ಕ್ರೈಂ

ಟಿಪ್ಪರ್ ಅಡಿ ಸಿಲುಕಿ ಬೈಕ್ ಸವಾರನಿಗೆ ಹೊತ್ತಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರ ಟಿಪ್ಪರ್ ಅಡಿಗೆ ಸಿಲುಕಿ ಬೆಂಕಿ ಹೊತ್ತಿಕೊಂಡಿರುವಂತಹ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದರ ಶಾಕಿಂಗ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ತೆಲಂಗಾಣದ ನರಸಾಪುರ ಜಂಕ್ಷನ್‌ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬೈಕ್ ಸವಾರ ದಶರಥ್ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಮೊದಲು ಟಿಪ್ಪರ್‌ಗೆ ಡಿಕ್ಕಿಯಾಗಿ ಅದರಡಿ ಸಿಲುಕಿಕೊಂಡಿದ್ದಾರೆ. ಟಿಪ್ಪರ್ ಚಾಲಕ ಮಾತ್ರ ಇದಾವುದೂ ತಿಳಿಯದಂತೆ ಮುಂದೆ ಸಾಗಿದ್ದಾನೆ. ತಕ್ಷಣ ಏಕಾಏಕಿ ಟಿಪ್ಪರ್ ಹಾಗೂ ಬೈಕ್‌ಗೆ ಬೆಂಕಿ […]

ಟಿಪ್ಪರ್ ಅಡಿ ಸಿಲುಕಿ ಬೈಕ್ ಸವಾರನಿಗೆ ಹೊತ್ತಿಕೊಂಡ ಬೆಂಕಿ Read More »

ಮನೆ ಕಟ್ಟಲು ಹಣ ತೆಗೆದುಕೊಂಡು ಬರುತ್ತಿದ್ದ ನಿವೃತ್ತ ಶಿಕ್ಷಕನ ಹತ್ಯೆ| ತಲೆಗೆ ಹೊಡೆದು ಹಣ ದರೋಡೆಗೈದ ಕಿರಾತಕರು

ಸಮಗ್ರ ನ್ಯೂಸ್: ಕನಸಿನ ಮನೆ ಕಟ್ಟುವ ಉದ್ದೇಶಕ್ಕಾಗಿ ಬ್ಯಾಂಕ್‌ನಿಂದ ತಮ್ಮ ನಿವೃತ್ತಿಯ ಹಣವನ್ನು ವಿತ್‌ಡ್ರಾ ಮಾಡಿ ಮರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹಣವನ್ನು ದೋಚಿದ್ದಾರೆ. ಈ ಕೃತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ. ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಕೊಲೆಗೀಡಾದವರು. ಅವರ ಬಳಿ ಇದ್ದ ಮೂರು ಲಕ್ಷ ರೂ. ಹಣದೊಂದಿಗೆ ಪಾತಕಿಗಳು ಪರಾರಿಯಾಗಿದ್ದಾರೆ. ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ಬಂದಿದ್ದ ಹಣವನ್ನು ನೆಲಮಂಗಲದ ಘೋರಘಟ್ಟ ಗ್ರಾಮದ

ಮನೆ ಕಟ್ಟಲು ಹಣ ತೆಗೆದುಕೊಂಡು ಬರುತ್ತಿದ್ದ ನಿವೃತ್ತ ಶಿಕ್ಷಕನ ಹತ್ಯೆ| ತಲೆಗೆ ಹೊಡೆದು ಹಣ ದರೋಡೆಗೈದ ಕಿರಾತಕರು Read More »

ಅಮೃತಸರ: ಅಕಾಲಿದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ‌ ಖಲಿಸ್ತಾನಿ ಬೆಂಬಲಿಗರಿಂದ ಫೈರಿಂಗ್

ಸಮಗ್ರ ನ್ಯೂಸ್: ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿನಡೆಸಲಾಗಿದ್ದು, ಜನರು ಆರೋಪಿಗಳನ್ನು ಹಿಡಿದಿದ್ದಾರೆ. ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಖಲಿಸ್ತಾನಿ ಬೆಂಬಲಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅಮೃತಸರ: ಅಕಾಲಿದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ‌ ಖಲಿಸ್ತಾನಿ ಬೆಂಬಲಿಗರಿಂದ ಫೈರಿಂಗ್ Read More »

ಬಸ್‌ನಲ್ಲಿ ಸೀಟಿಗಾಗಿ ಜಗಳ : ಯುವಕರನ್ನು ಕರೆಸಿ ಹೊಡೆಸಿದ ಮುಸ್ಲಿಂ ಮಹಿಳೆಯರು ..!

ಸಮಗ್ರ ನ್ಯೂಸ್: ಬಸ್‌ನಲ್ಲಿ ಸೀಟಿಗಾಗಿ ಜಗಳ ನಡೆದಿದ್ದು. ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ, ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ವಿಷಯ ತಿಳಿದ ಕೂಡಲೆ ಸಿನಿಮಾ ಶೈಲಿಯಲ್ಲಿ ಸುಮಾರು 10 ಮುಸ್ಲಿಂ ಯುವಕರು ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದು. ಬೈಕ್‌ನಲ್ಲಿ ಹಿಂಬಾಲಿಸಿಕೊಂಡು

ಬಸ್‌ನಲ್ಲಿ ಸೀಟಿಗಾಗಿ ಜಗಳ : ಯುವಕರನ್ನು ಕರೆಸಿ ಹೊಡೆಸಿದ ಮುಸ್ಲಿಂ ಮಹಿಳೆಯರು ..! Read More »

ಶೋಭಿತಾ ಶಿವಣ್ಣ ಸಾವಿನ ನಿಜ ಕಾರಣ ಬಯಲು ಮಾಡಿದ ಮರಣೋತ್ತರ ವರದಿ

ಸಮಗ್ರ ನ್ಯೂಸ್: ಕನ್ನಡ ಕಿರುತೆರೆ ನಟಿ ಶೋಭಿತಾ ಶಿವಣ್ಣ ಸಾವಿನ ನಿಖರ ಕಾರಣವೇನೆಂದು ಅವರ ಮರಣೋತ್ತರ ಪರೀಕ್ಷಾ ವರದಿ ಖಚಿತಪಡಿಸಿದೆ. ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಸ್ಪಷ್ಟವಾಗಿದೆ. ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ಶೋಭಿತಾ ಶಿವಣ್ಣ ಮೊನ್ನೆ ತಡರಾತ್ರಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಆದರೆ ಚೆನ್ನಾಗಿಯೇ ಇದ್ದ ಅವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಏನಾಗಿದೆ ಎಂದು ಎಲ್ಲರೂ ಅಚ್ಚರಿಪಟ್ಟುಕೊಂಡಿದ್ದರು.ಅಲ್ಲದೆ, ಅವರ ಸಾವಿನಲ್ಲಿ ಯಾರದ್ದಾದರೂ ಕೈವಾಡವಿರಬಹುದೇ ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ

ಶೋಭಿತಾ ಶಿವಣ್ಣ ಸಾವಿನ ನಿಜ ಕಾರಣ ಬಯಲು ಮಾಡಿದ ಮರಣೋತ್ತರ ವರದಿ Read More »

ಬೆಳಗಾವಿಯಲ್ಲಿ ವಾಟ್ಸಾಪ್ ಸ್ಟೇಟಸ್ ಗೆ ಫೋಟೋ ಹಾಕಿದಕ್ಕೆ, ಮನನೊಂದ ಯುವತಿ ಆತ್ಮಹತ್ಯೆಗೆ ಶರಣು!

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಯುವತಿಗೆ ಮದುವೆ ಆಗಿದೆ ಆದರು ಕೂಡ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಈಕೆಯ ಫೋಟೋ ಹಾಕಿದ್ದಾನೆ. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ, ಮನನೊಂದ ಆಕೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಆರತಿ ಕಾಂಬಳೆ (26) ಎಂದು ತಿಳಿದುಬಂದಿದೆ. ಈಕೆ ಮದುವೆಯಾಗಿ ರಾಯಭಾಗ್ ತಾಲೂಕಿನ

ಬೆಳಗಾವಿಯಲ್ಲಿ ವಾಟ್ಸಾಪ್ ಸ್ಟೇಟಸ್ ಗೆ ಫೋಟೋ ಹಾಕಿದಕ್ಕೆ, ಮನನೊಂದ ಯುವತಿ ಆತ್ಮಹತ್ಯೆಗೆ ಶರಣು! Read More »

ನಾಪತ್ತೆಯಾಗಿದ್ದ ಸಂದೀಪ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್:ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ| ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 1.5 ಕಿ.ಮೀ. ದೂರ ನಾರಡ್ಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ನ.2ರಂದು ಸಂಜೆ ಪತ್ತೆಯಾಗಿದೆ. ಆತನನ್ನು ಸ್ನೇಹಿತ, ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನು ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು

ನಾಪತ್ತೆಯಾಗಿದ್ದ ಸಂದೀಪ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ Read More »

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಿನ್ನೆ (ಸೋಮವಾರ ಡಿ.2) ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆಯೊಂದು ನಡೆದಿತ್ತು. ಇದೀಗ ಇದಕ್ಕೆ ಸಂಬಂಧಪಟ್ಟಂತೆ ರಾತ್ರಿ ಮೃತದೇಹ ದೊರಕಿದ್ದು, ಹೊರತೆಗೆಯಲಾಗಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್‌ (38) ಎಂಬುವವರೇ ಮೃತ ವ್ಯಕ್ತಿ. ಇವರು ಸಂಜೆ ಸರಿ ಸುಮಾರು ಐದರಿಂದ ಆರು ಗಂಟೆ ಸುಮಾರಿಗೆ ನದಿಗೆ ಇಳಿದಿದ್ದಾರೆ. ನಂತರ ಮುಳುಗಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಶೌರ್ಯ

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಕಣ್ಮರೆಯಾಗಿದ್ದಾತ ಶವವಾಗಿ ಪತ್ತೆ Read More »

ದ.ಕ ಜಿಲ್ಲಾ ಕಾಂಗ್ರೆಸ್‌ ಕಛೇರಿಯಲ್ಲಿ ಜಿಲ್ಲೆಯ ಇಬ್ಬರು ಹಿರಿಯ ಕಾಂಗ್ರೆಸ್ ಮುಖಂಡರ ಗಲಾಟೆ ! ನಿಯಂತ್ರಣಕ್ಕೆ ಪೊಲೀಸ್‌ ಎಂಟ್ರಿ

ಸಮಗ್ರ ನ್ಯೂಸ್ :ದ.ಕ ಜಿಲ್ಲಾ ಕಾಂಗ್ರೆಸ್’ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು. ಜಿಲ್ಲೆಯ ಇಬ್ಬರು ಹಿರಿಯ ನಾಯಕರು ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ಗೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ ನಡೆದ ಗ್ರಾ. ಪಂ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ಗ್ರಾ ಪಂಚಾಯತ್ ಸದಸ್ಯರಿಗೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆಯಾಗಿತ್ತು.

ದ.ಕ ಜಿಲ್ಲಾ ಕಾಂಗ್ರೆಸ್‌ ಕಛೇರಿಯಲ್ಲಿ ಜಿಲ್ಲೆಯ ಇಬ್ಬರು ಹಿರಿಯ ಕಾಂಗ್ರೆಸ್ ಮುಖಂಡರ ಗಲಾಟೆ ! ನಿಯಂತ್ರಣಕ್ಕೆ ಪೊಲೀಸ್‌ ಎಂಟ್ರಿ Read More »

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ| ಕೊಲೆ ಶಂಕೆ; ದೂರು ದಾಖಲು

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ . ಈ ಬಗ್ಗೆ ವಿನಯ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್‌ನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ. ಸಂದೀಪ್‌ ಆ ದಿನ ಮನೆಗೆ ಬಾರದೇ ಇದ್ದಾಗ

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ| ಕೊಲೆ ಶಂಕೆ; ದೂರು ದಾಖಲು Read More »