ರಾಷ್ಟ್ರೀಯ

ಚಂದ್ರನಲ್ಲಿ ಇಂದು ಮತ್ತೆ ಸೂರ್ಯೋದಯ| ನಿದ್ದೆಯಿಂದ ಎದ್ದೇಳುತ್ತಾನಾ ಪ್ರಗ್ಯಾನ್? ಮಹತ್ವದ ಕಾರ್ಯ ಸಾಧಿಸುವ ನಿರೀಕ್ಷೆಯಲ್ಲಿ ಇಸ್ರೋ

ಸಮಗ್ರ ನ್ಯೂಸ್: ಚಂದ್ರಯಾನ 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಂದು ಇಸ್ರೋ ಕೈಗೊಳ್ಳಲಿದೆ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ. ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದ್ದು, ಇಂದು ಅಲ್ಲಿ ಸೂರ್ಯೋದಯವಾಗಲಿದೆ. ಇಂದು ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು […]

ಚಂದ್ರನಲ್ಲಿ ಇಂದು ಮತ್ತೆ ಸೂರ್ಯೋದಯ| ನಿದ್ದೆಯಿಂದ ಎದ್ದೇಳುತ್ತಾನಾ ಪ್ರಗ್ಯಾನ್? ಮಹತ್ವದ ಕಾರ್ಯ ಸಾಧಿಸುವ ನಿರೀಕ್ಷೆಯಲ್ಲಿ ಇಸ್ರೋ Read More »

ಮಲೆನಾಡು ಟ್ರಸ್ಟ್ ವತಿಯಿಂದ ಉಮ್ಲಿಂಗ್ಲಾ ಏರಿದ ತವ್ಹೀದ್ ರಹ್ಮಾನ್ ದಂಪತಿಗೆ ಸನ್ಮಾನ

ಸಮಗ್ರ ನ್ಯೂಸ್:;ಸುಳ್ಯದಿಂದ ಪ್ರಥಮ ಬಾರಿಗೆ ಪ್ರಪಂಚದ ಅತ್ಯಂತ ಸುಂದರ ಸ್ಥಳಗಳಲ್ಲೊಂದಾದ ಜಮ್ಮು ಕಾಶ್ಮೀರದ ಲಡಾಖ್ ಗೆ ಬೈಕಿನಲ್ಲಿ ತೆರಳಿದ ಸುಳ್ಯದ ಯುವ ಉದ್ಯಮಿ ತೌಹೀದ್ ರಹ್ಮಾನ್ ಮತ್ತು ಪತ್ನಿ ಜಸ್ಮಿಯ ಹಾಗೂ 3 ವರ್ಷ ಪ್ರಾಯದ ಪುತ್ರ ಜಸೀಲ್ ರಹ್ಮಾನ್ ನೊಂದಿಗೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ [17498] ಗಿಂತ ಎತ್ತರದ ವಿಶ್ವದ ಅತೀ ಎತ್ತರದ ಮೋಟಾರ್ ಪಾಸ್ [19024] ಅಡಿ ಎತ್ತರದ ಮೈಟಿ ಉಮ್ಮಿಂಗ್ಲಾ ಪಾಸ್ ಅನ್ನು ತಲುಪಿದ್ದಾರೆ. ಇಲ್ಲಿ ಜಸೀಲ್ ರಹ್ಮಾನ್ ಆಮ್ಲಜನಕ ಮಟ್ಟವು

ಮಲೆನಾಡು ಟ್ರಸ್ಟ್ ವತಿಯಿಂದ ಉಮ್ಲಿಂಗ್ಲಾ ಏರಿದ ತವ್ಹೀದ್ ರಹ್ಮಾನ್ ದಂಪತಿಗೆ ಸನ್ಮಾನ Read More »

ಕಾರುಗಳು‌ ತನ್ನಿಂತಾನೇ ಬೆಂಕಿಗೆ ಆಹುತಿಯಾಗೋದು ಯಾಕೆ ಗೊತ್ತಾ? ಈ ಪ್ರಾಬ್ಲಂ ನಿಮ್ಮ ಕಾರಲ್ಲಿದ್ರೆ ಈಗ್ಲೇ ಸರಿಪಡಿಸ್ಕೊಳ್ಳಿ…

ಸಮಗ್ರ ನ್ಯೂಸ್: ಕಾರಿಗೆ ಬೆಂಕಿ ಹೊತ್ತಿಕೊಳ್ಳುವ, ಚಲಿಸುತ್ತಿರುವ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆಗಳು ದೇಶದ ಮೂಲೆ ಮೂಲೆಯಲ್ಲಿ ದಾಖಲಾಗಿದೆ. ಹಲವರು ಈಗಾಗಲೇ ಹಲವರು ಬೆಂಕಿಗೆ ಆಹುತಿಯಾಗಿದ್ದಾರೆ. ಪದೇ ಪದೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಕೇರಳದಲ್ಲಿ ತುಸು ಹೆಚ್ಚು. ಹೀಗಾಗಿ ತನಿಖಾಧಿಕಾರಿಗಳ ತಂಡ ಈ ಕುರಿತು ಅಧ್ಯಯನ ನಡೆಸಿ ಮಹತ್ವದ ವರದಿ ಬಹಿರಂಗಪಡಿಸಿದ್ದಾರೆ. ಒಟ್ಟು 207 ಕಾರುಗಳು ಬೆಂಕಿಗೆ ಆಹುತಿಯಾದ ಪ್ರಕರಣದ ತನಿಖೆ ನಡೆಸಿದ್ದಾರೆ. ಕಾರು ಬೆಂಕಿಗೆ ಆಹುತಿಯಾಗಲು 3 ಸಾಮಾನ್ಯ ಕಾರಣಗಳನ್ನು ತನಿಖಾಧಿಕಾರಿಗಳ

ಕಾರುಗಳು‌ ತನ್ನಿಂತಾನೇ ಬೆಂಕಿಗೆ ಆಹುತಿಯಾಗೋದು ಯಾಕೆ ಗೊತ್ತಾ? ಈ ಪ್ರಾಬ್ಲಂ ನಿಮ್ಮ ಕಾರಲ್ಲಿದ್ರೆ ಈಗ್ಲೇ ಸರಿಪಡಿಸ್ಕೊಳ್ಳಿ… Read More »

ಕಾವೇರಿ ವಿವಾದ| ಕರ್ನಾಟಕಕ್ಕೆ ಶಾಕ್ ನೀಡಿದ ಸುಪ್ರೀಂ| ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ

ಸಮಗ್ರ ನ್ಯೂಸ್: ಕಾವೇರಿ ಜಲ ವಿವಾದ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ತಮಿಳುನಾಡಿಗೆ ಕೆಆರ್​ಎಸ್​ನಿಂದ 5000 ಕ್ಯೂಸೆಕ್​ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. CWMA ಆದೇಶ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿ, ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ. ಕರ್ನಾಟಕದಿಂದ ತಮಿಳುನಾಡಿಗೆ 5,000 ಕ್ಯೂಸೆಕ್ಸ್‌ ನೀರು

ಕಾವೇರಿ ವಿವಾದ| ಕರ್ನಾಟಕಕ್ಕೆ ಶಾಕ್ ನೀಡಿದ ಸುಪ್ರೀಂ| ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ Read More »

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ITEL ಕಂಪೆನಿಯ 10 ಸಾವಿರದ 5G ಸ್ಮಾರ್ಟ್ ಫೋನ್

ಸಮಗ್ರ ನ್ಯೂಸ್: ಭಾರತದಲ್ಲಿ ಸಹ 5ಜಿ ನೆಟ್​ವರ್ಕ್​ ವಿಸ್ತರಿಸುತ್ತಿದ್ದಂತೆ ಮೊಬೈಲ್​ ತಯಾರಿಕಾ ಕಂಪನಿಗಳು ಕಡಿಮೆ ಬಜೆಟ್​ ಗೆ 5ಜಿ ಫೋನ್​ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. 5G ಸ್ಮಾರ್ಟ್‌ಫೋನ್ ಖರೀದಿಸಬೇಕೆಂದರೆ 20 ಸಾವಿರ ಬೇಕಿತ್ತು. ಆದರೆ, ನಂತರದಲ್ಲಿ ರೂ.15 ಸಾವಿರದಿಂದ ರೂ.20 ಸಾವಿರದ ಬಜೆಟ್ ನಲ್ಲಿ 5ಜಿ ಮೊಬೈಲ್ ಗಳನ್ನು ಬಿಡುಗಡೆ ಮಾಡಲಾಯಿತು. ಈಗ, ರೂ.15 ಸಾವಿರದೊಳಗೆ 5ಜಿ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಈಗ ಬ್ಯಾಂಕ್ ಆಫರ್ ಗಳೊಂದಿಗೆ 12 ಸಾವಿರ ರೂ.ಗೆ 5ಜಿ ಮೊಬೈಲ್ ಖರೀದಿ

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ITEL ಕಂಪೆನಿಯ 10 ಸಾವಿರದ 5G ಸ್ಮಾರ್ಟ್ ಫೋನ್ Read More »

“ಸದನದೊಳಗಷ್ಟೇ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ರೂ ಸ್ನೇಹಿತರೇ. ನಮ್ಮನ್ನು ನೋಡಿ ನೀವು ಗಲಾಟೆ ಮಾಡಿಕೊಳ್ಬೇಡಿ”| ಗಣೇಶೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು

”ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತೆ ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ” ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು. ಅವರು

“ಸದನದೊಳಗಷ್ಟೇ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ರೂ ಸ್ನೇಹಿತರೇ. ನಮ್ಮನ್ನು ನೋಡಿ ನೀವು ಗಲಾಟೆ ಮಾಡಿಕೊಳ್ಬೇಡಿ”| ಗಣೇಶೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು Read More »

33% ಮಹಿಳಾ ಮೀಸಲಾತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ?

ಸಮಗ್ರ ನ್ಯೂಸ್:‌ನಿನ್ನೆ(ಸೆ.18) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಲು ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ಅಥವಾ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲು ಈ ಕಾಯ್ದೆಯಲ್ಲಿ ಪ್ರಸ್ತಾಪಿಸಿದೆ. ಈ ಮಸೂದೆಯು ಎಸ್ಸಿ, ಎಸ್ಟಿ ಮತ್ತು ಆಂಗ್ಲೋ-ಇಂಡಿಯನ್ನರಿಗೆ ಶೇಕಡಾ 33 ರಷ್ಟು ಕೋಟಾದೊಳಗೆ ಉಪ ಮೀಸಲಾತಿಯನ್ನುಕೂಡ ಪ್ರಸ್ತಾಪಿಸುತ್ತದೆ. ಪ್ರತಿ ಸಾರ್ವತ್ರಿಕ ಚುನಾವಣೆಯ ನಂತರ ಮೀಸಲು ಸ್ಥಾನಗಳನ್ನು ಬದಲಾವಣೆ ಮಾಡಬೇಕು ಎಂದು ಮಸೂದೆಯಲ್ಲಿ

33% ಮಹಿಳಾ ಮೀಸಲಾತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ? Read More »

ಸಂಸತ್ತಿನ ವಿಶೇಷ ಅಧಿವೇಶನ/ ನಾಳೆಯಿಂದ ನೂತನ ಸಂಸತ್ ಭವನದಲ್ಲಿ

ಸಮಗ್ರ ನ್ಯೂಸ್: ಸೆ. 18ರಿಂದ 23ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದ ಕಲಾಪ ಹಳೆಯ ಸಂಸತ್ ಭವನದಲ್ಲಿ ಆರಂಭಗೊಂಡಿದ್ದು, ನಾಳೆಯಿಂದ ನೂತನ ಸಂಸತ್ ಭವನದಲ್ಲಿ ಮುಂದುವರೆಯಲಿದೆ. ಕಳೆದ ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ನೂತನ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರಿಗೆ ಆಸನದ ವ್ಯವಸ್ಥೆ ‌ಇದೆ. ನಾಲ್ಕು ಅಂತಸ್ತಿನ ಕಟ್ಟಡವು ತ್ರಿಕೋನ ಆಕಾರವನ್ನು ಹೊಂದಿದ್ದು, ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ‌ಕರ್ಮ

ಸಂಸತ್ತಿನ ವಿಶೇಷ ಅಧಿವೇಶನ/ ನಾಳೆಯಿಂದ ನೂತನ ಸಂಸತ್ ಭವನದಲ್ಲಿ Read More »

ಇಂದಿನಿಂದ 5 ದಿ‌ನ ಸಂಸತ್ ನ ವಿಶೇಷ ಅಧಿವೇಶನ

ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬದ ದಿನವಾದ ಇಂದು ಮೋದಿ ಸರ್ಕಾರದ 5 ದಿನದ ವಿಶೇಷ ಅಧಿವೇಶನ ಆರಂಭ ಆಗುತ್ತೆ. ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆದರೆ, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ. ಆದರೆ ಇದಕ್ಕೂ ವಿಪಕ್ಷಗಳು ಅಪಸ್ವರ ಎತ್ತಿದ್ದರೂ ,ಸಂಸತ್​ ಕಲಾಪದಲ್ಲಿ ಬಿಜೆಪಿ (BJP) ಪ್ರಮುಖವಾಗಿ 5 ಬಿಲ್​​ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ. ಮೋದಿ ಸರ್ಕಾರ ದಿಢೀರ್​ ಅಂತ ವಿಶೇಷ ಅಧಿವೇಶನ ಏರ್ಪಡಿಸಿದೆ. ಇಂದಿನಿಂದ ಸೆಪ್ಟೆಂಬರ್​ 22ರವರೆಗೆ ಸಂಸತ್​ ಕಲಾಪ

ಇಂದಿನಿಂದ 5 ದಿ‌ನ ಸಂಸತ್ ನ ವಿಶೇಷ ಅಧಿವೇಶನ Read More »

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್

ಸಮಗ್ರ ನ್ಯೂಸ್: ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್ ಡೇ’ ಆಗಿ ಆಚರಿಸಲಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಪ್ರಖ್ಯಾತ ಇಂಜಿನಿಯರ್ ಮತ್ತು ರಾಜನೀತಿಜ್ಞರಾಗಿದ್ದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೃಷ್ಣರಾಜ ಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ; ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯಲು ಉಕ್ಕಿನ ಬಾಗಿಲುಗಳನ್ನು ರೂಪಿಸಿದರು.ಇಂದು ಬಹುಶಃ ಅನೇಕ ಜನರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಭಾರತದ

ಸೆ.15 ಇಂದು ಇಂಜಿನಿಯರ್ಸ್ ಡೇ | ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಗೊಂದು ಸೆಲ್ಯೂಟ್ Read More »