ಕ್ರೈಂ

ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾ ಗೆ ಬಲಿ

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಪ್ರದೀಪ್ ರಾಜ್(46) ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ‘ಕಿರಾತಕ’, ‘ಅಂಜದಗಂಡು’, ‘ಬೆಂಗಳೂರು 23’ ಸೇರಿದಂತೆ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಪ್ರದೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ

ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾ ಗೆ ಬಲಿ Read More »

ಸ್ವಾಮೀ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಫೋಸ್ಟ್| ಶಿಕ್ಷಣ ಇಲಾಖೆ ಅಧಿಕಾರಿ ಸಸ್ಪೆಂಡ್

ರಾಯಚೂರು: ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ‌ ಪೋಸ್ಟ್ ಹಾಕಿದ ರಾಯಚೂರು ಜಿಲ್ಲೆಯ ಲಿಂಗಸುಗೂರು ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ‌ ಲೇಖನ ಬರೆದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್​ನಲ್ಲಿ ಪೋಸ್ಟ್​ ಮಾಡಿದಕ್ಕೆ ಸನಾವುಲ್ಲಾರನ್ನು ಅಮಾನತ್ತು ಮಾಡಿ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಆದೇಶ ನೀಡಿದ್ದಾರೆ. ಕಳೆದ ಜನವರಿ‌ 12ರ ವಿವೇಕಾನಂದರ 150 ನೇ ಜಯಂತಿಯಂದು ಸನಾವುಲ್ಲಾ ಪೋಸ್ಟ್ ಮಾಡಿದ್ದರು. ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ, ಬದುಕಿನ ಬಗ್ಗೆ

ಸ್ವಾಮೀ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಫೋಸ್ಟ್| ಶಿಕ್ಷಣ ಇಲಾಖೆ ಅಧಿಕಾರಿ ಸಸ್ಪೆಂಡ್ Read More »

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಪೊಲೀಸ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು, (ಜ.19): ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ. ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಲಾಟೆ ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಪೊಲೀಸ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು Read More »

ಅಂತರ ಜಿಲ್ಲಾ ಖದೀಮರ ಬಂಧನ: ಎಂಟು ಲಕ್ಷ ರೂ. ಮೌಲ್ಯದ ವಶ

ಮೈಸೂರು: ಇಬ್ಬರು ಅಂತರ ಜಿಲ್ಲಾ ಖದೀಮರನ್ನು ಬಂಧಿಸಿರುವ ಪೊಲೀಸರು ಅವರಿಂದ ಎಂಟು ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ನಿವಾಸಿಗಳಾದ ಅರುಣ(29) ಮತ್ತು ಗುರುಪ್ರಸಾದ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಆಟೋ ಚಾಲಕರಾದ ಇಬ್ಬರು ಬೇರೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು.ಆರೋಪಿಗಳು ಮೈಸೂರು ನಗರ, ಮದ್ದೂರು, ಕೊಳ್ಳೇಗಾಲದಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದರು. ಇವರಿಂದ ಕಳವು ಮಾಲು ಖರೀದಿಸಿದ್ದ ಪಟ್ಟಣದ ನಿವಾಸಿಗಳಾದ ನಹೀಮ್ತಾಜ್ ಅಜರ್ ಪಾಷ ಮತ್ತು ಮನು ಅಲಿಯಾಸ್ ಕಳ್ಳಮನು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ

ಅಂತರ ಜಿಲ್ಲಾ ಖದೀಮರ ಬಂಧನ: ಎಂಟು ಲಕ್ಷ ರೂ. ಮೌಲ್ಯದ ವಶ Read More »

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಇನ್ಸ್ ಪೆಕ್ಟರ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ. ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಲಾಟೆ ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು,

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಇನ್ಸ್ ಪೆಕ್ಟರ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು Read More »

ನಟಿ ರೈಮಾ ಶಿಮು ಕೊಲೆ ಪ್ರಕರಣ| ಕೊಲೆ ಸಂಚಿನ ರೂವಾರಿ ಯಾರು ಗೊತ್ತೇ?

ಸಮಗ್ರ ನ್ಯೂಸ್: ಬಾಂಗ್ಲಾದೇಶಿ ನಟಿ ರೈಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಆಕೆಯ ಪತಿ ಶಖಾವತ್ ಅಲಿ ನೊಬೆಲ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಸೋಮವಾರ ಢಾಕಾದ ಕಡಮ್ತೋಳಿ ಪ್ರದೇಶದ ಅಲಿಪುರ ಸೇತುವೆ ಬಳಿ ಗೋಣಿಚೀಲದಲ್ಲಿ ರೈಮಾ ಅವರ ಮೃತದೇಹ ಪತ್ತೆಯಾಗಿತ್ತು ನಂತರ ಶಖಾವತ್ ಅಲಿ ನಾಪತ್ತೆಯಾಗಿದ್ದ. ನಟಿಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದ ನಂತರದಲ್ಲಿ ನಾನಾರೀತಿ ಅನುಮಾನ ಶುರುವಾಗಿತ್ತು. ತಕ್ಷಣ ಕಂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈಗ

ನಟಿ ರೈಮಾ ಶಿಮು ಕೊಲೆ ಪ್ರಕರಣ| ಕೊಲೆ ಸಂಚಿನ ರೂವಾರಿ ಯಾರು ಗೊತ್ತೇ? Read More »

ಬ್ರಹ್ಮಾವರ: ಅಪಘಾದಲ್ಲಿ ಗಂಭೀರ ಗಾಯಗೊಂಡ ಮಹಿಳೆ ಮೃತ್ಯು

ಬ್ರಹ್ಮಾವರ: ರಸ್ತೆ ಅಪಘಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ. ಸರಿತಾ ಪಿಂಟೊ (38) ಮೃತ ಮಹಿಳೆ. ಇವರು ಸೋಮವಾರ ಕೋಟದಲ್ಲಿರುವ ತನ್ನ ತಂದೆ-ತಾಯಿ ಮನೆಗೆ ಕಳೆದ ಕೆಲವು ದಿನಗಳ ಹಿಂದೆ ಕುವೈಟ್ ನಿಂದ ಆಗಮಿಸಿದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗುವಿನೊಂದಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮಾವರದ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಅವರು ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಗ ಮತ್ತು ಪತಿ ಸಣ್ಣ ಪುಟ್ಟ ಗಾಯಗಳೊಂದಿಗೆ

ಬ್ರಹ್ಮಾವರ: ಅಪಘಾದಲ್ಲಿ ಗಂಭೀರ ಗಾಯಗೊಂಡ ಮಹಿಳೆ ಮೃತ್ಯು Read More »

ಸುಬ್ರಹ್ಮಣ್ಯ: ಬಿಸ್ಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಸುಬ್ರಹ್ಮಣ್ಯ : ಬಿಸಿಲೆ ಘಾಟ್ ನ ರಸ್ತೆಯ ಬದಿ ಇರುವ ನದಿಯ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈತನನ್ನು ಬದುಕಿಸಲು ಯುವ ತೇಜಸ್ಸು ಸಂಸ್ಥೆಯ ಸದಸ್ಯರ ಗರಿಷ್ಠ ಪ್ರಯತ್ನದ ಹೊರತಾಗಿಯೂ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ತಿಳಿಸಿದ್ದಾರೆ.

ಸುಬ್ರಹ್ಮಣ್ಯ: ಬಿಸ್ಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ Read More »

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ

ಪುತ್ತೂರು: ಅನ್ಯಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಅದು ಪರಸ್ಪರ ಹಲ್ಲೆಗೆ ತಿರುಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಲಘು ಲಾಠಿ ಪ್ರಹಾರದ ಮೂಲಕ ಗುಂಪು ಚದುರಿಸಿದ ಘಟನೆ ಪುತ್ತೂರಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೆಲ ಯುವಕರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಗಡಿಯಾರದ ಸತ್ತಿಕಲ್ಲು ನಿವಾಸಿ ರಷ್ಪಕ್, ಪೆರ್ನೆ ನಿವಾಸಿಗಳಾದ ಹರ್ಷಿತ್, ಸತೀಶ್, ಜಗದೀಶ್ ಎನ್ನಲಾಗಿದೆ. ಅನ್ಯಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಾಗ ಪೊಲೀಸರು

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ Read More »

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ| ಸ್ಪರ್ಧಾಳುಗಳ ಮೇಲೆ ಕೇಸು ದಾಖಲು

ಧರ್ಮಪುರಿ: 1 ಕೆ.ಜಿ. ಚಿಕನ್ ಚಿಲ್ಲಿ ಹಾಗೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ದಾಖಲಿಸಿರುವ ಘಟನೆ ಧರ್ಮಪುರಿಯ ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಂಗಲ್ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಪ್ರತಿ ವರ್ಷ ಈ ಸ್ಪರ್ಧೆಯನ್ನು ಇಲ್ಲಿ ಆಯೋಜಿಸುತ್ತಿದ್ದರು. ಸ್ಪರ್ಧೆಯಲ್ಲಿ 15 ಕೆ.ಜಿ. ಚಿಕನ್ ಫ್ರೈ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಇನ್ನೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 21 ಮಂದಿ ಯುವಕರು ಭಾಗಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿತ್ತು.

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ| ಸ್ಪರ್ಧಾಳುಗಳ ಮೇಲೆ ಕೇಸು ದಾಖಲು Read More »