ಕ್ರೈಂ

ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ನವೀನ್ ನಾರಾಯಣ್ ಬೆಳಗಾವ್ಕರ್ (13) ಎನ್ನುವ ಬಾಲಕ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾರಾಯಣ್ ಬೆಳಗಾಂವ್ಕರ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಬಲೂನ್ ಊದುವಾಗ ಒಮ್ಮೆಲೇ ಗಂಟಲಲ್ಲಿ ಸಿಲುಕಿ ದುರಂತ ಸಂಭವಿಸಿದೆ. ಉಸಿರು ತೆಗೆದುಕೊತ್ತಿರುವಾಗಲೇ ಗಂಟಲಲ್ಲಿ ಬಲೂನ್ ಸಿಲುಕಿದೆ. ಉಸಿರುಗಟ್ಟಿ ನಾರಾಯಣ್ […]

ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವು Read More »

‘ಬ್ರಹ್ಮಗಂಟು’ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ

ಸಮಗ್ರ ನ್ಯೂಸ್: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಹಿಯಿಂದ ಜನಪ್ರಿಯತೆ ಪಡೆದಿದ್ದರು. ಮದುವೆ ಬಳಿಕ ಹೈದರಾಬಾದ್ ನಲ್ಲಿ ವಾಸವಾಗಿದ್ದ ಶೋಭಿತಾ, ಇದೀಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಡರಾತ್ರಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ನಟಿಯ ದುಡುಕಿನ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರುವ ಪೋಷಕರು ಹೈದರಾಬಾದ್ ಗೆ ದೌಡಾಯಿಸಿದ್ದಾರೆ. ಹಿಟ್ಲರ್ ಕಲ್ಯಾಣ, ನಿನ್ನಿಂದಲೇ ಸೇರಿದಂತೆ

‘ಬ್ರಹ್ಮಗಂಟು’ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ Read More »

ಕಲಬುರಗಿ | 93 ವರ್ಷದ ಮಹಿಳಾ ಖೈದಿ ಪರೋಲ್ ಮೇಲೆ ಬಿಡುಗಡೆ

ಸಮಗ್ರ ನ್ಯೂಸ್ : 93 ವರ್ಷದ ವೃದ್ಧ ಮಹಿಳಾ ಖೈದಿಯನ್ನು ಗುರುವಾರ ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ನ.16ರಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 93 ವರ್ಷದ ವೃದ್ದೆ, ಮಹಿಳಾ ಸಜೆ ಕೈದಿಯೊಬ್ಬರು, ಸ್ವ ಕಾರ್ಯಗಳನ್ನು ಮಾಡಿಕೊಳ್ಳಲಾರದ ಸ್ಥಿತಿಯಲ್ಲಿ, ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದ ಸ್ಥಿತಿಯನ್ನು ಕಂಡು ಮುರುಗಿದ್ದರು.ಕಾನೂನು ಸೇವಾ ಪ್ರಾಧಿಕಾರಕ್ಕೆ ಸದರಿ ಮಹಿಳೆಯನ್ನು ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದರು. ಅವರ

ಕಲಬುರಗಿ | 93 ವರ್ಷದ ಮಹಿಳಾ ಖೈದಿ ಪರೋಲ್ ಮೇಲೆ ಬಿಡುಗಡೆ Read More »

ಚಿಂಚೋಳಿ | ವೃದ್ಧೆಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಸಮಗ್ರ ನ್ಯೂಸ್:ಚಿಂಚೋಳಿ ಕಲಬುರಗಿ ಜಿಲ್ಲೆ ತಾಲ್ಲೂಕಿನ ಗ್ರಾಮವೊಂದರ 80 ವರ್ಷದ ವಯೋ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಬೆಳ್ಳಿ ಚೈನ್ ಹಾಗೂ ಮೊಬೈಲ್ ದೋಚಿದ್ದ ಆರೋಪಿಯನ್ನು ಚಿಂಚೋಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಾಲ್ಲೂಕಿನ ಐನೋಳ್ಳಿ ಗ್ರಾಮದ ತಯ್ಯಬ್ ಮಿರನಶಹಾ ಫಕೀರ ಎಂಬಾತನನ್ನು ಹೈದರಾಬಾದಿನಲ್ಲಿ ವಶಕ್ಕೆ ಪಡೆದ ಪೊಲೀಸರು, ಆತನ ಆರೋಗ್ಯ ತಪಾಸಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಈತನ ಬಳಿ ಮೊಬೈಲ್, ಆಧಾರ ಕಾರ್ಡ್ ಮತ್ತು ಗುರುತಿನ ಚೀಟಿಯಿಲ್ಲವಂತೆ. ಕುಟುಂಬದ ಜತೆಗೆ ಸರಿಯಾಗಿ ನಂಟು ಇಲ್ಲದೇ ಊರೂರು

ಚಿಂಚೋಳಿ | ವೃದ್ಧೆಯ ಮೇಲೆ ಅತ್ಯಾಚಾರ: ಆರೋಪಿ ಬಂಧನ Read More »

ಮಲಗಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ ಮಾಡಿದ ಹೆಂಡತಿ.!

ಸಮಗ್ರ ನ್ಯೂಸ್:ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದು ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಮೀನು ವ್ಯಾಪಾರಿಯಾಗಿದ್ದ ರವಿ ಎಂಬಾತ 20 ವರ್ಷಗಳ ಹಿಂದೆ ಜಯಂತಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ.ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.ರವಿ ದಿನವೂ ಕುಡಿದು ಮನೆಗೆ ಬರುತ್ತಿದ್ದನು ಮತ್ತು ಪ್ರತಿದಿನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಇದರಿಂದ ಪತಿ-ಪತ್ನಿಯ ನಡುವೆ ಜಗಳ ಉಂಟಾಗಿತ್ತು. ಒಂದು ಹಂತದಲ್ಲಿ ಪತಿಯ ಕ್ರೌರ್ಯವನ್ನು ಸಹಿಸಲಾಗದೆ ಜಯಂತಿ ಅಡುಗೆ ಎಣ್ಣೆಯನ್ನು ಕುದಿಸಿ ಮಲಗಿದ್ದ

ಮಲಗಿದ್ದ ಗಂಡನ ಮೇಲೆ ಕಾದ ಎಣ್ಣೆ ಸುರಿದು ಹತ್ಯೆ ಮಾಡಿದ ಹೆಂಡತಿ.! Read More »

ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ ಮಗುವಿಗೆ ಗಾಯ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಮನೆ ಮುಂಭಾಗ ಎಂದಿನಂತೆ ಅಟವಾಡುತ್ತಿದ್ದ ಸಹನಾ (5) ಎಂಬ ಮಗುವಿನ ಮೇಲೆ ನಾಯಿ ದಾಳಿ ನಡೆಸಿದೆ. ಈ ಘಟನೆ ಬಗ್ಗಸಗೋಡು ಗ್ರಾಮದಲ್ಲಿ ನಡೆದಿದೆ. ನಾಯಿ ದಾಳಿ ನಡೆಸಿದ ಪರಿಣಾಮ ಮಗುವಿನ ಕೆನ್ನೆ ಕಣ್ಣಿನ ಭಾಗದಲ್ಲಿ ಗಾಯವಾಗಿದೆ ಅದೃಷ್ಟವಶಾತ್ ಮಗುವಿನ ಕಿರುಚಾಟ ಕೇಳಿ ಪಾಲಕರು ತಕ್ಷಣಕ್ಕೆ ಬಂದ ಕಾರಣ ನಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ.ಆಗಬಹುದಾಗಿದ್ದ ದೊಡ್ಡ ಅನಾಹುತ ದಿಂದ ಮಗು ಪರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಗುವಿನ ತಂದೆ ಸುಂದ್ರೇಶ್ ಇತ್ತೀಚೆಗೆ ನಾಯಿಗಳ ಉಪಟಳ ಹೆಚ್ಚಾಗಿದೆ

ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ ಮಗುವಿಗೆ ಗಾಯ Read More »

ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದ 8 ಜನರಲ್ಲಿ ಇಬ್ಬರು ಈಜಾಡಲು ತೆರಳಿ ಸಾವನ್ನಪ್ಪಿದ ಘಟನೆ ನ.20ರಂದು ಸಂಜೆ 5 ಗಂಟೆ ಸುಮಾರಿಗೆ ಮಿಡ್ಸ್ ಬೀಚ್‌ನಲ್ಲಿ ನಡೆದಿದೆ. ಬೆಂಗಳೂರಿನ ವಿಜಯ ನಗರದ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ (32), ರವಿ ನಾಗರಾಜ (26) ಇವರೇ ಸಾವನ್ನಪ್ಪಿದ ದುರ್ದೈವಿ ಗಳಾಗಿದ್ದಾರೆ.ಗುರುವಾರ, ಶುಕ್ರವಾರ ಕಂಪನಿಗೆ ರಜೆ ಇರುವುದರಿಂದ ಇನ್ನು ಶನಿವಾರ, ಭಾನುವಾರ ಸರಕಾರಿ ರಜೆ ಇರುವುದರಿಂದ ನಾಲ್ಕು ದಿನದ ರಜೆಯ ನಿಮಿತ್ತ 8 ಗೆಳೆಯರು ಗೋಕರ್ಣಕ್ಕೆ ಗುರುವಾರ ಬೆಳಿಗ್ಗೆ ಆಗಮಿಸಿದ್ದರು.

ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು Read More »

ಬೆಳ್ತಂಗಡಿ: ಲವ್, ಸೆಕ್ಸ್ ಮತ್ತು‌ ದೋಖಾ| ಮೊಬೈಲ್ ಚಾಟಿಂಗ್ ನಿಂದ ಬಯಲಾಯ್ತು ಯುವತಿ ಆತ್ಮಹತ್ಯೆ ಪ್ರಕರಣದ ಅಸಲಿ ಸತ್ಯ| ಅಷ್ಟಕ್ಕೂ ಅವರಿಬ್ಬರ ನಡುವೆ ನಡೆದದ್ದೇನು?

ಸಮಗ್ರ ನ್ಯೂಸ್: ಪ್ರಿಯಕರನ ಪ್ರೀತಿಗೆ ಮರುಳಾಗಿ ಲವ್, ಸೆಕ್ಸ್, ದೋಖಾಗೆ ಅಪ್ರಾಪ್ತ ಯುವತಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಸದ್ಯ ಆರೋಪಿ ಯುವಕ ಪರಾರಿಯಾಗಿದ್ದು, ಪೊಲೀಸರು ಆತನ‌ ವಿರುದ್ಧ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸಂಬಂಧಿ ಪ್ರವೀಣ್ ಎಂಬಾತನಿಂದ ಮದುವೆ ನೆಪದಲ್ಲಿ ವಂಚನೆಗೊಳಗಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.ಬಾಲಕಿ ನವೆಂಬರ್ 20 ರಂದು ಇಲಿ ವಿಷ ಸೇವಿಸಿದ್ದು,

ಬೆಳ್ತಂಗಡಿ: ಲವ್, ಸೆಕ್ಸ್ ಮತ್ತು‌ ದೋಖಾ| ಮೊಬೈಲ್ ಚಾಟಿಂಗ್ ನಿಂದ ಬಯಲಾಯ್ತು ಯುವತಿ ಆತ್ಮಹತ್ಯೆ ಪ್ರಕರಣದ ಅಸಲಿ ಸತ್ಯ| ಅಷ್ಟಕ್ಕೂ ಅವರಿಬ್ಬರ ನಡುವೆ ನಡೆದದ್ದೇನು? Read More »

ಮಂಗಳೂರು: ಆಕಸ್ಮಿಕ ಬೆಂಕಿಗಾಹುತಿಯಾದ ಜೋಯ್ ಅಲುಕಾಸ್ ನ ಬೊಲೆರೋ

ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಜೀಪೊಂದು ಏಕಾಏಕಿ ಬೆಂಕಿಗಾಹುತಿಯಾಗಿದೆ. ನಗರದ ಫಳ್ಳೀರ್ ಸ್ಟರಕ್ ರಸ್ತೆಯಲ್ಲಿ ರಾತ್ರಿ ಸುಮಾರು 9.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಯಾವುದೇ ಜೀವಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯ ಜೋಯ್ ಅಲುಕಾಸ್ ಚಿನ್ನಾಭರಣ ಮಳಿಗೆಗೆ ಸೇರಿದ ಮಹೀಂದ್ರಾ ಬೊಲೇರೋ ಜೀಪ್ ಇದಾಗಿದ್ದು ಬೆಂಕಿ ಹೊತ್ತಿಕೊಂಡ ತಕ್ಷಣ ಅದರಲ್ಲಿದ್ದ ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದೆ. ಆದ್ರೆ

ಮಂಗಳೂರು: ಆಕಸ್ಮಿಕ ಬೆಂಕಿಗಾಹುತಿಯಾದ ಜೋಯ್ ಅಲುಕಾಸ್ ನ ಬೊಲೆರೋ Read More »

ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ

ಸಮಗ್ರ ನ್ಯೂಸ್:ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಪಾರ್ಟ್ನರ್ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ನಡೆದಿದ್ದು, ಈ ವಿಚಾರ ನಾಯಿಯ ಮೂಲಕ ಬೆಳಕಿಗೆ ಬಂದಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್, ಬಂಧಿತ ಆರೋಪಿಯನ್ನು ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದ್ದು, ಸಂತ್ರಸ್ತೆಯನ್ನು ಗಂಗಿ ಕುಮಾರಿ (24) ಎಂದು ತಿಳಿದು ಬಂದಿದೆ. ಇವರು ಜೋರ್ಡಾಗ್

ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ Read More »