ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಕುಟುಂಬ ಸಮೇತ ಭೇಟಿ ನೀಡಿ ಮಹಾಪೂಜೆ, ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾದರು. ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆ ಶಿವಕುಮಾರ್ ಅವರು ಆನೆ ಬಳಿ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವಾದ್ಯ ಮೇಳ ಕುಂಬ ಕಳಶದೊಂದಿಗೆ ಡಿಕೆಶಿಯನ್ನ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ‌ ಸಂಸ್ಕೃತಿಗಳನ್ನು‌ […]

ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ Read More »

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಸುಳ್ಯ ಸಮೀಪದ ಭಸ್ಮಡ್ಕ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ಕುರುಂಜಿಗುಡ್ಡೆ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ. ವಿಶೇಷ ಚೇತನರಾದ ಕುಮಾರ್ ಅವರು ಭಾನುವಾರ(ಜೂ.23) ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಅವರ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಭಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯ ದಡದಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು. ಹೀಗಾಗಿ ಸೋಮವಾರ ಬೆಳಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು.

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ Read More »

ಸುಳ್ಯ:ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಸಮಗ್ರ ನ್ಯೂಸ್:ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ತಾಪತ್ರ ಹೊರಬರುವಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹೋದ್ಯೋಗಿ ಮಿತ್ರರು ಹಾಗೂ ಸಂಪಾದಕ

ಸುಳ್ಯ:ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ Read More »

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ| ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನ

ಸಮಗ್ರ ನ್ಯೂಸ್: ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ನಡೆದ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಾಧಿಕಾರ ರಚನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅವಧಿ ಮಾರ್ಚ್‌ಗೆ ಕೊನೆಗೊಂಡಿದ್ದು, ಸದ್ಯ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ರಚನೆಗೆ ಅಧಿಸೂಚನೆ ಹೊರಡಿಸುವ ನಿರ್ಧಾರ ನಿರೀಕ್ಷೆಯಲ್ಲಿತ್ತು. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 100 ಕೋಟಿಗೂ ಅಧಿಕ ಆದಾಯ ಬರುವ ಕ್ಷೇತ್ರವಾಗಿರುವುದರಿಂದ ಅಭಿವೃದ್ಧಿ ಪ್ರಾಧಿಕಾರ ಮಾಡುವ

ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ| ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನ Read More »

ಕುಕ್ಕೆ ಸುಬ್ರಹ್ಮಣ್ಯ: ನಾಣ್ಯಗಳಿಂದ ತುಲಾಭಾರ ನೆರವೇರಿಸಿದ ಮಾಜಿ ಸಿಎಂ ಯಡಿಯೂರಪ್ಪ

ಸಮಗ್ರ ನ್ಯೂಸ್: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಸೋಮವಾರ ಬೆಳಿಗ್ಗೆ ಕುಕ್ಕೆಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಸ್ವಾಗತಿಸಿದರು. ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಹಾಗೂ ದೇವಳ ಸಮಿತಿಯವರು ಇದ್ದರು. ದೇವಾಲಯದ ಅರ್ಚಕರಾದ ಸತ್ಯನಾರಾಯಣ ನೂರಿತಾಯ ಅವರು ತುಲಾಭಾರ ಸೇವೆಯನ್ನು ನೆರವೇರಿಸಿದರು

ಕುಕ್ಕೆ ಸುಬ್ರಹ್ಮಣ್ಯ: ನಾಣ್ಯಗಳಿಂದ ತುಲಾಭಾರ ನೆರವೇರಿಸಿದ ಮಾಜಿ ಸಿಎಂ ಯಡಿಯೂರಪ್ಪ Read More »

ಕೆದಿಲ:ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ

ಸಮಗ್ರ ನ್ಯೂಸ್: ಸುಳ್ಯದ ಮುಪ್ಪೇರ್ಯ ಗ್ರಾಮದ ಕೆದಿಲ ನಿವಾಸಿ ದಿ. ರಾಮಣ್ಣ ನಾಯ್ಕರ ಪತ್ನಿ ಗಂಗಮ್ಮ ಎಂಬವರ ಮನೆಯ ಮಾಡು ಸಂಪೂರ್ಣ ಶಿಥಿಲಗೊಂಡು ಮಳೆನೀರು‌ ಮನೆಯ ಒಳಗೆ ಬೀಳುತ್ತಿದ್ದನ್ನು ಗಮನಿಸಿ ಸ್ಥಳೀಯ ಬಾಳಿಲ ಗ್ರಾ.ಪಂ.‌ ಸದಸ್ಯ ಹರ್ಷ ಜೋಗಿಬೆಟ್ಟು ಅವರ ಸಲಹೆಯಂತೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರು ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ ಮಾಡಿ ಮಾನವೀಯತೆ ಮೆರೆದಿದ್ದಾರೆ. ಗಂಗಮ್ಮನವರು ಓರ್ವ ಅಂಗವಿಕ ಪುತ್ರಿಯೊಂದಿಗೆ ಕೆದಿಲದಲ್ಲಿ ವಾಸವಾಗಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದೆ 2 ವರ್ಷಗಳಿಂದ ಇವರ

ಕೆದಿಲ:ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ Read More »

ಪುತ್ತೂರು: ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪವಿಶೇಷ ಅನುಭಂದ ಕಾರ್ಯಕ್ರಮ

ಸಮಗ್ರ ನ್ಯೂಸ್: ಮುಳಿಯ ಜ್ಯುವೆಲ್ಸ್ ನಲ್ಲಿ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ಎಂಬ ವಿಶೇಷ ಅನುಭಂದ ಕಾರ್ಯಕ್ರಮವನ್ನು ಪುತ್ತೂರಿನ ಶಾಖೆಯಲ್ಲಿ ಜೂ. 22 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಮುಳಿಯ ಸಂಸ್ಥೆಯ ಹಿರಿಯರಾದ ಶ್ಯಾಮ್ ಭಟ್ ಉದ್ಘಾಟಿಸಿ ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ ೯೧೬ ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ

ಪುತ್ತೂರು: ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪವಿಶೇಷ ಅನುಭಂದ ಕಾರ್ಯಕ್ರಮ Read More »

SDPI ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ

ಸಮಗ್ರ ನ್ಯೂಸ್: ಜೂನ್ 21, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೂ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ಗ್ರೀನ್ ಲ್ಯಾಂಡ್ ಅರೇನಾ ಫುಟ್ಬಾಲ್ ಟರ್ಫ್ ಕೊಟ್ಯಾಡಿ ಪಳ್ಳತ್ತೂರು ಮೈದಾನದಲ್ಲಿ ನಡೆಯಿತು. ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪಕ್ಷದ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್

SDPI ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ Read More »

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ| ಮಂಡ್ಯ ಮೂಲದ‌ ಯುವಕರು ಗಂಭೀರ

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಗು ಸಂಪಾಜೆಯ ಬಳಿ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಮಂಡ್ಯ ಮೂಲದ ಯುವಕರು ಗಂಭೀರ ಗಾಯಗೊಂಡಿದ್ದಾರೆ. ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರಕ್ಕೆ ಹೋಗಿ ತಮ್ಮ ಕೆಲಸ ಮುಗಿಸಿ ವಾಪಸ್‌ ಮಂಡ್ಯಕ್ಕೆ ಹೊರಟಿದ್ದರು. ರಾತ್ರಿ ಮೂರು ಗಂಟೆಯ ವೇಳೆಗೆ ಸಂಪಾಜೆ ಗೇಟಿನಿಂದ ಸ್ವಲ್ಪ ದೂರದಲ್ಲಿ ನಿಯಂತ್ರಣ ತಪ್ಪಿದ ವೋಕ್ಸ್‌ವ್ಯಾಗನ್ ಕಾರು ರಸ್ತೆಯ ರಕ್ಷಣಾ ಗೋಡೆಗೆ

ಸಂಪಾಜೆಯಲ್ಲಿ ಭೀಕರ ಕಾರು ಅಪಘಾತ| ಮಂಡ್ಯ ಮೂಲದ‌ ಯುವಕರು ಗಂಭೀರ Read More »

ಕಾರ್ಕಳ: ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ ವಂಚನೆ ಆರೋಪ| ಪೊಲೀಸ್ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಮೂರ್ತಿ ಬದಲು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಕೃಷ್ಣ ಎಂಬಾತ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1,25,50,000 ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ನಂತರ ಆರೋಪಿ

ಕಾರ್ಕಳ: ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ ವಂಚನೆ ಆರೋಪ| ಪೊಲೀಸ್ ಪ್ರಕರಣ ದಾಖಲು Read More »