ಕ್ರೈಂ

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರ್ ಢಿಕ್ಕಿ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಗೆ ಪ್ರವಾಹ ಪರಿಸ್ಥಿತಿ ಪರಿಶೀಲನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುವ ಸಂದರ್ಭದಲ್ಲಿ ಈ ಅಪಘಾತವಾಗಿದೆ. ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪ್ರಯಾಣಿಸುತ್ತಿದ್ದ ವಾಹನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಇದ್ದ ಕಾರು ಹಿಂಬದಿಯಿಂದ ಢಿಕ್ಕಿಯಾಗಿದೆ. ಶಿವರಾಮ್ ಹೆಬ್ಬಾರ್ ಹಾಗೂ ಕಾರಿನಲ್ಲಿದ್ದ […]

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರ್ ಢಿಕ್ಕಿ Read More »

ಹೆಡ್‌ಲೈಟ್ ಡಿಮ್‌ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಾಮಾರಿ

ಚಿಕ್ಕಮಗಳೂರು: ಬೈಕಿನ ಹೆಡ್‌ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರ ತಂಡ ಬಜರಂಗದಳದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ. ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಹಾಗೂ ನಿತಿನ್ ಎಂಬ ಯುವಕರು ಕೊಪ್ಪ ತಾಲೂಕಿನ ಗುಣವಂತೆ ಸಮೀಪ ವಾಷಿಂಗ್ ಮೆಷಿನ್ ರಿಪೇರಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಕ್ಕಿಮನೆ ಮಾರ್ಗವಾಗಿ ವಾಪಸ್ ಬರುತ್ತಿದ್ದಾಗÀ ಕೊಪ್ಪ ಪಟ್ಟಣದಲ್ಲಿ ಈ ಘಟನೆ

ಹೆಡ್‌ಲೈಟ್ ಡಿಮ್‌ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಾಮಾರಿ Read More »

ಬೆಳ್ತಂಗಡಿ: ಮದುವೆ ನಿಶ್ಚಯವಾದ ಯುವಕನ ಕೊಲೆಗೈದ ಪ್ರಕರಣ:6 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬೆಳ್ತಂಗಡಿ: ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದ ಸಂಬಂಧಿಸಿದ ಆರು ಮಂದಿ ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ತಾಲೂಕಿನ ಆನಂದ ನಾಯ್ಕ(39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ(39), ಚಾರ್ಮಾಡಿ ನಿವಾಸಿ ವಿನಯ್ ಕುಮಾರ್(34) , ಮೂಡುಕೋಡಿ ನಿವಾಸಿ ಪ್ರಕಾಶ್(35), ಬಂಟ್ವಾಳ ಪುದು ನಿವಾಸಿ ಲೋಕೇಶ್(38), ಮೇಲಂತಬೆಟ್ಟು ನಿವಾಸಿ ನಾಗರಾಜ್(42) ಶಿಕ್ಷೆಗೆ ಅಪರಾಧಿಗಳು. ಇವರು ಬೆಳ್ತಂಗಡಿ

ಬೆಳ್ತಂಗಡಿ: ಮದುವೆ ನಿಶ್ಚಯವಾದ ಯುವಕನ ಕೊಲೆಗೈದ ಪ್ರಕರಣ:6 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ Read More »

ಪಾಣೆಮಂಗಳೂರು: ಸೇತುವೆ ಬಳಿ ಬೈಕ್ ಇಟ್ಟು ಸವಾರ ನಿಗೂಡ ನಾಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹೊಸ ಸೇತುವೆ ಸಮೀಪ ಮಧ್ಯರಾತ್ರಿ ಬೈಕ್ ಚಾಲನೆಯಲ್ಲಿಟ್ಟು ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾಗಿರು ಬೈಕ್ ಸವಾರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾಪತ್ತೆಯಾಗಿರುವ ಬೈಕ್ ಸವಾರನನ್ನು ಮೂಲತ ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ 15ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ಬಳಿಕ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ

ಪಾಣೆಮಂಗಳೂರು: ಸೇತುವೆ ಬಳಿ ಬೈಕ್ ಇಟ್ಟು ಸವಾರ ನಿಗೂಡ ನಾಪತ್ತೆ Read More »

ಮೂರು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಪಾಪಿ- ಆರೋಪಿ ಅಂದರ್

ಬೆಳಗಾವಿ: ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂದಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಮುಂಬೈ ಮೂಲದ ಯುವಕ ಸೇರಿದಂತೆ ಇಬ್ಬರ ಬಂಧನವಾಗಿದೆ. ಒಂದು ವಾರದ ಹಿಂದೆ ಬೆಳಗಾವಿಯಲ್ಲಿ ದುಷ್ಕೃತ್ಯ ನಡೆದಿತ್ತು ಎಂದು ತಿಳಿದುಬಂದಿದೆ. ವಾರದ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದ ಯುವಕ, ನೆರೆಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಕೇಳಿಬಂದಿದೆ. ಆದರೆ, ಮರ್ಯಾದೆಗೆ ಹೆದರಿ

ಮೂರು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಪಾಪಿ- ಆರೋಪಿ ಅಂದರ್ Read More »

ಭೀಕರ ರಸ್ತೆ ಅಪಘಾತ: 18 ಮಂದಿ ಸ್ಥಳದಲ್ಲೇ ಸಾವು

ಲಕ್ನೊ: ಟ್ರಕ್ ಒಂದು ನಿಂತಿದ್ದ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ 18 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೊ ವಲಯದ ಬಾರಾಬಂಕಿಯ ರಾಮ್ ಸನೆಹಿ ಘಾಟ್ ಬಳಿ ಕಳೆದ ತಡರಾತ್ರಿ ಸಂಭವಿಸಿದೆ. ಗಾಯಗೊಂಡಿರುವ 19 ಮಂದಿ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನಡಿ ಸಿಲುಕಿಕೊಂಡಿರುವ ಶವಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಲಕ್ನೊ ವಲಯ ಎಡಿಜಿ ನಾರಾಯಣ್ ಸಬತ್ ತಿಳಿಸಿದ್ದಾರೆ. ಪ್ರಧಾನಿ ಸಂತಾಪ, ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ

ಭೀಕರ ರಸ್ತೆ ಅಪಘಾತ: 18 ಮಂದಿ ಸ್ಥಳದಲ್ಲೇ ಸಾವು Read More »

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು

ಕುಂದಾಪುರ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಹಾಗೂ ತಲ್ಲೂರು ನಡುವಿನ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸ್ಥಳೀಯ ಸಂತೋಷ್ ನಗರದ ನಿವಾಸಿ ರಾಮ ಕುಲಾಲ್(೫೨) ಮೃತಪಟ್ಟವರು. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮ ಕುಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು Read More »

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತಣೆ ಪೊಲೀಸ್ ಸಿಬ್ಬಂದಿ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಮೊಬೈಲ್ ಫೋನ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಅಪ್ರಾಪ್ತ ಬಾಲಕಿಗೆ ಆಟೋ ರಿಕ್ಷಾ ಚಾಲಕ ಕಿರುಕುಳ ನೀಡಿದ ಬಗ್ಗೆ ಪೊಕ್ಸೊ ಪ್ರಕರಣವನ್ನು ಜನವರಿಯಲ್ಲಿ ದಾಖಲಿಸಲಾಗಿತ್ತು. ಆದರೆ ಈ ವೇಳೆ ಬಾಲಕಿಯ ಮೊಬೈಲ್ ಸಂಖ್ಯೆಯನ್ನು ಪಡೆದ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ದರ್ಜೆಯ ಸಿಬ್ಬಂದಿ ಆಕೆಗೆ ಕರೆ ಮಾಡಿ, ಸಂದೇಶ ಕಳುಹಿಸಿ ಅನುಚಿತವಾಗಿ

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತಣೆ ಪೊಲೀಸ್ ಸಿಬ್ಬಂದಿ ಬಂಧನ Read More »

ಮಂಗಳೂರು: ಪ್ರಜ್ಞೆ ತಪ್ಪಿಸಿ ನಗ-ನಗದು ದೋಚುತಿದ್ದ ಯುವಕ ಯುವತಿಯ ಬಂಧನ

ಮಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವರ ಪ್ರಜ್ಞೆ ತಪ್ಪಿಸಿ, ನಗ-ನಗದು ದೋಚಿ ಬಳಿಕ ಬ್ಲ್ಯಾಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಇನ್ ಲ್ಯಾಂಡ್ ಇಂಪಾಲ ಆಪಾರ್ಟ್‌ಮೆಂಟ್ ನ ಅಝ್ವೀನ್ ಸಿ.ಎಂ (೨೪) ಹಾಗೂ ಬೈಕಂಪಾಡಿ, ಕೆಬಿಎಸ್ ಬೊಟ್ಟು ಹೌಸ್ ಹತೀಜಮ್ಮಯಾನೆ ಸಫ್ನಾ(೨೩) ಬಂಧಿತ ಆರೋಪಿಗಳು ಘಟನೆಯ ವಿವರ: ದೂರುದಾರರ ಪರಿಚಯಸ್ಥರಾದ ಅಝ್ವೀನ್, ಹಾಗೂ ಹತೀಜಮ್ಮ ಇಬ್ಬರು ಜು.೧೯ ರ ರಾತ್ರಿ ಮನೆಗೆ ಬಂದು ಪಾರ್ಟಿ ಮಾಡುವ ಆಹ್ವಾನ

ಮಂಗಳೂರು: ಪ್ರಜ್ಞೆ ತಪ್ಪಿಸಿ ನಗ-ನಗದು ದೋಚುತಿದ್ದ ಯುವಕ ಯುವತಿಯ ಬಂಧನ Read More »

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿ ಓರ್ವ ಸಾವು, 7 ಮಂದಿಗೆ ಗಾಯ

ಬಂಟ್ವಾಳ: ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಆಟೋರಿಕ್ಷಾವೊಂದು ಪಲ್ಟಿಯಾಗಿ ಓರ್ವ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಇಂದು ನಡೆದಿದೆ. ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85)ಮೃತಪಟ್ಟವರು. ಆಟೋರಿಕ್ಷಾ ಸರಪಾಡಿಯಿಂದ ಬಂಟ್ವಾಳ ಕಡೆಗೆ ಹಲವು ಮಂದಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಂಟ್ವಾಳ ಕಡೆಗೆ ಆಗಮಿಸುವ ವೇಳೆ ಪರಿಯಪಾದೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಇನ್ನೂ ಅಲ್ಪಸ್ವಲ್ಪ ಗಾಯಗೊಂಡವರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿ

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿ ಓರ್ವ ಸಾವು, 7 ಮಂದಿಗೆ ಗಾಯ Read More »