ಕರಾವಳಿ

ಉಡುಪಿ:ಬಿಜೆಪಿ ಮುಖಂಡನ ಮನೆಗೆ ಅಬಕಾರಿ ದಾಳಿ ನಡೆಸಿ ಓರ್ವನ ಬಂಧನ

ಸಮಗ್ರ ನ್ಯೂಸ್‌ : ಬ್ರಹ್ಮಾವರ ಇಂದಿರಾನಗರದ ಮನೆಯೊಂದರ ಮೇಲೆ ಎ.8ರಂದು ರಾತ್ರಿ ವೇಳೆ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಂತೆ ಖಚಿತ ಮಾಹಿತಿ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾನಗರದಲ್ಲಿರುವ ರಮೇಶ ಪ್ರಭು ಎಂಬವರ ಮನೆ ಮೇಲೆ ಈ ಅಬಕಾರಿ ದಾಳಿ ನಡೆದಿದೆ. […]

ಉಡುಪಿ:ಬಿಜೆಪಿ ಮುಖಂಡನ ಮನೆಗೆ ಅಬಕಾರಿ ದಾಳಿ ನಡೆಸಿ ಓರ್ವನ ಬಂಧನ Read More »

ಖುತುಬ್-ಎ-ರಂಜಾನ್| ರಾಜ್ಯಾದ್ಯಂತ ಎ.11ಕ್ಕೆ ರಜೆ ಘೋಷಣೆ

ಸಮಗ್ರ ನ್ಯೂಸ್: ಖುತುಬ್-ಎ-ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ 11.04,2024 ರ ನಾಳೆ ರಾಜ್ಯಾದ್ಯಂತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಈ ಕುರಿತು ಆದೇಶ ಹೊರಡಿಸಿದ್ದು,ಖುತುಬ್-ಎ-ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ 11.04,2024 ರ ನಾಳೆ ರಾಜ್ಯಾದ್ಯಂತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖುತುಬ್-ಎ-ರಂಜಾನ್ ಹಬ್ಬದ ಸಾರ್ವತಿಕ ರಜೆಯನ್ನು 11.04.2024 10.04.2024 ರಂದು ನೀಡುವ ಕುರಿತು ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯಿಸುವಂತೆ ಖುತುಬ್-ಎ-ರಂಜಾನ್ ಹಬ್ಬದ ರಜೆಯನ್ನು ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಸಾರವಾಗಿ 11.04.2024 ಬದಲಿಗೆ ದಿನಾಂಕ:

ಖುತುಬ್-ಎ-ರಂಜಾನ್| ರಾಜ್ಯಾದ್ಯಂತ ಎ.11ಕ್ಕೆ ರಜೆ ಘೋಷಣೆ Read More »

ಚಂದ್ರ ದರ್ಶನ‌ ಹಿನ್ನಲೆ| ದ.ಕ, ಉಡುಪಿ ಜಿಲ್ಲೆಗಳಲ್ಲಿ ಎ.10ರಂದು ಈದ್ ಉಲ್ ಫಿತರ್ ಆಚರಣೆ

ಸಮಗ್ರ ನ್ಯೂಸ್: ಕೇರಳದ ಪೊನ್ನಾನಿಯಲ್ಲಿ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ (ಎ.10) ಈದುಲ್ ಫಿತ್‌ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಇಂದು ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಕೇರಳದ ಪೊನ್ನಾನಿಯಲ್ಲಿ ಆಗಿರುವುದರಿಂದ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದುಲ್ ಫಿತ್‌ರ್ ಆಚರಿಸಲು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್

ಚಂದ್ರ ದರ್ಶನ‌ ಹಿನ್ನಲೆ| ದ.ಕ, ಉಡುಪಿ ಜಿಲ್ಲೆಗಳಲ್ಲಿ ಎ.10ರಂದು ಈದ್ ಉಲ್ ಫಿತರ್ ಆಚರಣೆ Read More »

ಅತ್ಯಂತ ಶ್ರೀಮಂತ ದೇವಸ್ಥಾನ ಯಾವುದು ಗೊತ್ತಾ? ದಕ್ಷಿಣ ಕನ್ನಡದ ಜನರಿಗೆ ಹೆಮ್ಮೆಯ ವಿಚಾರವಿದು?

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸತತ ಹದಿಮೂರನೇಯ ವರ್ಷವೂ ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುಲ ಎಂಬ ಪಟ್ಟ ಉಳಿಸಿಕೊಂಡಿದೆ. ಈ ಬಾರಿ ದೇಗುಲದ ಆದಾಯ ದಾಖಲೆಯನ್ನು ಬರೆದಿದೆ. ಕುಕ್ಕೆಯ ಆದಾಯ ಕೇವಲ ಭಕ್ತರಿಂದ ಮಾತ್ರ ಬರುತ್ತಾ? ದೇಗುಲಕ್ಕೆ ಇರುವ ಬೇರೆ ಆದಾಯದ ಮೂಲಗಳು ಯಾವುದು ಎಂಬುವುದರ ಬಗ್ಗೆ ಕುತುಹೂಲ ಇದ್ಯಾ, ಹಾಗಾದರೆ ಈ ಸ್ಟೋರಿ ನೋಡಿ. 13ನೇ ವರ್ಷವೂ ರಾಜ್ಯದ ನಂಬರ್ 1 ಶ್ರೀಮಂತ ದೇಗುಲದಕ್ಷಿಣ ಭಾರತದಲ್ಲೇ ನಾಗಾರಾಧನೆಗೆ

ಅತ್ಯಂತ ಶ್ರೀಮಂತ ದೇವಸ್ಥಾನ ಯಾವುದು ಗೊತ್ತಾ? ದಕ್ಷಿಣ ಕನ್ನಡದ ಜನರಿಗೆ ಹೆಮ್ಮೆಯ ವಿಚಾರವಿದು? Read More »

ಎ.14: ಕಡಲನಗರಿಯಲ್ಲಿ ಕೇಸರಿ ಕಹಳೆ ಮೊಳಗಿಸಲು ನಮೋ ಎಂಟ್ರಿ| ಕಾವೇರಿದ ಚುನಾವಣಾ ರಣಾಂಗಣ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರಲಾರಂಭಿಸಿದ್ದು ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಇಂದು ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ದ.ಕ ಜಿಲ್ಲೆಗೆ

ಎ.14: ಕಡಲನಗರಿಯಲ್ಲಿ ಕೇಸರಿ ಕಹಳೆ ಮೊಳಗಿಸಲು ನಮೋ ಎಂಟ್ರಿ| ಕಾವೇರಿದ ಚುನಾವಣಾ ರಣಾಂಗಣ Read More »

ಚುನಾವಣಾ ಪ್ರಚಾರದ ಭರಾಟೆ ಶುರು/ ಎಪ್ರಿಲ್14ಕ್ಕೆ ಕರಾವಳಿಗೆ ಮೋದಿ ಎಂಟ್ರಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆಯಬೇಕಿದ್ದ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶವನ್ನು ಮಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿಯಿಂದ ಚುನಾವಣಾ ಪ್ರಚಾರ ನಡೆಯಲಿದೆ. ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಸಭೆಲಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಹೆಬ್ಬಾಳ- ಬ್ಯಾಟರಾಯನಪುರದಲ್ಲಿ ಸಂಜೆ 6:00 ರಿಂದ 7:00 ರವರೆಗೆ ಪಥಸಂಚಲನ ನಡೆಯಲಿದೆ.

ಚುನಾವಣಾ ಪ್ರಚಾರದ ಭರಾಟೆ ಶುರು/ ಎಪ್ರಿಲ್14ಕ್ಕೆ ಕರಾವಳಿಗೆ ಮೋದಿ ಎಂಟ್ರಿ Read More »

ಮಂಗಳೂರು: ಮನೆಯವರು ಇಫ್ತಾರ್ ಗೆ ತೆರಳಿದ್ದ ವೇಳೆ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ಉರುಮಣೆ ಸಮೀಪ ಭಾನುವಾರ ನಡೆದಿದೆ. ಸಫ್ವಾನ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕ ಸಫ್ವಾನ್ ನ ಮನೆಯವರೆಲ್ಲಾ ಇಫ್ತಾರ್ ಕೂಟಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಒಬ್ಬನೇ ಇದ್ದ ಸಫ್ವಾನ್ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಮನೆಯವರು ನೀಡಿದ ದೂರಿನ ಮೇರೆಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮನೆಯವರು ಇಫ್ತಾರ್ ಗೆ ತೆರಳಿದ್ದ ವೇಳೆ ಯುವಕ ಆತ್ಮಹತ್ಯೆ Read More »

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಕೋಟ

ಸಮಗ್ರ ನ್ಯೂಸ್‌ : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಜಿ ಪ್ರಧಾನಿ, ಜೆಡಿಎಸ್ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ನಾನು ಅತ್ಯಂತ ಗೌರವಿಸುವ ನಾಯಕರಲ್ಲಿ ದೇವೇಗೌಡರೂ ಒಬ್ಬರು. ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾಗಲೂ ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಾ ಎಂದು ದೇವೇಗೌಡರು ಆಶೀರ್ವದಿಸಿದರು ಎಂದು ಕೋಟ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಕೋಟ Read More »

ಸುಬ್ರಹ್ಮಣ್ಯ: ಗ್ರಾಮ ಕಾಂಗ್ರೆಸ್ ಸಮಿತಿ ಪೂರ್ವಭಾವಿ ಸಭೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಡಬ ಬ್ಲಾಕ್ ನ ಸುಬ್ರಹ್ಮಣ್ಯದ ಕಾಂಗ್ರೆಸ್ ಗ್ರಾಮ ಸಮಿತಿ ಯ ಚುನಾವಣೆ ಪ್ರಚಾರ ಪೂರ್ವಭಾವಿ ಸಭೆಯು ಎ.6ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ವಿಧಾನಸಭೆ ಕ್ಷೇತ್ರದ ಚುಣಾವಣಾ ಉಸ್ತುವಾರಿ ಜಯಪ್ರಕಾಶ್ ರೈ, ಕಡಬ ಬ್ಲಾಕ್ ನ ಚುಣಾವಣಾ ಉಸ್ತುವಾರಿ ಕಿರಣ್ ಬುಡ್ಲೆಗುತ್ತು, ಚುನಾವಣೆ ಪ್ರಚಾರ ಸಮಿತಿ ಸಂಯೋಜಕ ಪಿ.ಪಿ.ವರ್ಗೀಸ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸಹ ಸಂಯೋಜಕ ಕೆ.ಪಿ.ತೋಮಸ್ಸ್, ಚುನಾವಣೆ ಪ್ರಚಾರ

ಸುಬ್ರಹ್ಮಣ್ಯ: ಗ್ರಾಮ ಕಾಂಗ್ರೆಸ್ ಸಮಿತಿ ಪೂರ್ವಭಾವಿ ಸಭೆ Read More »

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ

ಸಮಗ್ರ ನ್ಯೂಸ್‌ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಖ್ಯ ಶಿಕ್ಷಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೋಳ ವಂಜಾರಕಟ್ಟೆ ನಿವಾಸಿ ಬರಬೈಲು ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಂಜಾರಕಟ್ಟೆ ಇಲ್ನೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ. ಈತ ಪ್ರಾಥಮಿಕ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ದೂರಿಗಳಿದ್ದು, ಊರವರು ಕೂಡಾ ಆತನಿಗೆ ಬುದ್ದಿವಾದ ಹೇಳಿದ್ದರು. ಆದರೂ ಈ ಮುಖ್ಯ

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ Read More »