ಕ್ರೈಂ

ಮಂಗಳೂರು: ಪಿಎಸ್ಐ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಗನಿಂದಲೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ PSI ಮಗ ಅತ್ಯಾಚಾರ ಎಸಗಿದ್ದಾನೆ. ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಒಂದು ಕೃತ್ಯ ಎಸಗಿದ್ದಾನೆ. ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಇನ್ಸ್ಪೆಕ್ಟರ್ ಮಗ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಬಾಲಕಿಗೆ […]

ಮಂಗಳೂರು: ಪಿಎಸ್ಐ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ| ಆರೋಪಿಯ ಬಂಧನ Read More »

ಎ.6ರಂದು ಸೌಜನ್ಯಳ ನ್ಯಾಯಕ್ಕಾಗಿ ನಡೆಯಬೇಕಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ

ಸಮಗ್ರ ನ್ಯೂಸ್: ಉಜಿರೆಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಎಪ್ರಿಲ್‌ 6ರಂದು ಧರ್ಮಸ್ಥಳದಲ್ಲಿ ನಡೆಯಬೇಕಾಗಿದ್ದ ಪ್ರತಿಭಟನೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಪ್ರತಿಭಟನೆಗೆ ತಡೆ ನೀಡಬೇಕು ಎಂದು ಕೋರಿ ಧನಕೀರ್ತಿ ಆರಿಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೂ ಪ್ರತಿಭಟನೆ ನಡೆಸದಂತೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿತು. ಅರ್ಜಿದಾರರ ಪರ ವಕೀಲರು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿರುವ ಕುರಿತಂತೆ ವಾಟ್ಸ್‌ಆಯಪ್‌ ಸಂದೇಶ

ಎ.6ರಂದು ಸೌಜನ್ಯಳ ನ್ಯಾಯಕ್ಕಾಗಿ ನಡೆಯಬೇಕಿದ್ದ ಪ್ರತಿಭಟನೆಗೆ ಹೈಕೋರ್ಟ್ ತಾತ್ಕಾಲಿಕ ತಡೆ Read More »

ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ| ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆಗೆ ಐವರು ಬಲಿ

ಸಮಗ್ರ ನ್ಯೂಸ್: ನಿಂತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಭೀಕರ ಅಫಘಾತ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು ನಸುಕಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಾಗಲಕೋಟೆ ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ನೆಲೋಗಿ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ| ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆಗೆ ಐವರು ಬಲಿ Read More »

ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..!

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಮನನೊಂದು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ತನ್ನ ಮೇಲೆ FIR ದಾಖಲಾಗಿದಕ್ಕೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್ ಐ ಆರ್ ನಿಂದ ಮನನೊಂದು ಸಾವನ್ನಪ್ಪುತ್ತಿರುವುದಾಗಿ ಬರೆದುಕೊಂಡಿದ್ದಾರೆ. ವಿನಯ್ ಸೋಮಯ್ಯ, ಶಾಸಕ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ

ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..! Read More »

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ

ಸಮಗ್ರ ನ್ಯೂಸ್: ದೇಶಭಕ್ತಿ ಚಿತ್ರಗಳು ಮತ್ತು ‘ಭರತ್ ಕುಮಾರ್’ ಎಂಬ ಅಡ್ಡಹೆಸರಿನಿಂದ ಹೆಸರುವಾಸಿಯಾದ ಭಾರತೀಯ ನಟ ಮತ್ತು ಚಲನಚಿತ್ರ ನಿರ್ದೇಶಕ ಮನೋಜ್ ಕುಮಾರ್, ತಮ್ಮ 87 ನೇ ವಯಸ್ಸಿನಲ್ಲಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು. ಕುಮಾರ್ 1999 ರಲ್ಲಿ ನಟನೆಯಿಂದ ನಿವೃತ್ತರಾದರು, ಆದರೆ ಅವರ ಚಲನಚಿತ್ರಗಳನ್ನು ಇನ್ನೂ ಯುವಕರು ವೀಕ್ಷಿಸುತ್ತಾರೆ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು 1992 ರಲ್ಲಿ ಪದ್ಮಶ್ರೀ ಮತ್ತು ಭಾರತೀಯ ಚಲನಚಿತ್ರ ಮತ್ತು ಕಲೆಗಳಿಗೆ ನೀಡಿದ ಕೊಡುಗೆಗಾಗಿ 2015 ರಲ್ಲಿ

ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ನಿಧನ Read More »

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಹತ್ತಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ನೀರಕಟ್ಟೆಯ ಅಪಾಯಕಾರಿ ತಿರುವನ್ನು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದು, ಹತ್ತಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರು ಹಾಗೂ

ನೆಲ್ಯಾಡಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ| ಓರ್ವ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ Read More »

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬ್ರಹ್ಮಾವರದ ಬಿರಿಯಾನಿ ಪಾಯಿಂಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ. ಮೃತರನ್ನು ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ(11) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ಶಿಬಿರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಂಶ್ ಶೆಟ್ಟಿ ಶಾಲೆಗೆ ಹೋಗಲು ರಸ್ತೆ ದಾಟಲು ರಸ್ತೆ ಬದಿ ನಿಂತುಕೊಂಡಿದ್ದನು. ಈ

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು Read More »

ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ| 17 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಗುಜರಾತ್‌ನ ಬನಸ್ಕಾಂತದ ದೀಸಾದ ಧುನ್ವಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆ ಮತ್ತು ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 17 ಕಾರ್ಮಿಕರು ಸಾವನ್ನಪ್ಪಿದರು. ಉಳಿದ 3 ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಯ ಸಮಯದಲ್ಲಿ ಅನೇಕ ಕಾರ್ಮಿಕರು ಸಾವನ್ನಪ್ಪಿದರು. ಮಾಹಿತಿಯ ಪ್ರಕಾರ, ಬಾಯ್ಲರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ನಂತರ, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಾರಂಭಿಸಿದರು. ಬೆಂಕಿಯಿಂದಾಗಿ ಕಾರ್ಖಾನೆಯ ಮೊದಲ ಮಹಡಿ ಕುಸಿದು ಬಿದ್ದಿದೆ. ಪ್ರಸ್ತುತ

ಪಟಾಕಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ| 17 ಮಂದಿ ಸಜೀವ ದಹನ Read More »

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಇನ್ನಿಲ್ಲ!!? ಸೋಶಿಯಲ್ ಮೀಡಿಯಾದಲ್ಲಿ ಸಾವಿನ ಸುದ್ದಿ ವೈರಲ್

ಸಮಗ್ರ ನ್ಯೂಸ್: ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಿಧನ ಹೊಂದಿದ್ದಾನೆ ಎನ್ನುವ ಸುದ್ದಿಯೊಂದನ್ನು ನಿತ್ಯಾನಂದನ ಸಹೋದರಿಯ ಮಗ ಸುಂದರೇಶ್ವರನ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸ್ವಾಮಿಯವರ ನಿಧನದ ಸುದ್ದಿ ವೈರಲ್ ಆಗಿದೆ. ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂದು ಅವರ ಸೋದರಳಿಯ ಸುಂದರೇಶ್ವರನ್ ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಅವರು

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಇನ್ನಿಲ್ಲ!!? ಸೋಶಿಯಲ್ ಮೀಡಿಯಾದಲ್ಲಿ ಸಾವಿನ ಸುದ್ದಿ ವೈರಲ್ Read More »

ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ

ಸಮಗ್ರ ನ್ಯೂಸ್: ಹೈಡ್ರೊವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರ ಬಳಿ ಇದ್ದ ₹9 ಲಕ್ಷ ಮೌಲ್ಯದ ಮಾದಕ ವಸ್ತು ಮತ್ತು ಇತರ ಸಾಮಗ್ರಿ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಸುಭಾಷ್‌ ನಗರದ ತೈಝೀರ್ ಇಸ್ಮಾಯಿಲ್ ಹುಸೇನ್ (23), ಶಿವಬಾಗ್ ನಿವಾಸಿ ರೋಯ್‌ಸ್ಟನ್ ಕ್ಸೇವಿಯರ್ ಲೋಬೊ (22) ಬಂಧಿತರು. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿ ತಂದು ಮಂಗಳೂರಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ

ಮಂಗಳೂರು: 9ಲಕ್ಷ ಮೌಲ್ಯದ ಮಾದಕವಸ್ತು ವಶ; ಇಬ್ಬರ ಬಂಧನ Read More »