ಕರಾವಳಿ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ‌ ಸೂಕ್ತ ರಕ್ಷಣೆ| ಒಳರೋಗಿಯಾಗಿ ದಾಖಲಾದವರು ಹೊರಗೆ!!

ಸಮಗ್ರ ನ್ಯೂಸ್: ಇದೊಂದು ನಿಜಕ್ಕೂ ಶಾಕ್ ತರಿಸುವ ಸಂಗತಿ. ಈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದವರು ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು! ಇಂಥದ್ದೊಂದು ಪರಿಸ್ಥಿತಿ ಇರುವುದು ಸುಳ್ಯ ತಾಲೂಕಿನ ಸುಳ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂದರೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ..! ಹೌದು, ಇಲ್ಲಿ ದಾಖಲಾದ ರೋಗಿಗಳು ಯಾವೂದೇ ಸುರಕ್ಷತೆಯಿಲ್ಲ. ರೋಗಿಯ ಸಹಾಯಕರು ಆತನನ್ನು ಬಿಟ್ಟು ಆಚೀಚೆ ಹೋದರೆ ರೋಗಿಗಳು ಎದ್ದು ಹೊರಗಡೆ ಹೋಗಬಹುದು. ಕೈಯಲ್ಲಿರುವ ಡ್ರಿಪ್ಸ್ ಪೈಪ್ ಸಹಿತ ಪೇಟೆಗೂ ಹೋಗಿ ಬರಬಹುದು. ಇದನ್ನು ಇಲ್ಲಿ […]

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ‌ ಸೂಕ್ತ ರಕ್ಷಣೆ| ಒಳರೋಗಿಯಾಗಿ ದಾಖಲಾದವರು ಹೊರಗೆ!! Read More »

ಕೊರಗಜ್ಜನ ಹೆಸರಲ್ಲಿ ವಂಚನೆ; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ

ಸಮಗ್ರ ನ್ಯೂಸ್: ತುಳುನಾಡಿನ ಆರಾಧನ ದೈವ ಕೊರಗಜ್ಜ ಅಂದರೆ ಅಷ್ಟು ನಂಬಿಕೆ. ಏನೇ ಕಷ್ಟ ಬಂದರು ಅಜ್ಜನನ್ನು ನೆನೆದರೆ ಪರಿಹಾರವಾಗುತ್ತದೆ. ಆದ್ರೆ, ಇದೀಗ ಕೆಲ ವಂಚಕರು ಇದೇ ಕೊರಗಜ್ಜನ ಹೆಸರಿನಲ್ಲಿ ಭಕ್ತರನ್ನು ವಂಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ‘ಡಿವೊಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಖಾತೆ ತೆರದು ಅದರಲ್ಲಿ ಅನ್ನದಾನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ. ಇಲ್ಲಿನ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್

ಕೊರಗಜ್ಜನ ಹೆಸರಲ್ಲಿ ವಂಚನೆ; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ Read More »

ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಕಂಪ್ಯೂಟರ್ ತರಗತಿ ಪ್ರಾರಂಭ| ಗ್ರಾಮೀಣ ಸರಕಾರಿ ಅಧಿಕಾರಿಗಳ ಬರವನ್ನು ವಿ. ಅಕಾಡೆಮಿ ನೀಗಿಸುತ್ತಿದೆ; ಲ.ವೀರಪ್ಪ ಕಣ್ಕಲ್

ಸಮಗ್ರ ನ್ಯೂಸ್: ಇಂದಿನ ಯುವ ಪೀಳಿಗೆಯ ಜೀವನದ ಆಶಾಕಿರಣವಾಗಿ 130ಕ್ಕೂ ಅಧಿಕ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಸರಕಾರಿ ಉದ್ಯೋಗ ಲಭಿಸುವಂತೆ ಮಾಡಿದ ವಿದ್ಯಾಮಾತಾ ಅಕಾಡೆಮಿಯು ಕಳೆದ ಕೆಲವು ತಿಂಗಳುಗಳ ಹಿಂದೆ ತನ್ನ ಶಾಖೆಯನ್ನು ಸುಳ್ಯಕ್ಕೆ ವಿಸ್ತರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡುತ್ತಾ ಸುಳ್ಯದ ಹೃದಯ ಭಾಗದಲ್ಲಿ ಕಾರ್ಯಾಚರಿಸುತಿದ್ದು, ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಕೌಶಲ್ಯಯುಕ್ತ ಉದ್ಯೋಗಾಧರಿತವಾದ ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಿದೆ. ಜೂನ್ 10ರಂದು ಸರಳವಾಗಿ ನಡೆದ ಕಂಪ್ಯೂಟರ್ ತರಗತಿಗಳ

ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ಕಂಪ್ಯೂಟರ್ ತರಗತಿ ಪ್ರಾರಂಭ| ಗ್ರಾಮೀಣ ಸರಕಾರಿ ಅಧಿಕಾರಿಗಳ ಬರವನ್ನು ವಿ. ಅಕಾಡೆಮಿ ನೀಗಿಸುತ್ತಿದೆ; ಲ.ವೀರಪ್ಪ ಕಣ್ಕಲ್ Read More »

ಮರಕಡಿಯುವ ವೇಳೆ‌ ಬಿದ್ದು ಗಾಯಗೊಂಡ ಗಾಯಾಳುವಿನ ಚಿಕಿತ್ಸೆಗೆ ನೆರವಾಗುವಿರಾ?

ಸಮಗ್ರ ನ್ಯೂಸ್: ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಯ ಪುಚ್ಚೆಹಿತ್ಲು ನಿವಾಸಿ ವೃತ್ತಿಪರ ಆಟೋ ಚಾಲಕ ವಿಶ್ವನಾಥ್ ಗೌಡ ಪುಚ್ಚೆಹಿತ್ತಿಲುರವರ ಚಿಕಿತ್ಸೆಗೆ ನೆರವಾಗಲು ಅವರ ಹಿತೈಷಿಗಳು ಮನವಿ ಮಾಡಿದ್ದಾರೆ. ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ ಇವರ ಚಿಕಿತ್ಸಾ ವೆಚ್ಚ 5 ಲಕ್ಷ ರೂಪಾಯಿಯಷ್ಟಾಗಿದೆ. ದುಬಾರಿ ವೆಚ್ಚವನ್ನು ಕುಟುಂಬಕ್ಕೆ ಭರಿಸಲು ತುಂಬಾ ಕಷ್ಟಕರವಾದ ಈ ಸಂದರ್ಭದಲ್ಲಿ ದಾನಿಗಳು ಕೈ ಜೋಡಿಸುವಂತೆ ವಿನಂತಿಸಿದ್ದಾರೆ. ಹೃದಯವಂತ ಓದುಗರು ಸಹಾಯಹಸ್ತ

ಮರಕಡಿಯುವ ವೇಳೆ‌ ಬಿದ್ದು ಗಾಯಗೊಂಡ ಗಾಯಾಳುವಿನ ಚಿಕಿತ್ಸೆಗೆ ನೆರವಾಗುವಿರಾ? Read More »

ಬೋಳಿಯಾರ್ ಘಟನೆ : ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ನೀಡಿ ಧೈರ್ಯ ತುಂಬಿದ ಎಸ್‌ಡಿಪಿಐ ನಾಯಕರ ನಿಯೋಗ

ಸಮಗ್ರ ನ್ಯೂಸ್: ವಿಜಯೋತ್ಸವ ಹೆಸರಿನಲ್ಲಿ ಇತ್ತೀಚಿಗೆ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲ ತಾಲೂಕಿನ ಬೋಳಿಯಾರ್ ಮಸೀದಿಯ ಮುಂಭಾಗದಲ್ಲಿ ಅಕ್ರಮ ಕೂಟ ಕಟ್ಟಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಪರಿಣಾಮ ಉಂಟಾದ ಅಹಿತಕರ ಘಟನೆಯ ಹೆಸರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹಲವಾರು ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ನೆಪದಲ್ಲಿ ಮನೆಗಳಿಗೆ ದಾಳಿ ನಡೆಸಿದ ಪೊಲೀಸರು ಹಲವಾರು ಯುವಕರನ್ನು, ಮಹಿಳೆಯರನ್ನು ಠಾಣೆಗೆ ಕರೆದೊಯ್ದು ಎರಡು, ಮೂರು ದಿನಗಳ ಕಾಲ ಠಾಣೆಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ. ಈ

ಬೋಳಿಯಾರ್ ಘಟನೆ : ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ನೀಡಿ ಧೈರ್ಯ ತುಂಬಿದ ಎಸ್‌ಡಿಪಿಐ ನಾಯಕರ ನಿಯೋಗ Read More »

ಹೊರಗಿನವರು ಬಾಯಿ ಮುಚ್ಕೊಂಡಿದ್ರೆ ಒಳ್ಳೇದು| ನಮ್ಮೂರ ಸಮಸ್ಯೆ ನಾವೇ ಸರಿ ಮಾಡ್ಕೊಳ್ತೇವೆ| ಬೊಳಿಯಾರ್ ಘಟನೆ ಬಗ್ಗೆ ಸ್ಪೀಕರ್ ಖಾದರ್‌ ಖಡಕ್ ಎಚ್ಚರಿಕೆ

ಸಮಗ್ರ ನ್ಯೂಸ್: ಬೋಳಿಯಾರ್​​ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣವನ್ನು ದೊಡ್ಡದು ಮಾಡುವವರೇ ದೇಶದ್ರೋಹಿಗಳು ಎಂದಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬೋಳಿಯಾರ್ ಎಂಬುದು ಸಹೋದರತೆ ಇರುವ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ. ಅದನ್ನು ಅಲ್ಲಿನವರು, ಊರಿನವರೇ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಹೊರಗಿನವರು ಯಾರೂ ಶಾಂತಿ‌ ಕೆಡಿಸಬೇಡಿ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ. ಹೊರಗಿನ ಎಲ್ಲರೂ

ಹೊರಗಿನವರು ಬಾಯಿ ಮುಚ್ಕೊಂಡಿದ್ರೆ ಒಳ್ಳೇದು| ನಮ್ಮೂರ ಸಮಸ್ಯೆ ನಾವೇ ಸರಿ ಮಾಡ್ಕೊಳ್ತೇವೆ| ಬೊಳಿಯಾರ್ ಘಟನೆ ಬಗ್ಗೆ ಸ್ಪೀಕರ್ ಖಾದರ್‌ ಖಡಕ್ ಎಚ್ಚರಿಕೆ Read More »

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣ| ಜೈಲುಪಾಲಾಗಿದ್ದ ಆರೋಪಿಗಳಿಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿ ಶಶಿರಾಜ್ ಶೆಟ್ಟಿ ಗೆ 25 ದಿನಗಳ ಬಳಿಕ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅದರಂತೆ ನಾಪತ್ತೆಯಾಗಿದ್ದ ಮತ್ತೊಬ್ಬ ಆರೋಪಿ ಪ್ರಮೋದ್ ದಿಡುಪೆಗೂ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮೇ.18 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣದ ಆರೋಪಿಯಾದ ಶಶಿರಾಜ್ ಶೆಟ್ಟಿಯನ್ನು ಮೇ.18

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣ| ಜೈಲುಪಾಲಾಗಿದ್ದ ಆರೋಪಿಗಳಿಗೆ ಜಾಮೀನು ಮಂಜೂರು Read More »

ಪುತ್ತೂರು: ಹಾಡುಹಗಲೇ ವ್ಯಕ್ತಿ ಮೇಲೆ ಚೂರಿ ಇರಿತ| ಗಾಯಾಳು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹಾಡುಹಗಲೇ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಜೂ.13ರಂದು ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ಎಂಬ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಗರದ ದರ್ಬೆ ನಿವಾಸಿ ಸದಾಶಿವ ಪೈ ಚೂರಿ ಇರಿತಕ್ಕೊಳಗಾಗಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡ ಸದಾಶಿವ ಅವರನ್ನು ಪುತ್ತೂರು‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಪಾರ್ಕಿಂಗ್ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಪುತ್ತೂರು: ಹಾಡುಹಗಲೇ ವ್ಯಕ್ತಿ ಮೇಲೆ ಚೂರಿ ಇರಿತ| ಗಾಯಾಳು ಆಸ್ಪತ್ರೆಗೆ ದಾಖಲು Read More »

ಕುಕ್ಕೆ ಸುಬ್ರಹ್ಮಣ್ಯ: ಹೊರಾಂಗಣ ಉತ್ಸವಾದಿಗಳು ಸಮಾಪ್ತಿ| ಒಳಾಂಗಣ ಪ್ರವೇಶಿಸಿದ ಕುಕ್ಕೆ ಪುರಾಧೀಶ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳು ಬುಧವಾರ ತೆರೆಕಂಡವು. ಜೇಷ್ಠ ಶುದ್ಧ ಷಷ್ಠಿಯ ದಿನ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವ ಸಂಪನ್ನವಾಯಿತು. ಬಳಿಕ ಒಳಾಂಗಣದ ಕಟ್ಟೆಯಲ್ಲಿ ಪೂಜೆ ಮತ್ತು ವಸಂತ ಪೂಜೆ, ಪಂಚಾಂಗ ಶ್ರವಣ ನೆರವೇರಿತು. ತದನಂತರ ಫಲವಸ್ತುಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು. ಊರ ಮತ್ತು ಪರವೂರ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಇನ್ನು ದೀಪಾವಳಿ ಅಮಾವಾಸ್ಯೆಯ ತನಕ ದೇವಸ್ಥಾನದಲ್ಲಿ ಹರಕೆ ಉತ್ಸವ

ಕುಕ್ಕೆ ಸುಬ್ರಹ್ಮಣ್ಯ: ಹೊರಾಂಗಣ ಉತ್ಸವಾದಿಗಳು ಸಮಾಪ್ತಿ| ಒಳಾಂಗಣ ಪ್ರವೇಶಿಸಿದ ಕುಕ್ಕೆ ಪುರಾಧೀಶ Read More »

ಮಂಗಳೂರಿನ ಮುಕ್ಕದಲ್ಲಿ ಮುಸ್ಲಿಂ ಯುವಕರೊಂದಿಗೆ ಸಿಕ್ಕಿಬಿದ್ದ ಹಿಂದೂ ಯುವತಿ!!

ಸಮಗ್ರ ನ್ಯೂಸ್: ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮಂಗಳೂರು ಹೊರವಲಯದ ಮುಕ್ಕದಲ್ಲಿ ನಡೆದಿದೆ. ಮುಕ್ಕ ಸಮೀಪ ಒಂದು ಕಾರಿನಲ್ಲಿ ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯೊಬ್ಬಳು ಸ್ಕೂಲ್ ಬಸ್ ಡ್ರೈವರ್ ಜೊತೆ ಜಗಳವಾಡುತ್ತ ಹಿಗ್ಗಾಮುಗ್ಗಾ ಬೈದಾಡುತ್ತಿದ್ದು, ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಕಾರು ಕೈ ಕೊಟ್ಟಿದೆ. ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಇದು ಅನ್ಯಕೋಮಿನ ಜೋಡಿ ಎಂಬುದು

ಮಂಗಳೂರಿನ ಮುಕ್ಕದಲ್ಲಿ ಮುಸ್ಲಿಂ ಯುವಕರೊಂದಿಗೆ ಸಿಕ್ಕಿಬಿದ್ದ ಹಿಂದೂ ಯುವತಿ!! Read More »