ಕರಾವಳಿ

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳ ಮೈದಾನ ಮತ್ತು ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಗಳಿಗೆ ಬಳಸಬಾರದಾಗಿ ಸೂಚನೆ ನೀಡಲಾಗಿದೆ. ಅಲ್ಲದೇ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸದಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ತಿಳಿಸಲಾಗಿದ್ದು, ಈ […]

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ Read More »

ಗುಡ್ಡ ಕುಸಿಯುವ ಭೀತಿ ಹಿನ್ನೆಲೆ| ರಾ.ಹೆ.275 ಸಂಪಾಜೆ ಘಾಟ್ ರಸ್ತೆಯಲ್ಲಿ 4 ದಿನಗಳ ಕಾಲ ರಾತ್ರಿ ಸಂಚಾರ ಬಂದ್

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ – 275ರ ಸಂಪಾಜೆಯಿಂದ ಮಡಿಕೇರಿ ಮಧ್ಯೆ 4 ದಿನಗಳ ಕಾಲ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ವಾಹನ ಸಂಚಾರ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕಿ.ಮೀ. 90.05 ರಿಂದ 90.10ರ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ದಿನಾಂಕ 18.07.2024 ರಿಂದ 22.07.2024ರ

ಗುಡ್ಡ ಕುಸಿಯುವ ಭೀತಿ ಹಿನ್ನೆಲೆ| ರಾ.ಹೆ.275 ಸಂಪಾಜೆ ಘಾಟ್ ರಸ್ತೆಯಲ್ಲಿ 4 ದಿನಗಳ ಕಾಲ ರಾತ್ರಿ ಸಂಚಾರ ಬಂದ್ Read More »

ಶಿರಾಡಿ‌ ಘಾಟ್ ನಲ್ಲಿ ಗುಡ್ಡ ಕುಸಿತ| ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ಸಮಗ್ರ ನ್ಯೂಸ್: ಭಾರೀ ಮಳೆ ಪ್ರಭಾವದಿಂದ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಈ ನಿಟ್ಟಿನಲ್ಲಿ ಸಕಲೇಶಪುರ, ಹಾಸನ, ಬೆಂಗಳೂರು ತೆರಳುವ ವಾಹನಗಳು ಬದಲಿ ರಸ್ತೆಯಲ್ಲಿ ಚಲಿಸುವಂತೆ ಮಾಣಿಯಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಬೆಂಗಳೂರು ಸೇರಿದಂತೆ ಸಕಲೇಶಪುರ, ಹಾಸನ ತೆರಳುವ ವಾಹನಗಳು ಬದಲಿ ರಸ್ತೆಗಳಾದ ಮಡಿಕೇರಿ, ಮೈಸೂರು ಮಾರ್ಗವಾಗಿ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ಭಾಗದಿಂದ ಬರುವ ಪ್ರಯಾಣಿಕರು ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ‌ ಘಾಟ್ ನಲ್ಲಿ ಗುಡ್ಡ ಕುಸಿತ| ಪರ್ಯಾಯ ಮಾರ್ಗ ಬಳಕೆಗೆ ಸೂಚನೆ Read More »

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ 16 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ‌ ಆಹ್ವಾನ| ಪ್ರಾಧಿಕಾರ ರಚನೆ ಕೈಬಿಟ್ಟ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರಕಾರ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ ಪ್ರಮುಖ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚಿಸಲು ಮುಂದಾಗಿದೆ. ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ತರುವ ಎ ಗ್ರೇಡ್‌ಗೆ ಸೇರಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಆಗಸ್ಟ್ 3ರ ಒಳಗೆ ಸಮಿತಿಯ ಸದಸ್ಯತ್ವಕ್ಕೆ

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ 16 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ‌ ಆಹ್ವಾನ| ಪ್ರಾಧಿಕಾರ ರಚನೆ ಕೈಬಿಟ್ಟ ರಾಜ್ಯ ಸರ್ಕಾರ Read More »

ಉಪ್ಪಿನಂಗಡಿ: ಏಕಾಏಕಿ ಐರಾವತ ಬಸ್ ನಲ್ಲಿ‌ ಕಾಣಿಸಿಕೊಂಡ ಬೆಂಕಿ| ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಸಂಸ್ಥೆ ಯ ಐರಾವತ ಬಸ್ಸೊಂದಕ್ಕೆ ಬೆಂಕಿ ಹಿಡಿದ ಘಟನೆ ಇಲ್ಲಿನ ಹಳೆಗೇಟು ಬಳಿ ಜು.18 ಗುರುವಾರ ಬೆಳಗ್ಗೆ ನಡೆದಿದೆ. ಸ್ಥಳೀಯ ಯುವಕರ ಸಕಾಲಿಕ ಪ್ರಯತ್ನದಿಂದ ಬೆಂಕಿ ಆರಿಸಿದ ಕಾರಣ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡ ತಪ್ಪಿದೆ. ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಇಸಾಕ್,

ಉಪ್ಪಿನಂಗಡಿ: ಏಕಾಏಕಿ ಐರಾವತ ಬಸ್ ನಲ್ಲಿ‌ ಕಾಣಿಸಿಕೊಂಡ ಬೆಂಕಿ| ಸ್ವಲ್ಪದರಲ್ಲೇ ತಪ್ಪಿದ ಅನಾಹುತ Read More »

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್| ಒಂಬತ್ತು ಮಂದಿಯ ರಕ್ಷಣೆ

ಸಮಗ್ರ ನ್ಯೂಸ್: ಒಮಾನ್ ಕರಾವಳಿಯಲ್ಲಿ ಹಡಗು ಮುಳುಗಿ 16 ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ ಈಗ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಒಂಬತ್ತು ಸದಸ್ಯರಲ್ಲಿ ಎಂಟು ಮಂದಿ ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರು ಎಂದು ಮೂಲಗಳು ತಿಳಿಸಿವೆ. ಒಮಾನ್​​ನ ಪ್ರಮುಖ ಬಂದರು ಡುಗ್ಮ್ ನಿಂದ ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಈ ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ. ಈ ಹಡಗು ಯೆಮನ್​​ನ ಅದೆನ್​​ಗೆ

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್| ಒಂಬತ್ತು ಮಂದಿಯ ರಕ್ಷಣೆ Read More »

ಶಿರಾಡಿ ಘಾಟ್ ನಲ್ಲಿ ಓಮ್ನಿ ಮೇಲೆ ಗುಡ್ಡ ಕುಸಿತ| ಅಪಾಯದಿಂದ ಪಾರಾದ ಪ್ರಯಾಣಿಕರು

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾ. ಹೆದ್ದಾರಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದೆ. ಘಟನೆಯ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಘಾಟ್ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಾರ್ಯಾಚರಣೆ ಸಾಗುತ್ತಿದ್ದು, ರಸ್ತೆಯುದ್ದಕ್ಕೂ ಟ್ರಾಫಿಕ್ ಜ್ಯಾಂ ಉಂಟಾಗಿದೆ. ಭಾರೀ ಮಳೆಗೆ ಸಕಲೇಶಪುರ ತಾಲೂಕು ಕೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-75ರ ತಡೆಗೋಡೆ ಕುಸಿದಿದೆ. ಸುಮಾರು 25 ಅಡಿಯಷ್ಟು ಮಣ್ಣು ಹಾಕಿ ತಡೆಗೋಡೆ

ಶಿರಾಡಿ ಘಾಟ್ ನಲ್ಲಿ ಓಮ್ನಿ ಮೇಲೆ ಗುಡ್ಡ ಕುಸಿತ| ಅಪಾಯದಿಂದ ಪಾರಾದ ಪ್ರಯಾಣಿಕರು Read More »

ಪುತ್ತೂರು: ಮಹಿಳಾ ಜನ ಜಾಗೃತಿ ಕಾರ್ಯಕ್ರಮ| ಸರ್ಕಾರದಿಂದ ಎಲ್ಲಾ ಸಿಗುತ್ತದೆ ಎಂದು ಕಾಯದೆ, ನಮ್ಮಿಂದಾಗುವುದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ; ಕೃಷ್ಣ ನಾರಾಯಣ ಮುಳಿಯ

ಸಮಗ್ರ ನ್ಯೂಸ್: ಸ್ವರಕ್ಷಣೆಯ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಗತ್ಯವಾಗಿದ್ದು, ಮುಂದಿನ ದಿನದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಸರ್ಕಾರದಿಂದ ಎಲ್ಲಾ ಸಿಗುತ್ತದೆ ಎಂದು ಕಾಯದೆ, ನಮ್ಮಿಂದಾಗುವುದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಸೇರಿ ಆಸುಪಾಸಿನ ಜನರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹೇಳಿದರು. ಬುಧವಾರ (ಜು. 17) ಜೆಸಿಐ ಮುಳಿಯ ಟ್ರೈನಿಂಗ್ ಹಾಲ್ ನಲ್ಲಿ ಮುಳಿಯ ಜ್ಯುವೆಲ್ಸ್ ಪುತ್ತೂರು, ಮಹಿಳಾ ಪೊಲೀಸ್

ಪುತ್ತೂರು: ಮಹಿಳಾ ಜನ ಜಾಗೃತಿ ಕಾರ್ಯಕ್ರಮ| ಸರ್ಕಾರದಿಂದ ಎಲ್ಲಾ ಸಿಗುತ್ತದೆ ಎಂದು ಕಾಯದೆ, ನಮ್ಮಿಂದಾಗುವುದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮುಳಿಯ ಮಾಡುತ್ತಿದೆ; ಕೃಷ್ಣ ನಾರಾಯಣ ಮುಳಿಯ Read More »

ದ.ಕ ಜಿಲ್ಲೆಯಲ್ಲಿ ಮಳೆಯ ಕಾರಣಕ್ಕೆ ರಜೆ ಎಂಬ ನಕಲಿ ಸುತ್ತೋಲೆ ಹಂಚಿಕೆ| ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ

ಸಮಗ್ರ ನ್ಯೂಸ್: ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಆದೇಶ ಪ್ರತಿ ರವಾನಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ. ಜು.18ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯನ್ನು ಜಿಲ್ಲಾಡಳಿತ ಮಾಡಿಲ್ಲ. ಆದರೆ ಪ್ರತಿದಿನವೂ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡುವುದಕ್ಕಿಂತ ಮುಂಚಿತವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಎಂದು ಡಿಸಿ ಅವರ ನಕಲಿ ಆದೇಶ ಪ್ರತಿ ರವಾನೆಯಾಗುತ್ತದೆ.

ದ.ಕ ಜಿಲ್ಲೆಯಲ್ಲಿ ಮಳೆಯ ಕಾರಣಕ್ಕೆ ರಜೆ ಎಂಬ ನಕಲಿ ಸುತ್ತೋಲೆ ಹಂಚಿಕೆ| ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ Read More »

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ಇಂದು(ಜು.18) ದ.ಕ ಜಿಲ್ಲೆಯ 5 ತಾಲೂಕುಗಳ ಅಂಗನವಾಡಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅನೇಕ ಅವಾಂತರಗಳು ಸೃಷ್ಟಿಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಾಳೆಯೂ ವ್ಯಾಪಕ ಮಳೆ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ೫ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳು ಸೇರಿದಂತೆ ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ (ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಿಗೆ) ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ,

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ಇಂದು(ಜು.18) ದ.ಕ ಜಿಲ್ಲೆಯ 5 ತಾಲೂಕುಗಳ ಅಂಗನವಾಡಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ Read More »