ಕ್ರೈಂ

ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ ಪ್ರಕರಣ| ಓರ್ವ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸೈಫ್ ಅಲಿ ಖಾನ್ ಅವರ ನಿವಾಸದಲ್ಲೇ ಗುರುವಾರ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಚಾಕುವಿನಿಂದ 6 ಬಾರಿ ಇರಿದಿದ್ದು, ಅದರಲ್ಲಿ ಎರಡು ಕಡೆ ಗಂಭೀರ ಗಾಯಗಳಾಗಿವೆ […]

ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ ಪ್ರಕರಣ| ಓರ್ವ ಆರೋಪಿ ಅರೆಸ್ಟ್ Read More »

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು‌ ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು?

ಸಮಗ್ರ ನ್ಯೂಸ್ : ಪತಿಗೆ ತನ್ನ ಪತ್ನಿಯ ಅನೈತಿಕ ಸಂಬಂಧದ ವಿಷಯ ತಿಳಿದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ. ಏಳು ವರ್ಷಗಳ ಹಿಂದೆ ದೇವರಾಜ್ ತನ್ನ ಸಂಬಂಧಿಯಾಗಿದ್ದ ತೇಜು ಎನ್ನುವವಳನ್ನು ಮದುವೆಯಾಗಿದ್ದ. ಇವರಿಗೆ ಎರಡು ಮಕ್ಕಳು ಇದ್ದಾರೆ. ಹಾಗಿದ್ದರೂ ಸಹ ತೇಜ ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ಹಿಂದೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು. ನಂತರ ರಾಜೀ ಸಂದಾನ ಮಾಡಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು‌ ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು? Read More »

ಕಡಬ: ಮೋರಿಗೆ ಡಿಕ್ಕಿ ಹೊಡೆದ ಬೈಕ್| ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ

ಕಡಬ: ಮೋರಿಗೆ ಡಿಕ್ಕಿ ಹೊಡೆದ ಬೈಕ್| ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು Read More »

ಮಾಜಿ ಸಂಸದ ಎಂ‌ ಶ್ರೀನಿವಾಸ್ ವಿಧಿವಶ

ಸಮಗ್ರ ನ್ಯೂಸ್: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಸಂಸದರು ಹಾಗೂ 4 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ದಿ ಎಂ.ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಲಾಗಿದ್ದ ಶ್ರೀನಿವಾಸ್ ಅವರು, ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತ ಶ್ರೀನಿವಾಸ್​​ ರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಾಳೆ ಉತ್ತರಹಳ್ಳಿಯಲ್ಲಿ ನಡೆಯಲಿದೆ.

ಮಾಜಿ ಸಂಸದ ಎಂ‌ ಶ್ರೀನಿವಾಸ್ ವಿಧಿವಶ Read More »

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ

ಸಮಗ್ರ ನ್ಯೂಸ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸಕ್ಕೆ ದರೋಡೆಕೋರನೊಬ್ಬ ನುಗ್ಗಿ ಚಾಕುವಿನಿಂದ ಇರಿದ ಪರಿಣಾಮ ಗಾಯಗೊಂಡಿದ್ದಾರೆ. ಗುರುವಾರ ಬೆಳಗಿನ ಜಾವ 2:30 ರ ಸುಮಾರಿಗೆ ನಟ ತಮ್ಮ ಇತರ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಮನೆಯಲ್ಲಿದ್ದವರು ಎಚ್ಚರಗೊಂಡು ದರೋಡೆಕೋರನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಅಪರಾಧಿಯನ್ನು ಹಿಡಿಯಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹಿರಿಯ

ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ Read More »

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್| ಹಿರಿಯ ನಟ ಸರಿಗಮ‌ ವಿಜಿ ಇನ್ನಿಲ್ಲ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ (76) ಅವರು ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನ್ಯುಮೋನಿಯಾಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿಜಿ ಅವರು ಇಂದು (ಜನವರಿ 15) ನಿಧನ ಹೊಂದಿದ್ದಾರೆ. ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್| ಹಿರಿಯ ನಟ ಸರಿಗಮ‌ ವಿಜಿ ಇನ್ನಿಲ್ಲ Read More »

ಸಕಲೇಶಪುರ: ಸ್ನಾನ‌ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮಹಿಳೆ ಸಾವು

ಸಮಗ್ರ ನ್ಯೂಸ್: ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ವೆಂಕಟಹಳ್ಳಿ ಗ್ರಾಮದಲ್ಲಿ ನಡೆದಿದೆ.ದೀಪಾ (35) ಸಾವನ್ನಪ್ಪಿದ ಮಹಿಳೆ. ದೀಪಾ ಸಕಲೇಶಪುರ ತಾಲೂಕಿನ ವೀರಶೈವ ಸಮಾಜದ ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿ. ದೀಪಾ ಹಾನುಬಾಳು ಹೋಬಳಿ ವೆಂಕಟಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ. ದೀಪಾರವರು ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದದ್ದು ಬಳಿಕ ಸಕಲೇಶಪುರ ತಾಲ್ಲೂಕಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ದೀಪಾರವರು ಪತಿ

ಸಕಲೇಶಪುರ: ಸ್ನಾನ‌ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮಹಿಳೆ ಸಾವು Read More »

ಬೆಂಗಳೂರಿನಲ್ಲಿ ಮೂಕಪ್ರಾಣಿಗಳ ಮೇಲೆ ಅಮಾನವೀಯ ಕೃತ್ಯ| ಹಸುಗಳ ಕೆಚ್ಚಲು ಕೊಯ್ದು ವಿಕೃತಿ

ಸಮಗ್ರ ನ್ಯೂಸ್: ಬೆಂಗಳೂರಲ್ಲಿ ಕಿಡಿಗೇಡಿಗಳು ಮೂಖ ಪ್ರಾಣಿಗಳ ಮೇಲೆ ಅಮಾನವೀಯ ಕೃತ್ಯ ಎಸಗಿದ್ದಾರೆ. ಹಾಲು ಕೊಡುವ ಕಾಮಧೇನುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆಯಲಾಗಿದೆ. ಚಾಮರಾಜಪೇಟೆ ವಿನಾಯಕ ನಗರದ ಪೆನ್ಷನ್ ಮೊಲಾದಲ್ಲಿ ಇಂತಹದೊಂದು ಕ್ರೂರ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಮಧ್ಯರಾತ್ರಿಯೇ ಕಿಡಿಗೇಡಿಗಳು ಹಸುವಿನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇಂದು ನಸುಕಿನ ಜಾವ ಹಸುವಿನ ಮಾಲೀಕರಿಗೆ ಪಕ್ಕದ ಮನೆಯವರು ಮಾಹಿತಿ ನೀಡಿದ್ದಾರೆ. ನೀಚರ ಕೃತ್ಯಕ್ಕೆ ಮೂರು ಹಸುಗಳ ಮೂಕ ರೋಧನೆ ಮುಗಿಲು ಮುಟ್ಟಿದೆ. 3 ಹಸುಗಳ ಕೆಚ್ಚಲು ಕೊಯ್ದು

ಬೆಂಗಳೂರಿನಲ್ಲಿ ಮೂಕಪ್ರಾಣಿಗಳ ಮೇಲೆ ಅಮಾನವೀಯ ಕೃತ್ಯ| ಹಸುಗಳ ಕೆಚ್ಚಲು ಕೊಯ್ದು ವಿಕೃತಿ Read More »

ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್

ಸಮಗ್ರ ನ್ಯೂಸ್ : ನೀವು ಹಲವಾರು ರೂಪಾಯಿ ಖರ್ಚು ಮಾಡಿ ಇದು ಒಳ್ಳೆಯ ಸಿಗರೇಟ್ ಎಂದು ತೆಗೆದುಕೊಂಡಿರುತ್ತೀರಿ.ಆದ್ರೆ ಅಲ್ಲಿಯೂ ಕೂಡ ನಕಲಿ ಗ್ಯಾಂಗ್‌ಗಳ ಕೈವಾಡವಿರುತ್ತದೆ. ಇದಕ್ಕೆ ನೇರ ಸಾಕ್ಷಿ ಬೆಂಗಳೂರಿನಲ್ಲಿ ಇಂದು ಸೀಜ್ ಆಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ಸ್ ಐಟಿಸಿ ಲೈಟ್ಸ್ ಬ್ರಾಂಡ್ ನ ಮೂರು ಬಾಕ್ಸ್ ನಕಲಿ ಸಿಗರೇಟ್ ಸೀಜ್ ಮಾಡಲಾಗಿದೆ. ಪ್ರತಿಷ್ಠಿತ ಸಿಗರೇಟ್ ಬ್ರಾಂಡ್‌ನ್ನುನ ನಕಲು ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಿನಲ್ಲಿ ಮಾರಾಟ

ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್ Read More »

ಸಿಟಿ ರವಿಗೆ ಮತ್ತೆ ಜೀವ ಬೆದರಿಕೆ

ಸಮಗ್ರ ನ್ಯೂಸ್ : ಡಿಸೆಂಬರ್ 13ನೇ ತಾರೀಕು ವಿಧಾನಪರಿಷತ್ ರಣರಂಗವಾಗಿತ್ತು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಪರಿಷತ್ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಸಿ ನಿಂದಿಸಿರುವ ಆರೋಪ ಕೇಳಿಬಂದಿತ್ತು. ಆದ್ರೆ ಪ್ರಕರಣ ಜೈಲು, ಕೋರ್ಟ್ ಮೆಟ್ಟಿಲೇರಿ ಸಿಟಿ ರವಿ ಸದ್ಯ ಬಂಧನದಿಂದ ಮುಕ್ತರಾಗಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬಿಜೆಪಿ ವಿಧಾನಪರಿಷತ್‌ ಸದಸ್ಯ ಸಿಟಿ ರವಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಕ್ಷಮೆ ಕೇಳದಿದ್ದರೆ ನಿಮ್ಮನ್ನು

ಸಿಟಿ ರವಿಗೆ ಮತ್ತೆ ಜೀವ ಬೆದರಿಕೆ Read More »