ರಾಷ್ಟ್ರೀಯ

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್

ಸಮಗ್ರ ನ್ಯೂಸ್: ಜನಪ್ರಿಯ ಮೆಸೆಂಜರ್‌ ಆಯಪ್ ಆಗಿರುವ ವಾಟ್ಸ್ ಆಯಪ್ ಹೊಸ ‘ವಾಟ್ಸ್ ಆ್ಯಪ್ ಚಾನೆಲ್ಸ್‌’ ಎಂಬ ಫೀಚರ್‌ ಅನ್ನು ಬಿಡುಗಡೆಗೊಳಿಸುತ್ತಿದೆ. ಇದೊಂದು ಏಕಮುಖ ಪ್ರಸಾರ ಪರಿಕರವಾಗಿದ್ದು, ಅಪ್‌ಡೇಟ್ಸ್‌ ಎಂಬ ಹೊಸ ಟ್ಯಾಬ್‌ನಲ್ಲಿ ನಿಮ್ಮ ಆಸಕ್ತಿಯ ಜನರು ಮತ್ತು ಸಂಸ್ಥೆಗಳಿಂದ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ವಾಟ್ಸ್ ಆಯಪ್ ಚಾನಲ್ಸ್‌ ಎಂಬ ಈ ಹೊಸ ಫೀಚರ್‌ ಭಾರತ ಸಹಿತ 150ಕ್ಕೂ ಅಧಿಕ ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಲಭ್ಯವಾಗಲಿದೆ. ಬಳಕೆದಾರರ ದೇಶದ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫಿಲ್ಟರ್‌ ಮಾಡಲಾದ ಚಾನೆಲ್‌ಗಳನ್ನು […]

ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಯಾಪ್ Read More »

ಸಿಂಗಾಪುರದ ಅಧ್ಯಕ್ಷರಾಗಿ‌ ಭಾರತೀಯ ಮೂಲದ ಷಣ್ಮುಗರತ್ನಂ ಆಯ್ಕೆ| ಸೆ.14ರಂದು ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಧರ್ಮನ್ ಷಣ್ಮುಗರತ್ನಂ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಗುರುವಾರ (ಸೆ.14) ಸಿಂಗಾಪುರದ 9 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚೆಗೆ ಷಣ್ಮುಗರತ್ನಂ ಶೇ.70.4ರಷ್ಟು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅಧ್ಯಕ್ಷ ಹಲೀಮಾ ಯಾಕೋಬ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 13 ರಂದು ಕೊನೆಗೊಳ್ಳುತ್ತದೆ. ಭಾರತೀಯ ಮೂಲದ ಧರ್ಮನ್ ಷಣ್ಮುಗರತ್ನಂ ಅವರು ಸೆಪ್ಟೆಂಬರ್ 14 ರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಂಗಾಪುರದಲ್ಲಿ ಚುನಾಯಿತ ಅಧ್ಯಕ್ಷರ ಅಧಿಕಾರಾವಧಿ ಆರು ವರ್ಷಗಳಾಗಿವೆ. 66

ಸಿಂಗಾಪುರದ ಅಧ್ಯಕ್ಷರಾಗಿ‌ ಭಾರತೀಯ ಮೂಲದ ಷಣ್ಮುಗರತ್ನಂ ಆಯ್ಕೆ| ಸೆ.14ರಂದು ಅಧಿಕಾರ ಸ್ವೀಕಾರ Read More »

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಎರಡು ಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಉನ್ನತ ಮಟ್ಟದ ಸಭೆ

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ Read More »

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ

ಸಮಗ್ರ ನ್ಯೂಸ್: ರಾಜ್ಯ ಹಾಗೂರಾಷ್ಟ್ರ ರಾಜಕಾರಣದ ಬಗ್ಗೆ ಇಂದು ಕೋಡಿಮಠದ ಶಿವಾನದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಅಸ್ಥಿರತೆ ಉಂಟಾಗಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ. ಯುಗಾದಿಯ ನಂತ್ರ ಏನಾಗುತ್ತೆ ಅಂತ ಕಾದು ನೋಡಿ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಅಚ್ಚರಿಯನ್ನು ಎದುರು ನೋಡುವಂತೆ ಹೇಳಿದ್ದಾರೆ.

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ Read More »

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ

ಸಮಗ್ರ ನ್ಯೂಸ್: ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗಾಗಿ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ ತಾಂತ್ರಿಕ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಮಾತೃವಂದನಾ ಯೋಜನೆ ಸಾಫ್ಟ್ ವೇರ್ ಅನ್ನು ಮಿಷನ್ ಶಕ್ತಿ 2.O ಸಾಫ್ಟ್ ವೇರ್ ಜೊತೆಗೆ ಜೋಡಿಸಲಾಗಿದ್ದು, ನೂತನ ತಂತ್ರಾಂಶದಲ್ಲಿ ಹಳೆಯ ಡೇಟಾಗಳು ಲಭ್ಯವಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಹಣ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ ಎಂದು ತಿಳದುಬಂದಿದೆ. ಈ ಯೋಜನೆಯಡಿ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ Read More »

ಜಿ-೨೦ ಶೃಂಗಸಭೆಯಲ್ಲಿ ಇಂಡಿಯಾ ಬದಲು ‘ಭಾರತ’ ದರ್ಶನ

ಸಮಗ್ರ ನ್ಯೂಸ್: ದೇಶದ ಹೆಸರು ಬದಲಾವಣೆ ವಿಚಾರ ಭಾರಿ ಚರ್ಚೆಯಲ್ಲಿದ್ದು, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಕೂಡ ‘ಭಾರತ್’ ಹೆಸರಿನ ಪ್ರಸ್ತಾಪ ಬಂದಿದೆ. ಇಂದು ನಡೆಯುತ್ತಿರುವ ಜಿ 20 ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗ ದೇಶದ ಹೆಸರನ್ನು ‘ಭಾರತ್’ ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿ ‘BHARAT’ ಎಂದು ಪ್ರದರ್ಶಿಸಲಾಯಿತು. ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ, ಪ್ರಧಾನಿ ಮೋದಿ ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಯುಎಸ್ ಅಧ್ಯಕ್ಷ ಜೋ

ಜಿ-೨೦ ಶೃಂಗಸಭೆಯಲ್ಲಿ ಇಂಡಿಯಾ ಬದಲು ‘ಭಾರತ’ ದರ್ಶನ Read More »

ಬೆಳ್ಳಂಬೆಳಗ್ಗೆ ಆಂಧ್ರ‌ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್| ಭಾರಿ ಹೈಡ್ರಾಮಾ ಸೃಷ್ಟಿ

ಸಮಗ್ರ ನ್ಯೂಸ್: ಸಿಐಡಿ ಪೊಲೀಸರು ಬೆಳ್ಳಂ ಬೆಳಗ್ಗೆ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದು, ಬಂಧನದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಚಂದ್ರಬಾಬು ಬಂಧಿಸಲು ಪೊಲೀಸರು ಹೋಗಿದ್ದು, ಭಾರಿ ಹೈಡ್ರಾಮಾ ನಡೆದ ನಂತರ ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ. ಬಂಧನದ ವೇಳೆ ವಾಗ್ಧಾಳಿ ನಡೆಸಿ ಚಂದ್ರಬಾಬು ನಾಯ್ಡು ‘ ಸಿಐಡಿ ಪೊಲೀಸರು ನನ್ನ ಹಕ್ಕನ್ನು ಕಸಿಯುವ ಕೆಲಸ ಮಾಡಿದ್ದಾರೆ.ಎಫ್ ಐ ಆರ್ ಮಾಡಿಲ್ಲ, ಯಾವುದೇ ನೋಟಿಸ್ ನೀಡಿಲ್ಲ. ಯಾಕೆ ನನ್ನನ್ನು ಬಂಧಿಸುತ್ತೀರಾ..?

ಬೆಳ್ಳಂಬೆಳಗ್ಗೆ ಆಂಧ್ರ‌ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್| ಭಾರಿ ಹೈಡ್ರಾಮಾ ಸೃಷ್ಟಿ Read More »

ಡಾ.ಬ್ರೋ ಈಗ “ಮ್ಯಾನ್ ಆಪ್ ಮಿಲಿಯನ್ಸ್”| 20 ಲಕ್ಷ SUBSCRIBERS ಪಡೆದ ಕನ್ನಡ ಹುಡುಗ

ಸಮಗ್ರ ನ್ಯೂಸ್: ‘ನಮಸ್ಕಾರ ದೇವ್ರು’ ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ. ಬ್ರೋ (ಗಗನ್ ಶ್ರೀನಿವಾಸ್​) ಈಗ ಮ್ಯಾನ್ ಆಫ್ ಮಿಲಿಯನ್ಸ್ ಆಗಿದ್ದಾರೆ. ಅರ್ಥಾತ್, ಯೂ-ಟ್ಯೂಬ್​ನಲ್ಲಿ ಅವರ ಸಬ್​ಸ್ಕ್ರೈಬರ್ಸ್​ ಸಂಖ್ಯೆ 2 ಮಿಲಿಯನ್ (20) ಲಕ್ಷ ಆಗಿದೆ. ಜೊತೆಗೆ ಅವರ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲೂ ಫಾಲೋವರ್ಸ್ ಸಂಖ್ಯೆ ಈಗಾಗಲೇ ಮಿಲಿಯನ್ ದಾಟಿದೆ. ಇತ್ತೀಚೆಗಷ್ಟೇ ಯೂಟ್ಯೂಬ್​ನಲ್ಲಿ 2 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಹೊಂದಿದ ಡಾ.ಬ್ರೋ, ಫೇಸ್​ಬುಕ್​ನಲ್ಲಿ 1.6 ಮಿಲಿಯನ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ 1.3 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ.

ಡಾ.ಬ್ರೋ ಈಗ “ಮ್ಯಾನ್ ಆಪ್ ಮಿಲಿಯನ್ಸ್”| 20 ಲಕ್ಷ SUBSCRIBERS ಪಡೆದ ಕನ್ನಡ ಹುಡುಗ Read More »

ನವದೆಹಲಿ: ಇಂದಿನಿಂದ 2 ದಿನ G20 ಶೃಂಗಸಭೆ| ಮೊದಲ ಬಾರಿಗೆ ಭಾರತದ ಅಧ್ಯಕ್ಷತೆ

ಸಮಗ್ರ ನ್ಯೂಸ್: ಇಂದಿನಿಂದ 2 ದಿನ ಭಾರತದ ನೆಲದಲ್ಲಿ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದ್ದು, ವಿಶ್ವದ ದಿಗ್ಗಜರು ದೆಹಲಿಗೆ ಆಗಮಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬಿಡೆನ್ ಸೇರಿದಂತೆ ಹಲವು ನಾಯಕರು ದೆಹಲಿಗೆ ಆಗಮಿಸಿದ್ದು, ಇಂದಿನಿಂದ ಐತಿಹಾಸಿಕ ಜಿ20 ಶೃಂಗಸಭೆ ನಡೆಯಲಿದೆ. ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿಸಭೆ ನಡೆಯಲಿದ್ದು,ಉಕ್ರೇನ್ ಯುದ್ಧದ ಪರಿಣಾಮಗಳು, ಬಡ ದೇಶಗಳ ಸಂಕಷ್ಟಗಳು, ಆರ್ಥಿಕ ಹಿಂಜರಿತದ ಸನ್ನಿವೇಶ ಮತ್ತು ಇತರ ಜಾಗತಿಕ ಸವಾಲುಗಳ ನಡುವೆಯೇ ದೆಹಲಿಯಲ್ಲಿ ಆಯೋಜನೆಗೊಂಡಿರುವ 2 ದಿನಗಳ

ನವದೆಹಲಿ: ಇಂದಿನಿಂದ 2 ದಿನ G20 ಶೃಂಗಸಭೆ| ಮೊದಲ ಬಾರಿಗೆ ಭಾರತದ ಅಧ್ಯಕ್ಷತೆ Read More »

‘ಇಂಡಿಯಾ’ ಹೆಸರು ‘ಭಾರತ’ ಆದರೆ ವಿಶ್ವಸಂಸ್ಥೆ ಅಂಗೀಕರಿಸುತ್ತಾ? ವಕ್ತಾರರು ನೀಡಿದ ಪ್ರಮುಖ ಹೇಳಿಕೆ ಏನು?

ಸಮಗ್ರ ನ್ಯೂಸ್: ‘ಇಂಡಿಯಾ’ದ ಹೆಸರನ್ನು ಔಪಚಾರಿಕವಾಗಿ ‘ಭಾರತ್’ ಎಂದು ಬದಲಾಯಿಸಲು ವಿನಂತಿಸಿದರೆ, ವಿಶ್ವಸಂಸ್ಥೆಯು ಅದನ್ನು ಪರಿಗಣಿಸುತ್ತದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಬುಧವಾರ ಹೇಳಿದ್ದಾರೆ. ಭಾರತ ಹೆಸರು ಬದಲಾವಣೆ ಬಗ್ಗೆ ನಿಮ್ಮ ಪ್ರಕ್ರಿಯೆ ಏನು ಎಂದು ಚೀನಾದ ಮಾಧ್ಯಮ ವರದಿಗಾರರ ಪ್ರಶ್ನೆಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್, ಟರ್ಕಿಯೇ, ಸರ್ಕಾರವು ನಮಗೆ ನೀಡಿದ ಔಪಚಾರಿಕ ಮನವಿಗೆ ನಾವು ಪ್ರತಿಕ್ರಿಯಿಸಿದ್ದೇವೆ. ನಿಸ್ಸಂಶಯವಾಗಿ, ನಾವು ಅಂತಹ ವಿನಂತಿಗಳನ್ನು ಭಾರತದಿಂದ ಅದರ ಹೆಸರನ್ನು ಬದಲಾಯಿಸಲು

‘ಇಂಡಿಯಾ’ ಹೆಸರು ‘ಭಾರತ’ ಆದರೆ ವಿಶ್ವಸಂಸ್ಥೆ ಅಂಗೀಕರಿಸುತ್ತಾ? ವಕ್ತಾರರು ನೀಡಿದ ಪ್ರಮುಖ ಹೇಳಿಕೆ ಏನು? Read More »