ದರೋಡೆ ಮಾಡೋದು ಮಾತ್ರ ಟಾರ್ಗೆಟ್ ಆಗಿತ್ತು| ರೇಪ್ ಮಾಡೋ ಆಲೋಚನೆ ಇರಲಿಲ್ಲ| ಮೂರು ದಿನ ಕಾದು ನಾಲ್ಕನೇ ದಿನ ಹೀಗ್ ಮಾಡಿದ್ದು…!
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿರುವ ಗ್ಯಾಂಗ್‌ರೇಪ್ ಪ್ರಕರಣ ಕ್ಷಣಕ್ಷಣಕ್ಕೂ ಬೇರೆ ಬೇರೆ ರೂಪ ಪಡೆಯುತ್ತಿದ್ದು, ಇದೀಗ ತಾವು ರೇಪ್ ಮಾಡಿರುವ ಕಾರಣಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಐದು ಆರೋಪಿಗಳನ್ನು ಹೊರ ರಾಜ್ಯದಲ್ಲಿ ಬಂಧಿಸಿರುವ ಪೊಲೀಸರು ಇದಾಗಲೇ ಮೈಸೂರಿಗೆ ಕರೆತಂದಿದ್ದು, ಅವರು ಘಟನೆಗೆ ಸಂಬಂಧಿಸಿದಂತೆ ಒಂದೊಂದೇ ವಿಷಯಗಳನ್ನು ಹೊರಹಾಕುತ್ತಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಐದು ಮಂದಿ ಪೈಕಿ ಮೂರು ಮಂದಿ ಮಾತ್ರ ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ತನಿಖೆಗೆ ತಿಳಿದುಬಂದಿದೆ. ಮೊದಲಿಗೆ ಇವರು ಈ ಜೋಡಿಯನ್ನು ಬೆದರಿಸಿ […]










