ಕರಾವಳಿ

ಸುಳ್ಯ: ಐವರ್ನಾಡು ಗ್ರಾಮಸಭೆಯಲ್ಲಿ ಕಾವೇರಿದ ಚರ್ಚೆ| ರಸ್ತೆ ದುರವಸ್ಥೆ, ಪಂಚಾಯತ್ ಆಡಳಿತದ ವಿರುದ್ದ ಹರಿಹಾಯ್ದ ಗ್ರಾಮಸ್ಥರು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮಸಭೆಯ ಮೊದಲ ಹಂತದ ಗ್ರಾಮಸಭೆ ಜು.3ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಸಭೆಯ‌ ಉಸ್ತುವಾರಿಯನ್ನು ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ವಹಿಸಿದ್ದರು. ಸಭೆಯಲ್ಲಿ ರಸ್ತೆ, ವಿದ್ಯುತ್, ಮೂಲಸೌಕರ್ಯ ಕುರಿತು ಕಾವೇರಿದ ಚರ್ಚೆ ನಡೆಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಕ್ಷೇತ್ರ ವೀಕ್ಷಣೆ ವೇಳೆ ನಾಗರಿಕರ ಬಳಿ ಹಣ ಪಡೆದುಕೊಳ್ಳುತ್ತಾರೆ‌ ಎಂದು ಗ್ರಾಮಸ್ಥರು ಆರೋಪಿಸಿದರು. ಆಡಳಿತಾತ್ಮಕ ವೆಚ್ಚದಲ್ಲಿ ಪೋಟೋ ಮುಂತಾದ ಖರ್ಚು […]

ಸುಳ್ಯ: ಐವರ್ನಾಡು ಗ್ರಾಮಸಭೆಯಲ್ಲಿ ಕಾವೇರಿದ ಚರ್ಚೆ| ರಸ್ತೆ ದುರವಸ್ಥೆ, ಪಂಚಾಯತ್ ಆಡಳಿತದ ವಿರುದ್ದ ಹರಿಹಾಯ್ದ ಗ್ರಾಮಸ್ಥರು Read More »

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬಂಟ್ವಾಳ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬಂಟ್ವಾಳ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ

ಸಮಗ್ರ ನ್ಯೂಸ್: ಭಾರಿ ಮಳೆಯಾಗುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ಘೋಷಿಸಲಾಗಿದೆ. ಜುಲೈ 3ರಂದೂ ಭಾರಿ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜುಲೈ 4ರಂದೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ನೀಡಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು(ಜು.4) ರಜೆ ಘೋಷಣೆ Read More »

ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಅವಘಡ ಪ್ರಕರಣ| ಬಿಹಾರ ಮೂಲದ ಓರ್ವ ಸಾವು, ಮತ್ತೊಬ್ಬ ಗಂಭೀರ| ಮ.ನ ಪಾಲಿಕೆಯಿಂದ ನಗರದಾದ್ಯಂತ ಕಾಮಗಾರಿ ನಿಷೇಧಿಸಿ ಆದೇಶ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ತಳಪಾಯಕ್ಕೆ ತೆಗೆದ ಗುಂಡಿಯ ಪಕ್ಕದ ಮಣ್ಣು ಬುಧವಾರ ಮಧ್ಯಾಹ್ನ ಕುಸಿದು, ಕಾರ್ಮಿಕರಿಬ್ಬರು ಅದರಡಿ ಸಿಲುಕಿದ್ದರು.‌ ಅವರಲ್ಲಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ. ಇನ್ನೊಬ್ಬನ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಏಳು ಗಂಟೆಗಳ ಪ್ರಯತ್ನದ ಬಳಿಕ ಇನ್ನೊಬ್ಬ ಕಾರ್ಮಿಕನ ದೇಹವನ್ನು ಮಣ್ಣಿನಡಿಯಿಂದ ರಾತ್ರಿ 7.30ರ ಸುಮಾರಿಗೆ ಹೊರತೆಗೆಯಲಾಯಿತು. ಬಿಹಾರದ ರೋಹ್ಟಾಸ್‌ ಜಿಲ್ಲೆಯ

ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಅವಘಡ ಪ್ರಕರಣ| ಬಿಹಾರ ಮೂಲದ ಓರ್ವ ಸಾವು, ಮತ್ತೊಬ್ಬ ಗಂಭೀರ| ಮ.ನ ಪಾಲಿಕೆಯಿಂದ ನಗರದಾದ್ಯಂತ ಕಾಮಗಾರಿ ನಿಷೇಧಿಸಿ ಆದೇಶ Read More »

ಬೆಳ್ತಂಗಡಿ:‌ಮುಂಗಾರು ಮಳೆಯಬ್ಬರ ಹಿನ್ನೆಲೆ| ಗಡಾಯಿಕಲ್ಲು ಸೇರಿ ಹಲವು ಪ್ರವಾಸಿತಾಣ, ಜಲಪಾತ ವೀಕ್ಷಣೆಗೆ ನಿರ್ಬಂಧ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದ್ದು ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಜಲಪಾತಗಳಿಗೆ ಹಾಗೂ ನರಸಿಂಹಗಡ (ಗಡಾಯಿಕಲ್ಲು) ಗೆ ಪ್ರವೇಶ ನಿರ್ಬಂಧಿಸಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿ, ಕುದುರೆಮುಖ, ಸೋಮೇಶ್ವರ, ಆಗುಂಬೆ, ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ಈ ವನ್ಯಜೀವಿ ವಲಯಗಳ ಅರಣ್ಯ ಪ್ರದೇಶಗಳಲ್ಲಿ ಬರುವ ಅರಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಡು ಮನೆ,

ಬೆಳ್ತಂಗಡಿ:‌ಮುಂಗಾರು ಮಳೆಯಬ್ಬರ ಹಿನ್ನೆಲೆ| ಗಡಾಯಿಕಲ್ಲು ಸೇರಿ ಹಲವು ಪ್ರವಾಸಿತಾಣ, ಜಲಪಾತ ವೀಕ್ಷಣೆಗೆ ನಿರ್ಬಂಧ Read More »

ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ. ಶೌರ್ಯ ಎಸ್.ವಿ. ಗೆ ಪ್ರಥಮ ಸ್ಥಾನ

ಸಮಗ್ರ ನ್ಯೂಸ್: ಅತೀ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಊರಿನ, ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿರುವ ಈಕೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ 262ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ಹಾಗೂ 172ಕ್ಕಿಂತಲೂ ಹೆಚ್ಚು ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿರುವ ಶೌರ್ಯ ಎಸ್.ವಿ. ಇಡೀ ಜಗತ್ತಿಗೆ ಪ್ರತಿಭೆ ಪ್ರದರ್ಶನ ಪರಿಚಯಿಸುವ ಕಾತರದಲ್ಲಿ ಇದ್ದಾಳೆ. ಅಂತರಾಷ್ಟ್ರೀಯ ಬಾಲಪ್ರತಿಭೆ ಡಾ.ಶೌರ್ಯ.ಎಸ್.ವಿ. ಸಮಾಜದಲ್ಲಿ ಇಂದು ಅನೇಕ ಬಾಲ ಪ್ರತಿಭೆಗಳು ತಮ್ಮಲ್ಲಿನ ವಿವಿಧ ಕಲೆಯನ್ನು ಅನಾವರಣೆಗೊಳಿಸಿ

ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ. ಶೌರ್ಯ ಎಸ್.ವಿ. ಗೆ ಪ್ರಥಮ ಸ್ಥಾನ Read More »

ದೇವರಕೊಲ್ಲಿ ಬಳಿ ರಸ್ತೆಗೆ ಉರುಳಿದ ಮರ| ಮಾಣಿ – ಮೈಸೂರು ರಸ್ತೆ ಸಂಚಾರ ಬಂದ್

ಸಮಗ್ರ ನ್ಯೂಸ್: ಮಾಣಿ‌ – ಮೈಸೂರು ರಾ.ಹೆದ್ದಾರಿಯ ದೇವರಕೊಲ್ಲಿ ಬಳಿ ರಸ್ತೆಗೆ ಮರ ಉರುಳಿದೆ. ಪರಿಣಾಮವಾಗಿ ರಸ್ತೆ ‌ಸಂಚಾರ ಸಂಪೂರ್ಣ ಬಂದ್ ಆಗಿದೆ ಎಂದು ತಿಳಿದುಬಂದಿದೆ.

ದೇವರಕೊಲ್ಲಿ ಬಳಿ ರಸ್ತೆಗೆ ಉರುಳಿದ ಮರ| ಮಾಣಿ – ಮೈಸೂರು ರಸ್ತೆ ಸಂಚಾರ ಬಂದ್ Read More »

ಮಂಗಳೂರು: ಕಾಮಗಾರಿ ವೇಳೆ ಗುಡ್ಡ ಕುಸಿತ| ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಸಮಗ್ರ ನ್ಯೂಸ್: ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಮಂಗಳೂರು ನಗರದ ಬಲ್ಮಠ ರೋಡ್ ಸಮೀಪ ನಡೆದಿದೆ. ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದ್ದು, ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ಕಾಮಗಾರಿ ವೇಳೆ ಗುಡ್ಡ ಕುಸಿತ| ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು Read More »

ಮಂಗಳೂರು: ಸಮವಸ್ತ್ರದಲ್ಲೇ ಹಾರೆ ಹಿಡಿದು ರಸ್ತೆ ಗುಂಡಿ ಮುಚ್ಚಿದ ಪೊಲೀಸರು| ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ

ಸಮಗ್ರ ನ್ಯೂಸ್: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿರುವುದನ್ನು ಮನಗಂಡು ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾರೆ ಹಿಡಿದು ರಸ್ತೆಗಿಳಿದು ರಸ್ತೆ ಗುಂಡಿಗಳನ್ನು ಮುಚ್ಚಿದ ಘಟನೆ ಮಂಗಳೂರು ನಗರದ ಕೆಪಿಟಿಯಲ್ಲಿ ನಡೆದಿದೆ. ಕೆಪಿಟಿಯಲ್ಲಿನ ಹೆದ್ದಾರಿ ಸಂಪೂರ್ಣವಾಗಿ ರಸ್ತೆ ಗುಂಡಿಗಳಿಂದ ಕೂಡಿತ್ತು. ಇದರ ಪರಿಣಾಮವಾಗಿ ವಾಹನ ಸವಾರರು ಈ ಹೆದ್ದಾರಿಯಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಅನೇಕ ಸಲ ಅಪಘಾತಗಳ ನಡೆಯುವುದು ಸ್ವಲ್ಪದರಲ್ಲಿಯೇ ತಪ್ಪಿದ್ದು ಇದನ್ನು ಮನಗಂಡ ಕದ್ರಿ ಸಂಚಾರಿ ಠಾಣಾ ಸಬ್ ಇನ್‌ಸ್ಪೆಕ್ಟರ್

ಮಂಗಳೂರು: ಸಮವಸ್ತ್ರದಲ್ಲೇ ಹಾರೆ ಹಿಡಿದು ರಸ್ತೆ ಗುಂಡಿ ಮುಚ್ಚಿದ ಪೊಲೀಸರು| ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ Read More »

ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಯತೀಶ್ ಎನ್. ನೇಮಕ

ಸಮಗ್ರ ನ್ಯೂಸ್ : ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ವರ್ಗಾವಣೆಯಾಗಿ ನೂತನ ಎಸ್ಪಿಯಾಗಿ ಯತೀಶ್.ಎನ್ ನೇಮಕವಾಗಿದ್ದಾರೆ. ಮಂಡ್ಯ ಎಸ್ಪಿಯಾಗಿದ್ದ ಯತೀಶ್ ದಕ್ಷಿಣ ಕನ್ನಡಕ್ಕೆ ನೂತನ ಎಸ್ಪಿಯಾಗಿ ನೇಮಕವಾಗಿದ್ದು, ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ರಿಷ್ಯಂತ್‌ ವರ್ಗಾವಣೆಯಾಗಿದ್ದಾರೆ. ಒಂದೇ ವರ್ಷದಲ್ಲಿ ರಿಷ್ಯಂತ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ರಿಷ್ಯಂತ್ 2023ರ ಜೂನ್ ನಲ್ಲಿ ದ.ಕ ಎಸ್ಪಿಯಾಗಿ ನೇಮಕಗೊಂಡಿದ್ದರು.

ದ.ಕ ಜಿಲ್ಲಾ ಎಸ್.ಪಿ ರಿಷ್ಯಂತ್ ವರ್ಗಾವಣೆ| ನೂತನ ಎಸ್ಪಿಯಾಗಿ ಯತೀಶ್ ಎನ್. ನೇಮಕ Read More »