ಆರೋಗ್ಯವೇ ಭಾಗ್ಯ

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಉತ್ತಮ

ಸಮಗ್ರ ನ್ಯೂಸ್‌ : ಬೇಸಿಗೆ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಮ್ಮ ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ತಾಪಕ್ಕೆ ದೇಹಕ್ಕೆ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದನ್ನು ಸೇವಿಸಿ. ರಾಗಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಆರೋಗ್ಯಕರವಾದ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಪ್ರೋಟೀನ್‌ಗಳನ್ನು ಒಳಗೊಂಡಿದೆ. ರಾಗಿ ಅಂಬಲಿ ಬೆಳಗಿನಜಾವ ಉಪಾಹಾರಕ್ಕೆ ಮಾತ್ರವಲ್ಲ ರಾತ್ರಿಯ ಊಟಕ್ಕೂ ಒಳ್ಳೆಯದು. ಹಾಗಾಗಿ ಗೋಧಿ ಹಿಟ್ಟು ಇಷ್ಟಪಡದವರು ರಾಗಿ ಹಿಟ್ಟನ್ನೂ ಬಳಸಬಹುದು. ಬೇಸಿಗೆಯಲ್ಲಿ […]

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಉತ್ತಮ Read More »

HEALTH TIPS|ಈ ರೀತಿಯ ಮೀನುಗಳನ್ನು ತಿನ್ನೋದು ಸ್ಟಾಪ್ ಮಾಡಿ

ಸಮಗ್ರ ನ್ಯೂಸ್: ಕೆಲವರು ಮಾಂಸಕ್ಕಿಂತ ಮೀನನ್ನು ಹೆಚ್ಚು ಇಷ್ಟಪಡುತ್ತಾರೆ. ಮಟನ್ ಮತ್ತು ಚಿಕನ್ ಬದಲಿಗೆ ಮೀನುಗಳನ್ನು ಹೆಚ್ಚು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಮತ್ತು ತಾಯಂದಿರಾಗಲು ಬಯಸುವ ಮಹಿಳೆಯರು ಮೀಥೈಲ್ ಮರ್ಕ್ಯುರಿ ಹೊಂದಿರುವ ಮೀನುಗಳನ್ನು ತಿನ್ನಬಾರದು. ಅಂತಹ ವಿಷಕಾರಿ ವಸ್ತುಗಳು ಭ್ರೂಣಗಳು, ಶಿಶುಗಳು ಮತ್ತು ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಈ ಪಟ್ಟಿಯಲ್ಲಿ ಮೀನು ಸೇರಿದೆಯೇ? ವಿಷದಂತೆ ನಿಮಗೆ ಹಾನಿ ಮಾಡುವ ಅಪಾಯಕಾರಿ ಮೀನುಗಳ ಪಟ್ಟಿಯನ್ನು ಪರಿಶೀಲಿಸಿ. ಮೀನಿನ ನಿಯಮಿತ

HEALTH TIPS|ಈ ರೀತಿಯ ಮೀನುಗಳನ್ನು ತಿನ್ನೋದು ಸ್ಟಾಪ್ ಮಾಡಿ Read More »

Health Tips|ಹಸಿರು ಬಟಾಣಿಯಿಂದ ಇಷ್ಟೇಲ್ಲಾ ಲಾಭಗಳು ಇದ್ಯಾ? ಇಲ್ಲಿದೆ ನೋಡಿ ಡೀಟೇಲ್ಸ್

ಹಸಿರು ಬಟಾಣಿಗಳನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದರೆ ಇವು ವರ್ಷವಿಡೀ ಹೆಪ್ಪುಗಟ್ಟಿದ ಮತ್ತು ಒಣಗಿದ ರೂಪದಲ್ಲಿಸಿಗುತ್ತದೆ. ಹೀಗಿದ್ದರೂ ಒಣಗಿದ ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.ಹಾಗಾಗಿ ತಾಜಾ ಹಸಿರು ಬಟಾಣಿಗಳನ್ನು ಮಾತ್ರ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಜಾ ಹಸಿರು ಬಟಾಣಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಸಿರು ಬಟಾಣಿ ಅತ್ಯುತ್ತಮ ಪ್ರೋಟೀನ್ ಹೊಂದಿರುತ್ತದೆ. ನಿಯಮಿತವಾಗಿ ಬಟಾಣಿ ಸೇವಿಸುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇದು ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು

Health Tips|ಹಸಿರು ಬಟಾಣಿಯಿಂದ ಇಷ್ಟೇಲ್ಲಾ ಲಾಭಗಳು ಇದ್ಯಾ? ಇಲ್ಲಿದೆ ನೋಡಿ ಡೀಟೇಲ್ಸ್ Read More »

ಮೆಂತ್ಯೆ ಸೊಪ್ಪಿನಿಂದ ಇಷ್ಟೆಲ್ಲಾ ಲಾಭಗಳು ಇದ್ಯ? ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

ಸಮಗ್ರ ನ್ಯೂಸ್: ಮೆಂತ್ಯ ಸೊಪ್ಪು ಕಹಿ ಗುಣವನ್ನು ಹೊಂದಿದ್ದರೂ ಅದರಲ್ಲಿ ಅನೇಕ ಔಷಧೀಯ ಗುಣಗಳಿದೆ. ಇದನ್ನು ಪ್ರತಿದಿನ ಆಹಾರವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೆಂತ್ಯ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಹೊಂದಿದ್ದು ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧವನ್ನಾಗಿ ಉಪಯೋಗಿಸುತ್ತಾರೆ. ಅದರಲ್ಲಿಯೂ ಚಳಿಗಾಲದಲ್ಲಿ ಮೆಂತ್ಯ ಸೊಪ್ಪನ್ನು ತಿನ್ನುವುದು ಬಹಳ ಒಳ್ಳೆಯದು. ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಮೆಂತ್ಯ ಸೊಪ್ಪು ತುಂಬಾ ಉಪಯುಕ್ತವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು

ಮೆಂತ್ಯೆ ಸೊಪ್ಪಿನಿಂದ ಇಷ್ಟೆಲ್ಲಾ ಲಾಭಗಳು ಇದ್ಯ? ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್ Read More »

ದಿನಕ್ಕೆ ಎಷ್ಟು ಬಾಳೆಹಣ್ಣು ತಿಂದ್ರೆ ಒಳ್ಳೆಯದು? ಹೆಲ್ತ್ ಟಿಪ್ಸ್ ನಿಮಗಾಗಿ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ನಾವು ಯಾವುದಾದರೂ, ಮದುವೆ, ಪಾರ್ಟಿ, ಸಮಾರಂಭಕ್ಕೆ ಹೋದಾಗ ಊಟದ ನಂತರ ಬಾಳೆಹಣ್ಣು ನೀಡುವುದನ್ನು ನೀವು ಗಮನಿಸಬಹುದು. ಏಕೆಂದರೆ ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು ನಿಮ್ಮ ಆಹಾರದಲ್ಲಿ ಬಾಳೆಹಣ್ಣು ಸೇವಿಸುವುದು ಉತ್ತಮ. ಬಾಳೆಹಣ್ಣು ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಬೀರುವ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಎಲ್ಲ ವಯಸ್ಸಿನವರಿಗೂ ಬಾಳೆಹಣ್ಣು ತಿನ್ನಲು ಆರೋಗ್ಯಕರ ಹಣ್ಣಾಗಿದೆ. ಅನೇಕ ಮಂದಿ ತೂಕ

ದಿನಕ್ಕೆ ಎಷ್ಟು ಬಾಳೆಹಣ್ಣು ತಿಂದ್ರೆ ಒಳ್ಳೆಯದು? ಹೆಲ್ತ್ ಟಿಪ್ಸ್ ನಿಮಗಾಗಿ Read More »

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಸಮಗ್ರ ನ್ಯೂಸ್: ವಾಸ್ತವವಾಗಿ, ತುಟಿಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತುಟಿಯು ಬಹು ಬೇಗನೆ ಒಡೆಯುತ್ತವೆ. ನೀವು ಬಳಸುವ ಲಿಪ್ ಬಾಮ್ ಗಳಿಗಿಂತ ಭಿನ್ನವಾಗಿ ಮನೆಯಲ್ಲಿಯೇ ದೊರೆಯುವ ನೈರ್ಸಗಿಕವಾದ ಪದಾರ್ಥಗಳಿಂದ ಒಡೆದ ತುಟಿಯನ್ನು ಹೇಗೆ ಮೃದುವಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ. ತುಟಿಯು ನಿರ್ಜಲೀಕರಣಗೊಂಡಾಗ, ಅವು ಕ್ರಮೇಣ ಒಣಗಲು ಪ್ರಾರಂಭ ಮಾಡುತ್ತದೆ. ಕೆಲವೊಮ್ಮೆ ತುಟಿಗಳ ಚರ್ಮದಲ್ಲಿ ಸಿಪ್ಪೆ ಸುಲಿಕೆ, ರಕ್ತಸ್ರಾವವು ಉಂಟಾಗಬಹುದು. ಅಷ್ಟಕ್ಕೂ ತುಟಿಗಳು ಒಣಗಲು ಕಾರಣಗಳೇನು? ಎಂಬುದಕ್ಕೆ ಉತ್ತರ ಇಲ್ಲಿದೆ. ಸೂರ್ಯನ ತೀಕ್ಷ್ಣವಾದ ಬಿಸಿಲು

ಒಣ ತುಟಿ ಸಮಸ್ಯೆಯಿಂದ ಪಾರಾಗುವುದು ಹೇಗೆ? Read More »

ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ…

ಸಮಗ್ರ ನ್ಯೂಸ್: ಈಗಿನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್‌ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು. ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ. ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್‌ ಅಪಾಯವಿದೆ,

ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ… Read More »

ಮೂಗಿನೊಳಗೆ ಬೆರಳು ಹಾಕುತ್ತೀರಾ? ಹಾಗಿದ್ರೆ ಇಂದೇ ಈ ಅಭ್ಯಾಸ ಬಿಟ್ಬಿಡಿ

ಸಮಗ್ರ ನ್ಯೂಸ್: ನಮ್ಮ ದೈಹಿಕ ಆರೋಗ್ಯ ಉತ್ತಮವಾಗಿರುವ ಜೊತೆಗೆ ನಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರಬೇಕು. ಆಗ ಮಾತ್ರ ನಾವು ಆರೋಗ್ಯಕರ ಜೀವನವನ್ನು ಹೊಂದಲು ಸಾಧ್ಯ. ಆದರೆ ಕೆಲವರಿಗೆ ಮೂಗಿನೊಳಗೆ ಬೆರಳನ್ನು ಹಾಕುವ ಅಭ್ಯಾಸವಿರುತ್ತದೆ. ಇದು ನಮ್ಮನ್ನು ಮಾನಸಿಕ ಕಾಯಿಲೆಗೆ ಬಲಿಯಾಗುವಂತೆ ಮಾಡುತ್ತದೆಯಂತೆ. ತಜ್ಞರು ತಿಳಿಸಿದ ಪ್ರಕಾರ ಮೂಗಿನೊಳಗೆ ಬೆರಳನ್ನು ಹಾಕುವ ವ್ಯಕ್ತಿ ಮಾನಸಿಕ ರೋಗಕ್ಕೆ ತುತ್ತಾಗುತ್ತಾನಂತೆ. ಯಾಕೆಂದರೆ ಮೂಗಿನಲ್ಲಿ ಬೆರಳನ್ನು ಹಾಕುವ ಮೂಲಕ ಸೂಕ್ಷ್ಮಜೀವಿಗಳು ಮೂಗಿನ ಅಂಗಾಂಶಕ್ಕೆ ಸೋಂಕನ್ನು ಉಂಟುಮಾಡುತ್ತದೆ. ಇದು ನಂತರ ಮೆದುಳನ್ನು ತಲುಪುತ್ತದೆಯಂತೆ. ಯಾಕೆಂದರೆ

ಮೂಗಿನೊಳಗೆ ಬೆರಳು ಹಾಕುತ್ತೀರಾ? ಹಾಗಿದ್ರೆ ಇಂದೇ ಈ ಅಭ್ಯಾಸ ಬಿಟ್ಬಿಡಿ Read More »

ಕೀಟೋ ಡಯಟ್

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು

ಕೀಟೋ ಡಯಟ್ Read More »

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!?

ಸಮಗ್ರ ನ್ಯೂಸ್: ಪಿರಿಯಡ್ಸ್ ತಡವಾಗಿ ಆಗೋದಕ್ಕೆ ನೀವು ಟ್ಯಾಬ್ಲೆಟ್ ತಿಂತೀರ ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ, ಋತುಚಕ್ರವನ್ನು ತಡವಾಗಿಸಲು ಎಲ್ಲಾ ಔಷಧಿ ಅಂಗಡಿಗಳಲ್ಲಿ ಔಷಧಿಗಳು ಸುಲಭವಾಗಿ ಲಭ್ಯವಿದೆ. ಅಷ್ಟೆ ಯಾಕೆ ವಿವಿಧ ಫಾರ್ಮಸಿ ಬ್ರಾಂಡ್ಸ್ ಸಹ ಬರುತ್ತಿವೆ. ದಿನದಿಂದ ದಿನಕ್ಕೆ, ಇದರ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ . ಪದೇ ಪದೇ ಪಿರಿಯಡ್ಸ್ ತಡವಾಗಿಸುವ ಮಾತ್ರೆ ಸೇವಿಸೋದರಿಂದ ಯಾವೆಲ್ಲಾ

ಪೀರಿಯಡ್ಸ್ ಡಿಲೆ ಆಗೋದಕ್ಕೆ ಟ್ಯಾಬ್ಲೆಟ್ ತಿಂತೀರ? ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ!? Read More »