ ಮುಂದುವರೆಸಿದ್ದು ಇದೀಗ ರೋವರ್‌ನ ಮತ್ತೊಂದು ಡಿವೈಸ್‌ ಚಂದ್ರನ ಮೇಲ್ಲೈನಲ್ಲಿ ಸಲ್ಫರ್‌ ಇರೋದನ್ನ ಕನ್ಫರ್ಮ್‌ ಮಾಡಿದೆ. ರೋವರ್‌ನಲ್ಲಿರುವ Alpha Particle X-ray Spectroscope (APXS) ಸಲ್ಫರ್‌ ಇರುವಿಕೆ ಹಾಗೂ ಇನ್ನಿತರ ಮೈನರ್‌ ಪಾರ್ಟಿಕಲ್‌ಗಳನ್ನ ಪತ್ತೆಮಾಡಿದೆ ಅಂತ ಇಸ್ರೋ ಹೇಳಿದೆ. ಜೊತೆಗೆ ಚಂದ್ರನ ಮೇಲೆ ಸುರಕ್ಷಿತ ಜಾಗಕ್ಕಾಗಿ, ರೋವರ್‌ ಗಿರ ಗಿರ ಅಂತ ತಿರುಗುತ್ತಾ ಇರೋ ವಿಡಿಯೋ ಒಂದನ್ನ ಇಸ್ರೋ ಶೇರ್‌ ಮಾಡಿದೆ. ಈ ತಿರುಗುವಿಕೆಯನ್ನು

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್ ತುಂಟಾಟ| ಭಾವುಕ ವಿಡಿಯೋ ಹಂಚಿಕೊಂಡ ಇಸ್ರೋ Read More »

ಕುಮಟಾದಲ್ಲಿ ಭಾರತದ ಅತೀ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ| ಉರಗ ತಜ್ಞರಿಂದ ರಕ್ಷಣೆ

ಸಮಗ್ರ ನ್ಯೂಸ್: ಭಾರತದಲ್ಲೇ ಅತೀ ದೊಡ್ಡ ಮತ್ತು ಅತ್ಯಂತ ಅಪರೂಪದ ಬಿಳಿ‌ ಹೆಬ್ಬಾವು ಉ.ಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಗಿದೆ. ಬಿಳಿ ಹೆಬ್ಬಾವು ಕಾಣಿಸಿದ್ದು, ಉರಗ ತಜ್ಞ ಪವನ್ ನಾಯ್ಕ ಅವರು ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು.

ಕುಮಟಾದಲ್ಲಿ ಭಾರತದ ಅತೀ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ| ಉರಗ ತಜ್ಞರಿಂದ ರಕ್ಷಣೆ Read More »