ಕರಾವಳಿ

ಸುಳ್ಯ: ಮಗ ಮತ್ತು ಸೊಸೆ ವಿರುದ್ಧ ಮತ್ತೆ ದೂರು ನೀಡಿದ ವೃದ್ಧೆ| ಎಸಿ ಜುಬಿನ್ ಮೊಹಪಾತ್ರ ಮಾತುಕತೆ

ಸಮಗ್ರ ನ್ಯೂಸ್: ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವೃದ್ಧೆಯೋರ್ವರು ತನ್ನ ಪುತ್ರಿಯರ ಜತೆಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಕಲ್ಲಡ್ಕದ ಪೆರಾಜೆಯ ಶೇಷಮ್ಮ ಅವರು ಕೆಲವು ವಾರಗಳ ಹಿಂದೆ ಸುಳ್ಯ ತಹಶೀಲ್ದಾರ್‌ಗೆ ಮಗನ ವಿರುದ್ಧ ದೂರು ನೀಡಿದ್ದರು. ಅಂದು ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಸಮಾಲೋಚಿಸಿ ಮಗನಿಗೆ ಹಿತವಚನ ನೀಡಿ ಮಂಡೆಕೋಲಿನ ಮನೆಗೆ ಬಿಟ್ಟು ಬಂದಿದ್ದರು. ಅಂದಿನಿಂದ ವೃದ್ಧೆ ಅದೇ ಮನೆಯಲ್ಲಿದ್ದು, ಮದುವೆ ಮಾಡಲಾಗಿರುವ […]

ಸುಳ್ಯ: ಮಗ ಮತ್ತು ಸೊಸೆ ವಿರುದ್ಧ ಮತ್ತೆ ದೂರು ನೀಡಿದ ವೃದ್ಧೆ| ಎಸಿ ಜುಬಿನ್ ಮೊಹಪಾತ್ರ ಮಾತುಕತೆ Read More »

ಉಪ್ಪಿನಂಗಡಿ: ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಭಾರೀ ಅಗ್ನಿ ಅವಘಡ| ಹಲವು ಮಳಿಗೆಗಳು ಬೆಂಕಿಗಾಹುತಿ

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮುಖ್ಯ ಪೇಟೆಯಲ್ಲಿರುವ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿನ ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಮಾಹಿತಿ ಲಭಿಸಿದೆ. ನೂರಾರು ನಾಗರಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬೆಂಕಿಯ ಕೆನ್ನಾಲಗೆಗೆ ಹಲವು ಅಂಗಡಿಗಳು ಆಹುತಿಯಾಗಿವೆ. ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಂಗಡಿಯವರು ಬೆಂಕಿಯನ್ನು ಆರಿಸಲು ಯತ್ನಿಸಿದರಾದರೂ ಅದಾಗಲೇ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು. ಬೆಂಕಿ ನಂದಿಸುವ ಕಾರ್ಯ ಬರದಿಂದ ನಡೆಯುತ್ತಿದ್ದು, ಇನ್ನೂ ಹತೋಟಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ: ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಭಾರೀ ಅಗ್ನಿ ಅವಘಡ| ಹಲವು ಮಳಿಗೆಗಳು ಬೆಂಕಿಗಾಹುತಿ Read More »

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಮೇಲೆ ಗುಳಿಗ ದೃಷ್ಟಿ| ಎಷ್ಟು ಪ್ರಯತ್ನಿಸಿದ್ರೂ ಕೆಲಸ ಮುಗೀತಿಲ್ವಂತೆ!!

ಸಮಗ್ರ ನ್ಯೂಸ್: ದೈವಗಳ ನೆಲೆವೀಡು ಕರಾವಳಿ ಒಂದಲ್ಲ ಒಂದು ದೈವ ಕಾರ್ಣಿಕಕ್ಕೆ ಸಾಕ್ಷಿಯಾಗುತ್ತಾ ಇರುತ್ತದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ದೈವ ಮುನಿಸಿಕೊಂಡ ಪರಿಣಾಮ ಒಂದಲ್ಲ ಒಂದು ಅವಾಂತರಗಳು ಸಂಭವಿಸುತ್ತಿದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಆದರೆ ಮಂಗಳೂರಿನ ಹಳೆ ಬಸ್ ನಿಲ್ದಾಣದ ಬಳಿ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ!! ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಾಮಗಾರಿಯ

ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಮೇಲೆ ಗುಳಿಗ ದೃಷ್ಟಿ| ಎಷ್ಟು ಪ್ರಯತ್ನಿಸಿದ್ರೂ ಕೆಲಸ ಮುಗೀತಿಲ್ವಂತೆ!! Read More »

ಬೆಳ್ಳಾರೆ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

ಸಮಗ್ರ ನ್ಯೂಸ್: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ 16ನೇ ಸಂಸ್ಥಾಪನಾ ದಿನದ ಅಂಗವಾಗಿ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್ ಡಿ ಪಿ ಐ ಗ್ರಾಮ ಸಮಿತಿ ಅಧ್ಯಕ್ಷ ತಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷರೂ ಸವಣೂರು ಗ್ರಾಮ ಪಂಚಾಯಿತಿ ಸದಸ್ಯರೂ ಆದ ರಝಾಕ್ ಕೆನರಾ ಧ್ವಜಾರೋಹಣ ನೆರವೇರಿಸಿದರು.ವಿಧಾನಸಭಾ ಸಮಿತಿ ಸಂಘಟಣಾ ಕಾರ್ಯದರ್ಶಿ ಸಿದ್ದೀಕ್ ಸವಣೂರು ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ

ಬೆಳ್ಳಾರೆ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ Read More »

ಪುತ್ತೂರು: “ಬ್ರೈಟ್ ಭಾರತ್” ಸಂಸ್ಥೆ ಇದೀಗ ಪ್ರಪ್ರಥಮ ಬಾರಿಗೆ ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ|ಇದರ ಸದಸ್ಯರಾಗುವುದು ಹೇಗೆ!? ಇಲ್ಲಿದೆ ಈ ಬಗ್ಗೆ ಮಾಹಿತಿ

ಸಮಗ್ರ ನ್ಯೂಸ್: ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “ಬ್ರೈಟ್ ಭಾರತ್” ಸಂಸ್ಥೆ ಇದೀಗ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್

ಪುತ್ತೂರು: “ಬ್ರೈಟ್ ಭಾರತ್” ಸಂಸ್ಥೆ ಇದೀಗ ಪ್ರಪ್ರಥಮ ಬಾರಿಗೆ ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ|ಇದರ ಸದಸ್ಯರಾಗುವುದು ಹೇಗೆ!? ಇಲ್ಲಿದೆ ಈ ಬಗ್ಗೆ ಮಾಹಿತಿ Read More »

ಯಕ್ಷಗಾನಕ್ಕೂ ಎಂಟ್ರಿಕೊಟ್ಟ ದರ್ಶನ್ – ಪವಿತ್ರಾಗೌಡ ಪ್ರಕರಣ| ವೈರಲ್ ಆಗ್ತಿದೆ ಸ್ವಾರಸ್ಯಕರ ವಿಡಿಯೋ

ಸಮಗ್ರ ನ್ಯೂಸ್: ನಟಿ ಪವಿತ್ರ ಗೌಡಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಈ ಕೊಲೆ ಕೇಸ್‌ ಸದ್ಯ ಸಂಚಲನ ಸೃಷ್ಟಿಸಿದ್ದು, ಸುದ್ದಿ ಮಾಧ್ಯಮ, ಟ್ರೋಲ್‌ ಪೇಜ್‌, ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕೊಲೆ ಪ್ರಕರಣ ಸುದ್ದಿಯದ್ದೇ ಚರ್ಚೆ ನಡೆಯುತ್ತಿದೆ. ಇದೀಗ ನಟ ದರ್ಶನ್‌ ಮತ್ತು ಪವಿತ್ರಾ ಮ್ಯಾಟರ್ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ಕುರಿತ ವಿಡಿಯೋವೊಂದು ಇದೀಗ

ಯಕ್ಷಗಾನಕ್ಕೂ ಎಂಟ್ರಿಕೊಟ್ಟ ದರ್ಶನ್ – ಪವಿತ್ರಾಗೌಡ ಪ್ರಕರಣ| ವೈರಲ್ ಆಗ್ತಿದೆ ಸ್ವಾರಸ್ಯಕರ ವಿಡಿಯೋ Read More »

ದ.ಕ‌ ದಲಿತ ಚಳವಳಿಯ ‌ನಾಯಕ‌ ಚಂದು ಎಲ್‌. ಇನ್ನಿಲ್ಲ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಯ ಮುಂಚೂಣಿ ನಾಯಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ (52) ಅವರು ಅಲ್ಪ ಕಾಲದ‌ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ.19 ರಂದು ರಾತ್ರಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಡಿ.ಸಿ. ಮನ್ನಾ ಜಮೀನಿಗಾಗಿನ ಹೋರಾಟ, ನಿಡ್ಲೆ ದೈವಸ್ಥಾನದ ಸಾರ್ವಜನಿಕ ಊಟದ ಪಂಕ್ತಿಯಿಂದ ದಲಿತ ಯುವತಿಯನ್ನು ಬಲಾತ್ಕಾರವಾಗಿ ಎಬ್ಬಿಸಿದ ಘಟನೆ ಮುಂದಿಟ್ಟು ನಡೆದ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜತೆಗೆ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ

ದ.ಕ‌ ದಲಿತ ಚಳವಳಿಯ ‌ನಾಯಕ‌ ಚಂದು ಎಲ್‌. ಇನ್ನಿಲ್ಲ Read More »

ನೇತ್ರಾವತಿ ಟ್ರಕ್ಕಿಂಗ್ ಆನ್ ಲೈನ್ ಬುಕ್ಕಿಂಗ್ ಜಾರಿ| ಚಾರಣ ಬುಕ್ ಮಾಡ್ಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್‌ ಚಾರಣಕ್ಕೆ ಅತಿಹೆಚ್ಚಿನ ಚಾರಣಿ ಗರ ಒತ್ತಡ ಇರುವುದರಿಂದ ಚಾರಣಿಗರ ಸಂಖ್ಯೆಯನ್ನು ವೈಜ್ಞಾನಿಕ ವಾಗಿ ನಿರ್ಧರಿಸಲಾಗಿದ್ದು ಗರಿಷ್ಠ 300 ಜನರಿಗೆ ಅವಕಾಶ ನೀಡಲಾಗುತ್ತದೆ. ಚಾರಣ ಕೈಗೊಳ್ಳಲು ಮುಖಾಂತರ ಬುಕ್ಕಿಂಗ್‌ ಮಾಡಬೇಕು. ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಜನರಿಗೆ ಬುಕ್ಕಿಂಗ್‌ ಮಾಡಬಹುದು. ಎಲ್ಲ ಚಾರಣಿಗರು ಆನ್‌ಲೈನ್‌ ಮೂಲಕ ಮಾತ್ರ ಬುಕ್ಕಿಂಗ್‌ ಮಾಡಬೇಕು, ಯಾವುದೇ ಆಫ್‌ಲೈನ್‌ ಬುಕ್ಕಿಂಗ್‌ ಅವಕಾಶ ಇರುವುದಿಲ್ಲ. ವಾರಾಂತ್ಯದಲ್ಲಿ ಶನಿವಾರ ಮತ್ತು ರವಿವಾರ 200

ನೇತ್ರಾವತಿ ಟ್ರಕ್ಕಿಂಗ್ ಆನ್ ಲೈನ್ ಬುಕ್ಕಿಂಗ್ ಜಾರಿ| ಚಾರಣ ಬುಕ್ ಮಾಡ್ಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ Read More »

ಸುಳ್ಯ ತಾಲೂಕು ಕಚೇರಿಯಲ್ಲಿ ಹೆಬ್ಬಾವು ಪ್ರತ್ಯಕ್ಷ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಚೇರಿಯ ಸರ್ವೆ ಇಲಾಖೆಗೆ ಸಂಬಂಧ ಪಟ್ಟ ರೆಕಾರ್ಡ್ ಕಚೇರಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ಬುಧವಾರ ಮುಂಜಾನೆ ಪ್ರತ್ಯಕ್ಷವಾಗಿದೆ. ಬೆಳಗ್ಗೆ ಕಚೇರಿ ಸಿಬ್ಬಂದಿ ಬಂದು ಬಾಗಿಲು ತೆಗೆದು ನೋಡಿದಾಗ ಹೆಬ್ಬಾವು ಕಂಡಿದ್ದು, ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಬಳಿಕ ಅರಣ್ಯ ಇಲಾಖೆಯವರು ಉರಗ ತಜ್ಞ ಮೋಹನ್ ಪರಿವಾರಕಾನ ಎಂಬವರನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು. ತಾಲೂಕು ಕಚೇರಿಯ ಎರಡನೇ ಮಹಡಿಯಲ್ಲಿ ಭೂ ದಾಖಲೆಗಳ ನಿರ್ದೇಶಕರ ಕಚೇರಿ ಇದ್ದು ಹಾವು

ಸುಳ್ಯ ತಾಲೂಕು ಕಚೇರಿಯಲ್ಲಿ ಹೆಬ್ಬಾವು ಪ್ರತ್ಯಕ್ಷ Read More »

ಸುಳ್ಯ: 800 ರೂಪಾಯಿಗೆ ನಡೆಯಿತು ಕಗ್ಗೊಲೆ| ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು| ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಸಮಗ್ರ ನ್ಯೂಸ್: ಸುಳ್ಯ ಸಮೀಪದ ಕಾಂತಮಂಗಲ ಸರಕಾರಿ ಶಾಲೆಯ ಆವರಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿಯನ್ನು ಎಡಮಂಗಲ ಮೂಲದ ಉದಯ್ ಕುಮಾರ್‌ ನಾಯ್ಕ್ ಎಂದು ಗುರುತಿಸಲಾಗಿದೆ. ಈತ ಕೇವಲ 800 ರೂಪಾಯಿಗಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ವಸಂತ ಹಾಗೂ ಆರೋಪಿ ಉದಯ್ ಅವರಿಗೆ ಸುಳ್ಯದ ಬಾರೊಂದರಲ್ಲಿ ಪರಿಚಯ ಆಗಿತ್ತು. ಇಬ್ಬರೂ ಮದ್ಯ ಸೇವಿಸಿದ್ದರು. ಬಳಿಕ ಅಂದಿನ ರಾತ್ರಿ ಜತಗೇ ಕಳೆಯುವ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ

ಸುಳ್ಯ: 800 ರೂಪಾಯಿಗೆ ನಡೆಯಿತು ಕಗ್ಗೊಲೆ| ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು| ಇಲ್ಲಿದೆ ಕಂಪ್ಲೀಟ್ ಸ್ಟೋರಿ Read More »