ಕ್ರೈಂ

ಬೆಂಗಳೂರು: ಭೀಕರ ಅಪಘಾತ, ಮೂವರು ಸ್ಪಾಟ್ ಔಟ್| ಇಬ್ಬರು ಗಂಭೀರ

ಬೆಂಗಳೂರು : ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಬಳಿಕ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಮಳೆ ಬರುತ್ತಿದ್ದ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದೇ ಕಾರು ಡಿವೈಡರ್ ಡಿಕ್ಕಿ […]

ಬೆಂಗಳೂರು: ಭೀಕರ ಅಪಘಾತ, ಮೂವರು ಸ್ಪಾಟ್ ಔಟ್| ಇಬ್ಬರು ಗಂಭೀರ Read More »

ಮುಸ್ಲಿಂ ವಿದ್ಯಾರ್ಥಿನಿಯರನ್ನು ಎಳೆದೊಯ್ದು ಹಲ್ಲೆ ನಡೆಸಿ ದೌರ್ಜನ್ಯ| ಸಂಘ ಪರಿವಾರದ ಮೇಲೆ ಆರೋಪ|

ಮಡಿಕೇರಿ: ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಸಂಘ ಪರಿವಾರದ ಕಾರ್ಯಕರ್ತರು ಕಟ್ಟಡವೊಂದಕ್ಕೆ ಎಳೆದೊಯ್ದು ರಕ್ತಬರುವಂತೆ ಗುಂಪು ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ ಎನ್ನಲಾದ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ ಗುರುವಾರ ನಡೆದಿದೆ. ಹಲ್ಲೆಗೊಳಗಾದ ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ಶನಿವಾರ ಸಂತೆಯ ಖಾಸಗಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದು, ಸದ್ಯ ಕೊಡ್ಲಿಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರು ಗುರುವಾರ ತರಗತಿಗೆ ತೆರಳುತ್ತಿದ್ದ ವೇಳೆ ಅವರಿಬ್ಬರ ಹಿಂದೂ ಸ್ನೇಹಿತೆಯೊಬ್ಬಳು ಓರ್ವ ವಿದ್ಯಾರ್ಥಿನಿಯ ಬುರ್ಖಾವನ್ನು ಪಡೆದು

ಮುಸ್ಲಿಂ ವಿದ್ಯಾರ್ಥಿನಿಯರನ್ನು ಎಳೆದೊಯ್ದು ಹಲ್ಲೆ ನಡೆಸಿ ದೌರ್ಜನ್ಯ| ಸಂಘ ಪರಿವಾರದ ಮೇಲೆ ಆರೋಪ| Read More »

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ|

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸತ್ತ ವ್ಯಕ್ತಿಯೋರ್ವ ವಿಧಾನಸೌಧದ ಒಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಂದಕುಮಾರ್ (54) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಎನ್ನಲಾಗಿದೆ. ಕೂಡಲೇ ಈತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದ ಕುಮಾರ್‌ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಸಿ.ನಗರ ವ್ಯಾಪ್ತಿಯ ಪ್ಯಾಲೇಸ್‌ ಗುಟ್ಟಹಳ್ಳಿ ನಿವಾಸಿಯಾಗಿರುವ ನಂದಕುಮಾರ್‌ ತಮ್ಮ ಕುಟುಂಬಸ್ಥರ ವಿರುದ್ದ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕುಟುಂಬಸ್ಥರನ್ನು ಬಂಧಿಸಿ ನ್ಯಾಯ ಒದಗಿಸಿಲ್ಲ

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ| Read More »

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ|

ಬೆಂಗಳೂರು: ಭಿಕ್ಷುಕನ ಅಗಲಿಕೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಇಡೀ ಜನತೆಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ವಿದಾಯ ಹೇಳಲು ಸಾವಿರಾರು ಜನರೇ ಆಗಮಿಸಿದ್ದರು. ಎಲ್ಲರ ಬಾಯಲ್ಲೂ ಅರೆಹುಚ್ಚು ಬಸ್ಯಾ ಎಂದು ಕರೆಸಿಕೊಳ್ಳುತ್ತಿದ್ದ ಈತ ಏಕೆ ಹುಚ್ಚನಾದ ಎಂಬುದು ಯಾರಿಗೂ ಗೊತ್ತಿಲ್ಲ. ಕೆದರಿದ ಕೂದಲು, ಮೈಮೇಲಿನ ಬಟ್ಟೆ ಕೊಳೆಯಾಗಿದ್ದರೂ ಈತನ ಮೊಗದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ.

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ| Read More »

ಪ್ರೇಯಸಿಯ ಬೆತ್ತಲೆ ಫೋಟೋ ವಾಟ್ಸಪ್ ನಲ್ಲಿ ಸ್ಟೇಟಸ್| ಸಂಚು ಮಾಡಿ ವಿಕೃತಿ ‌ಮೆರೆದ ಪ್ರಿಯಕರ|

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ವಿಡಿಯೋ ಸೆರೆಹಿಡಿದು, ಫೋಟೋ ಎಡಿಟ್​ ಮಾಡಿ, ವಾಟ್ಸ್​ಆಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಶುಭಂ ಕೌಲೆ ವಿರುದ್ಧ ಮನನೊಂದ ವಿದ್ಯಾರ್ಥಿನಿ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶುಭಂ ಕೌಲೆ ತಮ್ಮದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಜತೆ ವಾಟ್ಸ್​ ಆ್ಯಪ್​ ಮೂಲಕ ಪರಿಚಯ ಬೆಳೆಸಿದ್ದ. ದಿನ ಕಳೆದಂತೆ ಪರಿಚಯ ಪ್ರೀತಿಗೆ ತಿರುಗಿತ್ತು.

ಪ್ರೇಯಸಿಯ ಬೆತ್ತಲೆ ಫೋಟೋ ವಾಟ್ಸಪ್ ನಲ್ಲಿ ಸ್ಟೇಟಸ್| ಸಂಚು ಮಾಡಿ ವಿಕೃತಿ ‌ಮೆರೆದ ಪ್ರಿಯಕರ| Read More »

ಪಡುಬಿದ್ರಿ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು| 25 ಅಡಿ ದೂರ ಎಸೆಯಲ್ಪಟ್ಟ ಸವಾರ ಸಾವು

ಉಡುಪಿ: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿರುವ ಘಟನೆ ಪಡುಬಿದ್ರಿಯ ಕೆಳಗಿನ ಪೇಟೆಯ ಹೆದ್ದಾರಿ ತಿರುವಿನಲ್ಲಿ ನಡೆದಿದೆ. ಮೃತರನ್ನು ಪಾದೆಬೆಟ್ಟು ನಿವಾಸಿ ಬಾಲಕೃಷ್ಣ ಭಟ್ (74) ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಭಟ್‌ ಅವರು ಮಂಗಳೂರು ಕಡೆಗೆ ಹೋಗುತ್ತಿದ್ದರು ಈ ವೇಳೆ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ ಬರುತ್ತಿದ್ದ ಕಾರು ಹಿಂಬದಿಯಿಂದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 25 ಅಡಿ ದೂರಕ್ಕೆ ಎಸೆಯಲ್ಪಟ್ಟರು.

ಪಡುಬಿದ್ರಿ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು| 25 ಅಡಿ ದೂರ ಎಸೆಯಲ್ಪಟ್ಟ ಸವಾರ ಸಾವು Read More »

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು

ಕಡಬ: ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿ ಸಹಸವಾರ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ಸುರೇಶ್ (53) ಎಂದು ಗುರುತಿಸಲಾಗಿದೆ. ಇವರು ಎಡಮಂಗಲದಿಂದ ಕೊಳಂಬೆ ಎಂಬಲ್ಲಿಗೆ ಟ್ಯಾಪಿಂಗ್ ಗೆ ಮಾಡಲು ತಮ್ಮ ಸಂತೋಷ್ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಸುರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು Read More »

ಬೇರೆ‌ ಜಾತಿಯವನ ಮದುವೆಯಾಗಿದ್ದಕ್ಕೆ ಮಗಳನ್ನೇ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿ ತಂದೆ

ರಾಟಿಬಾದ್: ಮಗಳು ಬೇರೆ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಕೋಪದಿಂದ ತಂದೆ ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಹೀನ ಕೃತ್ಯ ಮಧ್ಯಪ್ರದೇಶದ ರಾಟಿಬಾದ್​​ ನಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಮಹಿಳೆಗೆ 8 ತಿಂಗಳ ಮಗು ಇತ್ತು. ಆದರೆ ಆ ಮಗು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಮಗಳನ್ನು ಕಾಡಿನ ಸಮೀಪ ಕರೆದುಕೊಂಡು ಹೋಗಿ ತಂದೆಯೇ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಸಧ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ

ಬೇರೆ‌ ಜಾತಿಯವನ ಮದುವೆಯಾಗಿದ್ದಕ್ಕೆ ಮಗಳನ್ನೇ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿ ತಂದೆ Read More »

ಭೀಕರ ಅಪಘಾತ| ನಟ ದಿ.ಸುಶಾಂತ್ ಸಿಂಗ್ ಕುಟುಂಬಸ್ಥರ ದುರ್ಮರಣ|

ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಲಖಿಸರಾಯ್​ ಜಿಲ್ಲೆಯಲ್ಲಿ ಟ್ರಕ್​​ಗೆ ಎಸ್​ಯುವಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಎಸ್​ಯುವಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಟ್ರಕ್​ ಚಾಲಕ ಹಾಗೂ ಸಹಾಯಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾರೆ.ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಮೃತ ಪಟ್ಟ ಆರು ಮಂದಿ ಹರಿಯಾಣದ ಹೆಚ್ಚುವರಿ

ಭೀಕರ ಅಪಘಾತ| ನಟ ದಿ.ಸುಶಾಂತ್ ಸಿಂಗ್ ಕುಟುಂಬಸ್ಥರ ದುರ್ಮರಣ| Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು|

ಮಂಗಳೂರು: ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಅದಲು-ಬದಲು ಪ್ರಕರಣದಲ್ಲಿನ ಸಂತ್ರಸ್ತ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮೂಲಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. ಅದಲು ಬದಲು ಪ್ರಕರಣದಲ್ಲಿ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಗುವಿನ ಡಿ ಎನ್ ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಮಗು ಮೃತಪಟ್ಟಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 15ರಂದು, ಕುಂದಾಪುರ ಮೂಲದ ಪೋಷಕರು, ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು,

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು| Read More »