ಕ್ರೈಂ

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಆಯಿಲ್ ದಂಧೆಯೊಂದನ್ನು ಪೊಲೀಸರು ಭೇದಿಸಿದ್ದಾರೆ. ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಆಯಿಲ್ ದಂಧೆ ನಡೆಸುತ್ತಿದ್ದ ಘಟಕದ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ. ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಸೋಮವಾರ ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್.ದಾಸ್, ಸಿಂಗರಾಜ್, ಎಸ್.ಕಾರ್ತಿ ಮತ್ತು ಸೆಲ್ವ ರಾಜ್ ಎಂಬುವರನ್ನು ಬಂಧಿಸಲಾಗಿದೆ.ಪೊಲೀಸ್ ದಾಳಿಯ ವೇಳೆ ಮನೆಯ ಒಳಗೆ ಭಾರೀ ಗಾತ್ರದ […]

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್ Read More »

ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮೃತ್ಯು

ಹಾವೇರಿ. ಅಂಗಳದಲ್ಲಿ ಊಟ ಮಾಡುತ್ತಿದ್ದ 11 ತಿಂಗಳ ಮಗುವಿನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಅಂಗಳದಲ್ಲಿ ಆಟವಾಡುತ್ತಿದ್ದಾಗ ತಲೆಯ ಮೇಲೆ ಬಿದ್ದ ಪರಿಣಾಮ 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಮೃತಪಟ್ಟ ಮಗುವಾಗಿದ್ದು, ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು

ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮೃತ್ಯು Read More »

ಶೀಲ ಶಂಕಿಸಿದ ಪತಿಗೆ‌ ಸ್ವರ್ಗದ ದಾರಿ ತೋರಿದ ಪತ್ನಿ…!

ಮೈಸೂರು (ಜೂ.29): ತನ್ನ ಸಹೋದರರು ಮತ್ತು ಬಾವನೊಂದಿಗೆ ಸೇರಿಕೊಂಡು ಪತ್ನಿ ತನ್ನ ಪತಿಯನ್ನೆ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ಕೂರ್ಗಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಂಜನಗೂಡು ತಾಲೂಕಿನ ಹಿಬ್ಜಾಲ ಗ್ರಾಮದ ಕೆಂಪಶೆಟ್ಟಿ(35) ಎಂಬಾತ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಶಶಿಕಲಾ, ಬಾಮೈದ ಕೆಂಡಶೆಟ್ಟಿ, ರಮೇಶ್‌ ಮತ್ತು ನಾಗೇಂದ್ರ ಎಂಬವರೇ ಹತ್ಯೆ ಮಾಡಿದ ಆರೋಪಿಗಳು. ಕಾರಣವೇನು? 12 ವರ್ಷಗಳ ಹಿಂದೆ ಕೆಂಪಶೆಟ್ಟಿ, ಎಚ್‌.ಡಿ. ಕೋಟೆ ತಾಲೂಕಿನ ಹೊಸಹುಂಡಿ ಗ್ರಾಮದ ಶಶಿಕಲಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು

ಶೀಲ ಶಂಕಿಸಿದ ಪತಿಗೆ‌ ಸ್ವರ್ಗದ ದಾರಿ ತೋರಿದ ಪತ್ನಿ…! Read More »

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ

ಉಪ್ಪಿನಂಗಡಿ: ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ.

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ Read More »

ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಬಳ್ಳಾರಿ: ಗಂಡನೊಂದಿಗೆ ಜಗಳವಾಡಿ ಕೊನೆಗೆ ಕುಪಿತಗೊಂಡ ಹೆಂಡತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಳ್ಳಾರಿಯ ಇಂದಿರಾ ನಗರದ ಸಿದ್ಧಪ್ಪ ಎಂಬವರ ಪತ್ನಿ ಸುನೀತಾ(25) ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳಾದ ಯಶ್ವಂತ(4) ಹಾಗೂ ಸಾನ್ವಿ(3) ಮೃತ ದುರ್ದೈವಿಗಳು. ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಸುನಿತಾ ಇಬ್ಬರು ಮಕ್ಕಳನ್ನು ಮನೆಯ ಪಕ್ಕದ ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂಡಿದ್ದಾಳೆ. ಬಳಿಕ ತನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ನಗರದ ಕೌಲ್

ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ Read More »

ಆರ್’ಎಸ್’ಎಸ್ ಮುಖಂಡನಿಂದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ

ಮಧ್ಯಪ್ರದೇಶ: ಆರ್’ಎಸ್’ಎಸ್ ಹಾಗೂ ಬಿಜೆಪಿ ಮುಖಂಡನೊಬ್ಬ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಘಟನೆ ರಾಜ್ಯದ ಪೋವಾಯಿಯ ಮುದ್ವಾರಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಆತನ 17 ವರ್ಷದ ಅಪ್ರಾಪ್ತ ಮಗಳು ನೀಡಿದ ದೂರಿನನ್ವಯ ಮುಖಂಡ ಸತೀಶ್ ಮಿಶ್ರ ಎಂಬಾತನನ್ನು ಬಂದಿಸಲಾಗಿದೆ. ಈ ಘಟನೆ ಮಧ್ಯಪ್ರದೇಶ ರಾಜ್ಯ ಬಿಜೆಪಿ ಗೆ ತೀವ್ರ ಮುಜುಗರ ಉಂಟುಮಾಡಿದೆ. ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ ಬೆನ್ನಲ್ಲೇ, ಬಿಜೆಪಿ ಮುಖಂಡರೊಂದಿಗೆ ಇರುವ ಆತನ ಫೋಟೋ

ಆರ್’ಎಸ್’ಎಸ್ ಮುಖಂಡನಿಂದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ Read More »

ತಪ್ಪಿದ ಕರೆಯಿಂದ ಹುಟ್ಟಿದ ಪ್ರೀತಿ ಬದುಕಿನ ಹಳಿ ತಪ್ಪಿಸಿತು | ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ನಿಗೂಢ ಸಾವು | ಇದು ಕೊಲೆಯೋ…? ಆತ್ಮಹತ್ಯೆಯೋ….?

ಶಿವಮೊಗ್ಗ: ಮಿಸ್ಸ್’ಡ್ ಕಾಲ್’ನಿಂದ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನದ ಏಳೇ ತಿಂಗಳಿನಲ್ಲಿ ಯುವತಿ ಒಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಹಾಸನದ ಸಕಲೇಶಪುರ ತಾಲೂಕಿನ ಗೋಳಗೊಂಡ ಗ್ರಾಮದ ಸುಂದರ ಯುವತಿ ಸೌಂದರ್ಯ(21) ಗೆ ಒಂದು ಮಿಸ್ಸ್’ಡ್ ಕಾಲ್ ಮೂಲಕ ಕಾಡಿಗ್ಗೇರಿಯ ಯುವಕ ಉಮೇಶ್ ಎಂಬಾತನ ಪರಿಚಯವಾಗಿದೆ. ನಂತರ ಫೇಸ್ಬುಕ್’ನಲ್ಲಿ ಸ್ನೇಹಿತರಾಗಿದ್ದಾರೆ. ದಿನಕಳೆದಂತೆ ವಾಟ್ಸಾಪ್’ಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಬೆಳೆದಿದೆ. ಯುವತಿ ಮನೆಯವರ ವಿರೋಧದ ನಡುವೆಯೂ ಕಳೆದ ಏಳು ತಿಂಗಳ

ತಪ್ಪಿದ ಕರೆಯಿಂದ ಹುಟ್ಟಿದ ಪ್ರೀತಿ ಬದುಕಿನ ಹಳಿ ತಪ್ಪಿಸಿತು | ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ನಿಗೂಢ ಸಾವು | ಇದು ಕೊಲೆಯೋ…? ಆತ್ಮಹತ್ಯೆಯೋ….? Read More »

ಸುಳ್ಳು ತಂದ ಯಡವಟ್ಟು, ಅಪ್ರಾಪ್ತನನ್ನು ಮದ್ವೆಯಾದ 20ರ ಯುವತಿ!

ಚಿಕ್ಕಮಗಳೂರು: ಅಪ್ರಾಪ್ತ ಯುವಕನನ್ನು ಯುವತಿಯೊಬ್ಬಳು ಮದುವೆಯಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದ ವೇಳೆ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಹುಡುಗನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಹುಡುಗ ಕೂಡ ನನಗೆ 21 ವರ್ಷ ಎಂದು ಹೇಳಿಕೊಂಡಿದ್ದ. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಪೋಷಕರು

ಸುಳ್ಳು ತಂದ ಯಡವಟ್ಟು, ಅಪ್ರಾಪ್ತನನ್ನು ಮದ್ವೆಯಾದ 20ರ ಯುವತಿ! Read More »

ಟಿಪ್ಪರ್ ಚಾಲಕನ ನಿರ್ಲಕ್ಷ್ಯ: ಚಕ್ರಕ್ಕೆ ಸಿಲುಕಿ ಯುವಕ ದಾರುಣ ಸಾವು!

ವಿಜಯಪುರ: ಟಿಪ್ಪರ್ ಚಾಲಕನೊಬ್ಬನ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ರಸ್ತೆಯ ಹೊರವಲಯದಲ್ಲಿ ನಡೆದಿದೆ. ನಗರದ ನಿವಾಸಿ ರೆಹಮಾನ್ ಮೃತಪಟ್ಟ ವ್ಯಕ್ತಿ. ಟಿಪ್ಪರ್ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದಿದ್ದರಿಂದಾಗಿ ಯುವಕ ರೆಹಮಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮುಂದಿನ ಚಕ್ರದಡಿ ಆತನ ದೇಹ ಸಿಲುಕಿಕೊಂಡಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾದ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಕೊಂಡಿದ್ದಾರೆ.

ಟಿಪ್ಪರ್ ಚಾಲಕನ ನಿರ್ಲಕ್ಷ್ಯ: ಚಕ್ರಕ್ಕೆ ಸಿಲುಕಿ ಯುವಕ ದಾರುಣ ಸಾವು! Read More »

ಗಂಡ-ಹೆಂಡತಿ ಜಗಳವಾಡಿ ಸ್ವಂತ ಮಗುವನ್ನೇ ಕೊಂದರು…! ಹಾಸನದಲ್ಲಿ ನಡೆಯಿತು ಅಮಾನವೀಯ ಘಟನೆ

ಹಾಸನ: ಗಂಡ ಹೆಂಡತಿ ಜಗಳವಾಡಿ ಕೊನೆಗೆ ತಮ್ಮ ಸ್ವಂತ ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ಮಗುವನ್ನು ಕೊಂದ ತಂದೆ ತಾಯಿ ಬಳಿಕ ಶವವನ್ನು ಕಾಫಿ ತೋಟದಲ್ಲಿ ಹೂತು ಹಾಕಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಡ್ಲೂರುಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಕುಟುಂಬವೊಂದು ಇಲ್ಲೇ ಸಂಸಾರ ಸಮೇತವಾಗಿ ವಾಸವಾಗಿತ್ತು. ಅವರ ಒಂದೂವರೆ ವರ್ಷದ ಮಗು ಸಫೀಕ್ ಉಲ್ಲಾ ಇಸ್ಲಾಂನನ್ನು ಕೊಂದಿರುವ ಪೋಷಕರು

ಗಂಡ-ಹೆಂಡತಿ ಜಗಳವಾಡಿ ಸ್ವಂತ ಮಗುವನ್ನೇ ಕೊಂದರು…! ಹಾಸನದಲ್ಲಿ ನಡೆಯಿತು ಅಮಾನವೀಯ ಘಟನೆ Read More »