ಕರಾವಳಿ

ಉಡುಪಿ: ಜಯಪ್ರಕಾಶ್ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ-ದೂರು ದಾಖಲು

ಸಮಗ್ರ ನ್ಯೂಸ್‌ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ವಿರುದ್ಧ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು ಧರ್ಮ ಧರ್ಮಗಳ ಮಧ್ಯೆ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಆರೋಪಿಗಳು ಹಾಗೂ ಒಂದು ಸಾಮಾಜಿಕ ಜಾಲ ತಾಣದ ಗ್ರೂಪ್ ವಿರುದ್ಧ, ಸಹನಾ ಎಸ್ಟೇಟ್ ಮಾಲಿಕ ಸುರೇಂದ್ರ ಶೆಟ್ಟಿ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎ.26 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆ. ಜಯಪ್ರಕಾಶ್ ಹೆಗ್ಡೆಯವರ ವಿರುದ್ಧ ಬಿಜೆಪಿ […]

ಉಡುಪಿ: ಜಯಪ್ರಕಾಶ್ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ-ದೂರು ದಾಖಲು Read More »

ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ. ಸುಳ್ಯ ತಾಲೂಕಿನ ‌ಪಂಜದ ದಿ. ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದ. ಅಲ್ಲಿಂದಲೇ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ

ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ Read More »

ಸುಳ್ಯ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಎರಡು ಕಾರುಗಳ‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ಸುಳ್ಯ ನಗರ ಶ್ರೀರಾಮ್ ಪೇಟೆಯಲ್ಲಿ ನಡೆದಿದೆ. ಓಮ್ನಿ ಹಾಗೂ ಸಿಲಾರಿಯೋ ಕಾರುಗಳ ನಡುವೆ ನಡುರಸ್ತೆಯಲ್ಲೇ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ನಗರದಲ್ಲಿ‌ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುಳ್ಯ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ Read More »

ಸುಬ್ರಹ್ಮಣ್ಯ: ಕೆ ಎಸ್ ಎಸ್ ಮಹಾವಿದ್ಯಾಲಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಅಧ್ಯಯನ ಭೇಟಿ

ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯುಎಸಿ ಹಾಗೂ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗ ಇದರ ವತಿಯಿಂದ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರಿಸರ್ಚ್ ಇನ್ಸ್ಟಿಟ್ಯೂಟ್ ಇಲ್ಲಿಗೆ ಅಧ್ಯಯನ ಭೇಟಿಯನ್ನು ಎ. 19ರಂದು ಪ್ರಥಮ ಪದವಿಯ ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಅಧ್ಯಯನ ಭೇಟಿಯ ಸಂದರ್ಭದಲ್ಲಿ ಸಿಪಿಸಿ ಆರ್ಐ ಇದರ ಟೆಕ್ನಿಕಲ್ ಸ್ಟಾಫ್ ಆದ ಡಾ|ಕಮಲ್ ಇವರು ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಗ್ಗೆ ಹಾಗೂ ಅಲ್ಲಿ ಲಭ್ಯವಿರುವಂತಹ ವಿವಿಧ ತಳಿಗಳ ತೆಂಗಿನ ಮರಗಳು ಗಿಡಗಳು, ಅಡಕೆ ಗಿಡಗಳು, ಮೀನುಗಾರಿಕೆ

ಸುಬ್ರಹ್ಮಣ್ಯ: ಕೆ ಎಸ್ ಎಸ್ ಮಹಾವಿದ್ಯಾಲಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ ಅಧ್ಯಯನ ಭೇಟಿ Read More »

ಕೊನೆಗೂ ಕರುಣೆ ತೋರಿದ ವರುಣ| ಸುಳ್ಯ, ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ‌ ಭಾರೀ ಮಳೆ

ಸಮಗ್ರ ನ್ಯೂಸ್: ಬಿಸಿಲಿನಿಂದ ಬಸವಳಿದಿದ್ದ ಕರಾವಳಿಗೆ ಕೊನೆಗೂ ವರುಣ ಕೃಪೆ ತೋರಿದ್ದಾನೆ. ಗುರುವಾರ ಹಾಗೂ ಶುಕ್ರವಾರ ಕಡಬ, ಸುಳ್ಯ ತಾಲೂಕಿನ ಹಲವೆಡೆ‌ ಮತ್ತು ಬೆಳ್ತಂಗಡಿ, ಪುತ್ತೂರು ತಾಲೂಕಿನ ಕೆಲವು ಕಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕಡಬ ತಾಲೂಕಿನ ಮರ್ಧಾಳ , ಬಿಳಿನೆಲೆ, ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ಬಹುತೇಕ‌ ಭಾಗಗಳಲ್ಲಿ ಸಂಜೆಯಿಂದ ಭಾರೀ ಮಳೆಯಾಗಿದೆ. ಕೆಲವು ಕಡೆ ಕಾರ್ಯಕ್ರಮಗಳಿಗೆ ಮಳೆಯಿಂದ ತೊಂದರೆಯಾಗಿದ್ದರೂ, ಜನ ಮಳೆಯಿಂದ ಸಂತಸಗೊಂಡಿದ್ದಾರೆ. ಮಳೆ ಇನ್ನೆರಡು‌ ದಿನವೂ ಮುಂದುವರಿಯುವ ಮುನ್ಸೂಚನೆ ನೀಡಲಾಗಿದ್ದು, ಕೊಂಚ

ಕೊನೆಗೂ ಕರುಣೆ ತೋರಿದ ವರುಣ| ಸುಳ್ಯ, ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ‌ ಭಾರೀ ಮಳೆ Read More »

ಮಲ್ಪೆಯಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು| ಓರ್ವ ಮೃತ್ಯು, ಇಬ್ಬರ ರಕ್ಷಣೆ

ಸಮಗ್ರ ನ್ಯೂಸ್‌ : ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂರು ಜನರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಹಾಸನ ಜಿಲ್ಲೆಯ ದಾಬೆಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬೆಬೇಲೂರಿನಿಂದ 20 ಜನರು ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ

ಮಲ್ಪೆಯಲ್ಲಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋದ ಮೂವರು ಪ್ರವಾಸಿಗರು| ಓರ್ವ ಮೃತ್ಯು, ಇಬ್ಬರ ರಕ್ಷಣೆ Read More »

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ

ಸಮಗ್ರ ನ್ಯೂಸ್‌ : ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ ನೀಡಿದ್ದಾರೆ. ತೊಕ್ಕೊಟ್ಟುವಿನ ಪಿಲಾರ್ ನ ಕಲಾವಿದ ಕಿರಣ್ ಸಿ. ಅವರು ಮೋದಿಯವರ ಚಿತ್ರ ಬಿಡಿಸಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ರೋಡ್ ಶೋ ವೇಳೆ ಪ್ರದರ್ಶಿಸಿದ್ದಾರೆ. ಇದನ್ನು ಮೋದಿಯವರು ಗಮನಿಸಿ, ತಕ್ಷಣ ಎಸ್ ಪಿ ಜಿ ಕಮಾಂಡೊ ಮೂಲಕ ಚಿತ್ರವನ್ನು ತರಿಸಿ

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ Read More »

ಮಂಗಳೂರು: ಯುವ ದಂತವೈದ್ಯೆ ಹಠಾತ್ ಸಾವು

ಸಮಗ್ರ ವಾರ್ತೆ: ಯುವ ದಂತ ವೈದ್ಯೆಯೊಬ್ಬರು ಹಠಾತ್ತಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಾಂಡೇಶ್ವರ ಪಿಜಿಯಲ್ಲಿ ನಡೆದಿದೆ. ಮೃತರನ್ನು ಡಾ. ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಮಂಗಳವಾರದಿಂದ ನಗರದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ತನಕ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದ ಸ್ವಾತಿ ಸೋಮವಾರ ಸಂಜೆ ಮನೆಯಿಂದ ಪಾಂಡೇಶ್ವರದ ಪಿಜಿಗೆ ಬಂದು ತಂಗಿದ್ದರು. ರಾತ್ರಿ ತಾಯಿ ತಂದೆ ಜತೆಗೆ ಮೊಬೈಲ್

ಮಂಗಳೂರು: ಯುವ ದಂತವೈದ್ಯೆ ಹಠಾತ್ ಸಾವು Read More »

ಪುತ್ತೂರು: ಬೈಕ್ ಗೆ ಡಿಕ್ಕಿ ಹೊಡೆದ ಜೀಪ್| ಬೈಕ್ ಸವಾರ ಸಾವು, ಮಕ್ಕಳು ಗಂಭೀರ

ಸಮಗ್ರ ನ್ಯೂಸ್: ಬೈಕ್‍ ಗೆ ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ತಡ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪಾಪೆತ್ತಡ್ಕದಲ್ಲಿ ಸಂಭವಿಸಿದೆ. ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಬಡಕ್ಕೋಡಿ ಕಡ್ಯ ನಿವಾಸಿ ಲೋಕೇಶ್(48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಲೋಕೇಶ್ ಅವರು

ಪುತ್ತೂರು: ಬೈಕ್ ಗೆ ಡಿಕ್ಕಿ ಹೊಡೆದ ಜೀಪ್| ಬೈಕ್ ಸವಾರ ಸಾವು, ಮಕ್ಕಳು ಗಂಭೀರ Read More »

ಉಡುಪಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಶಾಸಕರ ನಿರುತ್ಸಾಹ; ಹೈಕಮಾಂಡ್ ಗೆ ದೂರು ಕೊಟ್ಟ ಕೋಟ

ಸಮಗ್ರ ನ್ಯೂಸ್‌ : ಕೇಸರಿ ಕೋಟೆಯಲ್ಲೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಿರುತ್ಸಾಹ ಕಂಡು ಬಂದಿದೆ. ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿಂದಲೇ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವತಃ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರೇ ಹೈಕಮಾಂಡ್ ಮುಂದೆ ಅಳಲು ತೋಡಿಕೊಂಡಿದ್ದು, ಸೂಕ್ತ ಬೆಂಬಲ ದೊರೆಯುತ್ತಿಲ್ಲ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಕೋಟ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಉಡುಪಿಗೆ ದೌಡಾಯಿಸಿದ್ದು, ಬಿಜೆಪಿ ಮಂಡಲ ಅಧ್ಯಕ್ಷರ ಜೊತೆ

ಉಡುಪಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಶಾಸಕರ ನಿರುತ್ಸಾಹ; ಹೈಕಮಾಂಡ್ ಗೆ ದೂರು ಕೊಟ್ಟ ಕೋಟ Read More »

ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ