ಕರಾವಳಿ

ಸುಳ್ಯದ ಕಲ್ಮಕಾರಿನಲ್ಲಿ ರಬ್ಬರ್ ಗೋಡೌನ್ ಗೆ ಬೆಂಕಿ; ಅಪಾರ ನಷ್ಟ

ಸಮಗ್ರ ನ್ಯೂಸ್: ರಬ್ಬರ್‌ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಸಂಭವಿಸಿದೆ. ಇಲ್ಲಿನ ಕೊರಗಪ್ಪ ಮೆಂಟೆಕಜೆ ಅವರ ರಬ್ಬರ್‌ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ.ಘಟನೆಯಲ್ಲಿ ಐದು ಕ್ವಿಂಟಾಲ್‌ ಗೂ ಅಧಿಕ ರಬ್ಬರ್‌ ಬೆಂಕಿಗಾಹುತಿಗಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಲಾಯಿತು.

ಸುಳ್ಯದ ಕಲ್ಮಕಾರಿನಲ್ಲಿ ರಬ್ಬರ್ ಗೋಡೌನ್ ಗೆ ಬೆಂಕಿ; ಅಪಾರ ನಷ್ಟ Read More »

ಬೆಳ್ತಂಗಡಿ: ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ| ಸ್ಥಳೀಯರ ಸಾಹಸದಿಂದ ಬಚಾವಾದ ವಾಹನ| ಕಣ್ಣೀರಾದ ಚಾಲಕ

ಸಮಗ್ರ ನ್ಯೂಸ್: ಬೈಹುಲ್ಲು ಮಾರಾಟಕ್ಕೆ ಆಗಮಿಸುತ್ತಿದ್ದ ಮಿನಿ ಲಾರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆ ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ನಡೆದಿದ್ದು, ಸ್ಥಳೀಯರು ಸಾಹಸ ಪ್ರದರ್ಶಿಸಿ ಬೆಂಕಿಯನ್ನು ನಂದಿಸಿ ಲಾರಿಯನ್ನು ಉಳಿಸಿದ್ದಾರೆ. ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈ ಹುಲ್ಲನ್ನು ಹಾಕಲು ತನ್ನ ಮಿನಿ ಲಾರಿಯಲ್ಲಿ ಹುಲ್ಲನ್ನು ತರುವಾಗ ಬಟ್ಟೆ ಮಾರು ವಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಸ್ಥಳೀಯವರೊಬ್ಬರು ಬೊಬ್ಬೆ

ಬೆಳ್ತಂಗಡಿ: ಬೈಹುಲ್ಲು ತರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ| ಸ್ಥಳೀಯರ ಸಾಹಸದಿಂದ ಬಚಾವಾದ ವಾಹನ| ಕಣ್ಣೀರಾದ ಚಾಲಕ Read More »

ಉಡುಪಿ : ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ – ಕೋಟ ತಿರುಗೇಟು

ಸಮಗ್ರ ನ್ಯೂಸ್ : ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ನನ್ನ ಬಗ್ಗೆಯೂ ಉಲ್ಲೇಖ ಮಾಡುತ್ತಾ ಕುಚ್ಚಲಕ್ಕಿ ಕೊಡುವುದಾಗಿ ಕೋಟ ಸುಳ್ಳು ಹೇಳಿದ್ದಾರೆ ಎಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಪಾಲ ಪೂಜಾರಿಯವರನ್ನು ಸಜ್ಜನ ಮತ್ತು ಪ್ರಾಮಾಣಿಕ ಎಂದಿರುವುದು ಸುಳ್ಳಾದರೆ ಕ್ಷಮಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ. ವಾಸ್ತವಿಕವಾಗಿ ಕುಚ್ಚಲಕ್ಕಿ ಕೊಡುವ ಪ್ರಕ್ರಿಯೆ ಬರೇ

ಉಡುಪಿ : ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ – ಕೋಟ ತಿರುಗೇಟು Read More »

ಪುತ್ತೂರು:ಮನೆ ಮನೆ ಮತದಾನ ಎ.14 ರಿಂದ 16ರ ತನಕ ನಡೆಯಲಿದೆ- ಜುಬಿನ್ ಮೊಹಪಾತ್ರ

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನಕ್ಕೆ ಅರ್ಹ ವ್ಯಕ್ತಿಗಳಾದ 85 ವರ್ಷ ಮೇಲ್ಪಟ್ಟವರು 777 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಿಯೆ ಎ.14 ರಿಂದ 16ರ ತನಕ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಈ ಹಿಂದೆ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅರ್ಜಿ ನಮೂನೆ

ಪುತ್ತೂರು:ಮನೆ ಮನೆ ಮತದಾನ ಎ.14 ರಿಂದ 16ರ ತನಕ ನಡೆಯಲಿದೆ- ಜುಬಿನ್ ಮೊಹಪಾತ್ರ Read More »

ಸೌಜನ್ಯಾ ಕೊಲೆ‌ ಪ್ರಕರಣ ಮರುತನಿಖೆಯನ್ನು ಪ್ರಧಾನಿ ಘೋಷಿಸಲಿ – ತಿಮರೋಡಿ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನಿಂದ ನ್ಯಾಯಾಲಯದ ಉಸ್ತುವಾರಿಯಲ್ಲಿ ಮರುತನಿಖೆ ನಡೆಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೈಕೋರ್ಟ್‌ಗೆ ಲಿಖಿತ ಅಭಿಪ್ರಾಯ ನೀಡಬೇಕು. ಏ.14ರಂದು ಮಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಘೋಷಣೆ ಮಾಡಬೇಕು ಎಂದು ಸೌಜನ್ಯಾ ಪರ ಹೋರಾಟ ಸಮಿತಿ ಪ್ರಮುಖ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪ್ರಕರಣ ಮರುತನಿಖೆ ನಡೆಸುವ ಸಂಬಂಧ ಹೈಕೋರ್ಟ್

ಸೌಜನ್ಯಾ ಕೊಲೆ‌ ಪ್ರಕರಣ ಮರುತನಿಖೆಯನ್ನು ಪ್ರಧಾನಿ ಘೋಷಿಸಲಿ – ತಿಮರೋಡಿ Read More »

ಉಡುಪಿ: ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಹಾಗೂ ‘ಶಕ್ತಿ ಚೌಪಾಟ್’ ಅಭಿಯಾನ

ಸಮಗ್ರ ನ್ಯೂಸ್‌ : ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆ-ಯೋಜನೆಗಳಿಂದ ‘ದೇಶಕ್ಕೆ ಮೋದಿಯೇ ಗ್ಯಾರಂಟಿ’ ಎನ್ನುವುದನ್ನು ಈಗಾಗಲೇ ಮಹಿಳಾ ಮತದಾರರು ಅರ್ಥೈಸಿಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕ್ಷೇತ್ರದ ನಾರೀ ಶಕ್ತಿ ಮಹತ್ತರ ಕೊಡುಗೆ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ತಿಳಿಸಿದರು. ಬಿಜೆಪಿ ಉಡುಪಿ ಜಿಲ್ಲಾ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಮಹಿಳಾ

ಉಡುಪಿ: ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಹಾಗೂ ‘ಶಕ್ತಿ ಚೌಪಾಟ್’ ಅಭಿಯಾನ Read More »

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ದಾಖಲೆಯ ಮೂರನೇ ವರ್ಷವೂ ಶೇ. 100 ಫಲಿತಾಂಶ|ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ 3ನೇ ರ‍್ಯಾಂಕ್‌

ಸಮಗ್ರ ನ್ಯೂಸ್:2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 582 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಿಂಚನ ಆರ್‌. ಹೆಚ್ 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್‌ , ಹಂಸಿನಿ ವಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸುಜಿತ್‌

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ದಾಖಲೆಯ ಮೂರನೇ ವರ್ಷವೂ ಶೇ. 100 ಫಲಿತಾಂಶ|ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ 3ನೇ ರ‍್ಯಾಂಕ್‌ Read More »

ಕಾರ್ಕಳ:ರಂಜಾನ್ ಹಬ್ಬ ಭಾವೈಕ್ಯತೆಯ ದಿನ;ಜಹೀರ್ ಅಹ್ಮದ್

ಸಮಗ್ರ ನ್ಯೂಸ್ : ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ. ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗ ಜಹೀರ್ ಅಹ್ಮದ್ ಖಾಸ್ಮಿ ಕಾರ್ಕಳದ ಜಾಮಿಸಿದಿಯ ಇಧ್ಗಾದಲ್ಲಿ ಮೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು. ಇಂದು ಬೆಳಗಿನಿಂದಲೇ ಕಾರ್ಕಳದ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ನಮಾಜಿಗೋಸ್ಕರ ಬೆಳಕಿನಿಂದಲೇ ಇದ್ದಗಾದಲ್ಲಿ ಜಮಾಹಿಸಿದ್ದರು. ನಂತರ

ಕಾರ್ಕಳ:ರಂಜಾನ್ ಹಬ್ಬ ಭಾವೈಕ್ಯತೆಯ ದಿನ;ಜಹೀರ್ ಅಹ್ಮದ್ Read More »

ಎ.14ರ ಮಂಗಳೂರಿನಲ್ಲಿ ಮೋದಿ ಸಮಾವೇಶ ದಿಢೀರ್ ರದ್ದು| ರೋಡ್ ಶೋ ಸೀಮಿತವಾದ ನಮೋ ಭೇಟಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಎಪ್ರಿಲ್ 14ರಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ಬಿಜೆಪಿ ಸಿದ್ದತೆ ನಡೆಸಿತ್ತು. ಕರಾವಳಿಯ ಎರಡು ಜಿಲ್ಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಅಭ್ಯರ್ಥಿಗಳಲ್ಲಿ ಹೊಸ ಹುರುಪು ತಂದಿತ್ತು, ಅಲ್ಲದೆ ಬಿಜೆಪಿ ಕೂಡ ದಾಖಲೆ ಮಟ್ಟದಲ್ಲಿ ಜನರನ್ನು

ಎ.14ರ ಮಂಗಳೂರಿನಲ್ಲಿ ಮೋದಿ ಸಮಾವೇಶ ದಿಢೀರ್ ರದ್ದು| ರೋಡ್ ಶೋ ಸೀಮಿತವಾದ ನಮೋ ಭೇಟಿ Read More »

ಉಡುಪಿ:ಡಿವೈಡರ್ ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು|ಓರ್ವ ಮೃತ್ಯು;ಇಬ್ಬರು ಗಂಭೀರ

ಸಮಗ್ರ ನ್ಯೂಸ್‌ : ಚಾಲಕ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಪಾಂಡಿಚೇರಿ ಮಾಹಿತಿ ಎಂಬಲ್ಲಿಗೆ ಹಿಂತಿರುಗುತ್ತಿದ್ದ ಮೂವರು ಭಕ್ತರು ಪ್ರಯಾಣಿಸುತ್ತಿದ್ದ ಟೊಯೋಟಾ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಕುಂದಾಪುರ-ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಸಮೀಪದ ಕೆಎಸ್‌ಆರ್‌ಟಿಸಿ

ಉಡುಪಿ:ಡಿವೈಡರ್ ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು|ಓರ್ವ ಮೃತ್ಯು;ಇಬ್ಬರು ಗಂಭೀರ Read More »