ಕ್ರೈಂ

ಹಾಸನ: ಖಾಸಗಿ ಬಸ್ ಹರಿದು ಸ್ಥಳದಲ್ಲೇ ಇಬ್ಬರು ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳಕ್ಕೆ ಹೋಗುತ್ತಿದ್ದ ಪಾದಚಾರಿಗಳ ಮೇಲೆ ಖಾಸಗಿ ಬಸ್ ಒಂದು ಹರಿದು ಪಾದಯತ್ರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಮೃತರು ಸುರೇಶ್ (60) ಮತ್ತು ಕುಮಾರ್ (55) ಎಂದು ತಿಳಿದುಬಂದಿದೆ. ಅಲ್ಲದೇ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಆನಗೋಳ ಗ್ರಾಮದವರು,ಇನ್ನೂ ಗಂಭೀರವಾಗಿ ಗಾಯಗೊಂಡ ದಿನೇಶ್ ಗೆ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ಖಾಸಗಿ ಬಸ್ ಹರಿದು ಸ್ಥಳದಲ್ಲೇ ಇಬ್ಬರು ಸಾವು Read More »

ಪ್ರಯಾಗ್ ರಾಜ್: ಭೀಕರ ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ 6 ಮಂದಿ‌ ಸಾವು

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಬೀದರ್ ಜಿಲ್ಲೆಯ 6 ಮಂದಿ ಭಕ್ತರು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಬೀದರ್ ಜಿಲ್ಲೆಯ ಐವರು ತೆರಳಿದ್ದರು. ಈ ವೇಳೆ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 5 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕುಂಭಮೇಳ ಮುಗಿಸಿ

ಪ್ರಯಾಗ್ ರಾಜ್: ಭೀಕರ ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ 6 ಮಂದಿ‌ ಸಾವು Read More »

ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಮೂವರು ಸಾವು

ಸಮಗ್ರ ನ್ಯೂಸ್: ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದನಾಯಕನಹಳ್ಳಿ ರೈಲ್ವೇ ಹಳಿ ಬಳಿ ನಡೆದಿದೆ. ಮೃತರನ್ನು ರಾಹುಲ್ (18) ಬಿಕೇಶ್ (20) ಲಲನ್ (24) ಎಂದು ಗುರುತಿಸಲಾಗಿದೆ.ಉತ್ತರ ಪ್ರದೇಶ ಮೂಲದ ಮೂವರು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ರೀಲ್ಸ್ ಮಾಡಲು ಮುಂದಾಗಿದ್ದಾರೆ. ರೈಲು ಡಿಕ್ಕಿಯಾದ ರಭಸಕ್ಕೆ ಮೃತದೇಹಗಳು ಛಿದ್ರ ಛಿದ್ರ ಆಗಿ ಬಿದ್ದಿದೆ. ಸತ್ಯಸಾಯಿ ಪ್ಯಾಸೆಂಜರ್ ರೈಲು ಡಿಕ್ಕಿ

ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಮೂವರು ಸಾವು Read More »

ಬೆಳ್ತಂಗಡಿ: 7ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 7ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತಣ್ಣೀರುಪಂತ ನಿವಾಸಿ ಡೊಂಬಯ್ಯ ಗೌಡ ಎಂಬವರ ಪುತ್ರ ಶ್ರವಣ್ (13) ಮೃತ ವಿದ್ಯಾರ್ಥಿ. ಈತ ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದು ಮನೆಯ ಕೋಣೆಯಲ್ಲಿ ಫೆಬ್ರವರಿ 18ರಂದು ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: 7ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು Read More »

ಜೆಸಿಬಿ‌ ಹರಿದು ಎರಡು ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಜೆಸಿಬಿ ಹರಿದು ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್​ನಲ್ಲಿ ನಡೆದಿದೆ. ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ. ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಥನವ್

ಜೆಸಿಬಿ‌ ಹರಿದು ಎರಡು ವರ್ಷದ ಮಗು ಸಾವು Read More »

‘ಅತ್ತೆ ಸಾಯಿಸಲು ಮಾತ್ರೆ ಕೊಡಿ’| ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!!

ಸಮಗ್ರ ನ್ಯೂಸ್: ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಾಳೆ. ನನ್ನ ಅತ್ತೆ ದಿನ ನನಗೆ ಹಿಂಸೆ ನೀಡುತ್ತಿದ್ದಾರೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಏನಾದ್ರೂ ಹೇಳುತ್ತೀರಾ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾರೆ. ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು

‘ಅತ್ತೆ ಸಾಯಿಸಲು ಮಾತ್ರೆ ಕೊಡಿ’| ವೈದ್ಯರಿಗೆ ಮೆಸೇಜ್ ಮಾಡಿದ ಸೊಸೆ!! Read More »

ಬೆಳ್ತಂಗಡಿ: ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ| ಮೂವರು ವಿದ್ಯಾರ್ಥಿಗಳು ಗಂಭೀರ

ಸಮಗ್ರ ನ್ಯೂಸ್: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದಲ್ಲಿ ನಡೆದಿದೆ. ವಿದ್ಯಾರ್ಥಿಗಳು ಪ್ರಾರ್ಥನೆ ಮುಗಿಸಿ ಶಾಲೆಯ ಒಳಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. 15 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳಾದ ಅವಸಿನಾ (6), ಅಫೀಜ್‌ (12), ಶಾಬಿತ್‌ (11), ರಫಾ (7), ನಿಧಾ (13), ಶಾಬೆಲ್‌ (13),

ಬೆಳ್ತಂಗಡಿ: ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ| ಮೂವರು ವಿದ್ಯಾರ್ಥಿಗಳು ಗಂಭೀರ Read More »

ಸ್ಕೀಂ‌ ಹೆಸರಲ್ಲಿ ವಂಚನೆ; ಐವರು ಅರೆಸ್ಟ್

ಸಮಗ್ರ ನ್ಯೂಸ್: ವಂಚನೆ ಮಾಡುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಆರೋಪದಡಿ ಎಸ್‌.ವಿ. ಸ್ಮಾರ್ಟ್‌ ವಿಷನ್‌ ಎಂಬ ಸ್ಕೀಂನ ಮಾಲಕ ಸಹಿತ ಐವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಕೀಂ ಮಾಲಕ ಮಂಗಳೂರು ಸುರತ್ಕಲ್‌ ಮೂಲದ ಮಹಮದ್‌ ಅಶ್ರಫ್(37), ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ವೈ.ಸುಲೈಮಾನ್‌(37), ತ್ಯಾಗರಾಜ ಕಾಲನಿಯ ಅಬ್ದುಲ್‌ ಗಫ‌ೂರ್‌(34), ಮೊಹಮದ್‌ ಅಕ್ರಮ್‌ (34) ಹಾಗೂ ಕುಂಬಳಕೇರಿ ನಿವಾಸಿ ಎಚ್‌.ಎನ್‌.ಕಿಶೋರ್‌(41) ಬಂಧಿತರು. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಕೆ.ರಾಮರಾಜನ್‌, ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ

ಸ್ಕೀಂ‌ ಹೆಸರಲ್ಲಿ ವಂಚನೆ; ಐವರು ಅರೆಸ್ಟ್ Read More »

ಕೊಟ್ಟಿಗೆಹಾರ: ಸಹೋದರನ ಅತ್ತೆಯನ್ನು ಕೊಲೆ ಮಾಡಿ ಶಶಿಧರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಅತ್ತೆ ಯಮುನಾ ಕುಡಿದ ಮತ್ತಿನಲ್ಲಿದ್ದ ಅಳಿಯನಿಗೆ ಬುದ್ದಿ ಹೇಳಿದ ಕಾರಣಕ್ಕೆ ಅವನ ಸಹೋದರ ಶಶಿಧರ್ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಶಶಿಧರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಬಣಕಲ್ ಪೊಲೀಸರು ನಿನ್ನೆ ಮೊದಲು ತನಿಖೆ ಆರಂಭಿಸಿದ್ದರು. ಶಶಿಧರ್ ನನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಫೆ.18 ರಂದು ಭಾರತೀಬೈಲು ಕಾಫಿತೋಟದಲ್ಲಿ ಶಶಿಧರ್ ನೇಣು

ಕೊಟ್ಟಿಗೆಹಾರ: ಸಹೋದರನ ಅತ್ತೆಯನ್ನು ಕೊಲೆ ಮಾಡಿ ಶಶಿಧರ್ ಆತ್ಮಹತ್ಯೆ Read More »

ಭದ್ರಾ ನದಿಯಲ್ಲಿ ಈಜಲು ಹೋದ ಯುವಕ ಸಾವು| ಶವಕ್ಕಾಗಿ ಶೋಧ ಮುಂದುವರಿಕೆ

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಎನ್.ಆರ್.ಪುರ ಭದ್ರಾ ನದಿಯಲ್ಲಿ ಈಜಲು ಹೋದ 25 ವರ್ಷದ ಯುವಕ ಜಲಾಲ್ ಸುಳಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಘಟನೆ ಎನ್.ಆರ್.ಪುರ ತಾಲೂಕಿನ ಗಡಿಗೇಶ್ವರದಲ್ಲಿ ನಡೆದಿದೆ. ಬಾಳೆಹೊನ್ನೂರಿನ ಭದ್ರಾ ನದಿಗೆ ಮೂವರು ಸ್ನೇಹಿತರು ಈಜಲು ತೆರಳಿದ್ದರು. ಈ ವೇಳೆ ಜಲಾಲ್ ನದಿಯ ಸುಳಿಗೆ ಸಿಲುಕಿದನು. ಸ್ನೇಹಿತರು ಆತನನ್ನು ರಕ್ಷಿಸಲು ಹರಸಾಹಸ ಪಡಿದರೂ ಸಾಧ್ಯವಾಗಲಿಲ್ಲ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶವಕ್ಕಾಗಿ ತೀವ್ರ ಶೋಧ ನಡೆಸಿದರು. ಆದರೆ

ಭದ್ರಾ ನದಿಯಲ್ಲಿ ಈಜಲು ಹೋದ ಯುವಕ ಸಾವು| ಶವಕ್ಕಾಗಿ ಶೋಧ ಮುಂದುವರಿಕೆ Read More »