ಕ್ರೈಂ

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ

ಸಮಗ್ರ ನ್ಯೂಸ್: ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾದ ಮಲಯಾಳಂ ಚಲನಚಿತ್ರ ಮತ್ತು ಸೀರಿಯಲ್ ನಟ ಮೇಘನಾಥನ್ ಗುರುವಾರ(ನ.21) ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ. ಮೇಘನಾಥನ್ ಅವರಿಗೆ 60 ವರ್ಷ ವಯಸ್ಸಾಗಿತ್ತು.ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 2 ಗಂಟೆಗೆ ನಿಧನರಾಗಿದ್ದಾರೆ. ಮೇಘನಾಥನ್ ಖ್ಯಾತ ನಟ ಬಾಲನ್ ಕೆ ನಾಯರ್ ಅವರ ಪುತ್ರರಾಗಿದ್ದಾರೆ. ಅವರು ಚಮಯಂ, ಚೆಂಕೋಲ್ ಮತ್ತು ಈ ಪುಜಯುಮ್ ಕಡನ್ನು ಮುಂತಾದ ಗಮನಾರ್ಹ ಕೃತಿಗಳನ್ನು ಒಳಗೊಂಡಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ […]

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ Read More »

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ

ಸಮಗ್ರ‌ ನ್ಯೂಸ್: ಹಿರಿಯ ಪತ್ರಕರ್ತ, ಚಿಂತಕ , ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖರ್ (93) ಅವರು ನ.20ರ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜುಲೈ 17, 1932 ರಂದು ಉಡುಪಿ ಜಿಲ್ಲೆಯ ಓಂತಿಬೆಟ್ಟುವಿನಲ್ಲಿ ಜನಿಸಿದ ವಿಟಿಆರ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಬಳಿಕ ದಲಿತರ ಧ್ವನಿಯಾಗಿ ಕೆಲಸ ಮಾಡಲು 1981 ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ದೇಶಾದ್ಯಂತ

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ Read More »

ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ

ಸಮಗ್ರ ನ್ಯೂಸ್:ಭಿಕ್ಷಾಟನೆಗೆ ಬಂದ ಫಕೀರನೊಬ್ಬ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.ಈ ಘಟನೆ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಭಿಕ್ಷಾಟನೆ ಮಾಡಲು ಬಂದ ಫಕೀರ ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿ ಒಬ್ಬಂಟಿಯಾಗಿದ್ದ ಮನೆಯೊಳಗೆ ನುಗ್ಗಿ ಅಜ್ಜಿಯ ಮೇಲೆ ರೇಪ್ ಮಾಡಿ ಬಂದಿದ್ದಾನೆ. ಅತ್ಯಾಚಾರ ಮಾಡಿದವನನ್ನು ಇದೇ ಗ್ರಾಮದ ಪಕ್ಕದ ಐನೊಳ್ಳಿ ಗ್ರಾಮದ ಫಕೀರ ತಯ್ಯಬ್ ಎಂದು ಗುರುತಿಸಲಾಗಿದೆ. ಫಕೀರ ವೇಷಧಾರಿ ತಯ್ಯಬ್ ಬಿಕ್ಷಾಟನೆ ಮಾಡುತ್ತಾ ಊರೂರು

ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ Read More »

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ| ಗುಲ್ಬರ್ಗಾ‌ ಮೂಲದ ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಪಿ.ಜಿ.ಯೊಂದರಲ್ಲಿದ್ದ ಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಗುಲ್ಬರ್ಗಾ ಮೂಲದ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪಿ.ಜಿ.ಯಿಂದ ಕಾಲೇಜಿಗೆ ಹೋಗುತ್ತಿದ್ದರು. ನ.16ರಿಂದ ಆಕೆ ಪಿ.ಜಿ.ಯಿಂದ ನಾಪತ್ತೆಯಾಗಿದ್ದರು. ಈ ಕುರಿತು ವಿದ್ಯಾರ್ಥಿನಿಯ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಗುಲ್ಬರ್ಗಾದ ಕಾರ್ತಿಕ್ ಎಂಬಾತ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ| ಗುಲ್ಬರ್ಗಾ‌ ಮೂಲದ ಯುವಕ ಅರೆಸ್ಟ್ Read More »

ಸರಣಿ ಅಪಘಾತ ಇಬ್ಬರು ಮೃತ್ಯು ಹಲವು ಮಂದಿಗೆ ಗಾಯ

ಸಮಗ್ರ ನ್ಯೂಸ್:ಇಂದುಮುಂಜಾನೆ ನೋಯ್ದಾ ಮತ್ತು ಪಶ್ಚಿಮ ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ದಟ್ಟ ಮಂಜಿನಿಂದ ಆವರಿಸಿದ ವಾತಾವರಣದಿಂದಾಗಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ಮಂಗಳವಾರ (ನ.19) ಬೆಳಿಗ್ಗೆ ಸಂಭವಿಸಿದೆ. ಕಡಿಮೆ ಗೋಚರತೆಯಿಂದಾಗಿ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಇದೇ ವೇಳೆ ಪಾಣಿಪತ್‌ನಿಂದ ಮಥುರಾಗೆ ತೆರಳುತ್ತಿದ್ದ ಬಸ್ ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು

ಸರಣಿ ಅಪಘಾತ ಇಬ್ಬರು ಮೃತ್ಯು ಹಲವು ಮಂದಿಗೆ ಗಾಯ Read More »

ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ

ಸಮಗ್ರ ನ್ಯೂಸ್: ವಿಜಯವಾಣಿ, ಕರಾವಳಿ ಅಲೆ, ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಪುದುವೆಟ್ಟು ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ

ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ Read More »

ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ..

ಸಮಗ್ರ ನ್ಯೂಸ್:ತಾಯಿಯೊಬ್ಬಳು ತನ್ನ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ್ದಾಳೆ.ಇದು ನಡೆದಿರುವುದು ಚೀನಾದಲ್ಲಿ. ಅಸಲಿಗೆ ಆಗಿದ್ದು ಏನೆಂದರೆ, ಚೀನಾದ ಜಿಯಾಂಗ್ಲುನಲ್ಲಿ ಮಗನಿಗಾಗಿ ಈ ತಾಯಿ ಹುಡುಗಿ ಹುಡುಕಿದ್ದಾಳೆ. ನಂತರ ಒಳ್ಳೆಯ ಹುಡುಗಿ ಸಿಕ್ಕಳು ಎಂದು ಮದುವೆಗೂ ಸಿದ್ದ ಮಾಡಿದ್ದಾಳೆ. ಕೊನೆಗೆ, ಆ ಯುವತಿಯ ಎಡಗೈಯಲ್ಲಿ ಮಚ್ಚೆ ಇರುವುದನ್ನು ನೋಡಿದ ಈ ಅಮ್ಮನಿಗೆ ಡೌಟ್ ಶುರುವಾಗಿದೆ. ಏಕೆಂದ್ರೆ ಆ ಮಚ್ಚೆ ಥೇಟ್ ತನ್ನ ಮಗಳ ಕೈಯಲ್ಲಿ ಇರುವಂತೆಯೇ ಇತ್ತು. ಅಷ್ಟಕ್ಕೂ ಈ ಯುವತಿ 20 ವರ್ಷಗಳ ಹಿಂದೆ

ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದುವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ.. Read More »

ಹಸೆಮಣೆ ಏರಲು ಸಜ್ಜಾದ ಯುವತಿಗೆ ಕಾದಿತ್ತು ಕಂಟಕ

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿಯಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಅಚ್ಚುಮೆಚ್ಚಿನ ಮಗಳು, ನೇರ ಮಸಣ ಸೇರಿದ್ದ ಘಟನೆ ನಡೆದಿದೆ. ವೆಂಕಟರೆಡ್ಡಿಪಲ್ಲಿಯ ಶ್ರೀರಾಮಿರೆಡ್ಡಿ ಮತ್ತು ಲಕ್ಷ್ಮೀದೇವಿ ದಂಪತಿ, ಮಗಳು ಗೀತವಾಣಿ ಎಂದು ಗುರುತಿಸಲಾಗಿದೆ. ತಮ್ಮ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ ತಂದೆ ಶ್ರೀರಾಮಿರೆಡ್ಡಿ ಅವರ ಪುತ್ರಿಯರಾದ ಗೀತವಾಣಿ ಮತ್ತು ಬಿಂದು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಬದುಕು ಕಟ್ಟಿಕೊಂಡರೆ, ಪುತ್ರ ಬಿ.ಟೆಕ್ ಮುಗಿಸಿ, ಆಗ ತಾನೇ ಕೆಲಸ ಹುಡುಕುತ್ತಿದ್ದ. ಈ ವೇಳೆ ಮಗಳು ಗೀತವಾಣಿ ಮದುವೆ ನಿಶ್ಚಯಿಸಿದ್ದ

ಹಸೆಮಣೆ ಏರಲು ಸಜ್ಜಾದ ಯುವತಿಗೆ ಕಾದಿತ್ತು ಕಂಟಕ Read More »

ಕೆರಳಿದ ದೇವಾಲಯದ ಆನೆ- ಮಾವುತ ಸೇರಿ ಇಬ್ಬರು ಸಾವು!

ಸಮಗ್ರ ನ್ಯೂಸ್: ತಮಿಳುನಾಡಿನ ಪ್ರಸಿದ್ದ ತಿರುಚೆಂದೂರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾಕಾನೆಯೊಂದು ಆಹಾರ ನೀಡುತ್ತಿದ್ದ ವೇಳೆ ಮಾವುತ ಹಾಗೂ ಆತನ ಸಂಬಂಧಿಯನ್ನು ತುಳಿದು ಕೊಂದಿರುವ ಆಘಾತಕಾರಿ ಘಟನೆ ನ 17 ರಂದು ನಡೆದಿದೆ. ಮಧ್ಯಾಹ್ನ 3:30 ರ ಸುಮಾರಿಗೆ ಶೆಡ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಾವುತ ಉದಯ ಕುಮಾ‌ರ್ ಮತ್ತು ಆತನ ಸಂಬಂಧಿ ಸಿಸುಬಾಲನ್ ಆನೆಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಮದವೇರಿ ದಾಳಿ ಮಾಡಿದೆ.ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ.

ಕೆರಳಿದ ದೇವಾಲಯದ ಆನೆ- ಮಾವುತ ಸೇರಿ ಇಬ್ಬರು ಸಾವು! Read More »

ಉಡುಪಿ:ANF ಮತ್ತು ನಕ್ಸಲರ. ನಡುವೆ ಗುಂಡಿನ ಚಕಮಕಿ| ನಕ್ಸಲ್ ನಾಯಕ ವಿಕ್ರಂ‌ ಗೌಡ‌ ಎನ್ ಕೌಂಟರ್ ಗೆ ಬಲಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ(ನ.18) ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್

ಉಡುಪಿ:ANF ಮತ್ತು ನಕ್ಸಲರ. ನಡುವೆ ಗುಂಡಿನ ಚಕಮಕಿ| ನಕ್ಸಲ್ ನಾಯಕ ವಿಕ್ರಂ‌ ಗೌಡ‌ ಎನ್ ಕೌಂಟರ್ ಗೆ ಬಲಿ Read More »