ಮಂಗಳೂರು: ಸ್ಥಳ ಮಹಜರು ವೇಳೆ ಪರಾರಿಯಾಗಲೆತ್ನಿಸಿದ ಚಡ್ಡಿಗ್ಯಾಂಗ್ ತಂಡ| ಪೊಲೀಸರಿಂದ ಶೂಟೌಟ್, ಇಬ್ಬರಿಗೆ ಗುಂಡು
ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದ ಚಡ್ಡಿಗ್ಯಾಂಗ್ ಮೇಲೆ ಪೊಲೀಸರಿಂದ ಶೂಟ್ ಔಟ್ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ನಗರದ ಹೊರವಲಯದ ಪಡುಪಣಂಬೂರು ಎಂಬಲ್ಲಿ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆಗೈದು ದರೋಡೆಕೋರರು ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ದರೋಡೆ ಆರೋಪಿಗಳನ್ನು ನಿನ್ನೆ ಸಕಲೇಶಪುರದಿಂದ ಬಂಧಿಸಿ ತರಲಾಗಿತ್ತು. ಬುಧವಾರ ಬೆಳಗ್ಗೆ ಸ್ಥಳ ಮಹಜರು ವೇಳೆ ಎಎಸ್ ಐ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ದರೋಡೆಕೋರರ […]