ಕರಾವಳಿ

ಇಂದು ಉಡುಪಿ ಜಿಲ್ಲೆಯಾದ್ಯಂತ ಮಹಾನಾಯಕ ಜೈ ಭೀಮ್ ರ್ಯಾಲಿ

ಸಮಗ್ರ ನ್ಯೂಸ್‌ : ದಲಿತ ಸಂಘಟನೆಗಳು ಹಾಗೂ ಇತರ ಸಮಾನ ಮನಸ್ಕ ಸಂಟನೆಗಳ ನೇತೃತ್ವದಲ್ಲಿ ಸಂವಿಧಾನಶಿಲ್ಪಿ ಡಾ.ಅಂಬೇಡ್ಕ‌ರ್ ಅವರ 133ನೇ ಜನ್ಮದಿನಾಚರಣೆ ಪ್ರಯುಕ್ತ ಶಕ್ತಿಶಾಲಿ ಭಾರತಕ್ಕಾಗಿ ಭೀಮ ಸಂವಿಧಾನ ಮಹಾ ನಾಯಕ ಜೈ ಭೀಮ್ ರ್ಯಾಲಿಯನ್ನು ಏಪ್ರಿಲ್ 14ರಂದು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಹಬಾಳ್ವೆ ಉಡುಪಿ ಅಧ್ಯಕ್ಷ ಹಾಗೂ ಹಿರಿಯ ಚಿಂತಕ ಪ್ರೊ.ಫಣಿರಾಜ್ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರಿನಿಂದ ಹೊರಡುವ ರ್ಯಾಲಿಯು ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕಾಪು ಮಾರ್ಗವಾಗಿ ಉಡುಪಿಯಲ್ಲಿ […]

ಇಂದು ಉಡುಪಿ ಜಿಲ್ಲೆಯಾದ್ಯಂತ ಮಹಾನಾಯಕ ಜೈ ಭೀಮ್ ರ್ಯಾಲಿ Read More »

ಉಡುಪಿ : ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ-ಜೆ.ಪಿ. ಹೆಗ್ಡೆ

ಸಮಗ್ರ ನ್ಯೂಸ್‌ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಚುನಾವಣೆಗೆ ಮೊದಲು ನೀಡಿನ 5 ಗ್ಯಾರಂಟಿಗಳ ಭರವಸೆಯನ್ನು ಈಡೇರಿಸಿದೆ. ಆದರೆ, ಬಿಜೆಪಿ ಸರಕಾರ ಆಡಿದಂತೆ ನಡೆದುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು. ಚಿಕ್ಕಮಗಳೂರಿನ ವಿವಿಧ ಕಡೆಗಳಲ್ಲಿ ಮತಪ್ರಚಾರ ನಡೆಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೆಲೆ ಕಡಿಮೆಯಾಗಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಕಡಿಮೆ ಮಾಡಿಲ್ಲ? ವರ್ಷಕ್ಕೆ 2 ಕೋಟಿ, 10 ವರ್ಷಕ್ಕೆ

ಉಡುಪಿ : ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ-ಜೆ.ಪಿ. ಹೆಗ್ಡೆ Read More »

ಉಡುಪಿ:ಲೇಖನಗಳು ವ್ಯವಸ್ಥೆಗೆ ಬಿಸಿ ಮುಟ್ಟಿಸಲಿ- ಡಾ.ರವೀಂದ್ರನಾಥ್ ಶ್ಯಾನುಭಾಗ್

ಸಮಗ್ರ ನ್ಯೂಸ್‌ : ಪತ್ರಿಕೆಯಲ್ಲಿ ಲೇಖನ ಬಂದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದು ಹೆಚ್ಚಿನವರ ಭಾವನೆ. ಆದರೆ ಲೇಖನಗಳಿಂದ ಕೇವಲ ಜನಾಭಿಪ್ರಾಯ ಸಂಗ್ರಹ ಆಗುತ್ತದೆ ಹೊರತು ಸಮಸ್ಯೆ ಪರಿಹಾರ ಆಗುವುದಿಲ್ಲ. ಆ ಜನಾಭಿಪ್ರಾಯ ನಮ್ಮ ವ್ಯವಸ್ಥೆಗೆ ತಲುಪಿದರೆ ಮಾತ್ರ ಸಮಸ್ಯೆ ಪರಿಹಾರ ಆಗಲು ಸಾಧ್ಯ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಉಡುಪಿ

ಉಡುಪಿ:ಲೇಖನಗಳು ವ್ಯವಸ್ಥೆಗೆ ಬಿಸಿ ಮುಟ್ಟಿಸಲಿ- ಡಾ.ರವೀಂದ್ರನಾಥ್ ಶ್ಯಾನುಭಾಗ್ Read More »

ಉಡುಪಿ: ಎ.15- 16ರಂದು ‘ಇನ್ನರ್‌ಸೆನ್ಸ್’ ಕಲಾ ಪ್ರದರ್ಶನ

ಸಮಗ್ರ ನ್ಯೂಸ್‌ : ವಿಶ್ವದ ಖ್ಯಾತ ಕಲಾವಿದ ಲಿಯನಾರ್ಡೋ ಡ ವಿಂಚಿ ಅವರ ಸ್ಮರಣಾರ್ಥ ಎಪ್ರಿಲ್ 15ರಂದು ನಡೆಯುವ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯ ವತಿಯಿಂದ ಎಪ್ರಿಲ್15 ಮತ್ತು 16ರಂದು ಆರ್ಟ್ ಸ್ಕೂಲ್‌ನ ಐವರು ಕಲಾ ವಿದ್ಯಾರ್ಥಿಗಳಿಂದ ‘ಇನ್ನ‌ರ್ ಸೆನ್ಸ್‌’ ಎಂಬ ಪ್ರತಿಷ್ಠಾಪನಾ ಕಲಾ ಪ್ರದರ್ಶನ ನಡೆಯಲಿದೆ ಎಂದು ತ್ರಿವರ್ಣ ಕಲಾ ಶಾಲೆಯ ಹರೀಶ್ ಸಾಗ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲೆ ಹಾಗೂ ಬದುಕಿನ ವಿವಿಧ ಆಯಾಮದಲ್ಲಿ

ಉಡುಪಿ: ಎ.15- 16ರಂದು ‘ಇನ್ನರ್‌ಸೆನ್ಸ್’ ಕಲಾ ಪ್ರದರ್ಶನ Read More »

ರಾಜಕೀಯ ಹಿತಾಸಕ್ತಿಗಾಗಿ ‘ಸೌಜನ್ಯ’ಕ್ಕೂ ನ್ಯಾಯದ ಮಾತನಾಡಿಲ್ಲ| ಸೌಜನ್ಯ ಪ್ರಕರಣದಲ್ಲಿ ಬಿಜೆಪಿ‌ – ಕಾಂಗ್ರೆಸ್ ಸಮಾನ ಪಾಲು ಪಡೆದಿದೆ – ತಿಮರೋಡಿ

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗದೇ ಇರುವ ಹಿನ್ನಲೆ ನೋಟಾ ಅಭಿಯಾನ ಹಮ್ಮಿದ ಕುರಿತಾಗಿ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಇಡೀ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್ ಕೂಡ ಪಾಲು ಇದೆ ಎಂದು ಹೋರಾಟಗಾರರು ಆರೋಪಿಸಿದರು. ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹೇಶ್ ಶೆಟ್ಟಿ‌ ತಿಮರೋಡಿ, ಸೌಜನ್ಯ ಅತ್ಯಾಚಾರಗೈದ ಕಾಮಾಂದರಿಗೆ ಶಿಕ್ಷೆ ಆಗಿಲ್ಲ.

ರಾಜಕೀಯ ಹಿತಾಸಕ್ತಿಗಾಗಿ ‘ಸೌಜನ್ಯ’ಕ್ಕೂ ನ್ಯಾಯದ ಮಾತನಾಡಿಲ್ಲ| ಸೌಜನ್ಯ ಪ್ರಕರಣದಲ್ಲಿ ಬಿಜೆಪಿ‌ – ಕಾಂಗ್ರೆಸ್ ಸಮಾನ ಪಾಲು ಪಡೆದಿದೆ – ತಿಮರೋಡಿ Read More »

ಮಂಗಳೂರಿನಲ್ಲಿ ಮೋದಿ ರೋಡ್‍ಶೋ/ ಸಂಚಾರ ವ್ಯವಸ್ಥೆ ಹೀಗಿದೆ ನೋಡಿ..

ಸಮಗ್ರ ನ್ಯೂಸ್: ನಾಳೆ (ಏ.14) ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಂಗಳೂರಿನಲ್ಲಿ ರೋಡ್‍ಶೋ ನಡೆಸಲಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೋದಿ ರೋಡ್ ಶೋಗೆ ಬಿಜೆಪಿ ಸಾರಥ್ಯದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಬಿಗಿಗೊಳಿಸಿದೆ. ನಾಗರಿಕರಿಗೆ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಧಾನಿ ರೋಡ್ ಶೋ ಸುಗಮವಾಗಿ ನಡೆಯುವಂತೆ ನಾಳೆ ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ವಾಹನ ಸಂಚಾರ ನಿಷೇಧಿಸಿರುವ

ಮಂಗಳೂರಿನಲ್ಲಿ ಮೋದಿ ರೋಡ್‍ಶೋ/ ಸಂಚಾರ ವ್ಯವಸ್ಥೆ ಹೀಗಿದೆ ನೋಡಿ.. Read More »

ಮಂಗಳೂರಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭ|ಭರದ ಸಿದ್ಧತೆ

ಸಮಗ್ರ ನ್ಯೂಸ್‌ : ಏಪ್ರಿಲ್ 14 ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ರೋಡ್ ಶೋ ನಡೆಯುವ ಮಾರ್ಗದ ಮೇಲೆ ಎಸ್ ಪಿ ಜಿ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಸ್ಥಳೀಯ ಪೊಲೀಸರು, ಶ್ವಾನ ದಳ, ಹಾಗೂ ಮೆಟಲ್ ಡಿಟೆಕ್ಟರ್ ಬಳಸಿ ರಸ್ತೆಯ ಇಕ್ಕಲೆ ಇಕ್ಕಲೆಗಳಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಎಸ್ ಪಿ ಜಿ ಟೀಂ ರೋಡ್ ಶೋ ಸಾಗುವ ದಾರಿಯ ಇಕ್ಕಲೆಗಳ ಎಲ್ಲ ಕಟ್ಟಡಗಳ ಮಾಹಿತಿ

ಮಂಗಳೂರಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭ|ಭರದ ಸಿದ್ಧತೆ Read More »

ಮಂಗಳೂರು: ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ

ಸಮಗ್ರ ನ್ಯೂಸ್‌ : ದಕ್ಷಿಣ ಕನ್ನಡ ಬಂಟ್ವಾಳದ ಬಾಳ್ತಿಲ‌ ಗ್ರಾಮದ ಕಶೆಕೋಡಿ‌ ನಿವಾಸಿ ನಾಲ್ಕನೇ ತರಗತಿಯ ಸನ್ನಿಧಿ ಎಲ್.ಎಸ್ ಪಂಚ ಭಾಷೆಗಳಲ್ಲಿ ಮತದಾನದ ಜಾಗೃತಿ‌ ಮೂಡಿಸುತ್ತಿದ್ದಾಳೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡಾ100 ರಷ್ಟು ಮತದಾನವಾಗಬೇಕು ಎಂದು ಪಣತೊಟ್ಟಿರುವ ಬಾಲಕಿ, ಪ್ರತಿ‌ದಿನ ಮನೆ ಮನೆ, ಮಾರ್ಕೆಟ್, ಹೊಟೇಲ್, ಅಂಗಡಿ, ಕಚೇರಿ, ಆಟೋ ನಿಲ್ದಾಣ ಭೇಟಿ ನೀಡುತ್ತಿದ್ದು, ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ‌ ಹಾಗೂ ಮಲಯಾಳಂ ಸೇರಿ ಒಟ್ಟು 5‌ ಭಾಷೆಗಳಲ್ಲಿ ಸುಡು ಬಿಸಿಲಿನಲ್ಲೂ ಎಲ್ಲಡೆ ಸಂಚರಿಸಿ ಮತದಾನದ

ಮಂಗಳೂರು: ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ Read More »

ಮಂಗಳೂರು: ನೀರು ಸೇದುವ ವೇಳೆ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಸಮಗ್ರ ನ್ಯೂಸ್‌ : ಬಾವಿಯಿಂದ ನೀರು ಸೇದುವ ವೇಳೆ ಆಯಾ ತಪ್ಪಿದ ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದು, ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ (58) ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ.ಸಂಜೆ 5 ಗಂಟೆ ಸುಮಾರಿಗೆ ಟ್ರೆಸ್ಸಿ ಬಾವಿಯಿಂದ ನೀರು ಸೇದುತ್ತಿದ್ದಾಗ ತಲೆ ಸುತ್ತಿ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಆಕೆಯ ಕುಟುಂಬಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ.

ಮಂಗಳೂರು: ನೀರು ಸೇದುವ ವೇಳೆ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ Read More »

ಮಂಗಳೂರು: ಅಡ್ಯಾರಿನ ಬೊಂಡ ಫ್ಯಾಕ್ಟರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಭೇಟಿ

ಸಮಗ್ರ ನ್ಯೂಸ್‌ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಏಪ್ರಿಲ್‌ ೧೧ ರಂದು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಂಗಳೂರು ಮತ್ತು ತಂಡದವರು ಪುನಃ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇಂದು ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮತ್ತು ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿ ನೋಟೀಸ್ ನೀಡಿ ಬಂದ್ ಮಾಡಿಸಿದ್ದಾರೆ. ಆನಂತರ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ.ರಸ್ತೆಯ ಪೆರ್ಲಯ

ಮಂಗಳೂರು: ಅಡ್ಯಾರಿನ ಬೊಂಡ ಫ್ಯಾಕ್ಟರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಭೇಟಿ Read More »